• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Saarc Meet Cancelled| ತಾಲಿಬಾನ್​ ಭಾಗವಹಿಸುವಿಕೆಗೆ ಪಾಕ್ ಒತ್ತಾಯ; ನ್ಯೂಯಾರ್ಕ್​ನ ಸಾರ್ಕ್​ ವಿದೇಶಾಂಗ ಸಚಿವರ ಸಭೆ ರದ್ದು!

Saarc Meet Cancelled| ತಾಲಿಬಾನ್​ ಭಾಗವಹಿಸುವಿಕೆಗೆ ಪಾಕ್ ಒತ್ತಾಯ; ನ್ಯೂಯಾರ್ಕ್​ನ ಸಾರ್ಕ್​ ವಿದೇಶಾಂಗ ಸಚಿವರ ಸಭೆ ರದ್ದು!

ಇಮ್ರಾನ್ ಖಾನ್

ಇಮ್ರಾನ್ ಖಾನ್

ಸಾರ್ಕ್​ ಸದಸ್ಯ ರಾಷ್ಟ್ರಗಳು ಪಾಕಿಸ್ತಾನದ ಈ ಕೋರಿಕೆಗೆ ಒಪ್ಪಿಗೆ ಸೂಚಿಸಿಲ್ಲ. ಇದೇ ಕಾರಣಕ್ಕೆ ಸಾರ್ಕ್​ ವಿದೇಶಾಂಗ ಸಚಿವರ ಸಭೆಯನ್ನೇ ರದ್ದು ಮಾಡಲಾಗಿದೆ ಎಂದು ಸಾರ್ಕ್ ದೇಶಗಳ ರಾಜತಾಂತ್ರಿಕ ಮೂಲಗಳು ದೃಢಪಡಿಸಿವೆ. 

  • Share this:

ನ್ಯೂಯಾರ್ಕ್​ (ಸೆಪ್ಟೆಂಬರ್​ 22); ಸಾರ್ಕ್​ ದೇಶಗಳ ವಿದೇಶಾಂಗ ಸಚಿವರ ಸಭೆಯನ್ನು (SAARC Foreign Ministers' Meet Cancelled ) ನ್ಯೂಯಾರ್ಕ್​ (Newyork) ನಗರದಲ್ಲಿ ಸೆಪ್ಟೆಂಬರ್​ 22 ರಂದು ಆಯೋಜಿಸಲಾಗಿತ್ತು. ಆದರೆ, ಇಮ್ರಾನ್ ಖಾನ್ (Imran Khan) ನೇತೃತ್ವದ ಪಾಕಿಸ್ತಾನ (Pakistan), ತಾಲಿಬಾನ್ (Taliban) ಸರ್ಕಾರವೂ ಸಹ ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿತ್ತು. ಆದರೆ, ಸಾರ್ಕ್​ ಸದಸ್ಯ ರಾಷ್ಟ್ರಗಳು (Saarc Nations) ಪಾಕಿಸ್ತಾನದ ಈ ಕೋರಿಕೆಗೆ ಒಪ್ಪಿಗೆ ಸೂಚಿಸಿಲ್ಲ. ಇದೇ ಕಾರಣಕ್ಕೆ ಸಾರ್ಕ್​ ವಿದೇಶಾಂಗ ಸಚಿವರ ಸಭೆಯನ್ನೇ ರದ್ದು ಮಾಡಲಾಗಿದೆ ಎಂದು ಸಾರ್ಕ್ ದೇಶಗಳ ರಾಜತಾಂತ್ರಿಕ ಮೂಲಗಳು ದೃಢಪಡಿಸಿವೆ.


ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರವು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ದಕ್ಷಿಣ ಏಶಿಯನ್ ಪ್ರಾದೇಶಿಕ ಸಹಕಾರ (ಸಾರ್ಕ್) ವಿದೇಶಾಂಗ ಮಂತ್ರಿಗಳ ವಾರ್ಷಿಕ ಸಭೆಯಲ್ಲಿ ಪ್ರತಿನಿಧಿಯನ್ನು ಕಳುಹಿಸಲು ಅವಕಾಶ ನೀಡುವಂತೆ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಸೆಪ್ಟೆಂಬರ್​ 25 ರಂದು ಯುಎನ್ ಜನರಲ್ ಅಸೆಂಬ್ಲಿಯ (ಯುಎನ್ ಜಿಎ) 76 ನೇ ಅಧಿವೇಶನ ನ್ಯೂಯಾರ್ಕ್ ನಲ್ಲಿ ನಡೆಯಬೇಕಿತ್ತು. ಆದರೆ, ಪಾಕಿಸ್ತಾನದ ಬೇಡಿಕೆಯನ್ನು ಎಲ್ಲಾ ಸಾರ್ಕ್ ಸದಸ್ಯ ರಾಷ್ಟ್ರಗಳು ಒಮ್ಮತದಿಂದ ವಿರೋಧಿಸಿವೆ ಎಂದು ಮೂಲಗಳು ತಿಳಿಸಿವೆ.


ಸಾರ್ಕ್​ ಅಧ್ಯಕ್ಷ ದೇಶವಾದ ನೇಪಾಳ, ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ್ ಸರ್ಕಾರವು ಸಾರ್ಕ್​ ಸಭೆಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುವ ಬಗ್ಗೆ ಖಾತರಿಪಡಿಸಬೇಕು ಎಂದು ಪಾಕಿಸ್ತಾನ ಸರ್ಕಾರ ಬಯಸಿತ್ತು. ಆದರೆ, ಸಾರ್ಕ್ ಅಧ್ಯಕ್ಷ ನೇಪಾಳ ಪಾಕಿಸ್ತಾನ ಅಥವಾ ತಾಲಿಬಾನ್ ನಾಯಕತ್ವಕ್ಕೆ ಅಂತಹ ಯಾವುದೇ ಗ್ಯಾರಂಟಿ ನೀಡಲು ನಿರಾಕರಿಸಿದೆ ಮತ್ತು ಇದೇ ಕಾರಣಕ್ಕೆ ಸಾರ್ಕ್​ ವಿದೇಶಾಂಗ ಸಚಿವರ ಸಭೆ ರದ್ದುಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ.


ಕಳೆದ ವರ್ಷ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಾರ್ಕ್​ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿತ್ತು. ಆದರೆ, ಈ ವರ್ಷ ನ್ಯೂಯಾರ್ಕ್​ನಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.


ಇದನ್ನೂ ಓದಿ: PM Modi America Tour: ಇಂದು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ನಾಳೆ ಅಧ್ಯಕ್ಷ ಜೋ ಬಿಡೆನ್ ಭೇಟಿ


ಸಾರ್ಕ್ ಎಂಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ: ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ. ವೀಕ್ಷಕ ಸ್ಥಾನಮಾನ ಹೊಂದಿರುವ ರಾಜ್ಯಗಳಲ್ಲಿ ಆಸ್ಟ್ರೇಲಿಯಾ, ಚೀನಾ, ಯುರೋಪಿಯನ್ ಯೂನಿಯನ್, ಇರಾನ್, ಜಪಾನ್, ಮಾರಿಷಸ್, ಮ್ಯಾನ್ಮಾರ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿವೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: