ವಕೀಲರ ವಿರುದ್ಧ ಸುಳ್ಳು ಕೇಸ್​​ ದಾಖಲು ಆರೋಪ​​: ಮಾಜಿ ಐಎಎಸ್​ ಅಧಿಕಾರಿ ಸಂಜೀವ್​​ ಭಟ್​​ ಸಿಐಡಿ ಕಸ್ಟಡಿಗೆ..!


Updated:September 5, 2018, 10:00 PM IST
ವಕೀಲರ ವಿರುದ್ಧ ಸುಳ್ಳು ಕೇಸ್​​ ದಾಖಲು ಆರೋಪ​​: ಮಾಜಿ ಐಎಎಸ್​ ಅಧಿಕಾರಿ ಸಂಜೀವ್​​ ಭಟ್​​ ಸಿಐಡಿ ಕಸ್ಟಡಿಗೆ..!

Updated: September 5, 2018, 10:00 PM IST
ನ್ಯೂಸ್​-18 ಕನ್ನಡ

ನವದೆಹಲಿ(ಸೆಪ್ಟೆಂಬರ್​​.05): ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕಟುವಾಗಿ ಟೀಕಿಸುವ ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ವಿರುದ್ದ ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ. ಗುಜರಾತ್​​ ಹೈಕೋರ್ಟ್​ ಆದೇಶದ ಮೇರೆಗೆ ಸಿಐಡಿ ಪೊಲೀಸರು ಸಂಜೀವ್​ ಭಟ್​ ಅವರನ್ನು ವಶಕ್ಕೆ ಪಡೆದಿದ್ದಾರೆ.

1996ರಲ್ಲಿ ರಾಜಸ್ಥಾನ ಮೂಲದ ವಕೀಲರೊಬ್ಬರ ವಿರುದ್ಧ 1.5 ಕೆ.ಜಿ. ತೂಕದ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಸಂಜೀವ್​​ ಭಟ್​​ ಪ್ರಕರಣ ದಾಖಿಲಿಸಿದರು. ಬಳಿಕ ವಕೀಲರ ವಿರುದ್ಧ ಸಂಜೀವ್​ ಭಟ್​​ ಸುಳ್ಳು ಪ್ರಕರಣ ದಾಖಲಿಸಿದ್ಧಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು.

ಸದ್ಯ ಸುಳ್ಳು ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಸಂಜೀವ್ ಭಟ್ ಅವರನ್ನು ತನಿಖೆಗೆ ಒಳಪಡಿಸುವಂತೆ ಗುಜರಾತ್ ಹೈಕೋರ್ಟ್ ಜುಲೈನಲ್ಲಿ ಸಿಐಡಿಗೆ ಸೂಚಿಸಿದೆ. ಹೀಗಾಗಿ, ವಿಶೇಷ ತನಿಖಾ ದಳವನ್ನು ಕೋರ್ಟ್​ ರಚಿಸಿದೆ. ಕೋರ್ಟ್​ ಆದೇಶದ ಮೇರೆಗೆ ಭಟ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಸಿಐಡಿ, ವಿಚಾರಣೆಗೆ ಒಳಪಡಿಸಿದೆ.

ಗುಜರಾತ್​ನಲ್ಲಿ ನಡೆದ 2002ರ ಗಲಭೆಗೆ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಸರ್ಕಾರವೇ ಕಾರಣ ಎಂದು ಸಂಜೀವ್​​ ಭಟ್​ ನೇರ ಆರೋಪ ಮಾಡಿದ್ದರು. ಅಲ್ಲದೆ ಮೋದಿ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಕೂಡ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಸಂಜೀವ್ ಭಟ್ ಅವರನ್ನು 2015ರಲ್ಲಿ ಭಾರತೀಯ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು.

ಬನಸ್ಕಾಂತಾ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಭಟ್ ವಕೀಲ ಸುಮರ್‌ಸಿಂಗ್ ರಾಜ್‌ಪುರೋಹಿತ್ ಎಂಬುವವರ ವಿರುದ್ಧ 1996ರಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿದ 22 ವರ್ಷಗಳ ಬಳಿಕ ಗುಜರಾತ್ ಹೈಕೋರ್ಟ್, ಈ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಸಿಐಡಿಗೆ ಸೂಚನೆ ನೀಡಿದೆ ಎನ್ನಲಾಗಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ