• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • India-Russia: ಭಾರತೀಯ ಬ್ಯಾಂಕ್‌ಗಳಲ್ಲಿದೆ ರಷ್ಯಾದ ಕೋಟ್ಯಂತರ ಹಣ; ಆದರೆ ಮುಟ್ಟಂಗೂ ಇಲ್ಲ, ಬಿಡಂಗೂ ಇಲ್ಲ!

India-Russia: ಭಾರತೀಯ ಬ್ಯಾಂಕ್‌ಗಳಲ್ಲಿದೆ ರಷ್ಯಾದ ಕೋಟ್ಯಂತರ ಹಣ; ಆದರೆ ಮುಟ್ಟಂಗೂ ಇಲ್ಲ, ಬಿಡಂಗೂ ಇಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2022-23 ಹಣಕಾಸು ವರ್ಷದ ಮೊದಲ 11 ತಿಂಗಳುಗಳಲ್ಲಿ ರಷ್ಯಾಕ್ಕೆ ಭಾರತದ ಒಟ್ಟು ರಫ್ತು 11.6 ಪ್ರತಿ ಶತದಷ್ಟು ಕುಸಿದು $2.8 ಶತಕೋಟಿ ಡಾಲರ್‌ಗೆ ತಲುಪಿದೆ, ಆದರೆ ಆಮದುಗಳು ಸುಮಾರು ಐದು ಪಟ್ಟು ಏರಿಕೆಯಾಗಿ $41.56 ಶತಕೋಟಿಗೆ ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಮುಂದೆ ಓದಿ ...
  • Share this:

ರಷ್ಯಾವು ಭಾರತೀಯ ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಹೊಂದಿದ್ದು, ಆದರೆ ಅದನ್ನು ಬಳಸಲಾಗುವುದಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಶುಕ್ರವಾರ ಹೇಳಿದ್ದಾರೆ.


ಪಶ್ಚಿಮ ಭಾರತದ ರಾಜ್ಯ ಗೋವಾದ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಾವ್ರೊವ್ 'ಭಾರತದ ರೂಪಾಯಿ ಒಂದು ಸಮಸ್ಯೆಯಾಗಿದೆ. ನಾವು ಈ ಹಣವನ್ನು ಬಳಸಬೇಕಾಗಿದೆ. ಆದರೆ ಅದಕ್ಕಾಗಿ ಈ ರೂಪಾಯಿಗಳನ್ನು ಮತ್ತೊಂದು ಕರೆನ್ಸಿಗೆ ಪರಿವರ್ತಿಸಬೇಕು, ಅದು ಈಗ ಚರ್ಚೆಯ ಹಂತದಲ್ಲಿದೆ ಎಂದು ಹೇಳಿದರು.


2022-23 ಹಣಕಾಸು ವರ್ಷದ ಮೊದಲ 11 ತಿಂಗಳುಗಳಲ್ಲಿ ರಷ್ಯಾಕ್ಕೆ ಭಾರತದ ಒಟ್ಟು ರಫ್ತು 11.6 ಪ್ರತಿ ಶತದಷ್ಟು ಕುಸಿದು $2.8 ಶತಕೋಟಿ ಡಾಲರ್‌ಗೆ ತಲುಪಿದೆ, ಆದರೆ ಆಮದುಗಳು ಸುಮಾರು ಐದು ಪಟ್ಟು ಏರಿಕೆಯಾಗಿ $41.56 ಶತಕೋಟಿಗೆ ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.


ಕಚ್ಚಾ ತೈಲ ಆಮದು


ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಇತರೆ ದೇಶಗಳು ರಷ್ಯಾದಿಂದ ದೂರವುಳಿದ ಕಾರಣ ಕಳೆದ ವರ್ಷದಲ್ಲಿ ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ರಿಯಾಯಿತಿಯಲ್ಲಿ ಪಡೆದಿದ್ದರಿಂದ ಆಮದುಗಳಲ್ಲಿ ಏರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಡೇಟಾ ಗುಪ್ತಚರ ಸಂಸ್ಥೆ ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ, ಭಾರತವು ಏಪ್ರಿಲ್‌ನಲ್ಲಿ ದಿನಕ್ಕೆ ದಾಖಲೆಯ 1.68 ಮಿಲಿಯನ್ ಬ್ಯಾರೆಲ್‌ಗಳ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.


ರಷ್ಯಾದ ಬ್ಯಾಂಕುಗಳ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ಮತ್ತು SWIFT ಸಂದೇಶ ವ್ಯವಸ್ಥೆಯನ್ನು ಬಳಸಿಕೊಂಡು ವಹಿವಾಟುಗಳನ್ನು ನಿಷೇಧಿಸಿದ ನಂತರ, ಕ್ರೆಮ್ಲಿನ್ ಆರಂಭದಲ್ಲಿ ವಹಿವಾಟುಗಳಿಗೆ ತನ್ನದೇ ಆದ ಕರೆನ್ಸಿಯನ್ನು ಬಳಸಲು ಭಾರತವನ್ನು ಪ್ರೋತ್ಸಾಹಿಸಿತು. ಆದರೆ ಯುದ್ಧ ಪ್ರಾರಂಭವಾದ ಕೂಡಲೇ ರೂಬಲ್‌ನಲ್ಲಿನ ಏರಿಳಿತಗಳು ತೈಲ ಆಮದುಗಳಿಗೆ ರೂಪಾಯಿ-ರೂಬಲ್ ಕಾರ್ಯವಿಧಾನದ ಯೋಜನೆಗಳನ್ನು ಕೈಬಿಡಲಾಯಿತು.


ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಮಾಸ್ಕೋದೊಂದಿಗಿನ ಸಂಬಂಧವನ್ನು ಹಿಂತೆಗೆದುಕೊಳ್ಳುವ US ಒತ್ತಡವನ್ನು ಭಾರತ ವಿರೋಧಿಸಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.


ಇದನ್ನೂ ಓದಿ: King Charles ಪಟ್ಟಾಭಿಷೇಕದಲ್ಲಿ ಭಾಗಿಯಾದ ಬೆಂಗಳೂರಿನ ವೈದ್ಯರ ಅನುಭವ ಹೀಗಿದೆ


'ಫ್ರೋಜನ್ ಫಂಡ್ಸ್'


ರಷ್ಯಾಗೆ ವ್ಯಾಪಾರದಲ್ಲಿ ಅಸಮತೋಲನ ಎಂದರೆ "ಫ್ರೋಜನ್ ಫಂಡ್ಸ್" ಪ್ರಮಾಣವು ಹತ್ತಾರು ಶತಕೋಟಿ ಡಾಲರ್‌ಗಳಷ್ಟು ಬೆಲೆಬಾಳುತ್ತದೆ, ಆದರೆ ಭಾರತಿಯ ರೂಪಾಯಿಗಳನ್ನು ನಾವು ನೇರವಾಗಿ ಬಳಸಲು ಸಾಧ್ಯವಿಲ್ಲ" ಎಂದು ಆರ್ಥಿಕ ಅಭಿವೃದ್ಧಿ ಸಚಿವಾಲಯದ ಇಂಟರ್ನ್ಯಾಷನಲ್ ಎಕನಾಮಿಕ್ಸ್ ಮತ್ತು ಹಣಕಾಸು ಸಂಸ್ಥೆಯ ನಿರ್ದೇಶಕ ಅಲೆಕ್ಸಾಂಡರ್ ನೋಬೆಲ್ ಹೇಳಿದ್ದಾರೆ.


"ಭಾರತದ ಐತಿಹಾಸಿಕವಾಗಿ ಹೆಚ್ಚಿನ ಒಟ್ಟು ವ್ಯಾಪಾರ ಕೊರತೆಯಿಂದ ಪರಿಸ್ಥಿತಿಯು ಉಲ್ಬಣಗೊಂಡಿದೆ, ಇದು ಮೂರನೇ ದೇಶಗಳೊಂದಿಗೆ ವಹಿವಾಟುಗಳನ್ನು ತೆರವುಗೊಳಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ." ಎಂದು ಅಲೆಕ್ಸಾಂಡರ್ ನೋಬೆಲ್ ಹೇಳಿದ್ದಾರೆ. ಯುಎಸ್ ನಿರ್ಬಂಧಗಳನ್ನು ಉಲ್ಲಂಘಿಸದ ಪಾವತಿ ಕಾರ್ಯವಿಧಾನಗಳ ಕೊರತೆಯಿಂದಾಗಿ ದಕ್ಷಿಣ ಏಷ್ಯಾದ ರಾಷ್ಟ್ರಕ್ಕೆ ರಕ್ಷಣಾ ಸರಬರಾಜುಗಳು ಸ್ಥಗಿತಗೊಂಡಿವೆ, ಆದರೆ ರಷ್ಯಾ ಭಾರತಕ್ಕೆ ನಿರತರವಾಗಿ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳ ಪೂರೈಕೆ ಮಾಡುತ್ತ ಬಂದಿದೆ.


ಭಾರತದಿಂದ $2 ಶತಕೋಟಿಗಿಂತ ಹೆಚ್ಚಿನ ಶಸ್ತ್ರಾಸ್ತ್ರ ಪಾವತಿಗಳನ್ನು ಸುಮಾರು ಒಂದು ವರ್ಷದವರೆಗೆ ತಡೆಹಿಡಿಯಲಾಗಿದೆ, ಏಕೆಂದರೆ ನವದೆಹಲಿಯು ದ್ವಿತೀಯ ನಿರ್ಬಂಧಗಳನ್ನು ಉಲ್ಲಂಘಿಸುತ್ತದೆ ಮತ್ತು ಡಾಲರ್‌ಗಳಲ್ಲಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ, ಆದರೆ ರಷ್ಯಾವು ಖರೀದಿಗಳಿಗೆ ರೂಪಾಯಿಗಳನ್ನು ಸ್ವೀಕರಿಸಲು ಹಿಂಜರಿಯುತ್ತಿದೆ ಇದರಿಂದ ಪಾವತಿಗಳ ಸಮಾಸ್ಯೆ ಎದ್ದು ಕಾಣ್ಣುತ್ತಿದೆ.


ಇದನ್ನೂ ಓದಿ: China Projects: ಮದುವೆಗಳಾಗ್ತಿಲ್ಲ, ಮಕ್ಕಳು ಹುಟ್ತಿಲ್ಲ! ಇದಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದ ಚೀನಾ


ಭಾರತೀಯ ತೈಲ ಸಂಸ್ಕರಣಾಗಾರರು ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್‌ಗಳು, ರೂಬಲ್‌ಗಳು ಮತ್ತು ರೂಪಾಯಿಗಳನ್ನು ಬಳಸಿಕೊಂಡು ರಿಯಾಯಿತಿಯ ಕಚ್ಚಾ ತೈಲಕ್ಕಾಗಿ ಪಾವತಿಗಳನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ಗ್ರೂಪ್ ಆಫ್ ಸೆವೆನ್ ರಾಷ್ಟ್ರಗಳು (G-7) ಮತ್ತು ಅವರ ಯುರೋಪಿಯನ್ ಯೂನಿಯನ್ ಪಾಲುದಾರರು ನಿಗದಿಪಡಿಸಿದ $60-ಒಂದು-ಬ್ಯಾರೆಲ್ ಬೆಲೆಯ ಮಿತಿಗಿಂತ ಕಡಿಮೆ ಬೆಲೆಯಿದ್ದರೆ ವ್ಯಾಪಾರಗಳಿಗೆ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ವಿನಾಯಿತಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.


ರೂಪಾಯಿಗಳಲ್ಲಿ ಸಾಗರೋತ್ತರ ವ್ಯಾಪಾರವನ್ನು ಸುಗಮಗೊಳಿಸಲು ಮತ್ತು ಕಚ್ಚಾ ತೈಲವನ್ನು ಆಮುದು ಮಾಡಿಕೊಳ್ಳಲು ಭಾರತೀಯ ಸಾಲದಾತರು Sberbank PJSC ಮತ್ತು VTB ಬ್ಯಾಂಕ್ PJSC ಸೇರಿದಂತೆ ರಷ್ಯಾದ ಬ್ಯಾಂಕುಗಳಲ್ಲಿ ವಿಶೇಷ ವೋಸ್ಟ್ರೋ ಖಾತೆಗಳನ್ನು ತೆರೆದಿದ್ದಾರೆ.



ಕರೆನ್ಸಿ ನಿರ್ಬಂಧಗಳು ಎಂದರೆ ರಷ್ಯಾದ ರಫ್ತುದಾರರು ರೂಪಾಯಿಗಳನ್ನು ಸ್ವದೇಶಕ್ಕೆ ಹಿಂದಿರುಗಿಸಲು ತೊಂದರೆ ಎದುರಿಸುತ್ತಿದ್ದಾರೆ ಎಂದು ಬ್ಯಾಂಕ್ ಆಫ್ ರಷ್ಯಾ ಗವರ್ನರ್ ಎಲ್ವಿರಾ ನಬಿಯುಲ್ಲಿನಾ ಏಪ್ರಿಲ್ 28 ರಂದು ಹೇಳಿದ್ದಾರೆ.

First published: