ಸಾಂದರ್ಭಿಕ ಚಿತ್ರ
ಈಗಾಗಲೇ ದೇಶಾದ್ಯಂತ ಮೂರನೆ ಹಂತದ ಲಾಕ್ಡೌನ್ ವಿಸ್ತರಣೆ ಆಗಿದೆ. ಈ ಮಧ್ಯೆ ಲಾಕ್ಡೌನ್ ನಿಯಮ ಉಲ್ಲಂಘಿಸಿ ಕೆಲವರು ಅನಗತ್ಯ ಸುತ್ತಾಟ ನಡೆಸುತ್ತಿದ್ದಾರೆ. ಇದೇ ರೀತಿ ಹಿಮಾಚಲ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ರಷ್ಯಾ ಹುಡುಗಿ ಹಾಗೂ ಆಕೆಯ ಬಾಯ್ಫ್ರೆಂಡ್ಅನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ, ಇವರು ರಾಜ್ಯ ಪ್ರವೇಶಿಸಲು ತುಳಿದ ಮಾರ್ಗ ಮಾತ್ರ ವಿಚಿತ್ರ.
ಮಹಿಳೆ
ರಷ್ಯಾದವಳು ಹಾಗೂ ಆಕೆಯ ಬಾಯ್ಫ್ರೆಂಡ್ ಕುಲುದವರು. ಇವರು ಉಳಿದುಕೊಂಡಿದ್ದು ನೋಯ್ಡಾದಲ್ಲಿ. ಇಬ್ಬರಿಗೂ ಶಿಮ್ಲಾ ತೆರಳಬೇಕಿತ್ತು. ಆದರೆ, ಲಾಕ್ಡೌನ್ ಇರುವುದರಿಂದ ಶಿಮ್ಲಾ ಪ್ರವೇಶಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಇಬ್ಬರೂ ಅಗತ್ಯ ಸೇವೆಯ ಲಾರಿಗೆ ಕೈ ಮಾಡಿ, ಅದರೊಳಗೆ ಅಡಗಿ ಕುಳಿತಿದ್ದರು. ಚೆಕ್ ಪೋಸ್ಟ್ನಲ್ಲಿ ಲಾರಿ ಪರೀಕ್ಷೆ ಮಾಡುವಾಗ ಇಬ್ಬರೂ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋಯ್ಡಾದಿಂದ ಇಬ್ಬರೂ ಶಿಮ್ಲಾಗೆ ಆಗಮಿಸುವವರಿದ್ದರು. ಇಲ್ಲಿಗೆ ಆಗಮಿಸಿದ ನಂತರ ಇಬ್ಬರೂ ಗುಟ್ಟಾಗಿ
ಮದುವೆ ಆಗುವ ಆಲೋಚನೆಯನ್ನು ಕೂಡ ಮಾಡಿದ್ದರು. ಈ ವಿಚಾರ ಇವರನ್ನು ವಶಕ್ಕೆ ಪಡೆದ ನಂತರ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲಾಕ್ ಡೌನ್ ನಿಂದ ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ಥಗಿತ - ಶೀಘ್ರವೇ ಪುನರಾರಂಭಕ್ಕೆ ಕ್ರಮ ; ನಿತಿನ್ ಗಡ್ಕರಿ ಭರವಸೆ
ರಷ್ಯಾ ಮಹಿಳೆ 30 ವರ್ಷ ಆಸುಪಾಸಿನವರಾದರೆ, ಭಾರತದ ಯುವಕ 20 ವರ್ಷ ಆಸುಪಾಸಿನವನು. ಇವರು ಈಗ ತಪ್ಪೊಪ್ಪಿಕೊಂಡಿದ್ದು, ಇವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರಿಗೆ ಸಹಾಯ ಮಾಡಿದ ಲಾರಿ ಚಾಲಕನನ್ನು ಕೂಡ ಬಂಧಿಸಲಾಗಿದೆ.
First published:
May 7, 2020, 9:47 AM IST