Ukraine-Russia: ಭಾರತದ ಹುಡುಗಿಯರನ್ನು ರಷ್ಯಾ ಸೈನಿಕರು ಎಲ್ಲಿಗೋ ಕರ್ಕೊಂಡು ಹೋಗ್ತಿದಾರೆ, ಅವರೇನಾದ್ರು ಅಂತ ಗೊತ್ತಿಲ್ಲ!

ಉಕ್ರೇನ್‌ನಲ್ಲಿ ಸಿಲುಕಿರುವವರು ಮತ್ತು ಅವರ ಕುಟುಂಬಗಳೊಂದಿಗೆ ತನ್ನ ಸ್ಥಳಾಂತರಿಸುವ ಯೋಜನೆಯನ್ನು ತುರ್ತಾಗಿ ಹಂಚಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಹಾಯಕ್ಕೆ ಯುವತಿ ಮೊರೆ

ಸಹಾಯಕ್ಕೆ ಯುವತಿ ಮೊರೆ

 • Share this:
  ಉಕ್ರೇನ್​​ನಲ್ಲಿ(Ukraine)  ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು (Indian Student) ಯುದ್ಧದ ಕರಾಳತೆಗೆ ಸಾಕ್ಷಿಯಾಗಿದ್ದಾರೆ. ಅನ್ನ- ಆಹಾರ ನೀರಿಲ್ಲದೇ ಅವರು ಪರಿತಪಿಸುತ್ತಿದ್ದು, ತಮನ್ನು ರಕ್ಷಣೆ ಮಾಡುವಂತೆ ಅನೇಕರು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದ (Social Media) ಮೂಲಕ ಮನವಿ ಮಾಡಿಕೊಂಡಿದ್ದಾರೆ. ದೇಶ ತೊರೆಯೋಣ ಎಂದು ಕಾಲ್ನಡಿಗೆ ಮೂಲಕ ಉಕ್ರೇನ್​ ಗಡಿ ತಲುಪಿಸದರೂ ಅವರಿಗೆ ಸೂಕ್ತ ನೆರವು ಸಿಕ್ಕಿಲ್ಲ. ಜೊತೆಗೆ ಅನೇಕ ವಿದ್ಯಾರ್ಥಿಗಳು ರಷ್ಯಾ ಸೇನೆಯಿಂದ ಥಳಿತಕ್ಕೆ ಒಳಗಾಗಿರುವುದು ಕಾಣಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವತಿ ತಮ್ಮ ಸುರಕ್ಷತೆಗೆ ಆಗಮಿಸುವಂತೆ ದೇಶದ ಪ್ರಧಾನಿಗೆ ಮನವಿ ಮಾಡಿದ್ದಾಳೆ. ಈ ವಿಡಿಯೋವನ್ನು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ಪ್ರಧಾನಿ ಮೋದಿ- ವಿದೇಶಾಂಗ ಸಚಿವ ಜೈ ಶಂಕರ್​ಗೆ ಟ್ಯಾಗ್​ ಮಾಡಿದ ಪ್ರಿಯಾಂಕಾ

  ಉಕ್ರೇನ್​​ನಲ್ಲಿ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ಯುದ್ಧದಿಂದ ಭೀತಿಕೊಂಡಿದ್ದು, ವಿದ್ಯಾರ್ಥಿಗಳನ್ನು ಮರಳಿ ಕರೆತರಲು, ಏನು ಮಾಡಬೇಕೋ ಅದನ್ನು. ದಯವಿಟ್ಟು ಮಾಡಿ ಎಂದು ವಿಡಿಯೋ ಜೊತೆಗೆ ಸಂದೇಶದೊಂದಿಗೆ ಕಾಂಗ್ರೆಸ್​​ ನಾಯಕಿ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೈ ಶಂಕರ್​ ಅವರಿಗೆ ಮನವಿ ಮಾಡಿದ್ದಾರೆ.


  ವಿಡಿಯೋದಲ್ಲಿ ವಿದ್ಯಾರ್ಥಿನಿ ಲಕ್ನೋ ಮೂಲದ ಗರಿಮಾ ಮಿಶ್ರಾ ಎಂದು ತಿಳಿಸಿದ್ದಾರೆ. ರಷ್ಯಾದ ಪಡೆಗಳಿಂದ ಸುತ್ತುವರಿದಿರುವ ಉಕ್ರೇನ್ ರಾಜಧಾನಿ ಕೈವ್‌ನಲ್ಲಿ ಸಿಲುಕಿಕೊಂಡ ನಂತರ, ಅವರು ರಾಯಭಾರ ಕಚೇರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾಳೆ

  ನಮಗೆ ಯಾರೂ ಸಹಾಯ ಮಾಡುತ್ತಿಲ್ಲ ಮತ್ತು ನಮಗೆ ಯಾವುದೇ ಸಹಾಯ ಸಿಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ವಿದ್ಯಾರ್ಥಿಗಳ ಗುಂಪು ಗಡಿ ದಾಟಲು ಪ್ರಯತ್ನಿಸುತ್ತಿರುವಾಗ ರಷ್ಯಾದ ಸೈನ್ಯವು ಅವರ ಮೇಲೆ ಗುಂಡು ಹಾರಿಸಿತು ಎಂದು ನಮ್ಮ ಸ್ನೇಹಿತರು ನಮಗೆ ಹೇಳಿದ್ದಾರೆ ಎಂದು ಪರಿಸ್ಥಿತಿ ವಿವರಿಸಿದ್ದಾಳೆ. ಅಲ್ಲದೇ ತಮ್ಮ ಗುಂಪಿನ ಜೊತೆಯಿದ್ದ ಹುಡುಗಿಯರನ್ನು ಅಪಹರಿಸಲಾಗಿದೆ ಎಂದು ಕಣ್ಣೀರು ಹಾಕಿದ್ದು, ತಮ್ಮ ಸಹಾಯಕ್ಕೆ ಧಾವಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿಯವರಿಗೆ ಸಹಾಯ ಮನವಿ ಮಾಡಿದ್ದಾಳೆ.
  ಅಲ್ಲದೇ ಯಾರೇ ನೋಡುತ್ತಿರಲಿ, ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ ಎಂದು ಕೈ ಮುಗಿದು ಹುಡುಗಿ ಬೇಡಿಕೊಂಡಿದ್ದಾಳೆ

  ಅಲ್ಲದೇ ಯಾರೇ ನೋಡುತ್ತಿರಲಿ, ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ ಎಂದು ಕೈ ಮುಗಿದು ಹುಡುಗಿ ಬೇಡಿಕೊಂಡಿದ್ದಾಳೆ

  ಇದನ್ನು ಓದಿ: Ukraineನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾದ ಕೇಂದ್ರ; ಗಡಿ ದೇಶಕ್ಕೆ ಈ 4 ಕೇಂದ್ರ ಸಚಿವರು

  ರಾಹುಲ್ ಗಾಂಧಿಯಿಂದ ಕೂಡ ವಿಡಿಯೋ ಶೇರ್​

  ಕಾಂಗ್ರೆಸ್‌ನ ರಾಹುಲ್ ಗಾಂಧಿ ಕೂಡ ಉಕ್ರೇನ್‌ನಿಂದ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳ ಸಂಕಷ್ಟಗಳನ್ನು ಅರಿತು ಸರ್ಕಾರ ತಕ್ಷಣ ಅವರ ಸ್ಥಳಾಂತರ ಕಾರ್ಯ ಚುರುಕುಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.  ಮಾಹಿತಿ ಹಂಚಿಕೊಳ್ಳುವಂತೆ ಮನವಿ

  ಸೋಮವಾರ ಉಕ್ರೇನ್‌ನಲ್ಲಿ ಸಿಲುಕಿರುವವರು ಮತ್ತು ಅವರ ಕುಟುಂಬಗಳೊಂದಿಗೆ ತನ್ನ ಸ್ಥಳಾಂತರಿಸುವ ಯೋಜನೆಯನ್ನು ತುರ್ತಾಗಿ ಹಂಚಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೇ ಸರ್ಕಾರದ ಸ್ಥಳಾಂತರ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್​ ನಾಯಕ, ಸರ್ಕಾರ ರಷ್ಯಾ ದಾಳಿ ನಡೆಸಿದ ಬಳಿಕ ಈ ಸ್ಥಳಾಂತರ ಕಾರ್ಯಕ್ಕೆ ಮುಂದಾಗಿದೆ.  ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಹಿಂಸಾಚಾರಕ್ಕೆ ಒಳಗಾಗುತ್ತಿರುವುದನ್ನು ನೋಡಿದರೆ ನನಗೆ ಸಾಕಷ್ಟಯ ಹಿಂಸೆ ಆಗುತ್ತಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

  ಇದನ್ನು ಓದಿ: ಭಾರತೀಯರ ಏರ್‌ಲಿಫ್ಟ್‌ಗೆ ಪ್ರತಿ ಗಂಟೆಗೆ ಖರ್ಚಾಗುತ್ತಿರುವುದು 7-8 ಲಕ್ಷ ರೂಪಾಯಿ!

  ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕ್ ರಿಪಬ್ಲಿಕ್ ಮತ್ತು ಪೋಲೆಂಡ್‌ನಿಂದ ಏರ್ ಇಂಡಿಯಾ ಸ್ಥಳಾಂತರಿಸುವ ವಿಮಾನಗಳ ಮೂಲಕ ಕರೆ ತರುವ ಪ್ರಯತ್ನಕ್ಕೆ ಭಾರತ ಮುಂದಾಗಿದೆ. ಇದೀಗ ನಾಲ್ವರು ಕೇಂದ್ರ ಸಚಿವರನ್ನೇ ಉಕ್ರೇನ್​ ಗಡಿ ರಾಷ್ಟ್ರಗಳಿಗೆ ಕಳುಹಿಸಲು ಮುಂದಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

  ಆಪರೇಷನ್ ಗಂಗಾ ಹೆಸರಿನಲ್ಲಿ ಮೊದಲ ಸ್ಥಳಾಂತರ ನಡೆಸಲಾಗಿದ್ದು, ಬುಚಾರೆಸ್ಟ್‌ನಿಂದ 219 ಜನರು ಶನಿವಾರ ಮುಂಬೈಗೆ ಬಂದು ಇಳಿದಿದ್ದಾರೆ ಇದುವರೆಗೆ ಐದು ವಿಮಾನಗಳಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
  Published by:Seema R
  First published: