ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಉದ್ವಿಗ್ನ ಪರಿಸ್ಥಿತಿ ಈಗ ಮತ್ತಷ್ಟು ಬಿಗಡಾಯಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ (Putin) ಬೆಳ್ಳಂಬೆಳಗ್ಗೆ ಮುಂಜಾನೆ ಆರು ಗಂಟೆಗೆ ಉಕ್ರೇನ್ ವಿರುದ್ಧ ಮಿಲಿಟರಿ ಆಪರೇಷನ್ ಘೋಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಈ ವಿಚಾರದಲ್ಲಿ ಬೇರೆ ಯಾವುದೇ ರಾಷ್ಟ್ರಗಳು ಮೂಗು ತೂರಿಸದಂತೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ಪೂರ್ವ ಉಕ್ರೇನ್ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎಂದು ವ್ಲಾಡಿಮಿರ್ ಪುಟಿನ್ ಬೆಳಗ್ಗೆ ಆರು ಗಂಟೆಗೆ ಘೋಷಿಸಿದ್ದಾರೆ. ರಷ್ಯಾದ ಈ ಇತ್ತೀಚಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ವಿದೇಶ ರಾಷ್ಟ್ರಗಳ ಪ್ರಯತ್ನ ಅವರು ಎಂದೂ ನೋಡಿರದ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪುಟಿನ್ ಎಚ್ಚರಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಕೆಲವೇ ಗಂಟೆಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಲಿದೆ ಎಂಬ US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿಕೆಯ ಬೆನ್ನಲ್ಲೇ ಈ ಆಕ್ರಮಣದ ಘೋಷಣೆಯಾಗಿದೆ. ಉಕ್ರೇನಿಯನ್ ಆಕ್ರಮಣವನ್ನು ಹಿಮ್ಮೆಟ್ಟಿಸಲು ಪ್ರತ್ಯೇಕತಾವಾದಿಗಳು ಕ್ರೆಮ್ಲಿನ್ಗೆ ಸಹಾಯವನ್ನು ಕೇಳಿದ್ದಾರೆ ಎಂದು ರಷ್ಯಾ ಈ ಹಿಂದೆ ಹೇಳಿತ್ತು.
ಮಿಲಿಟರಿ ನಿಯೋಜನೆ
ಇಷ್ಟು ದಿನಗಳ ತನಕ ರಷ್ಯಾ-ಉಕ್ರೇನ್ ಗಡಿಗಳಲ್ಲಿ ರಷ್ಯಾದ ಮಿಲಿಟರಿಗಳ ದೊಡ್ಡ ನಿಯೋಜನೆಯನ್ನು ಮಾಡಿತ್ತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ಪ್ರತ್ಯೇಕತಾವಾದಿ ಪ್ರದೇಶಗಳನ್ನು ಸ್ವತಂತ್ರವೆಂದು ಗುರುತಿಸಿದ ನಂತರ ಉಕ್ರೇನ್ನ ಪೂರ್ವದಲ್ಲಿ ಶೆಲ್ ದಾಳಿ ತೀವ್ರಗೊಂಡಿತ್ತು.
ಬೈಡನ್ ಪ್ರತಿಕ್ರಿಯೆ
ಉಕ್ರೇನ್ ಮೇಲೆ ರಷ್ಯಾ ದಾಳಿ ತರುವ ಸಾವು ಮತ್ತು ವಿನಾಶಕ್ಕೆ ರಷ್ಯಾ ಮಾತ್ರ ಕಾರಣವಾಗಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು ಒಟ್ಟಾಗಿ ಮತ್ತು ನಿರ್ಣಾಯಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಈ ಎಲ್ಲ ಅನಾಹುತಗಳಿಗೆ ರಷ್ಯಾ ಕಾರಣವಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪುಟಿನ್
ದೂರದರ್ಶನದ ಭಾಷಣದಲ್ಲಿ, ಪುಟಿನ್ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಉಕ್ರೇನ್ ನ್ಯಾಟೋಗೆ ಸೇರುವುದನ್ನು ತಡೆಯುವ ಮತ್ತು ಮಾಸ್ಕೋ ಭದ್ರತಾ ಖಾತರಿಗಳನ್ನು ನೀಡುವ ರಷ್ಯಾದ ಬೇಡಿಕೆಯನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದ್ದಾರೆ. ಪುಟಿನ್ ಮಾತನಾಡುತ್ತಿದ್ದಂತೆ, ಉಕ್ರೇನ್ನ ಕೈವ್, ಖಾರ್ಕಿವ್ ಮತ್ತು ಇತರ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಕೇಳಿಬಂದವು.
ಇದನ್ನೂ ಓದಿ: Ukraine Crisis: ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ವಿದ್ಯಾರ್ಥಿಗಳು
ಮಾರಿಯುಪೋಲ್ನ ಕೈವ್ನಲ್ಲಿ ಸ್ಫೋಟಗಳು ಕೇಳಿಬಂದಿವೆ. ಉಕ್ರೇನ್ನ ರಾಜಧಾನಿ ಕೈವ್ ಮತ್ತು ಪೂರ್ವ ಬಂದರು ನಗರವಾದ ಮರಿಯುಪೋಲ್ನಲ್ಲಿ ಸ್ಫೋಟಗಳು ನಡೆದಿವೆ.
ಯುಕ್ರೇನ್ನ ಗಡಿಯಲ್ಲಿ 150,000 ಮತ್ತು 200,000 ಸೈನಿಕರನ್ನು ಒಟ್ಟುಗೂಡಿಸಿರುವ ಪುಟಿನ್ ಅವರನ್ನು ತಡೆಯಲು ಯುದ್ಧವನ್ನು ತಪ್ಪಿಸಲು ಮತ್ತು ರಷ್ಯಾದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೇರಲು ವಾರಗಳ ಕಾಲ ನಡೆಸಿದ ತೀವ್ರ ರಾಜತಾಂತ್ರಿಕತೆ ವಿಫಲವಾದ ಬೆನ್ನಲ್ಲ ಯುದ್ಧದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ ಎಂದು ಪುಟಿನ್ ಮಾಸ್ಕೋದಲ್ಲಿ 6:00am (0300 GMT) ಸ್ವಲ್ಪ ಮೊದಲು ಒಂದು ಅನಿರೀಕ್ಷಿತ ಟಿವಿ ಪ್ರಕಟಣೆಯಲ್ಲಿ ಹೇಳಿದರು. ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಉಕ್ರೇನಿಯನ್ ಸೈನಿಕರಿಗೆ ಕರೆ ನೀಡಿದ್ದು, ಉಕ್ರೇನ್ನ ಪೂರ್ವದಲ್ಲಿ ಜನಾಂಗೀಯ ಹತ್ಯೆ ಯನ್ನು ಪ್ರತಿಪಾದಿಸುವ ಮೂಲಕ ತಮ್ಮ ಮಿಲಿಟರಿ ಆಕ್ರಮಣವನ್ನು ಸಮರ್ಥಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ