HOME » NEWS » National-international » RUSSIAN MAN DRINKS ONE AND HALF LITRE VODKA ON YOUTUBE LIVESTREAM DIES AS VIEWERS WATCH IN HORROR STG LG

ಯೂಟ್ಯೂಬ್ ಲೈವ್​ ಸ್ಟ್ರೀಮಿಂಗ್​​​ ಮಾಡುತ್ತಲೇ 1.5 ಲೀಟರ್ ವೋಡ್ಕಾ ಕುಡಿದು ಸಾವನ್ನಪ್ಪಿದ ಅಜ್ಜ..!

ಅಜ್ಜ 1.5 ಲೀಟರ್ ವೋಡ್ಕಾ ಸೇವಿಸಿದ ನಂತರ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ಬಳಿಕವೂ ಕೆಲ ಕಾಲ ಮೃತದೇಹವು ಸಹ ಲೈವ್​ ಸ್ಟ್ರೀಮ್​​​ ಆಗಿದೆ. ವೀಕ್ಷಕರು ಆತ ಮೃತಪಡುವುದನ್ನು ನೇರ ಪ್ರಸಾರದಲ್ಲೇ ವೀಕ್ಷಿಸಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.

news18-kannada
Updated:February 6, 2021, 1:57 PM IST
ಯೂಟ್ಯೂಬ್ ಲೈವ್​ ಸ್ಟ್ರೀಮಿಂಗ್​​​ ಮಾಡುತ್ತಲೇ 1.5 ಲೀಟರ್ ವೋಡ್ಕಾ ಕುಡಿದು ಸಾವನ್ನಪ್ಪಿದ ಅಜ್ಜ..!
ಪ್ರಾತಿನಿಧಿಕ ಚಿತ್ರ
  • Share this:
ಕೆಲವರು ಚಾಲೆಂಜ್ ತೆಗೆದುಕೊಂಡರೆ ಆ ಚಾಲೆಂಜ್ ಅನ್ನು ಮುಗಿಸುವವರೆಗೆ ಪ್ರಯತ್ನಪಡುವುದನ್ನು ಬಿಡುವುದೇ ಇಲ್ಲ. ಮದ್ಯಪಾನ ಕುಡಿಯುವ ವಿಷಯದಲ್ಲೂ ಅಷ್ಟೇ. ನಶೆ ಹೆಚ್ಚಾದರೂ, ಮತ್ತಷ್ಟು ಬೇಕು, ಮತ್ತಷ್ಟು ಬೇಕು ಎನ್ನುತ್ತಾರೆ. ಇದಕ್ಕೆ ಯಾವುದೇ ವಯಸ್ಸಿನ ಇತಿ ಮಿತಿಯಿಲ್ಲ. ಇದೇ ರೀತಿ, 60 ವರ್ಷದ ವ್ಯಕ್ತಿಯೊಬ್ಬರು ಲೀಟರ್​​ಗಟ್ಟಲೇ ವೋಡ್ಕಾ ಕುಡಿಯುವುದಾಗಿ ಚಾಲೆಂಜ್ ಮಾಡಿ ಕುಡಿಯುತ್ತಲೇ ಮೃತಪಟ್ಟಿದ್ದಾರೆ. ಇಷ್ಟೆಲ್ಲ ನಡೆಯುತ್ತಿರುವಾಗ ಅವರು ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರು.

60 ವರ್ಷದ ರಷ್ಯಾದ ವ್ಯಕ್ತಿಯೊಬ್ಬರು ಯೂಟ್ಯೂಬ್​ನಲ್ಲಿ ಲೈವ್​ ಸ್ಟ್ರೀಮ್​​ ಮಾಡುತ್ತಿದ್ದಾಗ ಲೀಟರ್​​ಗಟ್ಟಲೇ ವೋಡ್ಕಾ ಕುಡಿಯುವ ಸವಾಲನ್ನು ಕೈಗೆತ್ತಿಕೊಂಡರು. ಹೀಗೆ ನೋಡನೋಡುತ್ತಲೇ 1.5 ಲೀಟರ್ ವೋಡ್ಕಾ ಕುಡಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ. ಈ ವೇಳೆಯಲ್ಲಿ ವಿಡಿಯೋ ಲೈವ್ ಪ್ಲೇ ಆಗುತ್ತಲೇ ಇತ್ತು. ಈ ಲೈವ್ ವಿಡಿಯೋ ನೋಡುತ್ತಿದ್ದ ವೀಕ್ಷಕರು ಗಾಬರಿಯಿಂದಲೇ ವಿಡಿಯೋ ನೋಡಿದ್ದಾರೆ.

ಮತ್ತೊಂದು ಶಾಕಿಂಗ್ ಸಂಗತಿ ಅಂದರೆ, ‘ಅಜ್ಜ’ ಎಂದು ಕರೆಯಲ್ಪಡುವ ಈ ರಷ್ಯಾದ ವ್ಯಕ್ತಿಗೆ ಈ ಚಾಲೆಂಜ್​​ಗಾಗಿ ಯೂಟ್ಯೂಬರ್ ಹಣ ನೀಡಿದೆ ಎಂದು ದಿ ಇಂಡಿಪೆಂಡೆಂಟ್ ಮಾಧ್ಯಮ ವರದಿ ಮಾಡಿದೆ. ‘thrash streams’ or ‘trash streams’ ಎಂಬ ಹ್ಯಾಶ್​​ ಟ್ಯಾಗ್​​ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದು, ಈ ಸವಾಲು ಸಹ ಅದರ ಭಾಗವಾಗಿದೆ. ಬಳಕೆದಾರರು ಹಣದ ವಿನಿಮಯದಲ್ಲಿ ಅವಮಾನಕರ ಕೃತ್ಯಗಳನ್ನು ಅಥವಾ ಸಾಹಸಗಳನ್ನು ಮಾಡಲು ಸವಾಲು ಹಾಕುತ್ತಾರೆ ಮತ್ತು ಹೆಚ್ಚಿನ ಪ್ರೇಕ್ಷಕರು ಈ ಲೈವ್ ವಿಡಿಯೋಗಳನ್ನು ವೀಕ್ಷಿಸುತ್ತಾರೆ.

ನನಗೆ 5 ಕೋಟಿ ರೂ. ಕೊಟ್ಟರೆ, ಮೋದಿಯನ್ನು ಕೊಲ್ಲುತ್ತೇನೆ ಎಂದಿದ್ದ ವ್ಯಕ್ತಿಯ ಬಂಧನ

ಇನ್ನು, ಮೃತಪಟ್ಟ ರಷ್ಯಾದ ವ್ಯಕ್ತಿಯನ್ನು 60 ವರ್ಷದ ಯೂರಿ ದುಶೆಚ್ಕಿನ್ ಎಂದು ಗುರುತಿಸಿರುವ ಸ್ಥಳೀಯ ಮಾಧ್ಯಮ ವರದಿಗಳನ್ನು ಇಂಡಿಪೆಂಡೆಂಟ್ ಉಲ್ಲೇಖಿಸಿದೆ. ಹಣದ ವಿನಿಮಯಕ್ಕಾಗಿ ಯೂಟ್ಯೂಬ್ ಲೈವ್ ಹೋಗುತ್ತಿರುವಾಗಲೇ ಆಲ್ಕೋಹಾಲ್ ಅಥವಾ ಬಿಸಿ ಸಾಸ್ ಅನ್ನು ಸೇವಿಸುವಂತೆ ಯೂಟ್ಯೂಬರ್​​ಗೆ ಸವಾಲು ಹಾಕಿತು.

ಅಜ್ಜ 1.5 ಲೀಟರ್ ವೋಡ್ಕಾ ಸೇವಿಸಿದ ನಂತರ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ಬಳಿಕವೂ ಕೆಲ ಕಾಲ ಮೃತದೇಹವು ಸಹ ಲೈವ್​ ಸ್ಟ್ರೀಮ್​​​ ಆಗಿದೆ. ವೀಕ್ಷಕರು ಆತ ಮೃತಪಡುವುದನ್ನು ನೇರ ಪ್ರಸಾರದಲ್ಲೇ ವೀಕ್ಷಿಸಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ. ಅಲ್ಲದೆ, ಅವರಿಗೆ ಈ ಸವಾಲು ತೆಗೆದುಕೊಳ್ಳುವಂತೆ ಹೆದರಿಸಲಾಗಿದ್ದು, ಹಲ್ಲೆ ಮಾಡಲಾಗಿದೆ ಎಂದು ರಷ್ಯಾದ ಸೆನೆಟರ್ ಆರೋಪಿಸಿದ್ದಾರೆ.

ಕಳೆದ ವಾರ ಸ್ಮೋಲೆನ್ಸ್ಕ್ ನಗರದಲ್ಲಿ ನಡೆದ ಘಟನೆಯ ಬಗ್ಗೆ ರಷ್ಯಾ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಮಧ್ಯೆ, ರಷ್ಯಾದ ಸೆನೆಟರ್ ಅಲೆಕ್ಸಿ ಪುಷ್ಕೋವ್ ಸಾಮಾಜಿಕ ಮಾಧ್ಯಮದಲ್ಲಿ ಹಿಂಸಾಚಾರವನ್ನು ಉತ್ತೇಜಿಸುವ ಇಂತಹ ಟ್ರ್ಯಾಶ್ ಸ್ಟ್ರೀಮ್ಸ್ (‘trash streams’) ಅನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
Youtube Video

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಸ್ಮೋಲೆನ್ಸ್ಕ್ ನಲ್ಲಿ ಮನೆಯೇ ಇಲ್ಲದ ವ್ಯಕ್ತಿಯೊಬ್ಬರು ಟ್ರ್ಯಾಶ್ ಸ್ಟ್ರೀಮ್ಸ್ ಮಾಡುತ್ತಾ ಮೃತಪಟ್ಟಿದ್ದಾರೆ. ಅವರಿಗೆ ಬೆದರಿಸಲಾಗಿದೆ, ಥಳಿಸಲಾಗಿದೆ ಮತ್ತು ಇಂಟರ್ನೆಟ್ ಕಲ್ಮಶವು ಈ ಚಮತ್ಕಾರಗಳಿಗಾಗಿ ಬ್ಲಾಗರ್​​ಗೆ ಹಣವನ್ನು ಪಾವತಿಸಿದೆ" ಎಂದು ಆರೋಪಿಸಿದ್ದಾರೆ.
Published by: Latha CG
First published: February 6, 2021, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories