• Home
  • »
  • News
  • »
  • national-international
  • »
  • Gujarat: ಕೆಲಸದಿಂದ ಕಿತ್ತು ಹಾಕಿದ್ದಕ್ಕೆ, ಯಜಮಾನ, ಆತನ ತಂದೆ, ಚಿಕ್ಕಪ್ಪಗೆ ಚಾಕು ಇರಿತ!

Gujarat: ಕೆಲಸದಿಂದ ಕಿತ್ತು ಹಾಕಿದ್ದಕ್ಕೆ, ಯಜಮಾನ, ಆತನ ತಂದೆ, ಚಿಕ್ಕಪ್ಪಗೆ ಚಾಕು ಇರಿತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಮಾಲೀಕ ಮತ್ತು ಆತನ ತಂದೆ, ಚಿಕ್ಕಪ್ಪನನ್ನು ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಸೂರತ್ ನಗರದ ಅಮ್ರೋಲಿ ಪ್ರದೇಶದ ಅಂಜನಿ ಕೈಗಾರಿಕಾ ಪ್ರದೇಶದಲ್ಲಿರುವ ವೇದಾಂತ್ ಟೆಕ್ಸೋ ಎಂಬ ಕಂಪನಿಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು.

ಮುಂದೆ ಓದಿ ...
  • News18 Kannada
  • Last Updated :
  • Gujarat, India
  • Share this:

ಕೆಲಸದಿಂದ ಕಿತ್ತುಹಾಕಿದ್ದಕ್ಕೆ ಪ್ರತಿಕಾರ; ಯಜಮಾನ, ಆತನ ತಂದೆ, ಚಿಕ್ಕಪ್ಪಗೆ ಚಾಕು ಇರಿದ ಕಾರ್ಮಿಕ!ಗಾಂಧೀನಗರ: ಕೆಲಸ ಕೊಡುವ ಯಜಮಾನನ್ನು ಅನ್ನದಾತ ಎಂದೇ ಹೇಳಲಾಗುತ್ತದೆ. ಅನೇಕ ಮಂದಿ ಬದುಕು ಕಟ್ಟಿಕೊಳ್ಳಲು ತಮ್ಮ ಊರನ್ನು ಬಿಟ್ಟು ನಗರಗಳತ್ತ ಮುಖ ಮಾಡುತ್ತಾರೆ. ಎಷ್ಟೋ ಜನ ಕೆಲಸ(Job) ಸಿಗದೇ ಪರದಾಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ಕರೆದು ಕೆಲಸ ಕೊಡುವ ಮಾಲೀಕ (Owner) ನಿಜಕ್ಕೂ ದೇವರಂತೆ ಪೂಜಿಸಬೇಕು. ಅಂತಹ ಮಾಲೀಕನಿಗೆ ದ್ರೋಹ ಬಗೆಯಬಾರದು. ಕೆಲಸ ಮಾಡಿ ಉತ್ತಮ ಹೆಸರು ಪಡೆದುಕೊಂಡು ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ಕೆಲಸದಿಂದ ತೆಗೆದು ಹಾಕಿದ ಹಿನ್ನೆಲೆ ಮಾಲೀಕ, ಆತನ ತಂದೆ(Father)  ಮತ್ತು ಚಿಕ್ಕಪ್ಪನಿಗೆ (Uncle) ಚಾಕು ಇರಿದಿರುವ ಘಟನೆ ಗುಜರಾತ್​ನಲ್ಲಿ (Gujrat) ನಡೆದಿದೆ. ಸೂರತ್ (Surat) ನಗರದ ಅಮ್ರೋಲಿ ಪ್ರದೇಶದ ( Amroli area) ಅಂಜನಿ ಕೈಗಾರಿಕಾ ಪ್ರದೇಶದಲ್ಲಿರುವ ವೇದಾಂತ್ ಟೆಕ್ಸೋ ಎಂಬ ಕಂಪನಿಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಅವರಲ್ಲಿ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಿದ್ದರಿಂದ ಕೋಪಗೊಂಡು ಈ ಕೃತ್ಯ ವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ಕುರಿತಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.


Bihar Horror man cuts womans limbs and ears in public market
ಸಾಂದರ್ಭಿಕ ಚಿತ್ರ


ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು


ಭಾನುವಾರ ಬೆಳಗ್ಗೆ ಆರೋಪಿ ಮತ್ತು ಆತನ ಸಹಚರರು ಕಂಪನಿಗೆ ನುಗ್ಗಿ ಮಾಲೀಕ, ಆತನ ತಂದೆ ಮತ್ತು ಚಿಕ್ಕಪ್ಪನಿಗೆ ಚಾಕು ಇರಿದು ಕೊಂದಿದ್ದಾರೆ. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಹರ್ಷದ್ ಮೆಹ್ತಾ ತಿಳಿಸಿದ್ದಾರೆ.


ಮಾಲೀಕ ಉದ್ಯೋಗಿ ನಡುವಿನ ಮನಸ್ತಾಪವೇ ಕೊಲೆಗೆ ಕಾರಣ


ಇನ್ನೂ ಹತ್ಯೆಗೀಡಾದವರನ್ನು ಕಲ್ಪೇಶ್ ಧೋಲಾಕಿಯಾ (36), ಧಂಜಿ ಧೋಲಾಕಿಯಾ (61) ಮತ್ತು ಘನಶ್ಯಾಮ್ ರಾಜೋಡಿಯಾ (48) ಎಂದು ಗುರುತಿಸಲಾಗಿದೆ. ಕಸೂತಿ ಸಂಸ್ಥೆಯ ಮಾಲೀಕ ಮತ್ತು ಉದ್ಯೋಗಿ ನಡುವಿನ ಮನಸ್ತಾಪವೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ.


ಆರೋಪಿಯನ್ನು ಕೆಲಸದಿಂದ ತೆಗೆದು ಹಾಕಿದ್ದ ಪೊಲೀಸರು


ಪ್ರಕರಣ ಕುರಿತಂತೆ ವಿಚಾರಣದೆ ವೇಳೆ 10 ದಿನಗಳ ಹಿಂದೆ ಕಾರ್ಖಾನೆ ಮಾಲೀಕ ವ್ಯಕ್ತಿ ರಾತ್ರಿ ಶಿಫ್ಟ್​ನಲ್ಲಿ ಕೆಲಸ ಮಾಡದೇ ಮಲಗಿದ್ದ ಎಂಬ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದೇ ವಿಚಾರವಾಗಿ ಆರೋಪಿ ಮತ್ತು ಮಾಲೀಕರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಇದರಿಂದ ಆರೋಪಿ ಮಾಲೀಕನ ವಿರುದ್ಧ ಕೋಪಗೊಂಡಿದ್ದನು.


ಸಾಂದರ್ಭಿಕ ಚಿತ್ರ


ಆರೋಪಿ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ


ಅಲ್ಲದೇ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಕಾರ್ಖಾನೆಯೊಳಗೆ ನುಗ್ಗುವುದನ್ನು ಕಾಣಬಹುದಾಗಿದೆ. ಜೊತೆಗೆ ಮೂವರಿಗೂ ಚಾಕುವಿನಿಂದ ಹಲವು ಬಾರಿ ಇರಿದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.


ಇದನ್ನೂ ಓದಿ: Delivery in Bus: ಚಲಿಸುತ್ತಿದ್ದ ಬಸ್​ನಲ್ಲಿಯೇ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ!


ಪ್ರಕರಣ ಸಂಬಂಧ ತನಿಖೆಗೆ ಎಸ್​ಐಟಿ ಆದೇಶ


ಈ ಘಟನೆ ಅತ್ಯಂತ ಗಂಭೀರ ಮತ್ತು ಭೀಕರವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸುವಲ್ಲಿ ಸೂರತ್​ ಪೊಲೀಸರು ನಿರತರಾಗಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ತಂಡವನ್ನು ರಚಿಸಲಾಗಿದೆ.


ಕೃತ್ಯಕ್ಕೂ ಮುನ್ನ ಆರೋಪಿಗಳಿಂದ ಆನ್​ಲೈನ್​​ನಲ್ಲಿ ಚಾಕು ಖರೀದಿ


ಫೊರೆನ್ಸಿಕ್ ತಂಡದ ಸಹಾಯದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಒಂದು ವಾರದೊಳಗೆ ಚಾರ್ಜ್ ಶೀಟ್ ಸಲ್ಲಿಸುವ ಗುರಿ ಹೊಂದಿದ್ದೇವೆ. ಆರೋಪಿಗಳು ಮಾಲೀಕರೊಂದಿಗೆ ಜಗಳವಾಡಿದ ನಂತರ ಆನ್‌ಲೈನ್‌ನಲ್ಲಿ ಚಾಕು ಖರೀದಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಸಿಪಿ ಹೇಳಿದ್ದಾರೆ.

Published by:Monika N
First published: