Indian Students: ಉಕ್ರೇನ್​ನಲ್ಲಿ​ ವ್ಯಾಸಂಗ ಮೊಟಕುಗೊಳಿಸಿದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾ ನೆರವು!

ಪಲಾಯನಗೈದ ಭಾರತೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಭವಿಷ್ಯದ ಪ್ರಶ್ನೆ ಏನು ಎಂಬ ಆತಂಕ ಎದುರಾಗಿತ್ತು. ಆದರೆ ಉಕ್ರೇನ್ ಇಂದ ಬಂದ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವರ್ಷಗಳನ್ನು ಮುಂದುವರಿಸಲು ಅಡ್ಮಿಷನ್ ನೀಡಲು ರಷ್ಯಾ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಿರುವನಂತಪುರಂ: ರಷ್ಯಾ-ಉಕ್ರೇನ್ (Russia Ukraine) ನಡುವಿನ ಸಂಘರ್ಷದಿಂದ ಅರ್ಧದಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾ ವಿಶ್ವವಿದ್ಯಾಲಯ (Russian Universities) ದಾರಿದೀಪವಾಗಿದೆ. ಉಕ್ರೇನ್ ನೆಲದಲ್ಲಿ ಭಾರತೀಯ ಹಲವಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು. ಆದರೆ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾದ ಕ್ರಮ ಭಾರತೀಯ ವಿದ್ಯಾರ್ಥಿಗಳನ್ನು (Indian Students) ಸೇರಿ ಎಲ್ಲಾ ನಾಗರೀಕರ ಬದುಕಿನ ಚಿತ್ರಣವನ್ನೇ ಬದಲಾಯಿಸಿತ್ತು. ಯುದ್ಧದ ಪರಿಣಾಮಗಳಿಂದ ರಕ್ಷಿಸಲು ಉಕ್ರೇನ್ ನಲ್ಲಿ ಓದುತ್ತಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ರಕ್ಷಿತವಾಗಿ ಭಾರತಕ್ಕೆ ಕರೆತಂದಿತ್ತು. ಪಲಾಯನಗೈದ ಭಾರತೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಭವಿಷ್ಯದ ಪ್ರಶ್ನೆ ಏನು ಎಂಬ ಆತಂಕ ಎದುರಾಗಿತ್ತು.

ಉಕ್ರೇನ್​ನಿಂದ ಬಂದ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವರ್ಷಗಳನ್ನು ಮುಂದುವರಿಸಲು ಅಡ್ಮಿಷನ್ ನೀಡಲು ರಷ್ಯಾ ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಿಂದ ವಂಚಿತರಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ನವದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ಹೇಳಿದ್ದಾರೆ.

ಬಿಟ್ಟುಹೋದ ಕೋರ್ಸ್​ಗಳಿಗೆ ಸೇರಿಕೊಳ್ಳಿ
ಈ ವರ್ಷದ ಫೆಬ್ರುವರಿಯಿಂದಲೂ ಉಕ್ರೇನ್ ದೇಶವನ್ನು ರಷ್ಯಾ ಆಕ್ರಮಿಸಿದ್ದು ಎರಡು ದೇಶಗಳ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಉಕ್ರೇನ್‌ನಿಂದ ಪಲಾಯನ ಮಾಡಿದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ಈ ವಿದ್ಯಾರ್ಥಿಗಳ ಭವಿಷ್ಯದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರೋಮನ್ ಬಾಬುಶ್ಕಿನ್ ಭಾನುವಾರದಂದು ವಿದ್ಯಾರ್ಥಿಗಳನ್ನು ರಷ್ಯಾದ ವಿಶ್ವವಿದ್ಯಾಲಯಗಳಿಗೆ ಸೇರಿಸಲಾಗುವುದು. ಅಲ್ಲಿ ಅವರು ಹಿಂದಿನ ವರ್ಷಗಳ ಅಧ್ಯಯನವನ್ನು ಕಳೆದುಕೊಳ್ಳದೆ ಅವರು ಬಿಟ್ಟುಹೋದ ಕೋರ್ಸ್‌ಗಳನ್ನು ಮುಂದುವರಿಸಬಹುದು ಎಂದಿದ್ದಾರೆ.

ಮೊದಲಿನ ಸ್ಟೈಫಂಡ್ ಅಥವಾ ಸ್ಕಾಲರ್ಶಿಪ್​ ಮುಂದುವರೆಸಬಹುದೇ?
ರಷ್ಯಾದ ಒಕ್ಕೂಟದ ಗೌರವಾನ್ವಿತ ಕಾನ್ಸುಲ್ ಮತ್ತು ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್‌ನ ನಿರ್ದೇಶಕ ರತೀಶ್ ಸಿ ನಾಯರ್, ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಹೊಂದಿರುವ ಸಂದರ್ಭಗಳಲ್ಲಿ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಅದನ್ನು ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಿದರು. ಆದರೂ ಉಕ್ರೇನ್‌ನಲ್ಲಿ ಪಾವತಿಸುವ ಶುಲ್ಕವು ರಷ್ಯಾದಲ್ಲಿ ಸಾಕಾಗುವುದಿಲ್ಲ. ಇಲ್ಲಿ ಶುಲ್ಕ ಅಧಿಕವಾಗಿರುತ್ತದೆ ಎಂಬುವುದರ ಬಗ್ಗೆ ಅವರು ಸುಳಿವು ನೀಡಿದರು.

ಇದನ್ನೂ ಓದಿ: Ministry Data: ಈಗ ದೇಶಾದ್ಯಂತ ಸುಮಾರು 71% ಸರ್ಕಾರಿ ಶಾಲೆಗಳು ಅಂಗವಿಕಲರ ಸ್ನೇಹಿಯಾಗಿವೆಯಂತೆ; ಇಲ್ಲಿದೆ ವಿವರ

"ಕೆಲವು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸ್ಟೈಫಂಡ್ ಅಥವಾ ಸ್ಕಾಲರ್ಶಿಪ್ನಲ್ಲಿ ಅಧ್ಯಯನ ಮಾಡಿರಬಹುದು. ಆ ವಿದ್ಯಾರ್ಥಿಗಳು ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಅದೇ ಸ್ಟೈಫಂಡ್/ಸ್ಕಾಲರ್ಶಿಪ್ ಅನ್ನು ಪಡೆಯಬಹುದು. ಕೆಲವರು ಉಕ್ರೇನ್ ವಿಶ್ವವಿದ್ಯಾಲಯಗಳಲ್ಲಿ $4,000 ಶುಲ್ಕವನ್ನು ಪಾವತಿಸುವ ಮೂಲಕ ಅಧ್ಯಯನ ಮಾಡುತ್ತಿರಬಹುದು. ಆದರೆ ಕೆಲವು ಕೋರ್ಸ್ ಶುಲ್ಕಗಳಿಗೆ ರಷ್ಯಾದ ಉನ್ನತ ಮಟ್ಟದ ವಿಶ್ವವಿದ್ಯಾನಿಲಯಗಳು ಸುಮಾರು $ 12,000 ಅನ್ನು ಪಡೆಯುತ್ತವೆ. ಆದ್ದರಿಂದ, ಉಕ್ರೇನ್​ನಲ್ಲಿರುವ ವಿಶ್ವವಿದ್ಯಾಲಯಗಳಿಗೆ ಸಮಾನವಾಗಿರುವ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು, ”ಎಂದು ಅವರು ವಿವರಿಸಿದರು.

ಅಮೆರಿಕಾ ಮೇಲೆ ಆರೋಪ
ಕೇರಳದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳು ಮತ್ತು ಇತರ ಶೈಕ್ಷಣಿಕ ದಾಖಲೆಗಳೊಂದಿಗೆ ಇಲ್ಲಿನ ರಷ್ಯನ್ ಹೌಸ್ ಅನ್ನು ಸಂಪರ್ಕಿಸಬಹುದು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂಪರ್ಕ ಸಾಧಿಸುವ ರಷ್ಯಾದ ವಿಶ್ವವಿದ್ಯಾಲಯಗಳಿಗೆ ಅದನ್ನು ರವಾನಿಸಲಾಗುವುದು ಎಂದು ಅವರು ಹೇಳಿದರು. ಯುಎಸ್ಎಯಂತಹ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವುದನ್ನು ಬಯಸುವುದಿಲ್ಲ ಎಂದು ಅವರು ಆರೋಪಿಸಿದರು. ಏಕೆಂದರೆ ಅಲ್ಲಿಂದ ರಕ್ಷಣಾ ಕಂಪನಿಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆಯಿಂದ ಲಾಭ ಪಡೆಯುತ್ತಿವೆ.

ಉಕ್ರೇನ್‌ನಲ್ಲಿ ಆಡಳಿತ ಸ್ಥಾಪಿಸಲು ಶತಕೋಟಿ ಹೂಡಿಕೆ ಮಾಡಿದ ಯುಎಸ್‌ಎ
ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ರತೀಶ್ ಸಿ ನಾಯರ್, ಉಕ್ರೇನ್‌ನಲ್ಲಿ ಆಡಳಿತವನ್ನು ಸ್ಥಾಪಿಸಲು ಮತ್ತು ಬೆಂಬಲಿಸಲು ಯುಎಸ್‌ಎ ಶತಕೋಟಿ ಹೂಡಿಕೆ ಮಾಡಿದ್ದರೂ, ರಷ್ಯಾ ಎಂದಿಗೂ ಅಂತಹ ವಿಷಯಗಳನ್ನು ನಂಬುವುದಿಲ್ಲ ಮತ್ತು ಯಾರು ಆಡಳಿತ ನಡೆಸಬೇಕು ಎಂಬುದನ್ನು ನಿರ್ಧರಿಸಲು ಜನರಿಗೆ ಬಿಟ್ಟರು ಎಂದು ಅವರು ಆರೋಪಿಸಿದರು.

ಇದನ್ನೂ ಓದಿ:  Student Home Work: ಅಮೆರಿಕಾದ ಶಾಲೆಗಳಲ್ಲೂ ಹೋಮ್​ವರ್ಕ್ ಇರುತ್ತಾ? ಓದಿದವರೇ ಹೇಳ್ತಾರೆ ಕೇಳಿ

ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಕೊಡುಗೆ ಕೇವಲ ಒಂದು ಪ್ರತಿಶತದಷ್ಟು ಇರುವುದರಿಂದ ವಿಶ್ವದ ಆಹಾರ ಬಿಕ್ಕಟ್ಟಿಗೆ ರಷ್ಯಾ ಅಥವಾ ಉಕ್ರೇನ್‌ನೊಂದಿಗಿನ ಯುದ್ಧವನ್ನು ದೂಷಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
Published by:Ashwini Prabhu
First published: