• Home
  • »
  • News
  • »
  • national-international
  • »
  • Russia Ukraine War: ಉಕ್ರೇನ್ ಮಹಿಳೆಯರಷ್ಟೇ ಅಲ್ಲ, ಮಕ್ಕಳು, ಪುರುಷರಿಗೂ ನರಕ! ವಯಾಗ್ರ ಬಳಸಿ ರಷ್ಯಾ ಸೈನಿಕರಿಂದ ಕಿರುಕುಳ!

Russia Ukraine War: ಉಕ್ರೇನ್ ಮಹಿಳೆಯರಷ್ಟೇ ಅಲ್ಲ, ಮಕ್ಕಳು, ಪುರುಷರಿಗೂ ನರಕ! ವಯಾಗ್ರ ಬಳಸಿ ರಷ್ಯಾ ಸೈನಿಕರಿಂದ ಕಿರುಕುಳ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಷ್ಯಾ ಸೈನಿಕರು ಮಹಿಳೆಯರನ್ನು ಬಂಧಿಸಿ ದಿನಗಟ್ಟಲೆ ಅತ್ಯಾಚಾರ ಮಾಡುತ್ತಿರುವುದು, ಚಿಕ್ಕ ಹುಡುಗರು ಮತ್ತು ಪುರುಷರ ಮೇಲೂ ಬಲಾತ್ಕಾರ ಮಾಡುತ್ತಿರುವುದು ತಿಳಿದು ಬಂದಿದೆ. ಇದಕ್ಕಾಗಿ ರಷ್ಯಾ ಸರ್ಕಾರವೇ ತನ್ನ ಸೈನಿಕರಿಗೆ ವಯಾಗ್ರ ಪೂರೈಸುತ್ತಿತ್ತಂತೆ!

  • Share this:

ಕೈಯಿವ್, ಉಕ್ರೇನ್: ರಷ್ಯಾ (Russia) ಯುದ್ಧ ದಾಹ ಮುಂದುವರೆದಿದೆ. ಉಕ್ರೇನ್‌ (Ukraine) ಅನ್ನು ಬಗ್ಗು ಬಡಿಯಲು ಸತತ ಪ್ರಯತ್ನ ಮಾಡುತ್ತಿರುವ ರಷ್ಯಾ, ಅಕ್ಷರಶಃ ರಾಕ್ಷಸನಂತೆ ವರ್ತಿಸುತ್ತಿದೆ. ಇದೀಗ ರಷ್ಯಾ ಸೈನಿಕರ (Russian soldiers) ಘೋರ ವಿಚಾರವೊಂದು ಹೊರ ಬಿದ್ದಿದೆ. ರಷ್ಯಾ ಸೈನಿಕರು ಕಾಮತ್ತೋಜಕವಾದ ವಯಾಗ್ರ ಮಾತ್ರೆಗಳನ್ನು (Viagra tablets) ಸೇವಿಸಿ, ಉಕ್ರೇನ್ ಮಹಿಳೆಯರ (Ukrainian women) ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಹೊರ ಬಿದ್ದಿದೆ.  ಫೆಬ್ರವರಿಯಲ್ಲಿ ಯುದ್ಧವು (War) ಪ್ರಾರಂಭ ಆದಾಗಿನಿಂದ ಯುಎನ್ (UN) 100 ಕ್ಕೂ ಹೆಚ್ಚು ಅತ್ಯಾಚಾರ ಅಥವಾ ವಿವಿಧ ರೀತಿಯ ಲೈಂಗಿಕ ದೌರ್ಜನ್ಯದ (violence) ಪ್ರಕರಣಗಳನ್ನು ಪರಿಶೀಲಿಸಿದೆ ಎಂದು ವಿಶ್ವಸಂಸ್ಥೆ ರಾಯಭಾರಿ ಗಂಭೀರ ಆರೋಪ ಮಾಡಿದ್ದಾರೆ.


ರಷ್ಯಾ ಸೈನಿಕರಿಂದ ವಯಾಗ್ರ ಮಾತ್ರೆ ಬಳಕೆ


ಉಕ್ರೇನ್‌ ಮಹಿಳೆಯನ್ನು ಅತ್ಯಾಚಾರ ಮಾಡಲು ರಷ್ಯಾ ತನ್ನ ಸೈನಿಕರಿಗೆ ಕಾಮೋದ್ರೇಕಗೊಳಿಸುವ ವಯಾಗ್ರ ಮಾತ್ರೆಯನ್ನು ನೀಡುತ್ತಿದೆ ಎಂದು ವಿಶ್ವ ಸಂಸ್ಥೆಯ ಸ್ಫೋಟಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರ್ಷದ ಆರಂಭದಲ್ಲೇ ರಷ್ಯಾವು ಉಕ್ರೇನ್‌ ಮೇಲೆ ಯುದ್ಧ ಸಾರಿದೆ. ಅಲ್ಲಿಂದ ಇಲ್ಲಿ ವರೆಗೆ ಸುಮಾರು 100 ಕ್ಕೂ ಅಧಿಕ ಉಕ್ರೇನ್ ಮಹಿಳೆಯರ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ಎಸಗಿದ್ದಾರೆ ಅಂತ ವಿಶ್ವಸಂಸ್ಥೆ ವರದಿಯಲ್ಲಿ ತಿಳಿಸಿದೆ.


ರಷ್ಯಾ ಸರ್ಕಾರದಿಂದಲೇ ವಯಾಗ್ರ ಪೂರೈಕೆ


ರಷ್ಯಾ ಸೈನಿಕರ ಅತ್ಯಾಚಾರದಂತಹ ಅಮಾನವೀಯ ವರ್ತನೆಗೆ ರಷ್ಯಾ ಸರ್ಕಾರವೇ ಬೆಂಬಲ ನೀಡುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ. ಅಲ್ಲದೇ ರಷ್ಯಾ ಸರ್ಕಾರದಿಂದಲೇ ಸೈನಿಕರಿಗೆ ವಯಾಗ್ರ ಪೂರೈಕೆ ಮಾಡಲಾಗುತ್ತಿದೆಯಂತೆ. ಇದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್‌ ಸರ್ಕಾರದ ಯುದ್ಧ ತಂತ್ರವೂ ಹೌದು ಎಂದು ವಿಶ್ವ ಸಂಸ್ಥೆಯ ವರದಿ ಉಲ್ಲೇಖಿಸಿದೆ.


ಇದನ್ನೂ ಓದಿ: Russia-Ukraine War: ಉಕ್ರೇನ್‌ ಮೇಲೆ ಪುಟಿನ್ ಅಣ್ವಸ್ತ್ರ ಬಳಸಿದರೆ, ನಾವೂ ಕೂಡ ಗೇಮ್‌ ಪ್ಲ್ಯಾನ್‌ ಮಾಡಿಕೊಂಡಿದ್ದೇವೆ! ಅಮೆರಿಕಾ ಖಡಕ್ ಎಚ್ಚರಿಕೆ


ವಿಶ್ವಸಂಸ್ಥೆ ಪ್ರತಿನಿಧಿ ಹೇಳಿದ್ದೇನು?


ಅತ್ಯಾಚಾರಗಳು ಮತ್ತು ಲೈಂಗಿಕ ಆಕ್ರಮಣಗಳು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ತಂತ್ರವಾಗಿವೆ. ಸಂತ್ರಸ್ತರನ್ನು ಅಮಾನುಷವಾಗಿ ನಡೆಸಿಕೊಳ್ಳುವುದೂ ಕೂಡ ತಂತ್ರದ ಭಾಗವಾಗಿದೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಪ್ರಮೀಳಾ ಪೆಟನ್‌ ಅಭಿಪ್ರಾಯಪಟ್ಟಿದ್ದಾರೆ.


ಚಿಕ್ಕಮಕ್ಕಳು, ಪುರುಷರ ಮೇಲೂ ಅತ್ಯಾಚಾರ!


ಇನ್ನೊಂದು ಆಘಾತಕಾರಿ ವಿಚಾರ ಕೂಡ ವಿಶ್ವಸಂಸ್ಥೆ ವರದಿಯಿಂದ ಗೊತ್ತಾಗಿದೆ. ರಷ್ಯಾ ಸೈನಿಕರು ಮಹಿಳೆಯರನ್ನು ಬಂಧಿಸಿ ದಿನಗಟ್ಟಲೆ ಅತ್ಯಾಚಾರ ಮಾಡುತ್ತಿರುವುದು, ಚಿಕ್ಕ ಹುಡುಗರು ಮತ್ತು ಪುರುಷರ ಮೇಲೂ ಬಲಾತ್ಕಾರ ಮಾಡುತ್ತಿರುವುದು ತಿಳಿದು ಬಂದಿದೆ. ಸಂತ್ರಸ್ತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳಾಗಿದ್ದಾರೆ. ಪುರುಷರು ಮತ್ತು ಗಂಡು ಮಕ್ಕಳ ಮೇಲೂ ದೌರ್ಜನ್ಯ ನಡೆದಿದೆ. ಅಲ್ಲದೇ ಜನನಾಂಗಗಳ ಛೇದನ, ರಷ್ಯಾ ಸೈನಿಕರು ವಯಾಗ್ರಗಳನ್ನು ಹೊಂದಿರುವುದರ ಬಗ್ಗೆ ಮಹಿಳೆಯರು ಸಾಕ್ಷಿ ನುಡಿಯುತ್ತಿರುವುದನ್ನು ಕೇಳಿದರೆ ಇದು ಮಿಲಿಟರಿ ತಂತ್ರ ಎಂದು ಅನಿಸುತ್ತದೆ’ ಎಂದು ಪ್ರಮೀಳಾ ಪೆಟನ್ ಹೇಳಿದ್ದಾರೆ.


ಇದನ್ನೂ ಓದಿ:  Russia-Ukraine War: ಮತ್ತೆ ಕ್ಷಿಪಣಿ ದಾಳಿ ಮಾಡೋದಿಲ್ಲ ಎಂದ ಪುಟಿನ್! ಅಂತ್ಯವಾಗುತ್ತಾ ರಷ್ಯಾ-ಉಕ್ರೇನ್ ಯುದ್ಧ?


“ಪಾಕಿಸ್ತಾನ ಸೈನಿಕರು ವಯಾಗ್ರ ಬಳಸದೇ ಅತ್ಯಾಚಾರ ಮಾಡಿದ್ದರು”


ಇತ್ತ ಪ್ರಮಿಳಾ ಪ್ಯಾಟನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿವಾದಿತ ಲೇಖಕಿ ತಸ್ಲೀಮಾ ನಸ್ರಿನ್, “ಯುಕ್ರೇನಿಯನ್ನರನ್ನು ಅತ್ಯಾಚಾರ ಮಾಡಲು ಸೈನಿಕರಿಗೆ ವಯಾಗ್ರವನ್ನು ನೀಡುತ್ತಿರುವ ರಷ್ಯಾದಂತೆ ಪಾಕಿಸ್ತಾನವೂ ಮಾಡಿತ್ತು. ಇದು ರಷ್ಯಾದ 'ಮಿಲಿಟರಿ ತಂತ್ರ'ದ ಭಾಗವಾಗಿದೆ. ರಷ್ಯಾದ ಮಿಲಿಟರಿ ವಯಾಗ್ರದಿಂದ ಇದುವರೆಗೆ 100 ಉಕ್ರೇನಿಯನ್ನರ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದೆ. ಆದರೆ ಪಾಕಿಸ್ತಾನಿ ಮಿಲಿಟರಿ 1971 ರಲ್ಲಿ ವಯಾಗ್ರ ಇಲ್ಲದೆ 200,000 ಬೆಂಗಾಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿತ್ತು ಎಂದಿದ್ದಾರೆ.

Published by:Annappa Achari
First published: