Mass Grave: 440 ಮೃತದೇಹ ಒಂದೇ ಕಡೆ ಪತ್ತೆ! ರಷ್ಯಾದ ಕ್ರೌರ್ಯಕ್ಕೆ ಇದೇ ಸಾಕ್ಷಿ ಎಂದ ಉಕ್ರೇನ್

ಇಂತಹುದೇ ಹಲವು ಮೃತದೇಹಗಳ ರಾಶಿ ರಷ್ಯಾದಿಂದ ಮರು ವಶಪಡಿಸಿಕೊಂಡ ನಗರಗಳಲ್ಲಿ ಪತ್ತೆಯಾಗಿದೆ. ಆದರೆ ಇಜಿಯಂ ನಗರದಲ್ಲಿ ಸಿಕ್ಕ ಈ ಮೃತದೇಹಗಳ ರಾಶಿ ಇಷ್ಟು ದಿನಗಳಲ್ಲಿ ಸಿಕ್ಕ ಅತಿ ದೊಡ್ಡ ಸಮಾಧಿಯಾಗಿದೆ ಎಂದು ಉಕ್ರೇನ್​ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೀವ್: ರಷ್ಯಾದಿಂದ ಉಕ್ರೇನ್ ಮರು ವಶಪಡಿಸಿಕೊಂಡು ನಗರವೊಂದರಲ್ಲಿ 440 ಕ್ಕೂ ಹೆಚ್ಚು ಶವಗಳ ಸಾಮೂಹಿಕ ಸಮಾಧಿ (Mass Grave  In Ukraine) ಪತ್ತೆಯಾಗಿದೆ. ರಷ್ಯಾದ ಪಡೆಗಳಿಂದ (Russian Army)  ವಶಪಡಿಸಿಕೊಂಡ ಉಕ್ರೇನ್​ನ ಇಜಿಯಂ ಎಂಬ ನಗರದಲ್ಲಿ (Ukraine Recaptured City) ಈ ಮೃತದೇಹಗಳ ಬೆಟ್ಟವೇ ಪತ್ತೆಯಾಗಿದೆ.  ಉಕ್ರೇನಿಯನ್ ಅಧಿಕಾರಿಗಳು ಈ ಶವಗಳ ರಾಶಿಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಖಾರ್ಕಿವ್ ಪ್ರದೇಶದ ಮುಖ್ಯ ಪೊಲೀಸ್ ತನಿಖಾಧಿಕಾರಿ ಸೆರ್ಹಿ ಬೊಲ್ವಿನೋವ್ ಅವರು ಪ್ರತಿ ದೇಹದ ಫೋರೆನ್ಸಿಕ್ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಇಂತಹುದೇ ಹಲವು ಮೃತದೇಹಗಳ ರಾಶಿ ರಷ್ಯಾದಿಂದ ಮರು ವಶಪಡಿಸಿಕೊಂಡ ನಗರಗಳಲ್ಲಿ ಪತ್ತೆಯಾಗಿದೆ. ಆದರೆ ಇಜಿಯಂ ನಗರದಲ್ಲಿ ಸಿಕ್ಕ ಈ ಮೃತದೇಹಗಳ ರಾಶಿ ಇಷ್ಟು ದಿನಗಳಲ್ಲಿ ಸಿಕ್ಕ ಅತಿ ದೊಡ್ಡ ಸಮಾಧಿಯಾಗಿದೆ ಎಂದು ಉಕ್ರೇನ್​ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಾಗರಿಕರನ್ನು ಗುರಿಯಾಗಿಸಿ ಆಕ್ರಮಣ
    ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಮೃತದೇಹಗಳ ಪತ್ತೆಯಾದ ಬೆನ್ನಲ್ಲೇ ರಷ್ಯಾದ ಮೇಲೆ ಆರೋಪ ಹೊರಿಸಿದ್ದಾರೆ. ರಷ್ಯಾವು ಸಾವನ್ನು ಉಕ್ರೇನ್​ನಲ್ಲಿ ನಡೆಸಿದ ಎಲ್ಲ ಸಾವುಗಳಿಗೆ ಜವಾಬ್ದಾರರಾಗಿರಬೇಕು ಎಂದು ಝೆಲೆನ್ಸ್ಕಿ  ಆರೋಪ ಮಾಡಿದ್ದಾರೆ. ರಷ್ಯಾ ಪದೇ ಪದೇ ನಾಗರಿಕರನ್ನು ಗುರಿಯಾಗಿಸಿಕೊಂಡು ಆಕ್ರಮಣ ಮಾಡುತ್ತಿದೆ. ಯುದ್ಧ ಅಪರಾಧಗಳನ್ನು ನಡೆಸುತ್ತಿದೆ ಉಕ್ರೇನ್ ಆರೋಪಿಸಿದೆ.

    ಹುಸಿಯಾದ ಪುಟಿನ್ ನಿರೀಕ್ಷೆ; ಉಕ್ರೇನ್-ರಷ್ಯಾ ಸಮರದಲ್ಲಿ ರೋಚಕ ತಿರುವು!
    ನಿಖರವಾಗಿ 200 ದಿನಗಳ ಹಿಂದೆ ತಾಲಿಬಾನ್ ಶೈಲಿಯ ಮಿಂಚಿನ ಆಕ್ರಮಣದ ಮೂಲಕ ಉಕ್ರೇನ್‌ನ ಅತ್ಯಮೂಲ್ಯ ರಾಜಧಾನಿ ಕೈವ್ ಅನ್ನು ಸ್ವಾಧೀನಪಡಿಸಿಕೊಳ್ಳುವ ನಿರೀಕ್ಷೆಯನ್ನಿರಿಸಿಕೊಂಡು ಶತ್ರು ರಾಷ್ಟ್ರ ರಷ್ಯಾವು ಉಕ್ರೇನ್‌ನ ಮೇಲೆ ಸಂಪೂರ್ಣ ಆಕ್ರಮಣ ಪ್ರಾರಂಭಿಸಿತು. ಆದರೆ ಪಾಶ್ಚಿಮಾತ್ಯ ಶಸ್ತ್ರಾಸ್ತಗಳ ಸಂಗ್ರಹವನ್ನು ಹೊಂದಿರುವ ಉತ್ಸಾಹಭರಿತ ಉಕ್ರೇನಿಯನ್ ಪ್ರತಿರೋಧವು ರಷ್ಯಾದ ಸೇನೆಯನ್ನು ಹಿಮ್ಮೆಟ್ಟಿಸುವಷ್ಟು ಪ್ರಯತ್ನಿಸುತ್ತದೆ ಎಂಬುದಾಗಿ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ತಿಳಿದುಕೊಂಡಿರಲಿಲ್ಲ. ಇದೀಗ ಯುದ್ಧವು 7 ನೇ ತಿಂಗಳಿಗೆ ಸಮೀಪಿಸುತ್ತಿದ್ದಂತೆ ಉಕ್ರೇನ್ ಪ್ರಬಲ ಪಡೆಯಾಗಿ ಹೊರಹೊಮ್ಮುತ್ತಿದ್ದಂತೆ ರಷ್ಯಾ ಕೊಂಚ ಕೊಂಚವಾಗಿ ಹಿಮ್ಮೆಟ್ಟುತ್ತಿರುವಂತೆ ಕಾಣುತ್ತಿದೆ.

    ಇದನ್ನೂ ಓದಿ: MBBS Students: ಉಕ್ರೇನ್‌ನಿಂದ ಭಾರತಕ್ಕೆ ಹಿಂತಿರುಗಿದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಶಾಕ್!

    ಮರುಸ್ವಾಧೀನಪಡಿಸಿಕೊಂಡಿರುವ ಉಕ್ರೇನ್
    ಈಶಾನ್ಯ ಉಕ್ರೇನ್‌ನಲ್ಲಿನ ಮುಖ್ಯ ಭದ್ರಕೋಟೆಯಾದ ಖಾರ್ಕಿವ್‌ನಲ್ಲಿನ ಇಜಿಯಮ್ ನಗರವನ್ನು ರಷ್ಯಾ ಕೈಬಿಟ್ಟ ನಂತರ ಉಕ್ರೇನ್ ಪಡೆಗಳು ಕ್ಷಿಪ್ರಗತಿಯಲ್ಲಿ ಮುನ್ನಡೆಯನ್ನು ಕಂಡಿದ್ದು ಯುದ್ಧದ ಪ್ರಮುಖ ಮುಂಚೂಣಿಯ ಹಠಾತ್ ಕುಸಿತವಾಗಿ ಕಂಡುಬಂದಿತು.

    ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಮ್ಮ ವಿಡಿಯೋ ಭಾಷಣದಲ್ಲಿ ಉಕ್ರೇನ್‌ನ ಸಶಸ್ತ್ರ ಪಡೆಗಳು ಈ ತಿಂಗಳ ಆರಂಭದಲ್ಲಿ 2,000 ಚದರ ಕಿಲೋಮೀಟರ್ ಪ್ರದೇಶವನ್ನು ಪುನಃ ಸ್ವಾಧೀನಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.

    ಸೋಲಿನತ್ತ ಮುಖಮಾಡುತ್ತಿರುವ ರಷ್ಯಾ
    ವಿಶ್ವದಲ್ಲಿಯೇ ಅತ್ಯಂತ ಸುಧಾರಿತ ಹಾಗೂ ವೇಗದ ಸೇನೆ ಎಂಬ ಬಿರುದನ್ನು ರಷ್ಯಾ ತನ್ನದಾಗಿಸಿಕೊಳ್ಳುತ್ತಿದೆ ಎಂಬುದಾಗಿ ಝೆಲೆನ್ಸ್ಕಿಯ ಮುಖ್ಯ ಸಿಬ್ಬಂದಿ ಚೀಕಿ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆದರೆ ಉಕ್ರೇನ್‌ನ 2.5 ಪಟ್ಟು ಗಾತ್ರದ ಸೇನಾ ಪಡೆಯನ್ನು ಹೊಂದಿರುವ ರಷ್ಯಾ ಸೋಲಿನತ್ತ ಏಕೆ ಮುಖ ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ

    ಇದನ್ನೂ ಓದಿ: Queen Elizabeth: ಬ್ರಿಟನ್ ರಾಣಿ ಕೊನೆಯ ಭಾವಚಿತ್ರ ಹೇಗೆ ಮೂಡಿಬಂತು? ಆ ಬಗ್ಗೆ ಛಾಯಾಗ್ರಾಹಕ ರಾನಾಲ್ಡ್‌ ಮ್ಯಾಕೆಚ್ನಿ ಹೇಳೋದೇನು?

    ಇದಕ್ಕೆ ಪ್ರಮುಖ ಕಾರಣವೆಂದರೆ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳು, ಅದಾಗ್ಯೂ ಎರಡು ಪಡೆಗಳಲ್ಲಿ ಹೆಚ್ಚು ಪ್ರಬಲವಾದುದು ರಷ್ಯಾದ ಸೇನೆ ಎಂದು ಹೇಳಲು ಯಾವುದೇ ಮಿಲಿಟರಿ ತಜ್ಞರ ನೆರವು ಬೇಕಾಗಿಲ್ಲ. ಅದಾಗ್ಯೂ ರಷ್ಯಾ ಉಕ್ರೇನ್‌ನ ನಿರಂತರ ದಾಳಿಯಿಂದ ಹಿಮ್ಮೆಟ್ಟುವಂತಾಗಿದೆ.
    Published by:ಗುರುಗಣೇಶ ಡಬ್ಗುಳಿ
    First published: