ಪ್ರೀತಿ ಪ್ರೇಮಕ್ಕೆ ಯಾವುದೇ ಜಾತಿ ಧರ್ಮಗಳ ಅಡ್ಡಿಯಿಲ್ಲ. ದೇಶ ಭಾಷೆಗಳ ಗಡಿಯಿಲ್ಲ ಎಂಬ ಮಾತಿದೆ. ಈ ಮಾತು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಇದೀಗ ಮಧ್ಯಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಅತ್ತ ರಷ್ಯಾ ಉಕ್ರೇನ್ ಯುದ್ಧ ಘನಘೋರವಾಗಿ ನಡೆಯುತ್ತಿದ್ದಾಗಲೇ ರಷ್ಯಾದ ಹುಡುಗಿಯೊಬ್ಬಳು ಭಾರತದ ಸೊಸೆಯಾಗಿದ್ದಾರೆ! ಮಧ್ಯಪ್ರದೇಶದ ಇಂದೋರ್ನ ಓರ್ವ ಬಾಣಸಿಗನನ್ನು ಮದುವೆಯಾಗುವ ಮೂಲಕ ಪ್ರೇಮಕ್ಕೆ ದೇಶ ಭಾಷೆ- ಜಾತಿ ಧರ್ಮಗಳ ಗಡಿಯಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಅಂದಹಾಗೆ ಇದು ರಷ್ಯಾದ ಲೀನಾ (Leena Barcolsev) ಮತ್ತು ಇಂದೋರಿನ ಯುವ ಬಾಣಸಿಗ ರಿಷಿ ವರ್ಮಾ (Rishi Verma) ಅವರ ಅದ್ಭುತ ಪ್ರೇಮಕಥೆ!
ಮಧ್ಯಪ್ರದೇಶದ ಇಂದೋರ್ನ ಸಪ್ತಶೃಂಗಿ ನಗರದಲ್ಲಿ ವಾಸಿಸುತ್ತಿದ್ದ ರಿಷಿ ವರ್ಮಾ ಅವರು ಹೈದರಾಬಾದ್ನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. 2019 ರಲ್ಲಿಅವರು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಅವರು ಪ್ರವಾಸಕ್ಕೆ ತೆರಳಿದ್ದರು. ಈ ಸಮಯದಲ್ಲಿ, ಅವರು ಲೆನಾ ಬಾರ್ಕೋಲ್ಟ್ಸೆವ್ ಅವರನ್ನು ಭೇಟಿಯಾದರು. ಫೋಟೋ ಕ್ಲಿಕ್ಕಿಸುವಾಗಲೇ ಇಬ್ಬರ ನಡುವೆ ಮಾತುಕತೆ ಶುರುವಾಯಿತು. ಫೋಟೋ ಕ್ಲಿಕ್ಕಿಸಲು ರಿಷಿ ಲೀನಾಳನ್ನು ಕೇಳಿದರು. ಇದೇ ನೆಪದಲ್ಲಿ ಇಬ್ಬರೂ ಸ್ನೇಹಿತರಾದರು.
ಪ್ರಪೋಸ್ ಮಾಡಿದ್ದು ಹೀಗೆ!
ನಂತರ ಇಬ್ಬರೂ ಫೋನಲ್ಲಿ ಮಾತನಾಡಲು ಪ್ರಾರಂಭಿಸಿದರು. ಇಬ್ಬರೂ ಸ್ನೇಹಿತರಾದರು. ಮೊದಲ ಭೇಟಿಯು ಪ್ರೀತಿಗೆ ತಿರುಗಿತು. ಕ್ರಮೇಣ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಪ್ರೇಮವೂ ಚಿಗುರಿತು. ವಿಡಿಯೋ ಕಾಲ್ನಲ್ಲಿ ರಿಷಿ ವರ್ಮಾ ಲೀನಾಗೆ ಪ್ರೇಮ ಪ್ರಸ್ತಾಪ ಮಾಡಿದರು! ಲೀನಾಗೂ ಆಗ ರಿಷಿ ಮೇಲೆ ಪ್ರೇಮ ಹುಟ್ಟಿತ್ತು. ತಕ್ಷಣ ಹೂ ಅಂದರು!
ಆದರೆ ಆಗ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು. ಇಬ್ಬರಿಗೂ ಬಹಳ ದಿನ ಭೇಟಿಯಾಗಲಿಲ್ಲ. ಇದೀಗ ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಲೀನಾ ಡಿಸೆಂಬರ್ 2021 ರಲ್ಲಿ ಭಾರತದ ವೀಸಾ ಪಡೆದುಕೊಂಡು ಇಂದೋರ್ ವಿಮಾನ ಹತ್ತಿದರು. ಲೀನಾ ಭಾರತಕ್ಕೆ ಬಂದ ನಂತರವೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಒಮ್ಮೆ ರಷ್ಯಾದಿಂದ ಭಾರತಕ್ಕೆ ಬಂದ ಅವರು ಮತ್ತೆ ರಷ್ಯಾದತ್ತ ಮುಖ ಮಾಡಲೇ ಇಲ್ಲ. ಕೊರೊನಾ ಕಡಿಮೆಯಾಗುತ್ತಿದ್ದಂತೆ ಅಧಿಕೃತವಾಗಿ ಮದುವೆಯಾಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಮತ್ತೆ ಮದುವೆ!
ಜೊತೆಗೆ ತಮ್ಮ ಮದುವೆಯ ಅಧಿಕೃತೆಗಾಗಿ ಕಾಗದ ಪತ್ರಗಳನ್ನು ಮಾಡಿಕೊಂಡರು. ಅಲ್ಲದೇ ಇದೀಗ ಹಿಂದೂ ಸಂಪ್ರದಾಯದ ಪ್ರಕಾರವೂ ಮದುವೆಯಾಗಲೂ ಬಯಸಿರುವ ರಿಷಿ ವರ್ಮಾ ಮತ್ತು ಲೀನಾ ಜೋಡಿ ಡಿಸೆಂಬರ್ ತಿಂಗಳಿನಲ್ಲಿ ಮತ್ತೆ ಮದುವೆಯಾಗಲಿದ್ದೇವೆ ಎನ್ನುತ್ತಾರೆ.
ಅಂದಹಾಗೆ ರಷ್ಯಾ ಮೂಲದ ಲೀನಾಗೆ ಭಾರತೀಯ ಆಹಾರ ಅಂದರೆ ತುಂಬಾ ಇಷ್ಟ. ಅವರು ದೇವಸ್ಥಾನಗಳಿಗೂ ಹೋಗುತ್ತಾರೆ. ಭಾರತೀಯ ಆಹಾರ ಮತ್ತು ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ ಎನ್ನುತ್ತಾರೆ ಲೀನಾ.
ಇದನ್ನೂ ಓದಿ: Travel: ಟಿಕೆಟ್ ಇಲ್ಲದೇ 3 ಸಾವಿರ ಕಿ.ಮೀ. ವಿಮಾನದಲ್ಲಿ ಪ್ರಯಾಣಿಸಿದ ಬಾಲಕ: ಹೇಗೆ ಗೊತ್ತಾ?
ಪ್ರಿಯಕರ ಅಲಿಯಾಲ್ ಈಗ ಪತಿಯಾಗಿರುವ ರಿಷಿ ಲೀನಾಗೆ ಹಲವು ಬಗೆಯ ಭಾರತೀಯ ಖಾದ್ಯಗಳನ್ನು ತಿನ್ನಿಸುತ್ತಾರೆ. ಲೀನಾ ಭಾರತೀಯ ಅಡುಗೆಯನ್ನೂ ಕಲಿತಿದ್ದಾರಂತೆ. ಇಬ್ಬರೂ ಕೂಡ ದೇವಸ್ಥಾನಕ್ಕೆ ಹೋಗುತ್ತೇವೆ ಎಂದು ರಿಷಿ ಸಂತಸದಿಂದ ಹೇಳುತ್ತಾರೆ. ಅಲ್ಲದೇ ಲೀನಾ ಹಿಂದಿಯನ್ನೂ ಸಹ ಕಲಿಯುತ್ತಿದ್ದಾರೆ ಎನ್ನುವಾಗ ರಿಷಿ ವರ್ಮಾ ಮುಖದಲ್ಲಿ ನಗುವೋ ನಗು! ಖುಷಿಯೋ ಖುಷಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ