• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Russia-India: ಕಳೆದ 5 ವರ್ಷದಲ್ಲಿ ರಷ್ಯಾದಿಂದ ಭಾರತಕ್ಕೆ ₹1.07 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ

Russia-India: ಕಳೆದ 5 ವರ್ಷದಲ್ಲಿ ರಷ್ಯಾದಿಂದ ಭಾರತಕ್ಕೆ ₹1.07 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ

 ರಷ್ಯಾ-ಭಾರತ

ರಷ್ಯಾ-ಭಾರತ

ಶಸ್ತ್ರಾಸ್ತ್ರ ಮತ್ತು ಸೇನಾ ಪರಿಕರಗಳ ಮಾರಾಟ ಒಪ್ಪಂದದಲ್ಲಿ ರಷ್ಯಾ ಅಮೆರಿಕಕ್ಕಿಂತ ಮುಂದಿದ್ದು, ರಷ್ಯಾದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವ ದೇಶಗಳ ಪೈಕಿ ಭಾರತವು ವಿಶ್ವದ ಅತಿದೊಡ್ಡ ದೇಶವಾಗಿದೆ. ರಷ್ಯಾದ ಒಟ್ಟು ಶಸ್ತ್ರಾಸ್ತ್ರಗಳ ಮಾರಾಟದ ಪೈಕಿ 20%ನಷ್ಟು ಪಾಲು ಭಾರತದ್ದೇ ಆಗಿದೆ ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ರಷ್ಯಾದಿಂದ ಭಾರತಕ್ಕೆ (Russia India Relationship) 1.07 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಸೇನಾ ಪರಿಕರಗಳನ್ನು (Military Equipment) ಪೂರೈಕೆ ಮಾಡಲಾಗಿದೆ. ಜೊತೆಗೆ ಹೆಚ್ಚುವರಿಯಾಗಿ 83 ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಸೇನಾ ಪರಿಕರಗಳಿಗಾಗಿ ಆರ್ಡರ್‌ ಮಾಡಲಾಗಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.


ರಷ್ಯಾದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವ ದೇಶಗಳ ಪೈಕಿ ಭಾರತವು ವಿಶ್ವದ ಅತಿದೊಡ್ಡ ದೇಶವಾಗಿದ್ದು, ರಷ್ಯಾದ ಒಟ್ಟು ಶಸ್ತ್ರಾಸ್ತ್ರಗಳ ಮಾರಾಟದ ಪೈಕಿ 20%ನಷ್ಟು ಪಾಲು ಭಾರತದ್ದೇ ಆಗಿದೆ ಎಂದು ತಿಳಿದುಬಂದಿದೆ. ಶಸ್ತ್ರಾಸ್ತ್ರ ಮತ್ತು ಸೇನಾ ಪರಿಕರಗಳ ಮಾರಾಟ ಒಪ್ಪಂದದಲ್ಲಿ ರಷ್ಯಾ ಅಮೆರಿಕಕ್ಕಿಂತ ಮುಂದಿದ್ದು, ರಷ್ಯಾದಿಂದ ಯುದ್ಧ ಶಸ್ತ್ರಾಸ್ತ್ರಗಳ ಖರೀದಿಗೆ ಭಾರತ ಮಾತ್ರವಲ್ಲದೇ, ಚೀನಾ, ಅಮೆರಿಕಾ ಸೇರಿದಂತೆ ಏಷ್ಯಾದ ಕೆಲವು ರಾಷ್ಟ್ರಗಳು ಆಸಕ್ತಿ ತೋರಿಸಿವೆ. ರಷ್ಯಾ ಪ್ರಸ್ತುತ ಭಾರತಕ್ಕೆ ಎಸ್‌–400 ಟ್ರಯಂಫ್‌ ಕ್ಷಿಪಣಿಗಳ ಪೂರೈಕೆಗೆ ಬದ್ಧವಾಗಿದ್ದು, ಸಕಾಲದಲ್ಲಿ ಪೂರೈಕೆ ಮಾಡಲಿದೆ ಎಂದು ಸೇನೆಯ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Rahul Gandhi: ರಷ್ಯಾದಂತೆ ಚೀನಾ ಭಾರತದ ಮೇಲೆ ದಾಳಿ ಮಾಡಬಹುದು! ಕಮಲ್ ಹಾಸನ್​ ಇಂಟರ್​ ವ್ಯೂನಲ್ಲಿ ರಾಹುಲ್ ಗಾಂಧಿ ಆತಂಕದ ಮಾತು


ಭಾರತ ರಷ್ಯಾದ ಅತಿದೊಡ್ಡ ಫ್ರೆಂಡ್


ಉಕ್ರೇನ್‌ ಮೇಲೆ ನಿರಂತರವಾಗಿ ರಷ್ಯಾ ದಾಳಿ ಮಾಡಿದ ನಂತರ ರಷ್ಯಾ ಮತ್ತು ಭಾರತ ಮಧ್ಯೆಯ ಬಾಂಧವ್ಯದ ಕುರಿತು ಅಮೆರಿಕಾ ನೇತೃತ್ವದ ಪಾಶ್ಚಿಮಾತ್ಯ ದೇಶಗಳಿಂದ ಹಲವಾರು ಒತ್ತಡಗಳಿದ್ದರೂ ಈ ಎರಡೂ ದೇಶಗಳು ತಮ್ಮ ಸ್ನೇಹ ಸಂಬಂಧವನ್ನು ಮುಂದುವರಿಸಿತು. ಅಲ್ಲದೇ ಭಾರತವು ಮಿಲಿಟರಿ-ತಾಂತ್ರಿಕ ಸಹಕಾರ ಕ್ಷೇತ್ರದಲ್ಲಿ ರಷ್ಯಾದ ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ ಎಂದು ರಷ್ಯಾದ ಫೆಡರಲ್ ಮುಖ್ಯಸ್ಥ ಡಿಮಿಟ್ರಿ ಶುಗೇವ್ ಹೇಳಿದ್ದಾರೆ.


ತಟಸ್ಥ ನಿಲುವು ತಾಳಿದ್ದ ಭಾರತ


ಕಳೆದ ವರ್ಷ ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ನಡೆದ ಸಂದರ್ಭದಲ್ಲಿ ಭಾರತ ತನ್ನ ತಟಸ್ಥ ನೀತಿಯನ್ನು ಅನುಸರಿಸಿತ್ತು. ರಷ್ಯಾ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದ ಕಾರಣ, ಇಬ್ಬರ ಜಗಳದ ಮಧ್ಯೆ ಮೂಗು ತೂರಿಸಲು ಭಾರತ ಹೋಗಿರಲಿಲ್ಲ. ಅಲ್ಲದೇ, ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸುವಂತೆಯೂ ವಿನಂತಿ ಮಾಡಿರಲಿಲ್ಲ. ಭಾರತ ಮತ್ತು ರಷ್ಯಾ ಮಧ್ಯೆ ಆಗಿರುವ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳಿಂದಾಗಿಯೇ ಭಾರತ ಉಕ್ರೇನ್ ದಾಳಿ ವಿಚಾರದಲ್ಲಿ ಮೌನ ತಾಳಿತ್ತು ಎಂದು ರಷ್ಯಾ ಮಾಧ್ಯಮ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Alaska: ಅಲಸ್ಕಾ ಪ್ರಾಂತ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮತ್ತೊಂದು ವಸ್ತುವನ್ನು ಹೊಡೆದರುಳಿಸಿದ ಅಮೆರಿಕಾ!


ಏಷ್ಯಾದ ರಾಷ್ಟ್ರಗಳು ಮುಖ್ಯವಾಗಿ ರಷ್ಯಾದಿಂದ ಎಸ್‌–400 ಟ್ರಿಂಫ್‌ ಕ್ಷಿಪಣಿ ಉಡಾವಣಾ ಸೌಲಭ್ಯ, ಅಲ್ಪ ಅಂತರದ ವಾಯುನೆಲೆ ಗುರಿಯಾಗಿಸಿ ಭೂಮಿಯಿಂದ ಪ್ರಯೋಗಿಸುವ ಕ್ಷಿಪಣಿಗಳಾದ ಒಸಾ, ಪೆಚೊರಾ, ಸ್ಟೆರ್ಲಾ, ಎಸ್‌ಯು–30, ಮಿಗ್‌–29 ಯುದ್ಧ ವಿಮಾನಗಳು, ಹೆಲಿಕಾಪ್ಟರ್‌, ಡ್ರೋನ್‌ಗಳ ಖರೀದಿಗೆ ಒಲವು ತೋರುತ್ತಿವೆ ಎಂದು ರಷ್ಯಾದ ಸೇನಾ ತಾಂತ್ರಿಕ ಸಹಕಾರ ಸೇವೆಯ ಮುಖ್ಯಸ್ಥ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ.


ರಷ್ಯಾದ ಮೇಲೆ ನಿರ್ಬಂಧ


ಸದ್ಯ ರಷ್ಯಾ ಉಕ್ರೇನ್ ಮೇಲೆ ಅಮಾನವೀಯವಾಗಿ ದಾಳಿ ಮಾಡಿದ ಬೆನ್ನಲ್ಲೇ ಹಕವು ರಾಷ್ಟ್ರಗಳು ಶಾಂತಿ ಕಾಪಾಡುವಂತೆ ರಷ್ಯಾಗೆ ಮನವಿ ಮಾಡಿದ್ದವು. ಅದ್ಯಾವುದಕ್ಕೂ ಬಗ್ಗದ ರಷ್ಯಾ ಉಕ್ರೇನ್ ಮೇಲೆ ನಿರಂತರವಾಗಿ ದಾಳಿ ಮಾಡಿತ್ತು. ಆ ಬಳಿಕ ಹಲವು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ.

Published by:Avinash K
First published: