HOME » NEWS » National-international » SACHIN PILOT DENIES JOINING BJP BUT REMAINS MUM ON ROAD AHEAD SNVS

ನಾನು ಬಿಜೆಪಿ ಸೇರುವುದಿಲ್ಲ; ಕೆಲ ನಾಯಕರಿಂದ ಸುಳ್ಳು ಸುದ್ದಿ ಸೃಷ್ಟಿ: ಸಿಎಂ ವಿರುದ್ಧ ಪೈಲಟ್ ಆಕ್ರೋಶ

ಸಚಿನ್ ಪೈಲಟ್ ಕಾಂಗ್ರೆಸ್ ತ್ಯಜಿಸಿದ ಮೇಲೆ ಮುಂದಿನ ದಾರಿ ಯಾವುದು ಎಂದು ಸ್ಪಷ್ಟಪಡಿಸಿಲ್ಲ. ತಾನು ಪಕ್ಕಾ ಕಾಂಗ್ರೆಸ್ಸಿಗನಾಗಿದ್ದು, ಪಕ್ಷ ಬಿಡುವುದಿಲ್ಲ. ತನ್ನನ್ನು ಅನರ್ಹಗೊಳಿಸಿದರೆ ಕಾನೂನು ಪ್ರಕಾರ ಹೆಜ್ಜೆ ಇಡುತ್ತೇನೆ ಎಂದಷ್ಟೇ ಹೇಳಿದ್ಧಾರೆ.

news18
Updated:July 15, 2020, 2:21 PM IST
ನಾನು ಬಿಜೆಪಿ ಸೇರುವುದಿಲ್ಲ; ಕೆಲ ನಾಯಕರಿಂದ ಸುಳ್ಳು ಸುದ್ದಿ ಸೃಷ್ಟಿ: ಸಿಎಂ ವಿರುದ್ಧ ಪೈಲಟ್ ಆಕ್ರೋಶ
ಸಚಿನ್ ಪೈಲಟ್
  • News18
  • Last Updated: July 15, 2020, 2:21 PM IST
  • Share this:
ನವದೆಹಲಿ(ಜುಲೈ 15): ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಳೆಸಿ ಬಿಜೆಪಿಯನ್ನು ಸೋಲಿಸಲು ಶ್ರಮಿಸಿದವನು ನಾನು. ನಾನು ಯಾಕೆ ಬಿಜೆಪಿ ಸೇರಲಿ? ನಾನು ಖಂಡಿತ ಬಿಜೆಪಿ ಸೇರುವುದಿಲ್ಲ ಎಂದು ಉಚ್ಛಾಟಿತ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಖಡಾಖಂಡಿತವಾಗಿ ಹೇಳಿದ ಮಾತುಗಳಿವು. ರಾಜಸ್ಥಾನದ ಕೆಲ ನಿರ್ದಿಷ್ಟ ನಾಯಕರು ನಾನು ಬಿಜೆಪಿ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ನನ್ನ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ಧಾರೆ ಎಂದೂ ಪೈಲಟ್ ಬಲವಾಗಿ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನ ಹಾಗೂ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಗಳಿಂದ ವಜಾಗೊಳಿಸಲಾಗಿದೆ. ಸಚಿನ್ ಪೈಲಟ್ ಬೆಂಬಲಿಗರನ್ನೂ ಕೂಡ ಸಂಪುಟದಿಂದ ಕೈಬಿಡಲಾಗಿದೆ. ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗ ಶಾಸಕರನ್ನು ಅನರ್ಹಗೊಳಿಸಲೂ ಸ್ಪೀಕರ್ ಯೋಜಿಸಿದ್ದಾರೆನ್ನಲಾಗಿದೆ.

ಸಚಿನ್ ಪೈಲಟ್ ಬಿಜೆಪಿ ಸೇರಬಹುದೆಂಬ ಊಹಾಪೋಹಗಳು ನಿನ್ನೆ ಹರಿದಾಡುತ್ತಿದ್ದವು. ಆದರೆ, ಸಚಿನ್ ಪೈಲಟ್ ಕಾಂಗ್ರೆಸ್ ತ್ಯಜಿಸಿದ ಮೇಲೆ ಮುಂದಿನ ದಾರಿ ಯಾವುದು ಎಂದು ಸ್ಪಷ್ಟಪಡಿಸಿಲ್ಲ. ತಾನು ಪಕ್ಕಾ ಕಾಂಗ್ರೆಸ್ಸಿಗನಾಗಿದ್ದು, ಪಕ್ಷ ಬಿಡುವುದಿಲ್ಲ. ತನ್ನನ್ನು ಅನರ್ಹಗೊಳಿಸಿದರೆ ಕಾನೂನು ಪ್ರಕಾರ ಹೆಜ್ಜೆ ಇಡುತ್ತೇನೆ ಎಂದಷ್ಟೇ ಹೇಳಿದ್ಧಾರೆ.

ಇದನ್ನೂ ಓದಿ: ಚೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಯಾವುದೇ ಆಸಕ್ತಿ ಉಳಿದಿಲ್ಲ; ಕಡ್ಡಿ ಮುರಿದಂತೆ ಹೇಳಿದ ಟ್ರಂಪ್

ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಬಂದಾಗಿನಿಂದಲು ಅಶೋಕ್ ಗೆಹ್ಗೋಟ್ ಮತ್ತು ಸಚಿನ್ ಪೈಲಟ್ ಮಧ್ಯೆ ಸಿಎಂ ಗಾದಿಗೆ ತೀವ್ರ ಪೈಪೋಟಿ ಇತ್ತು. ಗೆಹ್ಲೋಟ್ ಮುಖ್ಯಮಂತ್ರಿ ಆದ ನಂತರ ಇಬ್ಬರ ಮಧ್ಯೆ ಸಂಬಂಧ ದಿನೇದಿನೇ ಹಳಸುತ್ತಲೇ ಇತ್ತೆನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಮತ್ತೊಬ್ಬ ಯುವ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯ ತಮ್ಮ ಬೆಂಬಲಿಗರ ಸಮೇತ ಬಿಜೆಪಿ ಸೇರಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿದ್ದರು. ಅದೇ ರೀತಿಯ ಪಿತೂರಿ ಈಗ ರಾಜಸ್ಥಾನದಲ್ಲೂ ನಡೆಯುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಕೆಲವಾರು ತಿಂಗಳುಗಳಿಂದಲು ಆರೋಪಿಸುತ್ತಲೇ ಬಂದಿದ್ದಾರೆ. ಇದನ್ನು ನಿಗ್ರಹಿಸಲೆಂದು ಅವರು ನೆಮಿಸಿದ ರಾಜಸ್ಥಾನ ವಿಶೇಷ ಪೊಲೀಸ್ ದಳ (ಸ್ಪೆಷಲ್ ಆಪರೇಷನ್ಸ್ ಗ್ರೂಪ್) ಸಚಿನ್ ಪೈಲಟ್ ಅವರ ಹೇಳಿಕೆ ದಾಖಲಿಸಿಕೊಳ್ಳಲು ತೆರಳಿತು. ಇದು ಪೈಲಟ್ ಅವರನ್ನು ಕೆಂಡಾಮಂಡಲವನ್ನಾಗಿಸಿತು. ಆಗಲೇ ಅವರು ತನ್ನ ಬೆಂಬಲಿಗರೊಂದಿಗೆ ಬಂಡಾಯ ಏಳಲು ನಿರ್ಧರಿಸಿದ್ದು. ಇದಾಗಿದ್ದು ಶುಕ್ರವಾರ. ನಂತರ ಸೋಮವಾರ ಹಾಗೂ ಮಂಗಳವಾರದಂದು ಸಿಎಲ್​ಪಿ ಸಭೆಗಳಿಗೆ ಗೈರಾದರು. ನಂತರ ಅವರು ಅಧಿಕೃತವಾಗಿ ಬಂಡಾಯ ಎದ್ದರು. ದೆಹಲಿಗೆ ಆಗಮಿಸಿ ಸೋನಿಯಾ ಗಾಂಧಿ ಅವರನ್ನೂ ಭೇಟಿ ಆದರು. ಆದರೆ, ಕಾಂಗ್ರೆಸ್ ವರಿಷ್ಠರು ಮುಂದಿನ ಕ್ರಮದ ಅಧಿಕಾರವನ್ನು ಸಿಎಂ ಅಶೋಕ್ ಗೆಹ್ಲೋಟ್ ಅವರಿಗೇ ಕೊಟ್ಟರು. ಆಗ ಮುಖ್ಯಮಂತ್ರಿಗಳು ಸಚಿನ್ ಪೈಲಟ್ ಮತ್ತವರ ಬೆಂಬಲಿಗರನ್ನು ಸಂಪುಟದಿಂದ ಕೈಬಿಡುವ ನಿರ್ಧಾರಕ್ಕೆ ಬಂದರು.

ಇದನ್ನೂ ಓದಿ: RIL AGM 2020 - ರಿಲಾಯನ್ಸ್ ಎಜಿಎಂ; ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಮಹಾಸಭೆ; Chatbot ಪ್ರಯೋಗ

“ಸತ್ಯವನ್ನು ಅಲುಗಾಡಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ” ಎಂದು ಸಚಿನ್ ಪೈಲಟ್ ಟ್ವೀಟ್ ಮಾಡಿದರು.ನಾನು ಬಿಜೆಪಿ ಸೇರುತ್ತೇನೆಂದು ಹುಯಿಲು ಎಬ್ಬಿಸಲಾಗಿದೆ. ತನ್ನ ಹೆಸರಿಗೆ ಕಪ್ಪು ಮಸಿ ಬಳಿಯಲು ರಾಜಸ್ಥಾನದ ಕೆಲ ನಾಯಕರು ಮಾಡಿರುವ ಪಿತೂರಿ ಇದು ಎಂದು ಸಿಎಂ ಬಣದತ್ತ ಬೊಟ್ಟು ಮಾಡಿ ತೋರಿಸುತ್ತಾರೆ ಸಚಿನ್ ಪೈಲಟ್.
Published by: Vijayasarthy SN
First published: July 15, 2020, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories