ಕ್ಷಿಪಣಿ ಪ್ರಯೋಗ ಪ್ರತಿ ಬಾರಿ ಸಕ್ಸಸ್ ಆಗಬೇಕೆಂದೇನಿಲ್ಲ. ಗುರಿ ತಪ್ಪುವುದು ಸಾಮಾನ್ಯ. ಆದರೆ ರಷ್ಯಾದ ಮಿಸೈಲ್ ಮೇಲಕ್ಕೆ ಹಾರಿ ಮಧ್ಯದಲ್ಲಿ ತಿರುಗಿ ಬಂದು ಹಾರಿಸಿದವರ ಮೇಲೆ ಹೊಡೆದಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ರಷ್ಯಾದ (Russia) ಮೇಲ್ಮೈಯಿಂದ ಹಾರಿದ ಕ್ಷಿಪಣಿ (Missile) ತಿರುಗಿ ಅದನ್ನು ಉಡಾವಣೆ ಮಾಡಿದ ಸೈನ್ಯವನ್ನು ಹೊಡೆಯುವ ಕ್ಷಣ ವಿಡಿಯೋಗಳಲ್ಲಿ (Video) ಸೆರೆಯಾಗಿದ್ದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಶುಕ್ರವಾರ ಮುಂಜಾನೆ ಲುಹಾನ್ಸ್ಕ್ನ ಅಲ್ಚೆವ್ಸ್ಕ್ ನಗರದಲ್ಲಿ ಉಕ್ರೇನಿಯನ್ ಪಡೆಗಳ ಮೇಲೆ ರಷ್ಯಾದ ಪರ ಪ್ರತ್ಯೇಕತಾವಾದಿಗಳು ರಾಕೆಟ್ (Rocket) ಉಡಾವಣೆ ಮಾಡಿದ ಕ್ಷಣವನ್ನು ಒಂದು ಸಣ್ಣ ಕ್ಲಿಪ್ ಸೆರೆಹಿಡಿದಿದೆ.
ಕ್ಷಿಪಣಿಯು ರಾತ್ರಿಯ ಹೊತ್ತಲ್ಲಿ ಆಕಾಶದಲ್ಲಿ ಮೇಲೇರಿದಂತೆ ವಿಫಲವಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. ವ್ಲಾಡಿಮಿರ್ ಪುಟಿನ್ ಅವರ ಪಡೆಗಳು ಹಾರಿಸಿದ ಕ್ಷಿಪಣಿ ದುರದೃಷ್ಟವಶಾತ್ ಅವರಿಗೇ ಹಿಂದಿರುಗಿ ಹೊಡೆದಿದೆ.
ಉಕ್ರೇನ್ ವಿಮಾನ ಹೊಡೆದುರುಳಿಸಲು ಮಾಡಿದ್ದ ಯತ್ನ ವಿಫಲ
ಸಂಘರ್ಷದ ಹೊಸ ಮುಂಚೂಣಿಯಲ್ಲಿರುವ ಹಲವಾರು ನಗರಗಳಲ್ಲಿ ಅಲ್ಚೆವ್ಸ್ಕ್ ಒಂದಾಗಿದೆ. ಅಲ್ಲಿ ಉಕ್ರೇನಿಯನ್ ಪಡೆಗಳು ರಷ್ಯಾದ ಪರ ಪ್ರತ್ಯೇಕತಾವಾದಿಗಳು ಮತ್ತು ಕ್ರೆಮ್ಲಿನ್ನ ಮಿಲಿಟರಿಯಿಂದ ತಮ್ಮ ಭೂಮಿಯನ್ನು ತೀವ್ರವಾಗಿ ರಕ್ಷಿಸುತ್ತಿವೆ.
ಫೇಸ್ ಆಫ್ ವಾರ್ ಟೆಲಿಗ್ರಾಂ ಚಾನೆಲ್ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದ ಪ್ರಕಾರ, ರಷ್ಯಾದ ಪಡೆಗಳು ಉಕ್ರೇನಿಯನ್ ವಿಮಾನವನ್ನು ಆಕಾಶದಿಂದ ಹೊಡೆದುರುಳಿಸುವ ಪ್ರಯತ್ನದಲ್ಲಿ ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ವರದಿಯಾಗಿದೆ.
ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ
ಅದರ ಆಂತರಿಕ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಕ್ಷಿಪಣಿಯು ಹಾಳಾಗಿದೆ ಎಂದು ಭಾವಿಸಲಾಗಿದೆ. ಕ್ಷಿಪಣಿಯು ಅದರ ಮೂಲ ಬಿಂದುವನ್ನು ಮುಟ್ಟುತ್ತಿದ್ದಂತೆ, ರಾಕೆಟ್ ಪ್ರಕಾಶಮಾನವಾದ ಹೊಳಪಿನಿಂದ ಸ್ಫೋಟಗೊಂಡಿದೆ.
ಸಮೀಪದಲ್ಲಿದ್ದ ಮನೆಯಗಳ ಆಸುಪಾಸಿನಲ್ಲಿ ಬೆಂಕಿ
ಗುಂಡಿನ ದಾಳಿಯು ಹತ್ತಿರದ ಮನೆಗಳ ಮೂಲಕ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಫಾರಿನ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ನ ಹಿರಿಯ ಫೆಲೋ ರಾಬ್ ಲೀ ಟ್ವಿಟ್ಟರ್ನಲ್ಲಿ ವೀಡಿಯೊ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅಲ್ಚೆವ್ಸ್ಕ್, ಲುಹಾನ್ಸ್ಕ್ ಒಬ್ಲಾಸ್ಟ್ನಿಂದ ಇದು ವರದಿಯಾಗಿದ್ದು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿ ಉಡಾವಣೆ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತಿ ಯೂನಿಟ್ಗೆ 245 ಮಿಲಿಯನ್ ಪೌಂಡ್ಗಳಷ್ಟು ವೆಚ್ಚವಾಗಬಹುದಾದ ಇದರಲ್ಲಿ ಯಾವ ವಾಯು ವಿರೋಧಿ ಕ್ಷಿಪಣಿ ವ್ಯವಸ್ಥೆ ಹಿಮ್ಮುಖವಾಗಿದೆ ಎಂಬುದು ತಿಳಿದಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: Shiv Sena: ಕೊನೆಗೂ ಇಬ್ಭಾಗವಾಯ್ತಾ ಶಿವಸೇನೆ? ಬಾಳಾ ಠಾಕ್ರೆ ಹೆಸರು ಬಳಸದಂತೆ ಉದ್ಧವ್ ಎಚ್ಚರಿಕೆ
ಸಾವಿನ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ಇನ್ನೂ ಬಹಿರಂಗಗೊಂಡಿಲ್ಲ. ಸಂಘರ್ಷದ ಪ್ರಾರಂಭದಿಂದಲೂ ರಷ್ಯಾದ ಸೈನ್ಯದ ಉಪಕರಣಗಳು ಅದರ ಖ್ಯಾತಿಗೆ ತಕ್ಕಂತೆ ಬಾಳಿಕೆ ಬರುತ್ತಿಲ್ಲ ಎನ್ನುವ ಆರೋಪವಿದೆ. ಕಳೆದ ಕೆಲವು ವಾರಗಳಲ್ಲಿ ಹಲವಾರು ಮಿಲಿಟರಿ ಪ್ರಮಾದಗಳು ಕಂಡುಬಂದಿವೆ.
ಯುದ್ಧ ವಿಮಾನ ಸ್ಫೋಟ
ಉಕ್ರೇನಿಯನ್ ಯುದ್ಧಭೂಮಿಗೆ ತೆರಳುತ್ತಿದ್ದ ರಷ್ಯಾದ ಮಿಲಿಟರಿ ವಿಮಾನವು ಮಾಸ್ಕೋ ಬಳಿ ನೆಲಕ್ಕೆ ಧುಮುಕುವ ಮೊದಲು ಜ್ವಾಲೆ ಕಂಡು ಬಂದು ಸ್ಫೋಟಿಸಿತು. ಕಾರ್ಗೋ ವಿಮಾನವು ಇಂಧನ ತುಂಬಿದ ನಂತರ ಮತ್ತೆ ಟೇಕಾಫ್ ಆಗಿದ್ದು ಅದು ರಾಜಧಾನಿಯಿಂದ ದಕ್ಷಿಣಕ್ಕೆ 125 ಮೈಲಿ ದೂರದಲ್ಲಿರುವ ರಿಯಾಜಾನ್ ನಗರದ ಸಮೀಪವಿರುವ ಮೈದಾನಕ್ಕೆ ಅಪ್ಪಳಿಸಿತು.
ಇದನ್ನೂ ಓದಿ: ಗವಿಮಠ ಶ್ರೀಗಳ ಕಣ್ಣೀರು, ಭೀಮಾ ತೀರದ ಹಂತಕರ ಗ್ಯಾಂಗ್ಗಳಿಗೆ ಎಚ್ಚರಿಕೆ, ಅತಿ ಉದ್ದದ ನದಿ ಪ್ರಯಾಣ: ಬೆಳಗಿನ ಟಾಪ್ ನ್ಯೂಸ್ಗಳು
ವಿಮಾನದಲ್ಲಿದ್ದ ಮೂವರು ಸಾವನ್ನಪ್ಪಿದರು. ಕನಿಷ್ಠ ಆರು ಜನರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿಯಾಗಿದೆ. ಆಮೇಲೆ ನಾಲ್ಕನೇ ಸಾವು ವರದಿಯಾಗಿದೆ. ಕಳೆದ ವಾರ ಕ್ರೆಮ್ಲಿನ್ ಫೈಟರ್ ಜೆಟ್ ಕೂಡ ಉಕ್ರೇನಿಯನ್ ಗಡಿಯ ಸಮೀಪ ಸುಟ್ಟು ಹೋಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ