HOME » NEWS » National-international » SACHIN PILOT IN DELHI WITH HIS LOYALISTS AS RAJASTHAN CRISIS ALARMS CONGRESS RMD

ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಬೆಂಬಲಿತ ಶಾಸಕರೊಂದಿಗೆ ಸೋನಿಯಾ ಮನೆ ಬಾಗಿಲು ತಟ್ಟಿದ ಡಿಸಿಎಂ ಸಚಿನ್ ಪೈಲಟ್

ಅಶೋಕ್​ ಗೆಹ್ಲೋಟ್​ ನನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ. ನನಗೆ ಅನ್ಯಾಯ ಆಗುವುದನ್ನು ಎಂದಿಗೂ ಸಹಿಸೆನು ಎಂದು ಸಚಿನ್​ ಪೈಲಟ್​ ಹೇಳಿದ್ದಾರೆ ಎನ್ನಲಾಗುತ್ತಿದೆ.

news18-kannada
Updated:July 12, 2020, 1:24 PM IST
ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಬೆಂಬಲಿತ ಶಾಸಕರೊಂದಿಗೆ ಸೋನಿಯಾ ಮನೆ ಬಾಗಿಲು ತಟ್ಟಿದ ಡಿಸಿಎಂ ಸಚಿನ್ ಪೈಲಟ್
ಅಶೋಕ್ ಗೆಹ್ಲೋಟ್​- ಸಚಿನ್​ ಪೈಲಟ್​
  • Share this:
ಜೈಪುರ (ಜು.12): ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೇ ಇದೆ. ಒಂದು ಕಡೆ ಬಿಜೆಪಿ ನಮ್ಮ ಶಾಸಕರನ್ನು ಸೆಳೆಯುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಆರೋಪ ಮಾಡಿದರೆ, ಮತ್ತೊಂದೆಡೆ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಬೆಂಬಲಿತ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದಾರೆ. ಈ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಸಚಿನ್​ ಪೈಲಟ್​ ಶನಿವಾರ ತಮ್ಮ ಆಪ್ತ ಶಾಸಕರು ಹಾಗೂ ಪಕ್ಷದ ಹಿರಿಯ ನಾಯಕ ಅಹ್ಮದ್​ ಪಟೇಲ್​ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದ ಬೆನ್ನಲ್ಲೇ ಸಚಿನ್​ ಪೈಲಟ್​ ತಮ್ಮ ಬೆಂಬಲಿಗರೊಂದಿಗೆ ಇಂದು ದೆಹಲಿಗೆ ತೆರಳಿದ್ದಾರೆ. ಇಂದು ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ.

ಶನಿವಾರ ಅಹ್ಮದ್​ ಪಟೇಲ್​ ಜೊತೆಗಿನ ಸಭೆಯಲ್ಲಿ ಅಶೋಕ್​ ಗೆಹ್ಲೋಟ್ ವಿರುದ್ಧ ಸಚಿನ್​ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಶೋಕ್​ ಅವರು ನನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ. ನನಗೆ ಅನ್ಯಾಯ ಆಗುವುದನ್ನು ಎಂದಿಗೂ ಸಹಿಸೆನು ಎಂದು ಸಚಿನ್​ ಆರೋಪಿಸಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಸ್ಥಾನದ ಮೇಳೆ ಪೈಲಟ್​ ಕಣ್ಣು?:

ಈ ಮೊದಲಿನಿಂದಲೂ ಸಚಿನ್​ ಪೈಲಟ್​ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್​ ಜಯಭೇರಿ ನಂತರ ಅಶೋಕ್​ಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು, ಸಚಿನ್ ಹಾಗೂ ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಸಿಎಂ ಸ್ಥಾನ ಕೇಳಲು ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ವೇಳೆ ಬಿಜೆಪಿ ರಾಜಸ್ಥಾನದಲ್ಲಿ ಆಪರೇಷನ್​ ಕಮಲ ನಡೆಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆಯೂ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ. ಈ ಮಧ್ಯೆ 23 ಎಂಎಲ್​ಎಗಳು ನಮ್ಮ ಪರವಾಗಿ ಇದ್ದಾರೆ ಸಚಿನ್​ ಪೈಲಟ್​ ಹೇಳಿಕೊಂಡಿದ್ದಾರೆ.
Youtube Video

ಕಾಂಗ್ರೆಸ್​ಗೆ ಆಪತ್ತು:ಮಧ್ಯಪ್ರದೇಶದಲ್ಲಿ ಆಪರೇಷನ್​ ಕಮಲ ಮಾಡಲು ಬಿಜೆಪಿ ಯಶಸ್ವಿಯಾಗಿತ್ತು. ಈ ಬೆನ್ನಲ್ಲೇ ರಾಜಸ್ಥಾನದಲ್ಲೂ ಬಿಜೆಪಿ ಆಪರೇಷನ್​ ಕಮಲ ಮಾಡುತ್ತಿದೆ ಎನ್ನುವ ಮಾತು ಕೇಳಿ ಬಂದಿದ್ದವು. ಕರ್ನಾಟಕ ಮತ್ತು ಮಧ್ಯಪ್ರದೇಶದಂತೆಯೇ ರಾಜಸ್ಥಾನದಲ್ಲಿಯೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದ ಕಾಂಗ್ರೆಸ್​ ದೂರನ್ನು ಕೂಡ ದಾಖಲು ಮಾಡಿತ್ತು.
Published by: Rajesh Duggumane
First published: July 12, 2020, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories