ನವದೆಹಲಿ: ಭಾರತಕ್ಕೆ (India) ಸ್ವಾತಂತ್ರ್ಯ (Independence) ಸಿಕ್ಕ 75 ವರ್ಷದ ಕಳೆದರೂ ಜಮ್ಮು ಕಾಶ್ಮೀರದ (Jammu and Kashmir) ಹಳ್ಳಿಯೊಂದರಲ್ಲಿ ವಿದ್ಯುತ್ (Electricity) ಸಂಪರ್ಕವಿರಲಿಲ್ಲ. ಇದೀಗ ಈ ಹಳ್ಳಿಗೆ ಮೊದಲ ಬಾರಿಗೆ ಸೌಭಾಗ್ಯವೆಂಬಂತೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಜಮ್ಮು ಕಾಶ್ಮೀರದ ಉಧಂಪುರದ ಸದ್ದಲ್ (Saddal) ಎಂಬ ಹಳ್ಳಿಗೆ (Village) ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ‘ಯುನೈಟೆಡ್ ಗ್ರಾಂಟ್ಸ್ ಸ್ಕೀಮ್’ ಅಡಿಯಲ್ಲಿ ಸದ್ದಲ್ ಹಳ್ಳಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಂಡಿದೆ. ಸದ್ದಲ್ ಹಳ್ಳಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ಈ ಗ್ರಾಮದ ನಿವಾಸಿಗಳಿಗೆ ಬೆಳಕಿನ ಹಬ್ಬ ಆಚರಿಸಿದಷ್ಟೇ ಸಂತಸಗೊಂಡಿದ್ದಾರೆ.
ವಿದ್ಯುತ್ ಸಂಪರ್ಕದಿಂದ ಕತ್ತಲೆಯಿಂದ ಮುಕ್ತಿ
ಜಮ್ಮು ಮತ್ತು ಕಾಶ್ಮೀರದ ಉಧಮ್ಪುರದ ಗ್ರಾಮ ಸದ್ದಲ್ ಹಳ್ಳಿಗೆ ಕೇಂದ್ರ ಸರ್ಕಾರದ ‘ಯುನೈಟೆಡ್ ಗ್ರಾಂಟ್ಸ್ ಸ್ಕೀಮ್’ಅಡಿಯಲ್ಲಿ ವಿದ್ಯುತ್ ಸಂಪರ್ಕ ದೊರೆತಿರುವುದು ಕತ್ತಲೆಯಿಂದ ಮುಕ್ತಿ ನೀಡಿದೆ. ಕತ್ತಲೆಯಲ್ಲೇ ಕಳೆದು ಹೋಗುತ್ತಿದ್ದ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಗ್ರಾಮದ ನಿವಾಸಿಗಳಲ್ಲಿ ಹೊಸ ಆಶಾಭಾವನೆ ಮೂಡಿದೆ.
ಸದ್ದಲ್ ಹಳ್ಳಿಗೆ ಕೇಂದ್ರ ಸರ್ಕಾರದ ‘ಯುನೈಟೆಡ್ ಗ್ರಾಂಟ್ಸ್ ಸ್ಕೀಮ್’ಅಡಿಯಲ್ಲಿ ವಿದ್ಯುತ್ ಸಂಪರ್ಕ ದೊರೆಯುವ ಮೊದಲು ಗ್ರಾಮದ ನಿವಾಸಿಗಳಿಗೆ ಮೇಣದ ಬತ್ತಿ ಮತ್ತು ಎಣ್ಣೆ ಬುಡ್ಡಿಗಳೇ ಇದುವರೆಗೆ ಬೆಳಕಿನ ಮೂಲವಾಗಿತ್ತು.
ಇದನ್ನೂ ಓದಿ: ಭಾರತವನ್ನು ‘ದೊಡ್ಡಣ್ಣ’ ಎಂದು ಕರೆದು ಥ್ಯಾಂಕ್ಸ್ ಹೇಳಿದ ಸನತ್ ಜಯಸೂರ್ಯ.. ಕಾರಣವೇನು?
ಮೇಣದ ಬತ್ತಿಗಳು ಮತ್ತು ಎಣ್ಣೆ ದೀಪಗಳೇ ಬೆಳಕಿನ ಏಕೈಕ ಮೂಲವಾಗಿತ್ತು
ಮೊದಲು, ಹಳ್ಳಿಯಲ್ಲಿ ಸಂಜೆ ಆಗುತ್ತಲೇ ಬೆಳಕಿನ ಏಕೈಕ ಮೂಲವಾದ ಮೇಣದ ಬತ್ತಿಗಳು ಮತ್ತು ಎಣ್ಣೆ ದೀಪಗಳ ಮೊರೆ ಹೋಗುತ್ತಿದ್ದರು. ಅದೇ ಕ್ರಮೇಣವಾಗಿ ಅವರ ದೈನಂದಿನ ಜೀವನದ ಭಾಗವಾಗಿತ್ತು. ಈಗ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಗ್ರಾಮಸ್ಥರು ಇದುವರೆಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಆದರೆ ಬಹುಕಾಲದ ಬೇಡಿಕೆಯಾದ ವಿದ್ಯುತ್ ಸಂಪರ್ಕ ಮೂಲ ಸೌಲಭ್ಯ ಈಗ ಪೂರ್ಣವಾಗುತ್ತಿರುವ ಬಗ್ಗೆ ಹಳ್ಳಿಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಲ್ಪಿಸಿದ್ದಕ್ಕೆ ಗ್ರಾಮಸ್ಥರ ಧನ್ಯವಾದ
ಈ ಕಾರ್ಯಾಚರಣೆಯ ಯಶಸ್ಸಿಗಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಪಂಚಾಯತ್ ರಾಜ್ ಕಾಯ್ದೆಯ ಮೂರು ಹಂತದ ವ್ಯವಸ್ಥೆಗೆ ಗ್ರಾಮಸ್ಥರು ಮನ್ನಣೆ ನೀಡಿದ್ದಾರೆ.ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ, ಉಧಮ್ಪುರ ಆಡಳಿತ ಮತ್ತು ವಿದ್ಯುತ್ ಇಲಾಖೆಗೆ ಮಕ್ಕಳು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಯೋಜನೆಯ ಯಶಸ್ಸಿಗಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಪಂಚಾಯತ್ ರಾಜ್ ಕಾಯ್ದೆಯ ಮೂರು ಹಂತದ ವ್ಯವಸ್ಥೆಗೆ ಕಾರಣ ಎನ್ನುತ್ತಾರೆ ಗ್ರಾಮಸ್ಥರು. “ಈಗ ನಾವು ಯಾವುದೇ ಸಮಸ್ಯೆಯಿಲ್ಲದೆ ಓದಬಹುದು. ಮೊದಲು ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಚಿಮಣಿ ದೀಪದಡಿಯಲ್ಲಿ ನಾವು ಓದಬೇಕಿತ್ತು, ಇದು ತುಂಬಾ ಸಮಸ್ಯೆಯಾಗುತ್ತಿತ್ತು” ಎನ್ನುತ್ತಾರೆ ವಿದ್ಯಾರ್ಥಿಗಳು.
ಅಲ್ಲದೇ ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆಡಳಿತ, ಉಧಮ್ಪುರ ಆಡಳಿತ ಮತ್ತು ವಿದ್ಯುತ್ ಇಲಾಖೆಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದಿನ ಪೀಳಿಗೆಯವರು ವಿದ್ಯುತ್ ಪವಾಡವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟು ಸುದೀರ್ಘ ಕಾಯುವಿಕೆಯ ನಂತರ ನಮಗೆ ವಿದ್ಯುತ್ ಒದಗಿಸಿದ ಇಲಾಖೆಗೆ ಇಂದು ನಾವು ಕೃತಜ್ಞರಾಗಿರುತ್ತೇವೆ" ಎಂದು 72 ವರ್ಷದ ಬದರಿನಾಥ್ ಹೇಳಿದರು.
10.28 ಲಕ್ಷ ರೂಪಾಯಿ ವೆಚ್ಚ
ಎಕ್ಸಿಕ್ಯೂಟಿವ್ ಇಂಜಿನಿಯರ್ (XEN), ಪವರ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ (PDD) ಉಧಮ್ಪುರ್ ಜಾವೇದ್ ಹುಸೇನ್ ಅಖ್ತರ್ ಮಾತನಾಡಿ,
" ಪಂಚಾಯತ್ ಕುಲ್ಟ್ಯಾರ್ನಲ್ಲಿರುವ ಅನಾವರಣಗೊಂಡ ಗ್ರಾಮ ಸದ್ದಲ್ ಭಾರತ ಸರ್ಕಾರದ ನಿರ್ದೇಶನಗಳೊಂದಿಗೆ ಸಂಪೂರ್ಣವಾಗಿ ವಿದ್ಯುದ್ದೀಕರಿಸಲ್ಪಟ್ಟಿದೆ. ಮತ್ತು ಇದಕ್ಕೆ 10.28 ಲಕ್ಷ ರೂಪಾಯಿ ವೆಚ್ಚವಾಗಿದೆ.
"ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, 25KVA ಟ್ರಾನ್ಸ್ಫಾರ್ಮರ್ ಅನ್ನು ಅಳವಡಿಸಿದ ನಂತರ ಗ್ರಾಮದ ಸುಮಾರು 25 ಮನೆಗಳು ಪ್ರಯೋಜನ ಪಡೆದಿವೆ" ಎಂದು ಅಖ್ತರ್ ಹೇಳಿದ್ದಾರೆ. ಇದು ಜಿಲ್ಲೆಯ ವಿದ್ಯುತ್ ವಲಯದಿಂದ ಐತಿಹಾಸಿಕ ಸಾಧನೆಯಾಗಿದೆ.
ಇದನ್ನೂ ಓದಿ: ಮನುಷ್ಯರ ಜೊತೆ ಏಲಿಯನ್ಗಳು ಲೈಂಗಿಕ ಸಂಪರ್ಕ ಹೊಂದಿದ್ದವಂತೆ.. ಅಮೆರಿಕಾದ ದಾಖಲೆಗಳಿಂದ ಬಯಲು
ಗ್ರಾಮವು ಉಧಂಪುರದ ಪಂಚರಿ ತಹಸಿಲ್ನಲ್ಲಿರುವ ಪಂಚಾಯತ್ ಹಲ್ಕಾ ಕುಲ್ತ್ಯಾರ್ ಬಾಳ ವಾರ್ಡ್ ಸಂಖ್ಯೆ 5 ರ ಅಡಿಯಲ್ಲಿ ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ