ಮುಂಬೈ(ಆ.27): ಹಾರ್ಪಿಕ್ ಹಾಗೂ ನ್ಯೂಸ್ 18 ಕನ್ನಡ ಸಹಯೋಗದಲ್ಲಿ ಮಿಷನ್ ಪಾನಿ ಮೆಗಾ ಅಭಿಯಾನ ನಡೆಯುತ್ತಿದೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅಭಿಯಾನದ ಮೂಲ ಉದ್ದೇಶ ಜಲ ಸಂರಕ್ಷಣೆ. ಈಗಾಗಲೇ ಹಲವು ಬಾಲಿವುಡ್ ಸ್ಟಾರ್ಗಳು ಮಿಷನ್ ಪಾನಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ನ್ಯೂಸ್ 18 ಆರಂಭಿಸಿರುವ ಮಿಷನ್ ಪಾನಿ ಅಭಿಯಾನದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಭಾಗಿಯಾಗಿದ್ದರು. ನ್ಯೂಸ್ 18 ಅಭಿಯಾನಕ್ಕೆ ಸದ್ಗುರು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ 'ಕಾವೇರಿ ನದಿ ಉಳಿಸಿ' ಎಂಬ ರ್ಯಾಲಿ ನೆನೆದರು. ಸದ್ಗುರು ಜಗ್ಗು ವಾಸುದೇವ್ ಕಾವೇರಿ ನದಿಯ ಉಳಿವಿಗಾಗಿ ರ್ಯಾಲಿ ಮಾಡಿದ್ದರು.
ಕಾವೇರಿ ನದಿಯ ಸದ್ಯದ ಸ್ಥಿತಿಗತಿ ಬಗ್ಗೆ ನ್ಯೂಸ್ 18 ಅಭಿಯಾನದಲ್ಲಿ ಸದ್ಗುರು ಮಾಹಿತಿ ನೀಡಿದರು. ನೀರು ಬರೀ ಜನರಿಗಷ್ಟೇ ಅಲ್ಲ. ಭೂಮಿ ಮೇಲೆ ಸಾಕಷ್ಟು ಜೀವರಾಶಿಗಳಿವೆ. ಎಲ್ಲಾ ಜೀವರಾಶಿಗಳಿಗಾಗಿ ನದಿಗಳ ರಕ್ಷಣೆಯಾಗಬೇಕಿದೆ ಎಂದು ಸದ್ಗುರು ಜಗ್ಗು ವಾಸುದೇವ್ ಹೇಳಿದರು.
Mission Paani: ಈಗ ಜಲ ಜಾಗೃತಿ ಮೂಡಿದರೆ ಭವಿಷ್ಯದ ರಕ್ಷಣೆ ಸಾಧ್ಯ; ಮಹಾರಾಷ್ಟ್ರ ಸಿಎಂ ಫಡ್ನವಿಸ್
ಮಳೆ ನೀರು ಕೊಯ್ಲು ಮುಖ್ಯ
ನೀರನ್ನು ಸಂರಕ್ಷಣೆ ಮಾಡಲು ಮಳೆ ನೀರು ಕೊಯ್ಲು ಮಾಡುವುದು ಮುಖ್ಯ. ನೀರು ಅತ್ಯಮೂಲ್ಯ ಸಂಪನ್ಮೂಲವಾಗಿದೆ. ನದಿ, ಕೊಳ, ಕೆರೆ, ಬಾವಿಯ ನೀರನ್ನು ಸಂರಕ್ಷಿಸುವುದರ ಜೊತೆಗೆ ಮುಖ್ಯವಾಗಿ ನೀರಿನ ಮೂಲವಾದ ಮಳೆ ನೀರನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಳೆನೀರು ಕೊಯ್ಲು ಮೂಲಕ ಮಳೆ ನೀರನ್ನು ವರ್ಷಪೂರ್ತಿ ನಮ್ಮ ಬಳಕೆಗೆ ಹಿಡಿದಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಸದ್ಗುರು ಅವರು ಮಾತನಾಡುತ್ತಾ ತಮಿಳಿನ ಗಾದೆಯೊಂದನ್ನು ಹೇಳಿದರು. 'ಕಾವೇರಿ ನಡೆದುಕೊಂಡು ಬಂದರೆ ಮಾತ್ರ ಅವಳು ಅದೃಷ್ಟಲಕ್ಷ್ಮಿ. ಅವಳೇನಾದರೂ ಧಾವಿಸಿ ಬಂದರೆ ಭದ್ರಕಾಳಿ' ಎಂದು ಹೇಳಿದರು. ಕಾಡು ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ