Movie in Space- ಆಗಸದಲ್ಲಿ ಜಗತ್ತಿನ ಮೊದಲ ಸಿನಿಮಾ ಶೂಟಿಂಗ್; ಚಿತ್ರದ ಕಥೆ ಏನು ಗೊತ್ತಾ?

‘The Challenge’- ಭೂಮಿಯಿಂದ 350 ಕಿಮೀ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿ ಜಗತ್ತಿನಲ್ಲೇ ಮೊತ್ತಮೊದಲ ಸಿನಿಮಾ ಶೂಟಿಂಗ್ ನಡೆಯಲಿದೆ. ರಷ್ಯಾದ ಚಿತ್ರತಂಡವೊಂದು ಈಗಾಗಲೇ ಅಲ್ಲಿ ಹಾರಿದೆ.

ರಷ್ಯನ್ ಚಿತ್ರ ತಂಡ

ರಷ್ಯನ್ ಚಿತ್ರ ತಂಡ

  • News18
  • Last Updated :
  • Share this:
    ಮಾಸ್ಕೋ: ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಷ್ಯಾ (Russian Film) ಮಹಾನ್ ಸಾಹಸಕ್ಕೆ ಮುಂದಾಗುತ್ತಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಅಮೆರಿಕದ ನಾಸಾವನ್ನು ಹಿಂದಿಕ್ಕುತ್ತಿರುವ ರಷ್ಯಾ ಯಾರೂ ಕಲ್ಪನೆಯೂ ಮಾಡಿಕೊಳ್ಳದಂತಹ ಕಾರ್ಯಕ್ಕೆ ಮುಂದಾಗಿದೆ. ಹೌದು ರಷ್ಯಾ ಅಂತರಾಷ್ಟ್ರೀಯ ಅಂತರಿಕ್ಷ ನಿಲ್ದಾಣ (ISS- International Space Station) ದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಿದೆ. ಈ ಮಿಶನ್ ನಲ್ಲಿ ರಷ್ಯಾ ಯಶಸ್ವಿಯಾದ್ರೆ ಇತಿಹಾಸದ ಪುಟಗಳಲ್ಲಿ ತನ್ನ ದಾಖಲೆಯನ್ನು ಬರೆಯಲಿದೆ. ಜೊತೆಗೆ ಹಾಲಿವುಡ್ ಸಿನಿಮಾಗಳು ಪ್ರಯೋಗಗಳ ಶಾಲೆ ಅನ್ನೋದು ಮತ್ತೊಮ್ಮೆ ಸಾಬೀತು ಆಗುತ್ತದೆ. ಅಂತರಿಕ್ಷ ನಿಲ್ದಾಣದಲ್ಲಿ ಸಿನಿಮಾ ಶೂಟಿಂಗ್ ಮಾಡುವ ಬಗ್ಗೆ ವರ್ಷದ ಆರಂಭದಲ್ಲಿಯೇ ರಷ್ಯಾ ಘೋಷಣೆ ಮಾಡಿತ್ತು.

    ಅಮೆರಿಕ ಅಂತರಿಕ್ಷ ಏಜೆನ್ಸಿ ನಾಸಾ ಮತ್ತು ಎಲನ್ ಮಸ್ಕ್ ಅವರ ಸ್ಪೇಸ್‍ಎಕ್ಸ್ ಕಂಪನಿ (SpaceX) ಜಂಟಿಯಾಗಿ ನಟ ಟಾಮ್ ಕ್ರೂಜ್ (Tom Cruise) ಜೊತೆ ಸಿನಿಮಾ ಮಾಡುವ ಕುರಿತು ಘೋಷಿಸಿದ್ದರು. ಸಿನಿಮಾದ ಚಿತ್ರೀಕರಣ ಬಾಹ್ಯಾಕಾಶದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು. ತದನಂತರ ಈ ಪ್ರಾಜೆಕ್ಟ್ ಕುರಿತು ಯಾವುದೇ ಮಾಹಿತಿ ಹೊರ ಬಂದಿರಲಿಲ್ಲ. ಇದೀಗ ರಷ್ಯಾದ 37 ವರ್ಷದ ನಟಿ ಯೂಲಿಯಾ ಪರೆಸ್ಲಿಡ್ (Yulia Pereslid) ಮತ್ತು 38 ವರ್ಷದ ನಿರ್ದೇಶಕ ಕ್ಲಿಮ್ ಶಿಫೆಂಕೋ (Klim Shepenko) ತಂಡ ಇಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.25ಕ್ಕೆ ಬಾಹ್ಯಾಕಾಶ ನೌಕೆ ತೆರಳಿತು. ಚಿತ್ರತಂಡ ಅನುಭವಿ ಅಂತರಿಕ್ಷ ಯಾತ್ರಿ ಎಂಟೋನ್ ಶ್ಕಪ್ಲೆರೋವ್ (Anton Shkaplerov) ನೇತೃತ್ವದಲ್ಲಿ ಬಾಹ್ಯಾಕಾಶಕ್ಕೆ ಕಜಕಿಸ್ತಾನದ ಬಿಕೋನೂರ್ ಕಾಸ್ಮೋಡ್ರೋಮ್ ನಿಂದ ತೆರಳಿದೆ.

    12 ದಿನದ ಚಿತ್ರೀಕರಣ - ಚಿತ್ರದ ಕಥೆ ಏನು?

    ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಸೂಯುಜ್ ಎಂಎಸ್ 19 ನೌಕೆ (Soyuz MS-19 spacecraft) ಮೂಲಕ ತೆರಳಿರುವ ಚಿತ್ರತಂಡ 12 ದಿನ ಅಲ್ಲಿ ಚಿತ್ರೀಕರಣ ನಡೆಸಲಿದೆ. ಸಿನಿಮಾ ಹೆಸರು 'ದಿ ಚಾಲೆಂಜ್' ಎಂದು ಅಂತಿಮಗೊಳಿಸಲಾಗಿದೆ. ನಾಯಕಿ ಯುಲಿಯಾ ವೈದ್ಯೆಯಾಗಿದ್ದು, ಅಂತರಿಕ್ಷದಲ್ಲಿ ಸಿಲುಕಿರುವ ಗಗನಯಾತ್ರಿಗಳನ್ನು ರಕ್ಷಿಸಲು ಅಂತರಾಷ್ಟ್ರೀಯ ಅಂತರಿಕ್ಷ ನಿಲ್ದಾಣಕ್ಕೆ ತೆರಳುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ. ಚಿತ್ರದ ಕಥೆಯನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೋಸ್ (Roscosmos) ಬಹಿರಂಗಪಡಿಸಿದೆ. ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದ ಚಿತ್ರತಂಡ ಇದೊಂದು ಪ್ರಯೋಗ ಎಂದು ಹೇಳಿದ್ದರು. ಸುದ್ದಿಗೋಷ್ಠಿಗೆ ನಿರ್ದೇಶಕ ಶಿಪೆಂಕೋ ಪೈಲಟ್ ಡ್ರೆಸ್ ಧರಿಸಿಯೇ ಬಂದಿದ್ದರು. ಚಲನಚಿತ್ರದಲ್ಲಿನ ಈ ದೃಶ್ಯವು ಸುಮಾರು 35 ರಿಂದ 40 ನಿಮಿಷಗಳವರೆಗೆ ಇರುತ್ತದೆ. 2012ರಲ್ಲಿಯೇ ಚಿತ್ರದ ನಾಯಕಿಯ ಆಡಿಷನ್ ನಡೆದಿತ್ತು. ನಟಿ ಯುಲಿಯಾ ಆಯ್ಕೆ ಬಳಿಕ ಬಾಹ್ಯಾಕಾಶಕ್ಕೆ ತೆರಳುವ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.

    ಇದನ್ನೂ ಓದಿ: ಈ ಕಾರಣಗಳಿಂದಲೇ Deepika Padukone ನಟ Salman Khan ಜೊತೆ ಸಿನಿಮಾದಲ್ಲಿ ನಟಿಸಲಿಲ್ಲ..!

    ಹಿಂದಿರುಗೋದು ಯಾವಾಗ?

    ಶಿಪಿಂಕೋ ಮತ್ತು ಯುಲಿಯಾ ತಂಡ ಅಕ್ಟೋಬರ್ 17ರಂದು ಭೂಮಿಗೆ ಹಿಂದಿರುಗುವ ಬಗ್ಗೆ ರಷ್ಯಾ ವಿಶ್ವಾಸ ವ್ಯಕ್ತಪಡಿಸಿದೆ. ಅಂತರಿಕ್ಷ ಯಾತ್ರಿಗಳು ಓಲೆಗ್ ನೋವಿಸ್ಕಿಯಲ್ಲಿ ಲ್ಯಾಂಡ್ ಆಗಲಿದ್ದಾರೆ. ಸೂಯುಜ್ ಎಂಎಸ್ 19 ಬಾಹ್ಯಾಕಾಶ ನೌಕೆ ಭೂಮಿಯಿಂದ 354 ಕಿಲೋ ಮೀಟರ್ ಎತ್ತರದಲ್ಲಿರಲಿದೆ. ನಿರ್ದೇಶಕ ಶಿಪಿಂಕೋ ಎತ್ತರ 1.9 ಮೀಟರ್ ( 6 ಅಡಿ 2 ಇಂಚು). ಆದ್ರೆ ಅಂತರಿಕ್ಷ ನೌಕೆ ಎತ್ತರ ಚಿಕ್ಕದಾಗಿದ್ದು, ಸ್ವಲ್ಪ ಇಕ್ಕಟ್ಟು ಆಗಲಿದೆ.

    ಬಾಹ್ಯಾಕಾಶ ಸಂಶೋಧನೆಯಲ್ಲಿ ಅಮೆರಿಕಾಗೆ ಸ್ಪರ್ಧೆ ನೀಡುತ್ತಿರುವ ಮೊದಲ ರಾಷ್ಟ್ರವಾಗಿದೆ. ರಷ್ಯಾ ಮೊದಲ ಉಪಗ್ರಹ ಉಡಾವಣೆ ಮತ್ತು ಅಂತರಿಕ್ಷಕ್ಕೆ ಮಾನವರನ್ನ ಕಳುಹಿಸಿದ ಮೊದಲ ರಾಷ್ಟ್ರವಾಗಿದೆ. ಚಂದ್ರನ ಅಂಗಳ ತಲುಪುವ ಮೂಲಕ ನಾಸಾ ರಷ್ಯಾಗೆ ಟಕ್ಕರ್ ನೀಡಿತ್ತು. ವರದಿಗಳ ಪ್ರಕಾರ ರಷ್ಯಾ ಬಾಹ್ಯಾಕಾಶ ಸಂಶೋಧನೆಗಾಗಿ ಅತಿ ಹೆಚ್ಚು ಹಣವನ್ನು ವ್ಯಯಿಸುತ್ತಿದೆ ಎಂದು ವರದಿಯಾಗಿದೆ.

    - ಮಹಮ್ಮದ್ ರಫೀಕ್ ಕೆ.
    Published by:Vijayasarthy SN
    First published: