ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಉಕ್ರೇನ್ನ ಬಗ್ಗು ಬಡಿಯಲು ಶಪಥ ಮಾಡಿರುವ ರಷ್ಯಾ, ನಾನಾ ಯುದ್ಧ ತಂತ್ರ ಪ್ರಯೋಗಿಸುತ್ತಿದೆ. ರಷ್ಯಾ ಯುದ್ಧದಾಹಕ್ಕೆ ಅಪಾರ ಸಂಖ್ಯೆಯ ಸಾವು, ನೋವು ಮುಂದುವರೆದಿದೆ. ಇದೀಗ ಯುದ್ಧ ದಾಹಿ ರಷ್ಯಾ ಹಾಗೂ ಅದರ ಅಧ್ಯಕ್ಷ (President) ವ್ಲಾಡಿಮಿರ್ ಪುಟೀನ್ಗೆ (Vladimir Putin) ವಿಶ್ವದ ಎದುರು ಭಾರೀ ಮುಖಭಂಗವಾಗಿದೆ. ವಿಶ್ವಸಂಸ್ಥೆಯ (UNO) ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ (Human Rights Council) ರಷ್ಯಾವನ್ನು ಅಮಾನತು ಮಾಡಲಾಗಿದೆ. ರಷ್ಯಾವನ್ನು ಆಯೋಗದಿಂದ ಹೊರಗಿಡುವ ಕರಡು ವಿಶ್ವಸಂಸ್ಥೆಯಲ್ಲಿ ಮಂಡಿಸಲಾಯಿತು. ಇನ್ನು ನಿರ್ಣಯವನ್ನು ಬೆಂಬಲಿಸಿ 93 ದೇಶಗಳು ಮತ (Vote) ಚಲಾಯಿಸಿದ್ದರಿಂದ ರಷ್ಯಾವನ್ನು ಹೊರಗಿಡಲಾಗಿದೆ. ಉಕ್ರೇನ್ ಮೇಲೆ ರಷ್ಯಾದ ಸೈನಿಕರ ಕ್ರೂರತೆಯ ಪರಿಣಾಮ ಈ ನಿರ್ಣಯವನ್ನು ಮಂಡಿಸಲಾಗಿತ್ತು.
ಮಾನವ ಹಕ್ಕುಗಳ ಆಯೋಗದಿಂದ ರಷ್ಯಾ ಅಮಾನತು
ಉಕ್ರೇನ್ನ ಬುಕಾದಲ್ಲಿ ನಡೆದ ಹತ್ಯೆಗಳ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡಲಾಯಿತು. ಉಕ್ರೇನ್ನ ರಾಜಧಾನಿ ಕೈವ್ ಸುತ್ತಮುತ್ತಲಿನ ಬುಚಾ ಮತ್ತು ಇತರ ಪಟ್ಟಣಗಳಲ್ಲಿ ನಾಗರಿಕ ಹತ್ಯೆಗಳ ಪುರಾವೆಗಳು ದೊರೆತಿದ್ದು, ಇದನ್ನು ರಷ್ಯಾ ಸೇನಾಪಡೆಗಳೆ ಮಾಡಿವೆ ಎಂದು ಉಕ್ರೇನ್ ಆರೋಪಿಸಿತ್ತು. ಇದಕ್ಕೆ ಸಾಕ್ಷಿ ದೊರೆತಿದ್ದು, ವಿಶ್ವ ಸಂಸ್ಥೆಯಲ್ಲಿ ರಷ್ಯಾಕ್ಕೆ ಮುಖಭಂಗವಾಗಿದೆ.
ರಷ್ಯಾ ವಿರುದ್ಧ 93 ಮತ ಚಲಾವಣೆ
ಈ ನಿರ್ಣಯದ ವಿರುದ್ಧ 24 ದೇಶಗಳು ಮತ ಚಲಾಯಿದ್ದವು. ಸಾಮಾನ್ಯ ಸಭೆಯ 193 ಸದಸ್ಯರಲ್ಲಿ, ಯುನೈಟೆಡ್ ಸ್ಟೇಟ್ಸ್ ಪ್ರಸ್ತಾಪಿಸಿದ ನಿರ್ಣಯಕ್ಕೆ 93 ಸದಸ್ಯರು ಅಮಾನತು ಪರವಾಗಿ ಮತ ಹಾಕಿದರೆ 24 ಸದಸ್ಯರು ವಿರುದ್ಧವಾಗಿ ಮತ ಹಾಕಿದರು ಮತ್ತು 58 ಸದಸ್ಯರು ಗೈರುಹಾಜರಾದರು. ಇದು ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಅಂತರರಾಷ್ಟ್ರೀಯ ಏಕತೆಯನ್ನು ದುರ್ಬಲಗೊಂಡಿದೆ ಎನ್ನುವ ಸೂಚನೆಯೂ ಅಗಿದೆ. ಎಂದಿನಂತೆ ಭಾರತ ಯಾರ ಪರವಾಗಿಯೂ ಮತಹಾಕದೆ, ಈ ನಿರ್ಣಯಕ್ಕೆ ಗೈರು ಹಾಜರಾಗಿದೆ.
ಇದನ್ನೂ ಓದಿ: Explained: ಹೈಪರ್ಸಾನಿಕ್ ಕ್ಷಿಪಣಿಗಳು ಅಂದರೇನು? ರಷ್ಯಾ ಇದನ್ನು ಉಕ್ರೇನ್ನಲ್ಲಿ ಬಳಸುತ್ತಿರುವುದೇಕೆ?
ವಿಶ್ವ ಸಂಸ್ಥೆ ನಿರ್ಧಾರಕ್ಕೆ ಉಕ್ರೇನ್ ಸ್ವಾಗತ
ರಷ್ಯಾವನ್ನು UNHRC ನಿಂದ ಹೊರಗಿಡುವ ನಿರ್ಧಾರವನ್ನು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಸ್ವಾಗತಿಸಿದ್ದಾರೆ. ಯುಎನ್ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ನಾವು "ಕೃತಜ್ಞತೆ" ಸಲ್ಲಿಸುತ್ತೇವೆ ಎಂದು ಉಕ್ರೇನ್ ಹೇಳಿದೆ, "ಯುದ್ಧ ಅಪರಾಧಿಗಳು ಮಾನವ ಹಕ್ಕುಗಳ ಮಂಡಳಿಯಲ್ಲಿ ಇರಬಾರದು ಎಂದು ಉಕ್ರೇನ್ ಹೇಳಿದೆ.
ರಷ್ಯಾ ವಿರುದ್ಧ ಅನೇಕ ನಿರ್ಬಂಧಕ್ಕೆ ಆಗ್ರಹ
ರಷ್ಯಾದ ಸದಸ್ಯತ್ವವನ್ನು ರದ್ದುಗೊಳಿಸುವುದು ಒಂದು ಆಯ್ಕೆಯಲ್ಲ. ಅದೊಂದು ಕರ್ತವ್ಯ ಎಂದು ಮತದಾನದ ಮೊದಲು ಉಕ್ರೇನ್ ಪ್ರತಿನಿಧಿ ಹೇಳಿದರು. ಒಂದು ಸಾರ್ವಭೌಮ ರಾಷ್ಟ್ರದ ಪ್ರದೇಶದ ಮೇಲೆ UNHRC ಸದಸ್ಯತ್ವ ಪಡೆದಿರುವ ರಷ್ಯಾ ಗಂಭೀರ ಮಾವನ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಟೀಕಿಸಿದ್ದರು. ಇನ್ನು ಇದೊಂದೇ ಅಲ್ಲ ರಷ್ಯಾದ ಮೇಲೆ ವಿಶ್ವ ಸಂಸ್ಥೆಯಿಂದ ಇನ್ನೂ ಹಲವು ರೀತಿಯ ನಿರ್ಬಂಧ ಹೇರುವಂತೆ ಆಗ್ರಹ ಕೇಳಿ ಬಂದವು.
ಅಮಾನತುಗೊಂಡ 2ನೇ ದೇಶ ರಷ್ಯಾ
ಇದೀಗ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಿಂದ ಅಮಾನತುಗೊಂಡ 2ನೇ ದೇಶ ರಷ್ಯಾ ಆಗಿದೆ. ಇದಕ್ಕೂ ಮುನ್ನ 2011ರಲ್ಲಿ ಲಿಬಿಯಾ ದೇಶವನ್ನು ಇದೇ ಕಾರಣಕ್ಕಾಗಿ ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: Explained: ಯುದ್ಧದಾಹಿ ರಷ್ಯಾಕ್ಕಿಲ್ಲ 'ನೆಚ್ಚಿನ ರಾಷ್ಟ್ರ'ದ ಸ್ಥಾನಮಾನ! ಇದರಿಂದ ಲಾಭವೋ? ನಷ್ಟವೋ?
ಭಾರತದ ವಿರುದ್ಧ ಅಮೆರಿಕಾ ಬೇಸರ
ಇನ್ನು ಮತದಾನದಿಂದ ದೂರ ಉಳಿದ ಭಾರತದ ನಿರ್ಧಾರಕ್ಕೆ ಅಮೆರಿಕಾ ಬೇಸರ ವ್ಯಕ್ತಪಡಿಸಿದೆ. ಪೆನ್ಸಿಲ್ವೇನಿಯಾದ ರಿಪಬ್ಲಿಕನ್ ಕಾಂಗ್ರೆಸ್ಸಿಗ ಬ್ರಿಯಾನ್ ಫಿಟ್ಜ್ಪ್ಯಾಟ್ರಿಕ್ ಸಂದರ್ಶನದಲ್ಲಿ ಮಾತನಾಡಿದ್ದು, "ನಾನು ನಿನ್ನೆಯಷ್ಟೇ ಭಾರತದ ರಾಯಭಾರಿಯನ್ನು ಭೇಟಿಯಾದೆ, ಯುಎನ್ನಲ್ಲಿ ಅವರು ಗೈರುಹಾಜರಾದ ಬಗ್ಗೆ, ನಾವು ತುಂಬಾ ನಿರಾಶೆಗೊಂಡಿದ್ದೇವೆ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ