• Home
  • »
  • News
  • »
  • national-international
  • »
  • Russian Soldiers: ನಾಯಿಗಿಂತಲೂ ಕಡೆಯಾಗಿದೆಯಾ ರಷ್ಯಾ ಸೈನಿಕರ ಸ್ಥಿತಿ?

Russian Soldiers: ನಾಯಿಗಿಂತಲೂ ಕಡೆಯಾಗಿದೆಯಾ ರಷ್ಯಾ ಸೈನಿಕರ ಸ್ಥಿತಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಷ್ಯಾದ ಸರ್ಕಾರವು "ಸೈನಿಕರನ್ನು ನಾಯಿಗಳಂತೆ ಎಸೆದಿದೆ" ಎಂದು ಸೈನಿಕರು ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

  • News18 Kannada
  • Last Updated :
  • New Delhi, India
  • Share this:

ತಮ್ಮ ವಿರುದ್ಧ ತಿರುಗಿಬಿದ್ದ ಉಕ್ರೇನ್‌ ಮೇಲೆ ರಷ್ಯಾ ಯುದ್ಧ (Russia vs Ukraine War) ಸಾರಿದ್ದು, ಚಿಕ್ಕ ದೇಶ ಉಕ್ರೇನ್‌ ನಾಮಾವಶೇಷಗೊಂಡಿದ್ದು ಇದೀಗ ಹಳೇ ಸುದ್ದಿ. ಆದರೆ ಅದರ ಪರಿಣಾಮ ಮಾತ್ರ ಇನ್ನೂ ಗಂಭೀರವಾಗಿಯೇ ಇದೆ. ಅದರಲ್ಲೂ ರಷ್ಯಾ ಸೈನಿಕರ ಪರಿಸ್ಥಿತಿ ಗಂಭೀರವಾಗಿದೆ ಅನ್ನೋ ಬಗ್ಗೆ ವರದಿಯಾಗಿದೆ. ಅನೇಕ ರಷ್ಯಾ ಸೈನಿಕರು ಈಗ ಹೇಳೋರು ಕೇಳೋರು ಇಲ್ಲದೇ ನಿರ್ಗತಿಕರಾಗಿದ್ದಾರೆ ಎಂಬಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೌದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು (Russia President Vladimir Putin) ಪೂರ್ವ ಯುರೋಪಿಯನ್ ದೇಶವಾದ ಉಕ್ರೇನ್‌ಗೆ ಸೈನಿಕರನ್ನು ಸಜ್ಜುಗೊಳಿಸಲು ಹೆಚ್ಚಿನ ಪ್ರಯತ್ನ ಕೈಗೊಂಡಿರಬಹುದು. ಆದಾಗ್ಯೂ, ಈ ಹೊಸ ನೇಮಕಾತಿಯ ಸೈನಿಕರು ಅಬ್ಬೇಪಾರಿಗಳಂತೆ, ತಮ್ಮ ಬರಿಗೈಯಿಂದ ನೆಲದಲ್ಲಿ ಅಗೆದ ರಂಧ್ರಗಳಲ್ಲಿ ವಾಸ್ತವ್ಯ ಮಾಡುವಂಥ ಪರಿಸ್ಥಿತಿಯಲ್ಲಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.


“ನಾಯಿಗಳಂತೆ ಎಸೆಯಲಾಗಿದೆ”!
ರಷ್ಯಾದ ಸರ್ಕಾರವು "ಸೈನಿಕರನ್ನು ನಾಯಿಗಳಂತೆ ಎಸೆದಿದೆ" ಎಂದು ಸೈನಿಕರು ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಯಾವುದೇ ಮಾಹಿತಿ ಇಲ್ಲದೇ, ಜೊತೆಗೆ ಯಾವುದೇ ಸಲಕರಣೆಗಳಿಲ್ಲದೆ ವಿದೇಶಿ ನೆಲದಲ್ಲಿ ನಿರ್ಜನವಾಗಿದ್ದೇವೆ ಎಂದು ಸೈನಿಕರು ಮನವಿ ಮಾಡುತ್ತಿರುವ ಹಲವಾರು ವಿಡಿಯೋಗಳು ಇಂಟರ್‌ ನೆಟ್‌ ನಲ್ಲಿ ವೈರಲ್‌ ಆಗಿವೆ.


ಆದೇಶವೂ ಇಲ್ಲ, ಸಿಡಿಮದ್ದೂ ಇಲ್ಲ!
ತಮಗೆ ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಮುಂದೇನು ಮಾಡಬೇಕು ಅನ್ನೋದ್ರ ಬಗ್ಗೆ ಆದೇಶವಿಲ್ಲ. ನಾವು ಟೆಂಟರ್‌ಹುಕ್ಸ್ ಮೇಲೆ ಕುಳಿತುಕೊಳ್ಳುತ್ತೇವೆ. ಏಕೆಂದರೆ ನಾವು ಎಲ್ಲಿದ್ದೇವೆ ಅನ್ನೋದ್ರ ಬಗ್ಗೆಯೇ ನಮಗೆ ಗೊತ್ತಿಲ್ಲ.‌ ಜೊತೆಗೆ ನಮ್ಮ ಶತ್ರು ಎಲ್ಲಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ.


ರೇಡಿಯೋ, ಸಿಡಿಮದ್ದು ಏನೂ ಇಲ್ಲ
ನಮ್ಮ ಬಳಿ ಯಾವುದೇ ರೇಡಿಯೋ ಇಲ್ಲ. ಸಿಡಿಮದ್ದುಗಳು ಕೂಡ ಇಲ್ಲ ಎಂಬುದಾಗಿ ಒಬ್ಬರು ವೀಡಿಯೊದಲ್ಲಿ ಹೇಳುತ್ತಾರೆ. ಜೊತೆಗೆ, ನಮ್ಮ ಬಳಿ ಸಲಿಕೆ ಇಲ್ಲ, ನಮ್ಮೊಂದಿಗೆ ಏನೂ ಇಲ್ಲ. ನಾವು ಗದ್ದೆಯಲ್ಲಿ ವಾಸಿಸುತ್ತೇವೆ. ಅವರು ಅಕ್ಷರಶಃ ದಿನಕ್ಕೆ ಎರಡು ಬಾರಿ ಸ್ವಲ್ಪ ಆಹಾರವನ್ನು ತರುತ್ತಾರೆ. ನಾವು ಮರಗಳನ್ನು ಕಡಿಯುತ್ತೇವೆ. ಬೆಂಕಿ ಹಾಕುತ್ತೇವೆ ಮತ್ತು ಅಗೆಯುತ್ತೇವೆ ಎಂಬುದಾಗಿ ಮತ್ತೊಬ್ಬರು ವಿಡಿಯೋದಲ್ಲಿ ಹೇಳುತ್ತಾರೆ.


ಇನ್ನು ವಿಡಿಯೋದಲ್ಲಿ ಸೈನಿಕರು, “ಒಂದು ತಿಂಗಳ ನಂತರ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಮ್ಮನ್ನು ಸ್ಥಳಾಂತರಗೊಳಿಸಲಾಯಿತು. ನಂತರ ಉಕ್ರೇನ್‌ನ ಯಾವುದೋ ಜಾಗದಲ್ಲಿ ತಮ್ಮನ್ನು ಕೈಬಿಡಲಾಯಿತು” ಅನ್ನೋದಾಗಿ ಹೇಳುತ್ತಿರುವುದು ಕಂಡುಬರುತ್ತದೆ.


ಇದನ್ನೂ ಓದಿ: Court Order: ಇನ್ಮುಂದೆ ಮಹಿಳೆಯರನ್ನು 'ಐಟಂ' ಅಂತ ಕರೆಯುವಂತಿಲ್ಲ, ಪಡ್ಡೆ ಹೈಕ್ಳಿಗೆ ಕೋರ್ಟ್ ವಾರ್ನಿಂಗ್​!'


ಎಲ್ಲಿ ವಾಸಿಸುತ್ತಿದ್ದಾರೆ ಗೊತ್ತೇ?
ತಮ್ಮ ಜೀವನ ಪರಿಸ್ಥಿತಿಯ ಚಿತ್ರಣದ ಬಗ್ಗೆ ವಿಡಿಯೋದಲ್ಲಿ ಹೇಳಿರುವ ಸೈನಿಕರು ತಮ್ಮ ಕೈಗಳಿಂದ ನೆಲವನ್ನು ಅಗೆದ ಗುಂಡಿಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ರಾತ್ರಿಯ ಸಮಯದಲ್ಲಿ ಉಕ್ರೇನ್‌ನಲ್ಲಿ ತಾಪಮಾನವು ಶೂನ್ಯಕ್ಕೆ ಇಳಿಯುತ್ತದೆ. ಇಂಥ ಕಠಿಣ ಪರಿಸ್ಥಿತಿಯಿಂದಾಗಿ ನಮ್ಮಲ್ಲಿ ಇಬ್ಬರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸೈನಿಕರು ತಿಳಿಸಿದ್ದಾರೆ.


ಯಾವುದೇ ತರಬೇತಿಯಿಲ್ಲದೆ ಕಳುಹಿಸಲಾಗಿದೆ
ಇನ್ನು ಅಧ್ಯಕ್ಷ ಪುಟಿನ್ ಅವರ ಸೈನಿಕ ಸಜ್ಜುಗೊಳಿಸುವ ಅಭಿಯಾನದಿಂದ ಈ ಹಿಂದೆ ಮಿಲಿಟರಿಯಲ್ಲಿ ಬಲವಂತವಾಗಿ ಸೇರಿಸಿಕೊಳ್ಳುವುದನ್ನು ತಪ್ಪಿಸಲು ಅನೇಕ ಪುರುಷರು ಥಟ್ಟನೆ ದೇಶ ತೊರೆಯುತ್ತಿದ್ದುದುದು ಕಂಡುಬಂದಿತ್ತು ಎನ್ನಲಾಗಿದೆ. ಈ ಮಧ್ಯೆ ಪುಟಿನ್ ಅವರು ಸೈನಿಕರನ್ನು ಸಜ್ಜುಗೊಳಿಸುವ ಕರೆಯನ್ನು ಅನುಸರಿಸಿ ಉಕ್ರೇನ್‌ನಲ್ಲಿರುವ ರಷ್ಯಾದ ಪುರುಷರನ್ನು ಯಾವುದೇ ತರಬೇತಿಯಿಲ್ಲದೆ ಕಳುಹಿಸಲಾಗಿದೆ ಎಂದು ವರದಿಗಳು ಬಂದ ಸಮಯದಲ್ಲಿಯೇ ಈ ವೀಡಿಯೊ ಕೂಡ ಬಂದಿದೆ.


ಇದನ್ನೂ ಓದಿ: Rishi Sunak: ರಿಷಿ ಸುನಕ್​-ಅಕ್ಷತಾ ನಡುವೆ ಪ್ರೀತಿ ಹುಟ್ಟಿದ್ದೇ ರೋಚಕ, ಕರ್ನಾಟಕ ಅಳಿಯನ ಕಂಪ್ಲೀಟ್ ಪ್ರೇಮ್​ ಕಹಾನಿ ಇಲ್ಲಿದೆ!


ಒಟ್ಟಿನಲ್ಲಿ ದೇಶಕ್ಕಾಗಿ ಹೋದ ರಷ್ಯಾ ಸೈನಿಕರು ಕಾಣದ ನೆಲದಲ್ಲಿ ಪಾಡು ಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪುಟಿನ್‌ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾ, ಅವರನ್ನು ವಾಪಸ್‌ ಕರೆಸಿಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Published by:ಗುರುಗಣೇಶ ಡಬ್ಗುಳಿ
First published: