Russia-Ukraine War: ಸ್ವಾತಂತ್ರ್ಯ ದಿನದಂದು ರಷ್ಯಾದ ಕ್ಷಿಪಣಿ ದಾಳಿ, 22 ಮಂದಿ ಬಲಿ: ಗುಡುಗಿದ ಝೆಲೆನ್ಸ್ಕಿ

ಬುಧವಾರ, ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಆರು ತಿಂಗಳು ಪೂರ್ಣಗೊಂಡಿವೆ. ಹೀಗಿರುವಾಗ ರಷ್ಯಾದ ಅಧಿಕಾರಿಗಳು ತೋರ್ಪಡಿಕೆಗಾಗಿ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ತಯಾರಿ ನಡೆಸುತ್ತಿದೆ ಎಂದು ಯುಎಸ್ ಎಚ್ಚರಿಸಿದೆ. ಈ ಮೂಲಕ ರಷ್ಯಾ ತನ್ನ ನಿಯಂತ್ರಣವನ್ನು ಔಪಚಾರಿಕಗೊಳಿಸಲು ಪ್ರಯತ್ನಿಸುತ್ತದೆ ಎಂದು ತಿಳಿಸಿದೆ.

ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

  • Share this:
ಕೈವ್(ಆ.25): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukraine President Volodymyr Zelenskyy) ಬುಧವಾರ ದೇಶದ ಸ್ವಾತಂತ್ರ್ಯ ದಿನದಂದು (Independence Day) ರೈಲು ನಿಲ್ದಾಣದ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ, ಆದರೆ ಉಕ್ರೇನ್ ಕೊನೆಯವರೆಗೂ ಹೋರಾಡುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ "ನಿಮ್ಮಲ್ಲಿ ಎಷ್ಟು ಸೈನ್ಯವಿದ್ದರೂ ಎಂದಿಗೂ ನಾವು ಹೆದರುವುದಿಲ್ಲ, ನಾವು ನಮ್ಮ ಭೂಮಿಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಅದಕ್ಕಾಗಿ ಕೊನೆಯವರೆಗೂ ಹೋರಾಟ ಮಾಡುತ್ತೇವೆ ಎಂದು ಝೆಲೆನ್ಸ್ಕಿ ಗುಡುಗಿದ್ದಾರೆ. ಇದೇ ವೇಳೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ (Russia) ಜನಾಭಿಪ್ರಾಯ ಸಂಗ್ರಹಿಸಲು ತಯಾರಿ ನಡೆಸುತ್ತಿದೆ ಎಂದು ಯುಎಸ್ ಎಚ್ಚರಿಸಿದೆ. ಈ ಮೂಲಕ ರಷ್ಯಾ ತನ್ನ ನಿಯಂತ್ರಣವನ್ನು ಔಪಚಾರಿಕಗೊಳಿಸಲು ಪ್ರಯತ್ನಿಸುತ್ತದೆ ಎಂದು ಆರೋಪಿಸಿದೆ.

ಸೆಂಟ್ರಲ್ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದ ಚಾಪ್ಲಿನೋ ನಿಲ್ದಾಣದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ. ಆದರೆ ಈ ಹಿಂದೆ ಈ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದರು. ಇನ್ನು 'ಚಾಪ್ಲಿನೋ ಇಂದು ನಮ್ಮನ್ನು ನೋವಾಗಿ ಕಾಡುತ್ತಿದೆ ಎಂದಿರುವ ಉಕ್ರೇನ್ ಅಧ್ಯಕ್ಷ ಕಾರಿನಲ್ಲಿ ಸುಟ್ಟು ಕರಕಲಾದ ಐವರು ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದಾರೆ. ಒಂದು ಮಗು ಸಾವನ್ನಪ್ಪಿದ್ದು, ಅವನಿಗೆ ಕೇವಲ 11 ವರ್ಷ. ರಷ್ಯಾದ ರಾಕೆಟ್ ಅವರ ಮನೆಯನ್ನು ನಾಶಪಡಿಸಿದೆ ಎಂದು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Russia-Ukraine War: ಉಭಯ ರಾಷ್ಟ್ರಗಳ ಸಂಘರ್ಷಕ್ಕೆ ಕಾರಣವಾಗಿದ್ದು ಈ 10 ಅಂಶ!

ಗಮನಾರ್ಹವಾಗಿ, 24 ಆಗಸ್ಟ್ 1991 ರಂದು, ಉಕ್ರೇನ್ ಸೋವಿಯತ್ ಒಕ್ಕೂಟದಿಂದ ತನ್ನ ಸ್ವಾತಂತ್ರ್ಯವನ್ನು ಗಳಿಸಿತು. ಉಕ್ರೇನ್‌ನ ಸ್ವಾತಂತ್ರ್ಯ ದಿನದಂದು ರಷ್ಯಾ ನಿರ್ದಿಷ್ಟವಾಗಿ ಕ್ರೂರ ದಾಳಿಯನ್ನು ನಡೆಸಬಹುದು ಎಂದು ಝೆಲೆನ್ಸ್ಕಿ ಈ ಹಿಂದೆ ಎಚ್ಚರಿಸಿದ್ದರು. ಇದಕ್ಕೆ ಸಿದ್ಧರಾಗುವಂತೆ ಉಕ್ರೇನ್‌ನ ಜನರನ್ನು ಕೇಳಿಕೊಂಡಿದ್ದರು.

Russian Soldiers Kept Ukrainian Women In Basement For 25 Days 9 Are Now Pregnant
ರಷ್ಯಾ ದಾಳಿಗೆ ನಾಶವಾದ ಉಕ್ರೇನ್ ನಗರಗಳು


ಅತ್ತ ಯುಎಸ್ ರಾಷ್ಟ್ರೀಯ ಭದ್ರತಾ ಸಂಯೋಜಕ ಜಾನ್ ಕಿರ್ಬಿ, ರಷ್ಯಾದ ಅಧಿಕಾರಿಗಳು ನಕಲಿ ಜನಾಭಿಪ್ರಾಯ ಸಂಗ್ರಹಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತಾದ ಪ್ರಕಟಣೆಯನ್ನು ಈ ವಾರದ ಮೊದಲು ರಷ್ಯಾ ನೀಡಬಹುದು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine War effect: ಅಲ್ಲಿ 18 ಲಕ್ಷ ಕೋಟಿ, ಇಲ್ಲಿ 14 ಲಕ್ಷ ಕೋಟಿ; ಕರಗುತ್ತಿದೆ ಹೂಡಿಕೆದಾರರ ಸಂಪತ್ತು

ಏತನ್ಮಧ್ಯೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಉಕ್ರೇನ್‌ನ ರಾಜಧಾನಿ ಕೈವ್‌ಗೆ ದಿಢೀರ್ ಭೇಟಿ ನೀಡಿದರು. ರಷ್ಯಾದ ದಾಳಿಗೆ ಆರು ತಿಂಗಳ ನಿರಂತರ ಪ್ರತಿರೋಧಕ್ಕಾಗಿ ಉಕ್ರೇನ್ ಅನ್ನು ಜಾನ್ಸನ್ ಶ್ಲಾಘಿಸಿದರು. ಉಕ್ರೇನ್ ಶಾಂತಿ, ಸ್ವಾತಂತ್ರ್ಯದಿಂದ ಬದುಕುವ ಹಕ್ಕನ್ನು ರಕ್ಷಿಸುತ್ತಿದೆ ಮತ್ತು ಆದ್ದರಿಂದ ಉಕ್ರೇನ್ ಗೆಲ್ಲುತ್ತದೆ ಎಂದು ಅವರು ಹೇಳಿದರು.

2,50,000 ಭಾರತೀಯರ ಉದ್ಯೋಗ ಕಸಿದ ರಷ್ಯಾ ಉಕ್ರೇನ್ ಯುದ್ಧ

ಅಮೆರಿಕಾ ಮತ್ತು ಯುರೋಪ್​ಗಳಲ್ಲಿ ಭಾರತದಲ್ಲಿ ಪಾಲಿಶ್ ಮಾಡಿದ ರಷ್ಯಾದ ವಜ್ರಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರಿಂದ ಕಂಪನಿಗಳು ನಗದು ಹರಿವು ಮತ್ತು ಪೂರೈಕೆಯಲ್ಲಿ ಕಡಿತ ಉಂಟಾಗಿದೆ ಎಂದು ಗುಜರಾತ್ ಡೈಮಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಜಿಲೇರಿಯಾ ಬೇಸರ ವ್ಯಕ್ತಪಡಿಸಿದ್ದಾರೆ. ರಷ್ಯಾ ಮೇಲೆ ಹೇರಲಾದ ನಿರ್ಬಂಧಗಳು ಭಾರತದ ವಜ್ರ ರಫ್ತುದಾರರನ್ನು ರಷ್ಯಾದಿಂದ ಒರಟಾದ ಅಥವಾ ಪಾಲಿಶ್ ಮಾಡದ ಮೂಲ ಸ್ವರೂಪದ ವಜ್ರಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧ ಹೇರಿದೆ.
Published by:Precilla Olivia Dias
First published: