ಗಂಡ ಆಕೆಯ ಕೈಕತ್ತರಿಸಿದ, ರಷ್ಯಾ ಇದಕ್ಕೆ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ: ಏನಿದು ಪ್ರಕರಣ?

2017ರಲ್ಲಿ ಮಾರ್ಗರಿಟಾರನ್ನು ಅವರ ಪತಿ ಬಲವಂತವಾಗಿ ಕಾಡಿಗೆ ಕರೆದೊಯ್ದು ಅವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ. ಇದರ ಪರಿಣಾಮವಾಗಿ ಅವರು ತನ್ನ ಎರಡು ಕೈಗಳನ್ನು ಕಳೆದುಕೊಳ್ಳಬೇಕಾಯಿತು.

ಕೈಗಳನ್ನು ಕಳೆದುಕೊಂಡ ಮಹಿಳೆ

ಕೈಗಳನ್ನು ಕಳೆದುಕೊಂಡ ಮಹಿಳೆ

  • Share this:
ಅಹಿತಕರ ಘಟನೆಯೊಂದರಲ್ಲಿ (Unpleasant incident) ಗಂಡನ ಕೃತ್ಯದಿಂದಲೇ ಕೈಗಳನ್ನು ಕಳೆದುಕೊಂಡ ಮಹಿಳೆಯೊಬ್ಬರಿಗೆ ಪರಿಹಾರ( Compensation ) ಮೊತ್ತವಾಗಿ 370,000 ಯೂರೋಗಳನ್ನು ಪಾವತಿಸುವಂತೆ ರಷ್ಯಾಗೆ (Russia) ಆದೇಶಸಲಾಗಿರುವ ಪ್ರಸಂಗವೊಂದು ವರದಿಯಾಗಿದೆ. ಮಾನವ ಹಕ್ಕುಗಳಿಗೆಂದಿರುವ ಯುರೋಪಿನ ನ್ಯಾಯಾಲಯದಿಂದ ಈ ಆದೇಶ ಹೊರಬಿದ್ದಿದೆ. ಈ ಬಗ್ಗೆ ಯುರೋಪಿನ ನ್ಯಾಯಾಲಯವು (European Court )ರಷ್ಯಾವನ್ನು ಕುರಿತು ರಷ್ಯಾ ತನ್ನಲ್ಲಿರುವ ಕೌಟುಂಬಿಕ ಹಿಂಸೆಗಳ ವಿರುದ್ಧ(Family violence) ಪರಿಣಾಮಕಾರಿಯಾಗಿ ಹೋರಾಡಲು ವಿಫಲವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ಹಿಂಸೆಗೆ ಈಡಾದ ನಾಲ್ವರು ಮಹಿಳೆಯರಿಗೆ ಪರಿಹಾರ ನೀಡಬೇಕೆಂದು ತನ್ನ ಆದೇಶದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಅಪಹರಣ ಮಾಡಿ ಕೊಡಲಿಯಿಂದ ಹಲ್ಲೆ
ಈ ರೀತಿ ಹಿಂಸೆಗೆ ಈಡಾದ ಮಹಿಳೆಯರಲ್ಲಿ ಮಾರ್ಗರಿಟಾ ಗ್ರಾಚೇವ್ ಸಹ ಒಬ್ಬಳಾಗಿದ್ದಾಳೆ. ಇವಳನ್ನು ಇವಳ ಪತಿಯೇ ಸ್ವತಃ 2017ರಲ್ಲಿ ಅಪಹರಣ ಮಾಡಿ ತದನಂತರ ಅವಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ. ಈ ಕುರಿತಂತೆ ನ್ಯಾಯಾಲಯವು ರಷ್ಯಾಗೆ ತ್ವರಿತವಾಗಿ ಈ ರೀತಿಯ ಹಿಂಸೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಅಗತ್ಯವಾದ ಬದಲಾವಣೆಗಳನ್ನು ಕೈಗೊಳ್ಳಬೇಕೆಂದೂ ಸೂಚಿಸಿದೆ.

ಇದನ್ನೂ ಓದಿ: Viral Story- ರಷ್ಯನ್ ಹುಡುಗಿ ಮತ್ತು ದೈತ್ಯ ಕರಡಿಯ ಕುಚಿಕು ಸ್ನೇಹ ಕಂಡು ನೆಟ್ಟಿಗರು ಶಾಕ್

ನ್ಯಾಯಾಲಯವು ಮುಂದುವರೆಯುತ್ತ, ಮಹಿಳೆಯರ ಮೇಲೆ ಕೌಟುಂಬಿಕ ಹಿಂಸೆಯು ಚಿಂತಾಜನಕವಾದ ರೀತಿಯಲ್ಲಿ ಏರುತ್ತಿದ್ದು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಯುರೋಪಿಯನ್ ಕನ್ವೆನ್ಷನ್‌ನ 2 ಪರಿಚ್ಛೇದಗಳನ್ನು ರಷ್ಯಾ ಉಲ್ಲಂಘಿಸಿರುವುದಾಗಿ ತನ್ನ ಆದೇಶದಲ್ಲಿ ತಿಳಿಸಿದೆ.

ಕೈಗಳನ್ನು ಕಳೆದುಕೊಳ್ಳಬೇಕಾಯಿತು
ಇದಕ್ಕೂ ಮುಂಚೆ ಸಂತ್ರಸ್ತ ಮಹಿಳೆಯಾದ ಮಾರ್ಗರಿಟಾ ತನ್ನ ಗಂಡನ ಆಕ್ರಮಣಕಾರಿ ನಡವಳಿಕೆ ಬಗ್ಗೆ ಸ್ಥಳೀಯವಾಗಿ ಪೊಲೀಸರ ಗಮನಕ್ಕೆ ತಂದಿದ್ದಳು. ಆದರೂ ಪೊಲೀಸರು ಅದನ್ನು ನಿರ್ಲಕ್ಷಿಸಿದ್ದರು. ಡಿಸೆಂಬರ್ 2017ರಲ್ಲಿ ಮಾರ್ಗರಿಟಾರನ್ನು ಅವರ ಪತಿ ಬಲವಂತವಾಗಿ ಕಾಡಿಗೆ ಕರೆದೊಯ್ದು ಅವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ. ಇದರ ಪರಿಣಾಮವಾಗಿ ಅವರು ತನ್ನ ಎರಡು ಕೈಗಳನ್ನು ಕಳೆದುಕೊಳ್ಳಬೇಕಾಯಿತು.

ತದನಂತರ, ವಿಕಾರವಾಗಿದ್ದ ಅವರ ಎಡಗೈಯನ್ನು ಕಾಡಿನಿಂದ ಸಂಗ್ರಹಿಸಿ ಮತ್ತೆ ಜೋಡಿಸಲಾಯಿತು ಹಾಗೂ ಕ್ರೌಡ್ ಫಂಡಿಂಗ್ ಅಭಿಯಾನದಡಿ ಸಂಗ್ರಹಿಸಲಾದ ಹಣದಿಂದ ಪ್ರಾಸ್ಥೆಟಿಕ್ ಬಲಗೈಯನ್ನು ಜೋಡಿಸಲಾಗಿತ್ತು. ಪ್ರಸ್ತುತ ಅವರ ಮಾಜಿ ಗಂಡನಾಗಿರುವ ಡಿಮಿತ್ರಿ ಗ್ರಾಚೇವ್ ಅನ್ನು ಬಂಧಿಸಲಾಗಿದ್ದು 14 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.

ರಷ್ಯಾದ ನಿಯಮ
ಈ ಬಗ್ಗೆ ಪ್ರತಿಕ್ರಯಿಸಿರುವ ಯುರೋಪಿಯನ್ ನ್ಯಾಯಾಲಯವು, ರಷ್ಯಾದಲ್ಲಿರುವ ನಿಯಮಗಳು ಹಾಗೂ ಅಧಿಕಾರಿ ವರ್ಗದವರು ಸಂತ್ರಸ್ತೆಯು ದೈಹಿಕವಾಗಿ ಅನುಭವಿಸುವಂತಹ ಪರಿಸ್ಥಿತಿ ಬರುವವರೆಗೂ ಅದಕ್ಕೆ ಗಮನ ನೀಡದೆ ಇದ್ದುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ.

ಈ ಮುಂಚೆ, 2017ರಲ್ಲಿ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಕಾನೂನು ಒಂದಕ್ಕೆ ಸಹಿ ಹಾಕಿದ್ದರು ಹಾಗೂ ಆ ಕಾನೂನಿನ ಪ್ರಕಾರ, ಕೌಟುಂಬಿಕ ಹಿಂಸೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಅಥವಾ ಸಂತ್ರಸ್ತೆಯು ಆಸ್ಪತ್ರೆಗೆ ದಾಖಲು ಮಾಡಬೇಕಾದ ಪರಿಸ್ಥಿತಿ ಇಲ್ಲದಿದ್ದಲ್ಲಿ ಅವುಗಳನ್ನು ಅಪರಾಧ ಎಂದು ಪರಿಗಣಿಸಲಾಗದು ಹಾಗೂ ಇದಕ್ಕೆ ಕಡಿಮೆ ಪ್ರಮಾಣದಲ್ಲಿ ದಂಡ ತೆರಬೇಕಾಗಿತ್ತು.

ಪರಿಹಾರ ನೀಡಲು ಕೋರ್ಟ್ ಸೂಚನೆ
ಮಾರ್ಗರಿಟಾ ಹೊರತುಪಡಿಸಿ ವಿವಿಧ ಕೌಟುಂಬಿಕ ಹಿಂಸೆ ಅನುಭವಿಸಿದ್ದ ಇತರೆ ಮೂರು ಮಹಿಳೆಯರಾದ ನಟಾಲ್ಯಾ ಟುನಿಕೋವಾ, ಯೆಲೆನಾ ಗೆರ್ಶ್ಮನ್, ಹಾಗೂ ಇರೀನಾ ಪೆಟ್ರಾಕೋವಾ ಅವರಿಗೂ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಕೋರ್ಟ್ ಸೂಚಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ನನ್ನ ಮೇಲೆ ನಂಬಿಕೆ ಇದ್ರೆ ಕಾರಿನ ಮೇಲೆ ಮಲಗು.. ಪ್ರೇಯಸಿಯನ್ನು ಕಾರಿಗೆ ಕಟ್ಟಿ ಪ್ರೇಮಿಯ ಹುಚ್ಚಾಟ!

ಇನ್ನು ಈ ಪ್ರಕರಣದ ವಿರುದ್ಧ ಹೋರಾಡುತ್ತಿದ್ದ ಹಲವು ವಕೀಲರ ಪೈಕಿ ಒಬ್ಬರಾಗಿರುವ ಮಾರಿ ದಾವ್ತ್ಯಾನ್ ತಮ್ಮ ಫೇಸ್ ಬುಕ್ ಪುಟದಲ್ಲಿ ಸಂತಸ ವ್ಯಕ್ತಪಡಿಸುತ್ತ "ನಾವು ಗೆದ್ದೆವು" ಎಂದು ಬರೆದುಕೊಂಡಿದ್ದಾರೆ. ಸಂತ್ರಸ್ತೆಯರ ಪರಿಸ್ಥಿತಿ ಕುರಿತು ಅವರು "ದೇಶದ ಆಡಳಿತದ ಅಸಾಮರ್ಥ್ಯದಿಂದಾಗಿ ಈ ಎಲ್ಲ ಮಹಿಳೆಯರು ಕೌಟುಂಬಿಕ ಹಿಂಸೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು" ಎಂದು ಬರೆದುಕೊಂಡಿದ್ದರು. ಮಹಿಳೆಯರು ತಮಗೆ ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದ್ದ ಕ್ಲೈಮ್ ಅನ್ನು ಈ ಹಿಂದೆ ರಷ್ಯಾ ಆಡಳಿತವು ತಿರಸ್ಕರಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
Published by:vanithasanjevani vanithasanjevani
First published: