Russia: ಯುದ್ಧ ಸೇರಲು ಪುಟಿನ್ ಕರೆ; ದೇಶ ಬಿಡಲು ಐಡಿಯಾಕ್ಕಾಗಿ ರಷ್ಯನ್ನರಿಂದ ಗೂಗಲ್ ಮೊರೆ!

ಗೂಗಲ್ ಹುಡುಕಾಟದಲ್ಲಿಯೇ ಜನರ ಮನಸ್ಥಿತಿ ಅರಿವಾಗಿದೆ.  ರಷ್ಯಾದ ಅಧ್ಯಕ್ಷರ ಮೇಲಿನ ಅವರ ಅಸಮಾಧಾನ ಬಹಿರಂಗಗೊಂಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

  • Share this:
ಮಾಸ್ಕೋ: ರಷ್ಯಾದಲ್ಲಿನ ಗೂಗಲ್ ಸರ್ಚ್ ಟ್ರೆಂಡ್‌ಗಳು (Google Search Trends) ದೇಶವನ್ನು ತೊರೆಯುವುದು ಹೇಗೆ ಹಾಗೂ ಮನೆಯಲ್ಲಿಯೇ ತೋಳು ಮುರಿದುಕೊಳ್ಳುವುದು ಹೇಗೆ ಮೊದಲಾದ ಹುಡುಕಾಟ ಫಲಿತಾಂಶಗಳನ್ನು ತೋರಿಸಿವೆ. ರಷ್ಯನ್ನರು ಗೂಗಲ್‌ನಲ್ಲಿ (Russians Google Search) ಇಂತಹ ವಿಲಕ್ಷಣ ಹುಡುಕಾಟಗಳನ್ನು ನಡೆಸಿದ್ದು ಏಕೆ ಎಂಬುದನ್ನು ತಿಳಿದುಕೊಳ್ಳೋಣ. ಈ ಮೊದಲೇ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ (Russia President Vladimir Putin) ತಮ್ಮ ಭಾಷಣದಲ್ಲಿ ಸಮರ ಕಾನೂನು ಹಾಗೂ ಸಜ್ಜುಗೊಳಿಸುವಿಕೆ ಬಗ್ಗೆ ಪ್ರಸ್ತಾಪ ಮಾಡುವ ನಿರೀಕ್ಷೆ ಇತ್ತು. ಅದರಂತೆ ಅವರು ತಮ್ಮ ಭಾಷಣದಲ್ಲಿ ಸಜ್ಜುಗೊಳಿಸುವಿಕೆಯ ಪ್ರಸ್ತಾಪವನ್ನು ಮಾಡಿದರು.

ಪುಟಿನ್ ಅವರ ಭಾಷಣದ ಕೆಲವೇ ಗಂಟೆಗಳಲ್ಲಿ ಕೆಲವು ತಿಂಗಳುಗಳವರೆಗೆ ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳದಂತೆ ಯಶಸ್ವಿಯಾದ ರಷ್ಯಾದಾದ್ಯಂತ ಪುರುಷರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಯಿತು. ಇದರಿಂದ ಗೊಂದಲಕ್ಕೊಳಗಾದ ರಷ್ಯನ್ನರು ಗೂಗಲ್‌ನಲ್ಲಿ ಯುದ್ಧದಿಂದ ತಪ್ಪಿಸಿಕೊಳ್ಳುವುದಕ್ಕೆ ಗೂಗಲ್ ಬೆನ್ನತ್ತಿದ್ದರು.

ಪರಮಾಣು ಯುದ್ಧಕ್ಕೆ ತಾನು ಸಿದ್ಧ ಎಂದ ರಷ್ಯಾ
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಮಿಲಿಟರಿ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ಪ್ರಯತ್ನದಲ್ಲಿ ವ್ಲಾಡಿಮಿರ್ ಎರಡನೇ ಮಹಾಯುದ್ಧದ ನಂತರ ದೇಶದ ಮೊದಲ ಸಜ್ಜುಗೊಳಿಸುವಿಕೆಗೆ ಕರೆ ನೀಡಿದರು. ಇದರ ಮೂಲಕ ರಷ್ಯಾವನ್ನು ರಕ್ಷಿಸಿಕೊಳ್ಳಲು ಪರಮಾಣು ಯುದ್ಧಕ್ಕೆ ತಾನು ಸಿದ್ಧ ಎಂದು ಪಾಶ್ಚಿಮಾತ್ಯ ದೇಶಗಳಿಗೆ ಕರೆ ನೀಡಿದರು.

ಪರಮಾಣು ಸಂಘರ್ಷದ ಬೆದರಿಕೆ
ಫೆಬ್ರವರಿ 24 ರಿಂದ ಆರಂಭವಾಗಿರುವ ಯುದ್ಧದಲ್ಲಿ ಉಕ್ರೇನಿಯನ್ ಸೇನೆಯು ರಷ್ಯಾ ಆಕ್ರಮಿಸಿದ್ದ ಪ್ರದೇಶಗಳನ್ನು ಪುನಃ ವಶಪಡಿಸಿಕೊಳ್ಳುವ ಮೂಲಕ ಗೆಲುವಿನತ್ತ ಕೊಂಚ ಕೊಂಚ ಹೆಜ್ಜೆ ಹಾಕುತ್ತಿದ್ದು ಈ ಸಮಯದಲ್ಲಿ ಪುಟಿನ್ ಪರಮಾಣು ಸಂಘರ್ಷದ ಬೆದರಿಕೆಯನ್ನು ಹಾಕಿದ್ದಾರೆ. 3,00,000 ಮೀಸಲು ಸೈನಿಕರಿಗೆ ಕರೆ ನೀಡಿದ್ದಾರೆ.

ಮೀಸಲು ಸೈನಿಕರನ್ನು ನಿರ್ದಿಷ್ಟ ಮಿಲಿಟರಿ ಘಟಕಗಳಲ್ಲಿ ಮಿಲಿಟರಿ ಸ್ಥಾನಕ್ಕೆ ನೇಮಿಸಲಾಗುತ್ತದೆ.  ಇವರು ಮಿಲಿಟರಿ ಘಟಕಗಳ ಎಲ್ಲಾ ಕಾರ್ಯಾಚರಣೆ, ಸಜ್ಜುಗೊಳಿಸುವಿಕೆ ಮತ್ತು ಯುದ್ಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪುಟಿನ್ ಮೀಸಲು ಸೈನಿಕರಿಗೆ ಕರೆ ನೀಡುತ್ತಿದ್ದಂತೆಯೇ ಗೂಗಲ್ ಸರ್ಚ್ ತಡಕಾಡಿದರು

ರಷ್ಯಾದಾದ್ಯಂತ ಪುರುಷರು, ಹೆಚ್ಚಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಕಿರಿಯ ಮಿಲಿಟರಿ ಶ್ರೇಣಿಯನ್ನು ಹೊಂದಿರುವ 35 ವರ್ಷದೊಳಗಿನ ಮೀಸಲು ಸೈನಿಕರಿಗೆ ಅವರ ಕಚೇರಿಗಳಲ್ಲಿ ಅಥವಾ ಅವರ ಮನೆಗಳಲ್ಲಿ ಲಿಖಿತ ಸೂಚನೆಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: India China Relationship: ಭಾರತಕ್ಕೆ ಇನ್ನಿಲ್ಲ ಚೀನಾದ ಹಂಗು! ಪ್ರಧಾನಿ ಮೋದಿ ಮಾಸ್ಟರ್​ಪ್ಲಾನ್

ಕೆಲವು ಸಂದರ್ಭಗಳಲ್ಲಿ ಅವರ ಗುರುತಿನ ದಾಖಲೆಗಳನ್ನು ಬೀದಿಗಳಲ್ಲಿಯೇ ಪರಿಶೀಲಿಸಲಾಯಿತು. ಆರೋಗ್ಯ ತಪಾಸಣೆಗೆ ಹಾಜರಾಗಲು ಹೇಳಲಾಯಿತು. ಇನ್ನು ಕೆಲವರು ದೂರವಾಣಿ ಮೂಲಕ ಆದೇಶಗಳನ್ನು ಪಡೆದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈಶಾನ್ಯ ಉಕ್ರೇನ್ ಭಾಗದಲ್ಲಿ ರಷ್ಯಾ ಪಡೆಗಳು ತೀವ್ರ ಸೋಲುಂಡ ನಂತರ ಅಧ್ಯಕ್ಷರ ಭಾಷಣವು ನಾಗರಿಕರಲ್ಲಿ ಅಸಮಾಧಾನದ ಭಾವನೆಯನ್ನು ಹುಟ್ಟುಹಾಕಿದೆ. ಏಕೆಂದರೆ ಗೂಗಲ್ ಹುಡುಕಾಟದಲ್ಲಿಯೇ ಜನರ ಮನಸ್ಥಿತಿ ಅರಿವಾಗಿದೆ.  ರಷ್ಯಾದ ಅಧ್ಯಕ್ಷರ ಮೇಲಿನ ಅವರ ಅಸಮಾಧಾನ ಬಹಿರಂಗಗೊಂಡಿದೆ.

ಇದನ್ನೂ ಓದಿ: Explained: ಏನಿದು PFI ಸಂಘಟನೆ? ಇದರ ಹಿಂದೆ ಇರೋದಾದರೂ ಯಾರು?

ಮೀಸಲು ಪಡೆಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ದೊರೆತ ಕೂಡಲೇ ಅವರ ಸಂಬಂಧಿಕರು ಆತಂಕಕ್ಕೊಳಗಾಗಿದ್ದು ದೇಶದಿಂದ ಪಲಾಯನ ಮಾಡುವುದು ಹಾಗೂ ತಮ್ಮ ಪ್ರೀತಿಪಾತ್ರರನ್ನು ಯುದ್ಧಕ್ಕೆ ಕಳುಹಿಸದಂತೆ ತಡೆಯಲು ಮಾರ್ಗಗಳನ್ನು ಹುಡುಕಲಾರಂಭಿಸಿದರು.

ದೇಶ ತೊರೆಯುವುದು ಸೇರಿದಂತೆ ತಮಗೆ ತಾವೇ ಹಾನಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ. ಇದರಿಂದ ಯುದ್ಧದಲ್ಲಿ ಪಾಲ್ಗೊಳ್ಳದಿರಬಹುದು ಎಂಬುದು ಇವರ ಯೋಜನೆಯಾಗಿದೆ

ನೆರೆಯ ದೇಶಗಳಿಗೆ ಪಲಾಯನ
ಮೀಸಲು ಪಡೆಗಳನ್ನು ಸೇನೆಗೆ ಸೇರಿಸುವ ಸೂಚನೆಯ ಹಿನ್ನೆಲೆಯಲ್ಲಿ ಹೆಚ್ಚಿನವರು ಅರ್ಮೇನಿಯಾ ಮತ್ತು ಜಾರ್ಜಿಯಾಕ್ಕೆ ಪಲಾಯನಗೈಯ್ಯುತ್ತಿದ್ದು ಟರ್ಕಿ, ದುಬೈ ಅಥವಾ ಟೆಲ್ ಅವೀವ್‌ಗೆ ಅಂತಿಮ ವಿಮಾನಗಳಲ್ಲಿ ಪ್ರಯಾಣಿಸುವ ಜನರ ಸಾಮೂಹಿಕ ನಿರ್ಗಮನಕ್ಕೆ ಕಾರಣವಾಗಿದೆ
Published by:ಗುರುಗಣೇಶ ಡಬ್ಗುಳಿ
First published: