ರಷ್ಯಾ ಉಕ್ರೇನ್ ಯುದ್ಧ (Russia vs Ukraine War) ಯಾವಾಗ ನಿಲ್ಲುವುದೋ ಎಂದು ಇಡೀ ಜಗತ್ತೇ ಕಾಯುತ್ತಿದೆ. ಆದರೆ ರಷ್ಯಾ ಕಾಲು ಕೆದರಿ ಯುದ್ಧ ನಿಲ್ಲಿಸುವ ಲಕ್ಷಣ ತೋರಿಸುತ್ತಿಲ್ಲ. ಉಕ್ರೇನ್ ಸಹ ಪಟ್ಟುಬಿಡದೇ ಈಗಲೂ ತಕ್ಕ ಪ್ರತಿರೋಧ ನೀಡುತ್ತಿದೆ. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಉಕ್ರೇನ್ ಮುನ್ನಡೆ ಗಳಿಸುತ್ತಿದೆ. ರಷ್ಯಾ ಪಡೆಗಳನ್ನು (Russian Military) ಎದುರಿಸಲು, ಓಡಿಸಲು ಉಕ್ರೇನ್ ಉದ್ದೇಶಪೂರ್ವಕವಾಗಿ ಪ್ರವಾಹವನ್ನೇ ಸೃಷ್ಟಿಸಿದೆ. ಬೃಹತ್ ಆಣೆಕಟ್ಟನ್ನೇ ತೆರೆದು (Open Dam to Create Flood) ಅಗಾಧ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಹೌದು, ಇದು ನಂಬಲೂ ಕಷ್ಟ. ಆದರೆ ಯುದ್ಧ ಅಂತ ಬಂದರೆ ಏನು ಬೇಕಾದರೂ ಸಾಧ್ಯವಾಗಬಹುದು ಅಲ್ಲವೇ? ಇಲ್ಲಿ ಆಗಿದ್ದೂ ಅದೇ.
ಉಕ್ರೇನ್ನ ಕೀವ್ನ ಉತ್ತರದ ಒಂದು ಸಣ್ಣ ಹಳ್ಳಿಯಲ್ಲಿ ಜನರೇ ಪ್ರವಾಹವನ್ನು ಸೃಷ್ಟಿಸಿದ್ದಾರೆ. ಈ ಪ್ರವಾಹದಿಂದ ನೆಲಮಾಳಿಗೆಗಳು ಮತ್ತು ಹೊಲಗಳು ಮುಳುಗಿಹೋಗಿವೆ. ಆದರೆ ಈ ಪ್ರವಾಹಕ್ಕೆ ಸಿಲುಕಿ ಉಕ್ರೇನ್ ರಾಜಧಾನಿಯ ಮೇಲೆ ದಾಳಿ ಮಾಡಲಿದ್ದ ರಷ್ಯಾದ ಸೈನಿಕರು ಅಲ್ಲೇ ನಿಂತುಬಿಟ್ಟಿದ್ದಾರೆ. ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.
ಸುತ್ತಮುತ್ತಲಿನ ಹಳ್ಳಿಗಳನ್ನು ಮತ್ತು ಸಾವಿರಾರು ಎಕರೆ ಮುಳುಗಡೆ
ಡೆಮಿಡಿವ್ ಎಂಬ ಸ್ಥಳದ ಬಳಿ ಯುದ್ಧದ ಆರಂಭದಲ್ಲಿ ಉಕ್ರೇನಿಯನ್ ಪಡೆಗಳು ಅಣೆಕಟ್ಟನ್ನು ತೆರೆದಿವೆ. ಇದರಿಂದಾಗಿ ಇರ್ಪಿನ್ ಎಂಬ ನದಿಯ ನೀರು ಸುತ್ತಮುತ್ತಲಿನ ಹಳ್ಳಿಗಳನ್ನು ಮತ್ತು ಸಾವಿರಾರು ಎಕರೆಗಳನ್ನು ಮುಳುಗಿಸಿದೆ.
ಇದನ್ನೂ ಓದಿ: Putin Health: ಪುಟಿನ್ಗೆ ಯುದ್ಧದ ಶಾಪ ತಟ್ಟಿಯೇ ಬಿಡ್ತಾ? ರಷ್ಯಾ ಅಧ್ಯಕ್ಷನಿಗೆ ನಿಗೂಢ ಕಾಯಿಲೆಯಂತೆ ನಿಜವೇ?
ರಷ್ಯಾ ಸೈನಿಕರು ಅಯೋಮಯ!
ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿ ರಷ್ಯಾದ ಸೈನಿಕರು ಮತ್ತು ಟ್ಯಾಂಕ್ಗಳು ಇನ್ನೂ ಮುನ್ನುಗ್ಗಿ ಬರಲು ಸಾಧ್ಯವಾಗಲಿಲ್ಲ. ಈ ತ್ಯಾಗ ಮಾಡಿಯಾದರೂ ರಷ್ಯಾದ ಸೈನಿಕರನ್ನು ತಡೆಗಟ್ಟುವುದು ನಮಗೆ ಅಗತ್ಯವಿತ್ತು ಎಂದು ಸ್ಥಳೀಯ ನಾಗರಿಕರು ತಿಳಿಸಿದ್ದಾರೆ.
ರಷ್ಯಾದ ಆಕ್ರಮಣವು ಮೂರನೇ ತಿಂಗಳಲ್ಲಿ ಸಾವಿರಾರು ನಾಗರಿಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಲಕ್ಷಾಂತರ ಉಕ್ರೇನಿಯನ್ನರ ಜೀವನವನ್ನು ಹಾಳುಎಡವಿದೆ. ಉಕ್ರೆನ್ ದೇಶದ ನಗರಗಳನ್ನು ಅವಶೇಷಗಳನ್ನಾಗಿಸಿದೆ.
ರಷ್ಯಾ ಅಧ್ಯಕ್ಷ ಪುಟಿನ್ಗೆ ನಿಗೂಢ ಕಾಯಿಲೆಯಂತೆ ನಿಜವೇ?
ಉಕ್ರೇನ್-ರಷ್ಯಾ ಯುದ್ಧ (Ukraine Russia war) ಮುಂದುವರೆದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (President Vladimir Putin) ಅವರ ಆರೋಗ್ಯದ (Putin Health) ಬಗ್ಗೆ ವದಂತಿಗಳು ಹೆಚ್ಚುತ್ತಲೇ ಇವೆ. ಪುಟಿನ್ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್ನ ಮಿಲಿಟರಿ ಗುಪ್ತಚರ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವು ಪುಟಿನ್ 'ಉಬ್ಬಿದ ತಲೆ' ಹೊಂದಿರುವ ಇತ್ತೀಚಿನ ಫೋಟೋಗಳನ್ನು ತೋರಿಸಿದ್ದಾರೆ. ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಕೆಲ ಬಲ್ಲ ಮೂಲಗಳ ಪ್ರಕಾರ, ಪುಟಿನ್ ಅವರು ಅತ್ಯಂತ ಕೆಟ್ಟ ಮಾನಸಿಕ ಮತ್ತು ದೈಹಿಕ ಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ: China Economy Collapsed: ಚೀನಾದಲ್ಲಿ ಕುಸಿಯುತ್ತಿದೆ ಆರ್ಥಿಕ ಚಟುವಟಿಕೆ! ಏನು ಕಾರಣ?
ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳಿಂದ ಏಕಕಾಲದಲ್ಲಿ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಪುಟಿನ್ ಅವರನ್ನು ಪದಚ್ಯುತಗೊಳಿಸಲು ದಂಗೆ ನಡೆಯುತ್ತಿದೆ ಎಂದು ತಿಳಿಸಿದ ಅವರು ನಾಯಕತ್ವದ ಬದಲಾವಣೆಯ ಬಗ್ಗೆಯೂ ಸುಳಿವು ನೀಡಿದ್ದರು. ನಡೆಯುತ್ತಿರುವ ಯುದ್ಧದಲ್ಲಿ ಒಂದು ಮಹತ್ವದ ತಿರುವು ಆಗಸ್ಟ್ ಮಧ್ಯದ ವೇಳೆಗೆ ಬರಲಿದೆ, ವರ್ಷದ ಅಂತ್ಯದ ವೇಳೆಗೆ ಯುದ್ಧವು ಕೊನೆಗೊಳ್ಳುತ್ತದೆ ಎಂದು ಭವಿಷ್ಯ ನುಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ