• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Photoshoot: 700 ವರ್ಷಗಳ ಪುರಾತನ ಹಿಂದೂ ದೇಗುಲದಲ್ಲಿ ಬೆತ್ತಲೆ ಫೋಟೋ ಶೂಟ್! ಪವಿತ್ರ ಮರದ ಕೆಳಗೆ ಬಟ್ಟೆ ಬಿಚ್ಚಿ ಪೋಸ್ ಕೊಟ್ಟ ಲೇಡಿ!

Photoshoot: 700 ವರ್ಷಗಳ ಪುರಾತನ ಹಿಂದೂ ದೇಗುಲದಲ್ಲಿ ಬೆತ್ತಲೆ ಫೋಟೋ ಶೂಟ್! ಪವಿತ್ರ ಮರದ ಕೆಳಗೆ ಬಟ್ಟೆ ಬಿಚ್ಚಿ ಪೋಸ್ ಕೊಟ್ಟ ಲೇಡಿ!

ಪವಿತ್ರ ಮರದ ಕೆಳಗೆ ನಗ್ನ ಫೋಟೋಶೂಟ್​

ಪವಿತ್ರ ಮರದ ಕೆಳಗೆ ನಗ್ನ ಫೋಟೋಶೂಟ್​

ಪರ್ವತಗಳು, ಮರಗಳು ಮತ್ತು ಇತರ ನೈಸರ್ಗಿಕ ಲಕ್ಷಣಗಳನ್ನು ಬಲಿನೀಸ್ ಹಿಂದೂ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವುಗಳು ದೇವರುಗಳ ಮನೆಗಳೆಂದು ಭಾವಿಸಲಾಗುತ್ತಿದೆ.

  • Share this:

ಬಾಲಿ: 700 ವರ್ಷಗಳ ಇತಿಹಾಸ (History) ಇರುವ ಪವಿತ್ರ ಮರದ (Holy Tree) ಮುಂದೆ ತನ್ನ ನಗ್ನ ಫೋಟೋಶೂಟ್ ( Photoshoot)​ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದ ರಷ್ಯಾದ (Russia) ಪ್ರವಾಸಿಗರೊಬ್ಬರಿಗೆ ಗಡಿಪಾರು ಶಿಕ್ಷೆ ವಿಧಿಸಲಾಗಿದೆ. ಇಂಡೋನೇಷ್ಯಾ ( Indonesia) ಬಾಲಿಯಲ್ಲಿ ಈ ಘಟನೆ ನಡೆದಿದ್ದು, ಲೂಯ್ಜಾ ಕೊಸಿಖ್ ಎಂದು ಗುರುತಿಸಲ್ಪಟ್ಟ 40 ವರ್ಷದ ಮಹಿಳೆ ತನ್ನ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿರುವುದು ಬಲಿನೀಸ್ ಸಮುದಾಯಗಳನ್ನು ಕೆರಳಿಸಿದೆ. ಬಾಲಿಯ ತಬನನ್ ದೇವಸ್ಥಾನದಲ್ಲಿ ಕಯು ಪುತಿಹ್ ಎಂಬ ಪವಿತ್ರ ಮರದ ಕೆಳಗೆ ಆಕೆ ನಗ್ನವಾಗಿ ಪೋಸ್ ನೀಡುತ್ತಿರುವ ಚಿತ್ರಗಳು ವೈರಲ್ ಆದ ಬೆನ್ನಲ್ಲೇ ಬಾಲಿಯಿಂದ ಗಡಿಪಾರು ಮಾಡಲಾಗಿದೆ.


ಇಂಡೋನೇಷ್ಯಾದ ಬಾಲಿಯಲ್ಲಿರುವ ತಬನನ್ ದೇವಸ್ಥಾನ ಆವರಣದಲ್ಲಿರುವ ಪವಿತ್ರ ಮರ ಅತ್ಯಂತ ಜನಪ್ರಿಯವಾಗಿದೆ. ಇದಕ್ಕೆ 700 ವರ್ಷಗಳ ಇತಿಹಾಸವಿದೆ. ಈ ಭಾರಿ ಗಾತ್ರದ ಮರ ಇಲ್ಲಿಗೆ ಆಗಮಿಸುವ ಭಕ್ತರು, ಪ್ರವಾಸಿಗರ ಗಮನಸೆಳೆಯುತ್ತದೆ. ಅದೇ ರೀತಿ ಪ್ರವಾಸಕ್ಕೆ ಬಂದ ರಷ್ಯಾದ ಮಹಿಳೆ, ಈ ಪವಿತ್ರ ಮರದ ಕೆಳಗಿ ನಗ್ನ ಫೋಟೋ ಶೂಟ್ ಮಾಡಿಸಿದ್ದಾರೆ.


ಮಹಿಳೆ ಬಾಲಿಯಿಂದ ಗಡಿಪಾರು


ಪರ್ವತಗಳು, ಮರಗಳು ಮತ್ತು ಇತರ ನೈಸರ್ಗಿಕ ಲಕ್ಷಣಗಳನ್ನು ಬಲಿನೀಸ್ ಹಿಂದೂ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವುಗಳು ದೇವರುಗಳ ಮನೆಗಳೆಂದು ಭಾವಿಸಲಾಗಿದೆ. ಹಾಗಾಗಿ ರಷ್ಯಾ ಮಹಿಳೆಯ ನಡೆ ಬಾಲಿಯಲ್ಲಿರುವ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ತೀವ್ರ ಪ್ರತಿಭಟನೆಯಿಂದ ಇಂಡೋನೇಷಿಯಾ ಸರ್ಕಾರ ಆ ಮಹಿಳೆಯನ್ನು ಗಡಿಪಾರು ಮಾಡಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: Marriage: ಮದುವೆಗೂ ಮುನ್ನವೇ ಮೈಥುನಕ್ಕೆ ಅವಕಾಶ! ಭಾರತದಲ್ಲೂ ಇದೆ ಈ ವಿಚಿತ್ರ ಸಂಪ್ರದಾಯ!

 

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮಹಿಳೆ


ರಷ್ಯಾದ 40 ವರ್ಷದ ಮಹಿಳೆ ಲೂಯ್ಜಾ ಕೊಸಿಖ್ ಬಾಲಿ ಪ್ರವಾಸ ಬಂದಿದ್ದರು. ಬಾಲಿಯ ಸುಂದರ ಪ್ರವಾಸಿ ತಾಣಗಳಲ್ಲಿ ಕೆಲ ದಿನಗಳ ಕಾಲ ಸುತ್ತಾಡಿರುವ ಕೊಸಿಖ್ಕ್, ಬಾಲಿಯ ತಬನನ್ ದೇವಸ್ಥಾನ ವೀಕ್ಷಣೆಗೆ ತೆರಳಿದ್ದಾರೆ. ಈ ವೇಳೆ ಭಾರಿ ಗಾತ್ರದ ಪವಿತ್ರ ಮರದ ಬಳಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಲವು ನಗ್ನವಾಗಿ ಫೋಟೋ ತೆಗೆದುಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.




ಸ್ಥಳೀಯ ಉದ್ಯಮಿಯಿಂದ ಟೀಕೆ


ಸ್ಥಳೀಯ ಉದ್ಯಮಿ ನಿ ಲುಹ್ ಡಿಜೆಲಾಂಟಿಕ್ ಅವರು ಈ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದು, ಪ್ರವಾಸಿಗರನ್ನು ಕಠಿಣ ಪದಗಳ ಬಳಸಿ ಟೀಕಿಸಿದ್ದಾರೆ. '' ನಮ್ಮ ಭೂಮಿಯನ್ನು ಅಗೌರವಿಸುವ ಎಲ್ಲಾ ವಿದೇಶಿಯರಿಗೆ ನಾನು ಹೇಳುವುದೇನೆಂದರೆ, ಬಾಲಿ ನಮ್ಮ ಮನೆ, ನಿಮ್ಮದಲ್ಲ! ನಮ್ಮ ಪವಿತ್ರ ಮರಗಳ ಮೇಲೆ ಬೆತ್ತಲೆ ಫೋಟೋಗಳನ್ನು ತೆಗೆದುಕೊಳ್ಳುವುದರಿಂದ  ಕೂಲ್ ಆಗಿ ಕಾಣುತ್ತೀರಿ ಎಂದು ನೀವು ಭಾವಿಸುತ್ತೀರಾ? ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸಲು ಸಾಧ್ಯವಾಗದಿದ್ದರೆ ನಿಮ್ಮ ದೇಶಕ್ಕೆ ಹಿಂತಿರುಗಿ" ಎಂದು ಅವರು ಬರೆದಿದ್ದಾರೆ.


ಪವಿತ್ರ ಮರ ಎಂದು ತಿಳಿದಿರಲಿಲ್ಲ ಎಂದ ರಷ್ಯಾ ಮಹಿಳೆ


ಈ ಕುರಿತ ಪ್ರತಿಕ್ರಿಯಿಸಿರುವ ಲೂಯ್ಜಾ ಕೊಸಿಖ್ ಈ ನಗ್ನ ಛಾಯಾಚಿತ್ರವನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದು, ಆ ಸಂದರ್ಭದಲ್ಲಿ ಅದು ಪವಿತ್ರ ಮರವೆಂದು ಪರಿಗಣಿಸಲಾಗಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.


ಆದರೂ ಮಹಿಳೆಯನ್ನ ಏಪ್ರಿಲ್ 12 ರಂದು ಇಂಡೋನೇಷ್ಯಾ ಅಧಿಕಾರಿಗಳು ಬಂಧಿಸಿದ್ದರು. 3 ದಿನಗಳ ನಂತರ ಗಡಿಪಾರಾದ ನಂತರ ಆಕೆ ಬಾಲಿಯಿಂದ ಮಾಸ್ಕೋಗೆ ತೆರಳಿದರು ಎಂದು ಬಾಲಿ ಕಾನೂನು ಮತ್ತು ಮಾನವ ಹಕ್ಕುಗಳ ಏಜೆನ್ಸಿ ಅಧಿಕಾರಿ ಐ ನೆಂಗಾಹ್ ಸುಕದನಾ ಎಎಫ್​ಪಿಗೆ ತಿಳಿಸಿದರು.


ಇದನ್ನೂ ಓದಿ: Honeymoon: ಮದುವೆ ನಂತರ ಹೋಗೋ ಟ್ರಿಪ್​ಗೆ ಹನಿಮೂನ್ ಅಂತ ಯಾಕೆ ಕರೆಯುತ್ತಾರೆ?


ಪ್ರವಾಸಿಗರಿಗೆ ಮಾಹಿತಿ ನೀಡಲು ಸ್ಥಳೀಯರಿಗೆ ಮನವಿ


" ಹೊರಗಿನಿಂದ ಬರುವ ಪ್ರವಾಸಿಗರಿಗೆ ಬಾಲಿಯಲ್ಲಿ ಯಾವುದಕ್ಕೆ ಅನುಮತಿ ಇದೆ, ಯಾವುದಕ್ಕೆ ಇಲ್ಲ ಎಂಬುದು  ತಿಳಿದಿರುವುದಿಲ್ಲ. ಹಾಗಾಗಿ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯರು ಹೆಚ್ಚಿನ ಗಮನಹರಿಸಬೇಕೆಂದು ಒತ್ತಾಯಿಸುತ್ತೇವೆ '' ಎಂದು ಸ್ಥಳೀಯ ಕಾನೂನು ಮತ್ತು ಮಾನವ ಹಕ್ಕುಗಳ ಸಂಸ್ಥೆಯ ಅಧಿಕಾರಿ ಅಂಗಿಯಾಟ್ ನಪಿಟುಪುಲು ತಿಳಿಸಿದ್ದಾರೆ.


ಇದು ಎರಡನೇ ಪ್ರಕರಣ


700 ವರ್ಷಗಳಷ್ಟು ಹಳೆಯದಾದ ಪವಿತ್ರ ಮರದ ಬಳಿ ಬೆತ್ತಲೆಯಾಗಿ ಫೋಟೊಗೆ ಪೋಸ್​ ನೀಡಿರುವುದು ಇದೇನು ಮೊದಲ ಪ್ರಕರಣವಲ್ಲ, ಕಳೆದ ವರ್ಷವೂ ರಷ್ಯಾದ ಯೋಗಪಟು ಅಲಿನಾ ಫಜ್ಲೀವಾ, ಮರದ ಮೇಲೆ ಬೆತ್ತಲೆಯಾಗಿ ಪೋಸ್ ನೀಡಿದ್ದರು. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿತ್ತು. ಅಲ್ಲದೆ ಈ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಸಾರ್ವಜನಿಕರ ಟೀಕೆಯ ನಂತರ ಫಜ್ಲೀವಾ ಆ ಚಿತ್ರಗಳನ್ನು ಡಿಲೀಟ್​ ಮಾಡಿ, ಕ್ಷಮೆಯಾಚಿಸಿ ವೀಡಿಯೊ ಪೋಸ್ಟ್ ಮಾಡಿದ್ದರು.


ಫಜ್ಲೀವಾ, ಆಕೆಯ ಪತಿಯನ್ನು ಕೂಡ ಬಾಳಿ ದ್ವೀಪದಿಂದ ಗಡೀಪಾರು ಮಾಡಲಾಗಿತ್ತು ಮತ್ತು ಕನಿಷ್ಠ ಆರು ತಿಂಗಳ ಕಾಲ ಬಾಲಿ ಪ್ರವೇಶವನ್ನು ನಿಷೇಧಿಸಲಾಗಿತ್ತು.

top videos
    First published: