• Home
  • »
  • News
  • »
  • national-international
  • »
  • Russia Minister Arrest: ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ರಷ್ಯಾ ಮಾಜಿ ಸಚಿವ ಅರೆಸ್ಟ್

Russia Minister Arrest: ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ರಷ್ಯಾ ಮಾಜಿ ಸಚಿವ ಅರೆಸ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾಸ್ಕೋದಲ್ಲಿ ನೆಲೆಸಿರುವ ಸೆಮೆನೋವ್ ಅವರು ಭಾರತಕ್ಕೆ ಬಂದಿದ್ದು, ಇಂಡಿಗೋ ವಿಮಾನದಲ್ಲಿ ದೆಹಲಿಗೆ ತೆರಳಬೇಕಿತ್ತು.

  • Trending Desk
  • 5-MIN READ
  • Last Updated :
  • Dehradun, India
  • Share this:

    ದೆಹಲಿ: ಸೂಕ್ತವಾದ ಯಾವುದೇ ದಾಖಲೆಗಳಿಲ್ಲದೆ ಸ್ಯಾಟ್​ಲೈಟ್‌ ಫೋನ್‌ ಸಾಗಿಸುತ್ತಿದ್ದ ರಷ್ಯಾದ ಮಾಜಿ ಸಚಿವರನ್ನು ಡೆಹ್ರಾಡೂನ್‌ ವಿಮಾನ ನಿಲ್ದಾಣದಲ್ಲಿ (Russia Minister Arrest) ಬಂಧಿಸಲಾಗಿದೆ. 1998 ರಿಂದ 1999ರ ವರೆಗೆ ರಷ್ಯಾದ ಕೃಷಿ ಮತ್ತು ಆಹಾರ ಸಚಿವರಾಗಿದ್ದ ವಿಕ್ಟರ್ ಸೆಮೆನೋವ್ (64) ಅವರನ್ನು (Victor Semenov) ಡೆಹ್ರಾಡೂನ್‌ನ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಸಂದರ್ಭದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ತಡೆ ಹಿಡಿದು ಬಂಧಿಸಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೇ ಉಪಗ್ರಹ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ. ಹೀಗಾಗಿ ಈ ಸಂಬಂಧ ರಷ್ಯಾದ ಮಾಜಿ ಸಚಿವ ವಿಕ್ಟರ್ ಸೆಮೆನೋವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


    “ಅವರ ಬ್ಯಾಗ್‌ ಅನ್ನು ಸ್ಕ್ರೀನಿಂಗ್ ಮಾಡುವಾಗ, ಸಿಐಎಸ್ಎಫ್ ಸಿಬ್ಬಂದಿ ಎಕ್ಸ್-ರೇ ಯಂತ್ರದಲ್ಲಿ ಸ್ಯಾಟ್‌ಲೈಟ್ ಫೋನ್ ತರಹದ ಚಿತ್ರವನ್ನು ‌ಗಮನಿಸಿದರು. ಆದ್ದರಿಂದ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿ ಬ್ಯಾಗ್‌ಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಸೆಮೆನೋವ್ ಅವರ ಬ್ಯಾಗ್‌ನಲ್ಲಿ ಇರಿಡಿಯಮ್ ಸ್ಯಾಟಲೈಟ್ ಫೋನ್ ಇತ್ತು. ಮಾಜಿ ಸಚಿವರು ಈ ಫೋನ್‌ ಅನ್ನು ಸ್ವಿಚ್ ಆಫ್ ಮೋಡ್‌ನಲ್ಲಿ ಇರಿಸಿದ್ದರು”ಎಂದು ಸಿಐಎಸ್‌ಎಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದೆ.


    ದೆಹಲಿಗೆ ತೆರಳುವ ವೇಳೆ ಬಂಧನ
    ಮಾಸ್ಕೋದಲ್ಲಿ ನೆಲೆಸಿರುವ ಸೆಮೆನೋವ್ ಅವರು ಭಾರತಕ್ಕೆ ಬಂದಿದ್ದು, ಇಂಡಿಗೋ ವಿಮಾನದಲ್ಲಿ ದೆಹಲಿಗೆ ತೆರಳಬೇಕಿತ್ತು. ಈ ವೇಳೆ ಅಲ್ಲಿನ ಸಿಬ್ಬಂದಿಗಳು ಭದ್ರತಾ ತಪಾಸಣೆ ನಡೆಸುವ ವೇಳೆ ಸೆಮೆನೋವ್ ಬಳಿ ಸ್ಯಾಟ್​​ಲೈಟ್ ಫೋನ್ ಅನ್ನು ಕಂಡುಕೊಂಡಿದ್ದಾರೆ. ಸ್ಯಾಟಲೈಟ್ ಫೋನ್ ಹೊಂದಿರುವುದರ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಕೇಳಿದರು, ಆದರೆ ಯಾವುದೇ ಸೂಕ್ತ ದಾಖಲೆಗಳು ಮಾಜಿ ಸಚಿವರು ಹೊಂದಿರಲಿಲ್ಲ.  ತುರ್ತು ಸಂದರ್ಭದಲ್ಲಿ ವೈಯಕ್ತಿಕ ಬಳಕೆಗಾಗಿ ತಾವು ಸ್ಯಾಟ್​ಲೈಟ್ ಫೋನ್ ಅನ್ನು ಕೊಂಡೊಯ್ಯುತ್ತಿದ್ದುದಾಗಿ ಸೆಮೆನೋವ್ ಅಧಿಕಾರಿಗಳಿಗೆ ತಿಳಿಸಿದ್ದರು. ಅಲ್ಲದೇ ಭಾರತದಲ್ಲಿ ಸ್ಯಾಟ್​ಲೈಟ್ ಫೋನ್ ಅನ್ನು ಕೊಂಡೊಯ್ಯುವುದು ಕಾನೂನುಬದ್ಧವಾಗಿಲ್ಲ ಎಂದು ತಿಳಿದಿಲ್ಲ ಎಂಬುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾರೆ.


    ಇದನ್ನೂ ಓದಿ: Judiciary: 'ಲಕ್ಷ್ಮಣ ರೇಖೆ' ದಾಟಿದ ಕಿರಣ್ ರಿಜಿಜು: ನ್ಯಾಯಾಂಗದ ಬಗ್ಗೆ ಸಚಿವರ ಹೇಳಿಕೆಗೆ ಸಾಳ್ವೆ ಗರಂ!


    "ವಿಚಾರಣೆಯ ಸಮಯದಲ್ಲಿ, ರಷ್ಯಾದ ಸೆಮೆನೋವ್ ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ. ನಾಲ್ಕು ದಿನಗಳ ಕಾಲ ರುದ್ರಪ್ರಯಾಗದ ಚೋಪ್ಟಾದ ಜನಪ್ರಿಯ ಪ್ರವಾಸಿ ತಾಣದಲ್ಲಿ ತಂಗಿದ್ದರು ಮತ್ತು ಇಂಡಿಗೋ ವಿಮಾನದಲ್ಲಿ ದೆಹಲಿಗೆ ತೆರಳಬೇಕಿತ್ತು ಎಂದು ತಿಳಿಸಿದರು. ಅವರು ರಷ್ಯಾದ ಒಕ್ಕೂಟದಲ್ಲಿ ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.


    ಬೋರ್ಡಿಂಗ್ ಪಾಸ್ ರದ್ದು
    ಅಧಿಕಾರಿಗಳ ಪ್ರಕಾರ, ಭಾರತದಲ್ಲಿ ಬಿಎಸ್‌ಎನ್‌ಎಲ್ ಒದಗಿಸಿದ Inmarsat ಸ್ಯಾಟ್​ಲೈಟ್ ಹ್ಯಾಂಡ್‌ಸೆಟ್ (ISAT ಫೋನ್) ಹೊರತುಪಡಿಸಿ ಸ್ಯಾಟ್​ಲೈಟ್ ಫೋನ್‌ಗಳ ಬಳಕೆ ಕಾನೂನುಬಾಹಿರವಾಗಿದೆ. ಹೀಗಾಗಿ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ವಿಕ್ಟರ್ ಸೆಮೆನೋವ್ ಅವರ ಬೋರ್ಡಿಂಗ್ ಪಾಸ್ ಅನ್ನು ರದ್ದುಗೊಳಿಸಲಾಯಿತು ಮತ್ತು ನಂತರ ಅವರನ್ನು ಡೆಹ್ರಾಡೂನ್ ಪೊಲೀಸರಿಗೆ ಹಸ್ತಾಂತರಿಸಲಾಯಿತು.


    ₹1,000 ದಂಡ
    ಸ್ಯಾಟ್​ಲೈಟ್ ಫೋನ್ ತೆಗೆದುಕೊಂಡು ಹೋಗುವಾಗ ಅವರ ಬಳಿ ಅದಕ್ಕೆ ಸಂಬಂಧಿಸಿದ ಯಾವುದೇ ಅಗತ್ಯ ದಾಖಲೆಗಳು ಇರಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ ತುರ್ತು ಸಂದರ್ಭದಲ್ಲಿ ವೈಯಕ್ತಿಕ ಬಳಕೆಗಾಗಿ ಸ್ಯಾಟ್​ಲೈಟ್ ಫೋನ್ ಕೊಂಡೊಯ್ಯುತ್ತಿದ್ದರು ಎಂದು ರಷ್ಯಾದ ಮಾಜಿ ಸಚಿವರು ಹೇಳಿದ್ದಾರೆ.


    ಇದನ್ನೂ ಓದಿ: Crime News: ಧರ್ಮ ಮುಚ್ಚಿಟ್ಟು ಮದುವೆಯಾದ, ಮತಾಂತರವಾಗಲಿಲ್ಲವೆಂದು ಪತ್ನಿಗೆ ಥಳಿಸಿ ಹೊರಗಟ್ಟಿದ!


    ಸೆಮೆನೋವ್ ವಿರುದ್ಧ ಭಾರತೀಯ ಟೆಲಿಗ್ರಾಫ್ ಆಕ್ಟ್, 1885 ಮತ್ತು ಇಂಡಿಯನ್ ವೈರ್‌ಲೆಸ್ ಟೆಲಿಗ್ರಾಫಿ ಆಕ್ಟ್, 1933 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಡೆಹ್ರಾಡೂನ್‌ನ ದೋಯಿವಾಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ₹1,000 ದಂಡ ಪಾವತಿಸಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: