Ukraine Crisis: ಉಕ್ರೇನ್​ನಿಂದ ಓಡಿಹೋದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಸ್ವಾಗತ

ಕಡಿಮೆ ವೆಚ್ಚದ ಶಿಕ್ಷಣಕ್ಕಾಗಿ ಉಕ್ರೇನ್​ಗೆ ಹೋದ ಭಾರತೀಯ ವಿದ್ಯಾರ್ಥಿಗಳು ಜೀವಭಯದಲ್ಲಿ ಓಡಿ ಬಂದಿದ್ದಾರೆ. ಅವರ ಶೈಕ್ಷಣಿಕ ಜೀವನ ಅತಂತ್ರವಾಗಿದೆ. ಈ ಸಂದರ್ಭದಲ್ಲಿ ರಷ್ಯಾದ ವಿಶ್ವವಿದ್ಯಾನಿಲಯಗಳು ಭಾರತೀಯ ವಿದ್ಯಾರ್ಥಿಗಳನ್ನು ಮುಕ್ತ ಮನಸಿನಿಂದ ಸ್ವಾಗತಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ (War) ಇನ್ನೂ ಮುಗಿದಿಲ್ಲ. ಫೆಬ್ರವರಿ 24ರ ಗುರುವಾರ ಮುಂಜಾವ 6 ಗಂಟೆಗೆ ರಷ್ಯಾ ಅಧ್ಯಕ್ಷ (Russia President) ಪುಟಿನ್ ಅವರು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ (Military Operation) ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಮಿಲಿಟರಿ ಕಾರ್ಯಾಚರಣೆ ಹೆಸರಿನಲ್ಲಿಉಕ್ರೇನ್​ನನ್ನು ಧೂಳಿಪಟ ಮಾಡಿದೆ ರಷ್ಯಾ. ಸಾವಿರಾರು ಸೈನಿಕರು, ಜನರು ದಿಕ್ಕಿಲ್ಲದಂತೆ ರಷ್ಯಾ (Russia) ದಾಳಿಗೆ ನಲುಗಿದ್ದಾರೆ. ಈ ನಡುವೆ ಉಕ್ರೇನ್​ನಲ್ಲಿ (Ukraine) ವ್ಯಾಸಂಗ ಮಾಡುವ ಭಾರತೀಯರು ಹಾಗೂ ಇತರ ಉದ್ಯೋಗ ಕಾರಣಗಳಿಗಾಗಿ ಅಲ್ಲಿಗೆ ಹೋದ ಭಾರತೀಯರು (Indians) ಹೇಗೋ ಭಾರತಕ್ಕೆ ತಲುಪಿದ್ದಾರೆ. ಆದರೆ ಅಲ್ಲಿನ ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಶಿಕ್ಷಣದ (Education) ಮಹದಾಸೆ ಇಟ್ಟು ಅನ್ಯ ದೇಶಕ್ಕೆ ಹೋದವರು ಈಗ ಶಿಕ್ಷಣ ಅರ್ಧದಲ್ಲಿ ಮೊಟಕಾಗಿ ದಿಕ್ಕು ತೋಚದೆ ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಈಗ ರಷ್ಯಾದಿಂದ ಬಂದಿರುವ ಒಂದು ಅಪ್ಡೇಟ್ ಆಶಾದಾಯಕವಾಗಿದೆ.

ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ಕಾಲೇಜು (College) ತೊರೆಯಬೇಕಾದ ಭಾರತೀಯ ವಿದ್ಯಾರ್ಥಿಗಳು (Indian Students) ತಮ್ಮ ಹಿಂದಿನ ಶಿಕ್ಷಣವನ್ನು ಕಳೆದುಕೊಳ್ಳದೆ ರಷ್ಯಾದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಲು ಆಹ್ವಾನಿಸಲಾಗುವುದು ಎಂದು ನವದೆಹಲಿಯಲ್ಲಿನ ರಷ್ಯಾದ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥರು ಭಾನುವಾರ, ಜೂನ್ 12 ರಂದು ಘೋಷಿಸಿದರು.

20,000 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಫೆಬ್ರವರಿ 24 ರಂದು ಪ್ರಾರಂಭವಾದ ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನಿಂದ ಪಲಾಯನ ಮಾಡಿದ 20,000 ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವರದಿಗಾರರು ಪ್ರಶ್ನೆ ಕೇಳಿದ ನಂತರ ರೋಮನ್ ಬಾಬುಶ್ಕಿನ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ.

ರಷ್ಯಾದಲ್ಲಿ ವಿದ್ಯಾರ್ಥಿಗಳ ದಾಖಲಾತಿ

ರಷ್ಯಾ-ಉಕ್ರೇನ್ ಸಂಘರ್ಷದಿಂದ ಪಲಾಯನ ಮಾಡಿದ ಭಾರತೀಯ ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷಗಳನ್ನು ಕಳೆದುಕೊಳ್ಳದೆ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ನೀಡಲಾಗುವುದು ಎಂದು ನವದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ಇಲ್ಲಿ ಹೇಳಿದರು.

ಇದನ್ನೂ ಓದಿ: National Herald Case: ಇಂದು ಮತ್ತೆ ED ಅಧಿಕಾರಿಗಳಿಂದ ರಾಹುಲ್ ಗಾಂಧಿ ವಿಚಾರಣೆ; ಭುಗಿಲೇಳಲಿದೆಯಾ ಕಾಂಗ್ರೆಸ್ಸಿಗರ ಕೋಪ?

ಈ ವರ್ಷದ ಫೆಬ್ರುವರಿಯಲ್ಲಿ ಉಕ್ರೇನ್ ದೇಶವನ್ನು ಆಕ್ರಮಿಸಿದ ನಂತರ ಉಕ್ರೇನ್‌ನಿಂದ ಪಲಾಯನ ಮಾಡಿದ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ಬಂದಿದೆ.

ರಷ್ಯಾದ ಒಕ್ಕೂಟದ ಗೌರವಾನ್ವಿತ ಕಾನ್ಸುಲ್ ಮತ್ತು ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್‌ನ ನಿರ್ದೇಶಕ ರತೀಶ್ ಸಿ ನಾಯರ್, ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಹೊಂದಿರುವ ಸಂದರ್ಭಗಳಲ್ಲಿ, ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಅದನ್ನು ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಿದರು.

ಉಕ್ರೇನ್​ನಲ್ಲಿ ಕೊಡ್ತಿದ್ದ ಫೀಸ್ ರಷ್ಯಾದಲ್ಲಿ ಸಾಲಲ್ಲ

ಆದರೂ ಉಕ್ರೇನ್‌ನಲ್ಲಿ ಪಾವತಿಸುವ ಶುಲ್ಕವು ರಷ್ಯಾದಲ್ಲಿ ಸಾಕಾಗುವುದಿಲ್ಲ ಎಂದು ಅವರು ಸುಳಿವು ನೀಡಿದರು. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳು ಮತ್ತು ಇತರ ಶೈಕ್ಷಣಿಕ ದಾಖಲೆಗಳೊಂದಿಗೆ ಇಲ್ಲಿನ ರಷ್ಯನ್ ಹೌಸ್ ಅನ್ನು ಸಂಪರ್ಕಿಸಬಹುದು.  ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂಪರ್ಕ ಸಾಧಿಸುವ ರಷ್ಯಾದ ವಿಶ್ವವಿದ್ಯಾಲಯಗಳಿಗೆ ಅದನ್ನು ರವಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: P Chidambaram: ಕೈ ಪ್ರೊಟೆಸ್ಟ್‌ನಲ್ಲಿ ಚಿದಂಬರಂ ಮೂಳೆ ಮುರಿತ! ಪೊಲೀಸರ ವಿರುದ್ಧ ಮಾಜಿ ಸಚಿವರ ಆರೋಪ

ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು, ಬಾಬುಶ್ಕಿನ್ ಅಲ್ಲಿನ ಆಡಳಿತವು ನವ-ನಾಜಿಗಳನ್ನು ರಕ್ಷಿಸುತ್ತಿದೆ. ಯುದ್ಧವು ರಷ್ಯಾದ ಲಕ್ಷ್ಮಣ ರೇಖೆಯನ್ನು ಉಕ್ರೇನ್ ದಾಟಿದ್ದರ ಪರಿಣಾಮವಾಗಿದೆ ಎಂದು ಆರೋಪಿಸಿದ್ದಾರೆ.
Published by:Divya D
First published: