ಶ್ರೀಲಂಕಾ ರಾಜಕೀಯ ಬಿಕ್ಕಟ್ಟು; ಅಧಿಕೃತ ಪಿಎಂ ನಿವಾಸದಿಂದ ಹೊರಹಾಕಲ್ಪಟ್ಟ ಉಚ್ಚಾಟಿತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ

HR Ramesh | news18
Updated:October 28, 2018, 3:26 PM IST
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು; ಅಧಿಕೃತ ಪಿಎಂ ನಿವಾಸದಿಂದ ಹೊರಹಾಕಲ್ಪಟ್ಟ ಉಚ್ಚಾಟಿತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ
  • News18
  • Last Updated: October 28, 2018, 3:26 PM IST
  • Share this:
ನ್ಯೂಸ್ 18 ಕನ್ನಡ

ಕೊಲಂಬೊ (ಅ.28): ಶ್ರೀಲಂಕಾದ ಉಚ್ಚಾಟಿತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿಯ ಅಧಿಕೃತ ನಿವಾಸದಿಂದ ಭಾನುವಾರ ಹೊರಹಾಕಲಾಗಿದೆ.

ಪ್ರಧಾನಿ ರಾನಿಲ್​ ವಿಕ್ರಮಸಿಂಘೆ ಅವರನ್ನು ಅಲ್ಲಿನ ಅಧ್ಯಕ್ಷ ಸಿರಿಸೇನಾ ಶುಕ್ರವಾರ ಉಚ್ಚಾಟಿಸಿದ್ದರು. ನಿವಾಸ ತೆರವಿನ ಸಂಬಂಧ ಅಧಿಕೃತ ಮನೆ ತೆರವು ಮಾಡಲು ಗಡುವು ನಿಗದಿ ಮಾಡಲಾಗಿತ್ತು ಎಂಬುದನನ್ನು ವಿಕ್ರಮಸಿಂಘೆ ನಿರಾಕರಿಸಿದ್ದಾರೆ.

ವಿಕ್ರಮಸಿಂಘೆ ಅವರನ್ನು ಪ್ರಧಾನಿಯ ಅಧಿಕೃತ ನಿವಾಸದಿಂದ ಖಾಲಿ ಮಾಡಿಸಲು ಕೋರ್ಟ್​ ಆದೇಶ ಈಗಷ್ಟೇ ಸಿಕ್ಕಿದ್ದು, ಅದರಂತೆ ಅವರನ್ನು ಮನೆಯಿಂದ ಖಾಲಿ ಮಾಡಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಸಾವಿರಕ್ಕೂ ಅಧಿಕ ಬೆಂಬಲಿಗರು ನಿವಾಸದ ಸುತ್ತ ಈ ವೇಳೆ ನೆರೆದಿದ್ದರು. ಆದರೆ, ಯಾರೊಬ್ಬರು ಈ ವಿವಾದದಲ್ಲಿ ತಲೆ ಹಾಕಲಿಲ್ಲ.

ವಿಕ್ರಮಸಿಂಘೆ ಅವರ ರಕ್ಷಣಾ ಮತ್ತು ಅಧಿಕೃತ ಸಿಬ್ಬಂದಿ, ವಾಹನಗಳನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಶನಿವಾರವೇ ರದ್ದು ಮಾಡಿದ್ದರು. ತುರ್ತುಸದನ ಕರೆದು ಸಂಸತ್ತಿನಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಬೇಕು ಎಂದು ನಿರ್ಗಮಿತ ಪ್ರಧಾನಿ ವಿಕ್ರಮಸಿಂಘೆ ಆಗ್ರಹಿಸಿದ್ದಾರೆ.

ಮಹಿಂದ್ರಾ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿದ ನಂತರ ಎದುರಾಗುವ ಪರಿಣಾಮಗಳನ್ನು ಎದುರಿಸುವ ಸಲುವಾಗಿ ಮೂರು ವಾರಗಳ ಕಾಲ ಸಂಸತ್ತನ್ನು ನಿರ್ಬಂಧದಲ್ಲಿ ಇಡಲಾಗಿದೆ.

ಇದನ್ನು ಓದಿ: ಶ್ರೀಲಂಕಾ ಪ್ರಧಾನಿ ರಾನಿಲ್ ವಜಾ; ಮಾಜಿ ಅಧ್ಯಕ್ಷ ರಾಜಪಕ್ಸ ನೂತನ ಪ್ರಧಾನಿದಶಕಕ್ಕೂ ಹೆಚ್ಚು ಕಾಲ ಶ್ರೀಲಂಕಾದಲ್ಲಿ ಅಧಿಕಾರ ನಡೆಸಿರುವ ರಾಜಪಕ್ಸ ಎರಡು ರಾಜ್ಯಗಳ ಸುದ್ದಿವಾಹಿನಿಗಳ ಮೇಲೆ ಈಗಲೂ ನಿಯಂತ್ರಣ ಹೊಂದಿದ್ದಾರೆ. ಕೊಲಂಬೊದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ಎಲ್ಲ ಪೊಲೀಸರ ರಜೆಯನ್ನು ತೆಗೆದುಹಾಕಲಾಗಿದೆ. ಸೇನಾ ಸಿಬ್ಬಂದಿ ಕೂಡ ಪ್ರಧಾನಮಂತ್ರಿ ಅಧಿಕೃತ ನಿವಾಸ ಹಾಗೂ ಅಧ್ಯಕ್ಷರ ಕಚೇರಿ ಸುತ್ತ ಗಸ್ತು ತಿರುಗುತ್ತಿದ್ದಾರೆ.

ಏತನ್ಮಧ್ಯೆ, ಕಂಡ್ಯಾದಲ್ಲಿರುವ ಪ್ರಸಿದ್ಧ ಬೌದ್ಧ ದೇಗುಲಕ್ಕೆ ಮಹೀಂದ್ರಾ ರಾಜಪೆಕ್ಸ ತೆರಳಿ, ಹೊಸ ಕ್ಯಾಬಿನೆಟ್​ ರಚನೆಗೆ ಬೌದ್ಧ ಬಿಕ್ಕುಗಳ ಆಶೀರ್ವಾದ ಪಡೆದಿದ್ದಾರೆ. ಭಾನುವಾರ ಕ್ಯಾಬಿನೆಟ್​ಗೆ ಕೆಲ ಸಚಿವರನ್ನು ನೇಮಿಸಲಾವುದು ಮತ್ತು ಸೋಮವಾರದಿಂದ ಕೆಲಸ ಆರಂಭಿಸುವುದಾಗಿ ರಾಜಪಕ್ಸ ಹೇಳಿದ್ದಾರೆ.

First published:October 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading