• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • SCO Summit: 12 ವರ್ಷಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಭಾರತಕ್ಕೆ ಸ್ವಾಗತಿಸಿದ ಎಸ್‌ ಜೈಶಂಕರ್‌!

SCO Summit: 12 ವರ್ಷಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಭಾರತಕ್ಕೆ ಸ್ವಾಗತಿಸಿದ ಎಸ್‌ ಜೈಶಂಕರ್‌!

ವಿದೇಶಾಂಗ ಸಚಿವರ ಕೌನ್ಸಿಲ್ ಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತಕ್ಕೆ ಬಂದಿದ್ದಾರೆ. 12 ವರ್ಷಗಳ ಬಳಿಕ ಇದೇ ಮೊದಲ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ವಿದೇಶಾಂಗ ಸಚಿವರ ಕೌನ್ಸಿಲ್ ಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತಕ್ಕೆ ಬಂದಿದ್ದಾರೆ. 12 ವರ್ಷಗಳ ಬಳಿಕ ಇದೇ ಮೊದಲ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ವಿದೇಶಾಂಗ ಸಚಿವರ ಕೌನ್ಸಿಲ್ ಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತಕ್ಕೆ ಬಂದಿದ್ದಾರೆ. 12 ವರ್ಷಗಳ ಬಳಿಕ ಇದೇ ಮೊದಲ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

  • News18 Kannada
  • 3-MIN READ
  • Last Updated :
  • Goa, India
  • Share this:

ಗೋವಾ: ಶಾಂಘೈ ಸಹಕಾರ ಸಂಘಟನೆಯ (Shanghai Cooperation Organisation) ವಿದೇಶಾಂಗ ಸಚಿವರ ಕೌನ್ಸಿಲ್ ಸಭೆಗಾಗಿ ಪಾಕಿಸ್ತಾನದ (Pakistan) ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತಕ್ಕೆ ಬಂದಿದ್ದಾರೆ. 12 ವರ್ಷಗಳ ಬಳಿಕ ಇದೇ ಮೊದಲ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಪಾಕ್ ವಿದೇಶಾಂಗ ಸಚಿವ ಬುಲಾವಲ್ ಭುಟ್ಟೋ (Bhilawal Bhutto) ಅವರನ್ನು ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್ (S Jai Shankar) ಸ್ವಾಗತಿಸಿದ್ದಾರೆ.


ಇಂದು ಮತ್ತು ನಾಳೆ ಗೋವಾದಲ್ಲಿ ವಿದೇಶಾಂಗ ಸಚಿವರ ಎಸ್‌ಸಿಒ ಸಭೆ ನಡೆಯಲಿದ್ದು, ಗೋವಾದ ವಿಮಾನ ನಿಲ್ದಾಣಕ್ಕೆ ಬಿಲಾವಲ್ ಭುಟ್ಟೋ ಆಗಮಿಸುತ್ತಿದ್ದಂತೆ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ವಿಭಾಗದ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಹಿನಾ ರಬ್ಬಾನಿ ಖಾರ್ 2011ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಎಂಬ ಹೆಗ್ಗಳಿಕೆಗೆ ಬಿಲಾವಲ್ ಭುಟ್ಟೋ ಜರ್ದಾರಿ ಪಾತ್ರರಾಗಿದ್ದಾರೆ. 


ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ! 8000ಕ್ಕೂ ಹೆಚ್ಚು ಜನರ ಸ್ಥಳಾಂತರ


'ವಿದೇಶಾಂಗ ಸಚಿವರ ಸಭೆ ಯಶಸ್ವಿಯಾಗಲಿ'


ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ, ಪಾಕಿಸ್ತಾನದ ಗಡಿಯಾಚೆಗೆ ಭಯೋತ್ಪಾದಕರ ಕಾರ್ಯಾಚರಣೆ ಸೇರಿದಂತೆ ಹಲವಾರು ವಿಷಯಗಳಿಂದಾಗಿ ಉಭಯ ದೇಶಗಳ ನಡುವೆ ಸಂಘರ್ಷಗಳು ಮುಂದುವರಿದ ಒತ್ತಡದ ನಡುವೆಯೇ ಭುಟ್ಟೋ ಭಾರತಕ್ಕೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಭಾರತಕ್ಕೆ ತಲುಪುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಲಾವಲ್ ಭುಟ್ಟೋ, ಶಾಂಘೈ ಸಹಕಾರ ಸಂಘದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತೋಷ ತಂದಿದೆ. ಗೋವಾಗೆ ಬಂದು ಈ ಸಭೆಯಲ್ಲಿ ಪಾಕಿಸ್ತಾನ ದೇಶದ ನಿಯೋಗವನ್ನು ಮುನ್ನಡೆಸುತ್ತಿರುವುದು ನನಗೆ ಖುಷಿ ನೀಡಿದೆ. ವಿದೇಶಾಂಗ ಸಚಿವರ ಸಭೆ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದರು.


ಇದನ್ನೂ ಓದಿ: Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!


'ನಾನು ಇಂದು ಭಾರತಕ್ಕೆ ಹೋಗುತ್ತಿದ್ದೇನೆ'


ಪಾಕ್‌ನಿಂದ ಭಾರತಕ್ಕೆ ಹೊರಡುವ ಮುನ್ನ ವಿಡಿಯೋ ಮೂಲಕ ಪಾಕ್‌ ಜನರಿಗೆ ಸಂದೇಶ ಕೊಟ್ಟಿರುವ ಭುಟ್ಟೋ ಜರ್ದಾರಿ, ನಾನು ಇಂದು ಭಾರತಕ್ಕೆ ಹೋಗುತ್ತಿದ್ದೇನೆ, ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಮಂತ್ರಿಗಳ ಕೌನ್ಸಿಲ್‌ನಲ್ಲಿ ಪಾಲ್ಗೊಳ್ಳಲು ನಾನು ಪಾಕಿಸ್ತಾನದ ನಿಯೋಗದ ನೇತೃತ್ವ ವಹಿಸಿದ್ದೇನೆ. ನನ್ನ ಉಪಸ್ಥಿತಿಯು ಪಾಕಿಸ್ತಾನಕ್ಕೆ ಎಸ್‌ಸಿಒ ಎಷ್ಟು ಮುಖ್ಯವಾಗಿದೆ ಮತ್ತು ಅದರ ಸದಸ್ಯತ್ವವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ. ಇತರ ವಿದೇಶಾಂಗ ಮಂತ್ರಿಗಳೊಂದಿಗೆ ದ್ವಿಪಕ್ಷೀಯವಾಗಿ ತೊಡಗಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.




ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸುವ ಬಗ್ಗೆ ಸ್ಪಷ್ಟತೆ ಇಲ್ಲ


ಬಿಲಾವಲ್ ಭುಟ್ಟೋ ಜರ್ದಾರಿ 2 ದಿನಗಳ ಭಾರತ ಭೇಟಿಯಲ್ಲಿದ್ದರೂ ಕೂಡ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸುವ ಬಗ್ಗೆ ಯಾವುದೇ ಮನವಿಯನ್ನು ಸಲ್ಲಿಸಿಲ್ಲ. ಹೀಗಾಗಿ ಭಾರತದ ವಿದೇಶಾಂಗ ಸಚಿವರ ಜೊತೆಗೆ ಪಾಕಿಸ್ತಾನದ ವಿದೇಶಾಂಗ ಸಚಿವರ ದ್ವಿಪಕ್ಷೀಯ ಸಭೆ ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗ್ತಿದೆ. ಅದಾಗ್ಯೂ ಪಾಕಿಸ್ತಾನದ ವಿದೇಶಾಂಗ ಸಚಿವರ ಭಾರತ ಭೇಟಿ ಭಾರೀ ಕುತೂಹಲ ಮೂಡಿಸಿದ್ದು, ಉಭಯ ರಾಷ್ಟ್ರಗಳ ಮೇಲೆ ಯಾವೆಲ್ಲ ಪರಿಣಾಮ ಬೀಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

top videos
    First published: