• Home
  • »
  • News
  • »
  • national-international
  • »
  • Elnaaz Norouzi: ಹಿಜಾಬ್​ಗೆ ವಿರೋಧ, ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ಖ್ಯಾತ ನಟಿ!

Elnaaz Norouzi: ಹಿಜಾಬ್​ಗೆ ವಿರೋಧ, ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ಖ್ಯಾತ ನಟಿ!

ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ನಟಿ

ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ನಟಿ

Elnaaz Norouzi News: Instagram ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ, ನಟಿ ಎಲ್ನಾಜ್ ತನ್ನ ಹಿಜಾಬ್ ಮತ್ತು ಬುರ್ಖಾವನ್ನು ತೆಗೆಯುವುದನ್ನು ಕಾಣಬಹುದು. ಬುರ್ಖಾವನ್ನು ತೆಗೆದ ಬಳಿಕ ಆಕೆ ತನ್ನೆಲ್ಲಾ ಎಲ್ಲಾ ಬಟ್ಟೆಗಳನ್ನೂ ಒಂದೊಂದಾಗಿ ತೆಗೆದಿದ್ದಾರೆ. ಈ ಮೂಲಕ ಅವರು ಮಹಿಳೆಯರ ಹಿಜಾಬ್​ ವಿರೋಧಿ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಅವರು ಈ ವಿಡಿಯೋಗೆ 'ಮೈ ಬಾಡಿ, ಮೈ ಚಾಯ್ಸ್' ಎಂದು ಶೀರ್ಷಿಕೆ ನೀಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

ನವದೆಹಲಿ(ಆ.12): ಹಿಜಾಬ್ ವಿಚಾರವಾಗಿ ಇರಾನ್​ನಲ್ಲಿ (Protest Against Hijab) ಕಾಣಿಸಿಕೊಂಡ ಕಿಚ್ಚು ಈಗ ಭಾರತಕ್ಕೂ ಲಗ್ಗೆ ಇಟ್ಟಿದೆ. ನೆಟ್‌ಫ್ಲಿಕ್ಸ್‌ನ (Netflix) ಹಿಟ್ ಸೀರೀಸ್ 'ಸೇಕ್ರೆಡ್ ಗೇಮ್ಸ್' ನಲ್ಲಿ ಕೆಲಸ ಮಾಡಿದ್ದ ಬಾಲಿವುಡ್ ನಟಿ ಎಲ್ನಾಜ್ ನೊರೌಜಿ (Bollwyood Actress Elnaaz Norouzi) ಕೂಡ ಈ ಹಿಜಾಬ್ ವಿವಾದಕ್ಕೆ ಧುಮುಕಿದ್ದಾರೆ. ಇರಾನ್‌ನಲ್ಲಿ (Iran) ಹಿಜಾಬ್ ವಿರುದ್ಧ ಮಹಿಳೆಯರು ನಡೆಸಿದ ಪ್ರತಿಭಟನೆಯನ್ನು ಎಲ್ನಾಜ್ ನೊರೌಜಿ ಬೆಂಬಲಿಸಿದರು, ಮಹಿಳೆಯರಿಗೆ ಅವರು ಏನು ಬೇಕಾದರೂ ಧರಿಸುವ ಹಕ್ಕಿದೆ ಎಂದು ಹೇಳಿದರು. ಎಲ್ನಾಜ್ ಮಂಗಳವಾರ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಿಜಾಬ್ ಅನ್ನು ವಿರೋಧಿಸುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Iran Protest: ಯುವತಿ ಸಾವು ದುರಾದೃಷ್ಟಕರ ಎಂದ ಸರ್ಕಾರ! ಹಿಜಾಬ್ ವಿರುದ್ಧ ಮುಂದುವರೆದ ಮಹಿಳೆಯರ ಪ್ರತಿಭಟನೆ


Instagramನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ, ನಟಿ ಎಲ್ನಾಜ್ ತನ್ನ ಹಿಜಾಬ್ ಮತ್ತು ಬುರ್ಖಾವನ್ನು ತೆಗೆಯುವುದನ್ನು ಕಾಣಬಹುದು. ಬುರ್ಖಾವನ್ನು ತೆಗೆದ ನಂತರ, ಅವಳು ತನ್ನ ಎಲ್ಲಾ ಬಟ್ಟೆಗಳನ್ನು ಒಂದೊಂದಾಗಿ ತೆಗೆದಿದ್ದಾಳೆ, ಈ ಮೂಲಕ ಅವರು ಇರಾನಿನ ಮಹಿಳೆಯರ ಹಿಜಾಬ್​ ವಿರೋಧಿ  ಭಟನೆಗೆ ಬೆಂಬಲ ಸೂಚಿಸಿದ್ದಾರೆ. ಅವರು ಈ ವಿಡಿಯೋಗೆ 'ಮೈ ಬಾಡಿ, ಮೈ ಚಾಯ್ಸ್' ಎಂದು ಹೆಸರಿಸಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಪ್ರತಿಭಟನಾನಿರತ ಮಹಿಳೆಯರಿಗೆ ಬೆಂಬಲ ನೀಡಿದ್ದಾರೆ ಎಂಬುವುದು ಉಲ್ಲೇಖನೀಯ.


ಮಹಿಳೆಯ ಬಟ್ಟೆ ಜಡ್ಜ್ ಮಾಡುವ ಹಕ್ಕು ಯಾರಿಗೂ ಇಲ್ಲ


ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರು, 'ಪ್ರತಿಯೊಬ್ಬ ಮಹಿಳೆ, ಜಗತ್ತಿನ ಯಾವ ಮೂಲೆಯಲ್ಲಾದರೂ ಸರಿ, ಆಕೆ ಎಲ್ಲಿಯವಳಾದರೂ ಸರಿ, ತನಗೆ ಬೇಕಾದುದನ್ನು, ಯಾವಾಗ ಮತ್ತು ಎಲ್ಲಿ ಬೇಕಾದರೂ ಧರಿಸುವ ಹಕ್ಕನ್ನು ಹೊಂದಿರಬೇಕು. ಯಾವುದೇ ಪುರುಷ ಅಥವಾ ಯಾವುದೇ ಮಹಿಳೆಗೆ ಆಕೆಯನ್ನು ಜಡ್ಜ್​​ ಮಾಡುವ ಅಥವಾ ಬೇರೆ ಬಟ್ಟೆ ಧರಿಸುವ ಎನ್ನುವ ಹಕ್ಕು ಇಲ್ಲ ಎಂದಿದ್ದಾರೆ.


ಆಯ್ಕೆಯ ಸ್ವಾತಂತ್ರ್ಯ ಪ್ರಚಾರ ಮಾಡುತ್ತಿದ್ದೇನೆ


ಈ ಬಗ್ಗೆ ಮತ್ತಷ್ಟು ಬರೆದಿರುವ ಅವರು, 'ಪ್ರತಿಯೊಬ್ಬರೂ ವಿಭಿನ್ನ ದೃಷ್ಟಿಕೋನಗಳು ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ಇದನ್ನು ನಾವು ಗೌರವಿಸಬೇಕು. ಪ್ರಜಾಪ್ರಭುತ್ವ ಎಂದರೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ. ಪ್ರತಿಯೊಬ್ಬ ಮಹಿಳೆ ತನ್ನ ದೇಹದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರಬೇಕು. ನಾನು ನಗ್ನತೆಯನ್ನು ಪ್ರಚಾರ ಮಾಡುತ್ತಿಲ್ಲ, ನಾನು ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಿದ್ದೇನೆ ಎಂದಿದ್ದಾರೆ.

View this post on Instagram


A post shared by Elnaaz Norouzi (@iamelnaaz)

ಮಾಡೆಲ್ ಆಗಿದ್ದ ನಟಿ ಎಲ್ನಾಜ್


ನಟನೆಯಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ನಟಿ ಎಲ್ನಾಜ್ ನೊರೌಜಿ ಸುಮಾರು 10 ವರ್ಷಗಳ ಕಾಲ ಅಂತರರಾಷ್ಟ್ರೀಯ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ. ಈ ಸಮಯದಲ್ಲಿ ಅವರು ಅನೇಕ ಬ್ರಾಂಡ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪರ್ಷಿಯನ್ ಸಾಂಪ್ರದಾಯಿಕ ನೃತ್ಯವನ್ನು ತಿಳಿದಿದ್ದಾರೆ. ಪ್ರಸ್ತುತ ಭಾರತದಲ್ಲಿ ಕಥಕ್ ನೃತ್ಯವನ್ನು ಕಲಿಯುತ್ತಿದ್ದಾರೆ. ಎಲ್ನಾಜ್ ನೊರೌಜಿ ಮೂಲತಃ ಇರಾನಿನವರು.


ಇದನ್ನೂ ಓದಿ: Iran Hijab Protest: ಮಹಿಳೆಯರೇ ಹಿಜಾಬ್‌ ಸುಟ್ರು; ಧಗಧಗನೇ ಉರಿಯುತ್ತಿದೆ ಇರಾನ್


ಏನಿದು ಪ್ರಕರಣ?


ಸೆಪ್ಟೆಂಬರ್‌ನಲ್ಲಿ, ಹಿಜಾಬ್​ಬನ್ನು ಸರಿಯಾಗಿ ಧರಿಸಿಲ್ಲ ಎಂಬ ಕಾರಣದಿಂದ ಇಲ್ಲಿನ ಧಾರ್ಮಿಕ ಪೊಲೀಸರು ಅಮಿನಿ ಎಂಬ ಯುವತಿಯನ್ನು ಕಸ್ಟಡಿಗೆ ತೆಗೆದುಕೊಂಡರು, ಆದರೆ ಇದಾದ ಮೂರು ದಿನಗಳ ಬಳಿಕ ಆಕೆ ಅವರು ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದರು. ಅಮಿನಿಯ ಸಾವಿನ ವಿರುದ್ಧ ದೇಶಾದ್ಯಂತ ಹತ್ತಾರು ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು ಮತ್ತು ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿತು. ಆದಾಗ್ಯೂ, ಇರಾನ್‌ನಲ್ಲಿ ಪ್ರದರ್ಶನದ ಬೆಂಕಿ ಮತ್ತಷ್ಟು ಹರಡುತ್ತಿದೆ ಹಾಗೂ ವಿಶ್ವಾದ್ಯಂತ ಜನರು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.


ಪ್ರಿಯಾಂಕಾ ಚೋಪ್ರಾರಿಂದಲೂ ಬೆಂಬಲ


ಇತ್ತೀಚೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಪ್ರತಿಭಟನೆ ನಡೆಸುತ್ತಿರುವ ಇರಾನ್ ಮಹಿಳೆಯರಿಗೆ ಬೆಂಬಲ ನೀಡಿದ್ದರು.  40 ವರ್ಷದ ಪ್ರಿಯಾಂಕಾ ಚೋಪ್ರಾ ಅವರು ಪ್ರತಿಭಟನೆ ನಡೆಸುತ್ತಿರುವ ಇರಾನಿಯನ್ನರಿಗಾಗಿ Instagram ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ, ಪ್ರತಿಭಟನಾನಿರತ ಮಹಿಳೆಯರನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಬರೆದಿರುವ ಅವರು 'ನಾನು ನಿಮ್ಮ ಧೈರ್ಯವನ್ನು ಮೆಚ್ಚುತ್ತೇನೆ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು, ಪಿತೃಪ್ರಧಾನ ವ್ಯವಸ್ಥೆಗೆ ಸವಾಲು ಹಾಕುವುದು ಮತ್ತು ನಿಮ್ಮ ಹಕ್ಕುಗಳಿಗಾಗಿ ಹೋರಾಡುವುದು ಸುಲಭವಲ್ಲ, ಆದರೆ ನೀವು ಎಷ್ಟೇ ಬೆಲೆ ತೆತ್ತಾದರೂ ಅದನ್ನು ಪ್ರತಿದಿನ ಮಾಡುವ ಧೈರ್ಯಶಾಲಿ ಮಹಿಳೆಯರು. ಬೇರೆಯವರ ಮೇಲೆ ಪ್ರಭಾವ ಬೀರಬಲ್ಲವರೆಲ್ಲ ಮುಂದೆ ಬರಬೇಕು. ಈ ಪ್ರಮುಖ ಚಳುವಳಿಗೆ ನಿಮ್ಮ ಧ್ವನಿಯನ್ನು ನೀಡಿ. ಜಾಗೃತರಾಗಿರಿ ಮತ್ತು ನಿಮ್ಮ ಧ್ವನಿಯನ್ನು ಹೆಚ್ಚಿಸಿ, ಇದರಿಂದ ಈ ಧ್ವನಿ ಮೌನವಾಗಿಸುವ ಯತ್ನ ನಡೆಯದಿರಲಿ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದಿದ್ದರು.

Published by:Precilla Olivia Dias
First published: