HOME » NEWS » National-international » RUSSIA PRODUCES FIRST BATCH OF COVID 19 VACCINE FOR ANIMALS AS FUR FARMS QUEUE UP TO BUY STG LG

Corona Vaccine: ಮನುಷ್ಯರಿಗಾಯ್ತು.. ಈಗ ಪ್ರಾಣಿಗಳಿಗೂ ಕೋವಿಡ್ -19 ಲಸಿಕೆ ತಯಾರಿಸಿದ ರಷ್ಯಾ..!

ಮಾನವರಿಂದ ಪ್ರಾಣಿಗಳ ನಡುವೆ ಕೊರೊನಾ ವೈರಸ್ ಹರಡುವ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಈ ಲಸಿಕೆ ದುರ್ಬಲ ವರ್ಗದ ಪ್ರಾಣಿಗಳನ್ನು ರಕ್ಷಿಸಲು ಮತ್ತು ವೈರಲ್ ರೂಪಾಂತರಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ರಷ್ಯಾದ ನಿಯಂತ್ರಕ ಹೇಳಿದ್ದಾರೆ.

news18-kannada
Updated:May 2, 2021, 8:50 AM IST
Corona Vaccine: ಮನುಷ್ಯರಿಗಾಯ್ತು.. ಈಗ ಪ್ರಾಣಿಗಳಿಗೂ ಕೋವಿಡ್ -19 ಲಸಿಕೆ ತಯಾರಿಸಿದ ರಷ್ಯಾ..!
ಪ್ರಾಣಿಗಳಿಗೆ ಲಸಿಕೆ
  • Share this:
ರಷ್ಯಾ ಸ್ಪುಟ್ನಿಕ್‌ - V ಎಂಬ ಕೊರೊನಾ ಲಸಿಕೆಯನ್ನು ವಿಶ್ವದ ಎಲ್ಲ ರಾಷ್ಟ್ರಗಳಿಗಿಂತ ಮೊದಲೇ ತಯಾರಿಸಿ ಮಾರುಕಟ್ಟೆಗೂ ಬಿಡುಗಡೆ ಮಾಡಿತ್ತು. ಆ ಲಸಿಕೆ ಸಾಕಷ್ಟು ಯಶಸ್ವಿಯೂ ಆಗಿದೆ ಎಂದು ಲಸಿಕೆ ತಯಾರಿಕಾ ಕಂಪನಿ ಹೇಳಿಕೊಂಡಿದೆ. ಈ ನಡುವೆ, ಈಗ ಪ್ರಾಣಿಗಳಿಗೂ ಕೋವಿಡ್ - 19 ಲಸಿಕೆ ತಯಾರಿಸಿದೆ ರಷ್ಯಾ. ಕೋವಿಡ್ - 19 ಬರೀ ಮನುಷ್ಯರಿಗಷ್ಟೇ ಅಲ್ಲ ಕೆಲ ಪ್ರಾಣಿಗಳಿಗೂ ತಗುಲಿದ ಬಗ್ಗೆ ಹಲವು ವರದಿಗಲು ಬಂದಿದ್ದವು. ಈ ಹಿನ್ನೆಲೆ ವಿಶ್ವದ ಮೊದಲ ಬ್ಯಾಚ್ - 17,000 ಡೋಸ್ ಕೋವಿಡ್ - 19 ಲಸಿಕೆಗಳನ್ನು ಪ್ರಾಣಿಗಳಿಗೆ ಉತ್ಪಾದಿಸಿದೆ ಎಂದು ರಷ್ಯಾದ ಕೃಷಿ ನಿಯಂತ್ರಕ ಶುಕ್ರವಾರ ತಿಳಿಸಿದ್ದಾರೆ.

ನಾಯಿಗಳು, ಬೆಕ್ಕುಗಳು, ನರಿಗಳು ಮತ್ತು ಮಿಂಕ್‌ಗಳಲ್ಲಿ ಕೋವಿಡ್ -19 ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂದು ಪರೀಕ್ಷೆಗಳು ತೋರಿಸಿದ ನಂತರ ರಷ್ಯಾ ಮಾರ್ಚ್‌ನಲ್ಲಿ ಕಾರ್ನಿವಾಕ್-ಕೋವ್ (Carnivac-Cov) ಲಸಿಕೆಯನ್ನು ನೋಂದಾಯಿಸಿದೆ. ಮೊದಲ ಬ್ಯಾಚ್ ಅನ್ನು ರಷ್ಯಾದ ಹಲವಾರು ಪ್ರದೇಶಗಳಿಗೆ ಪೂರೈಸಲಾಗುವುದು ಎಂದು ನಿಯಂತ್ರಕ ರೊಸೆಲ್‌ಖೋಜ್ನಾಡ್ಜೋರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಜರ್ಮನಿ, ಗ್ರೀಸ್, ಪೋಲೆಂಡ್, ಆಸ್ಟ್ರಿಯಾ, ಕಜಕಿಸ್ತಾನ, ತಜಿಕಿಸ್ತಾನ, ಮಲೇಷ್ಯಾ, ಥೈಲ್ಯಾಂಡ್, ದಕ್ಷಿಣ ಕೊರಿಯಾ, ಲೆಬನಾನ್, ಇರಾನ್ ಮತ್ತು ಅರ್ಜೆಂಟೀನಾ ಕಂಪನಿಗಳು ಲಸಿಕೆ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಮಾನವರಿಂದ ಪ್ರಾಣಿಗಳ ನಡುವೆ ಕೊರೊನಾ ವೈರಸ್ ಹರಡುವ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಈ ಲಸಿಕೆ ದುರ್ಬಲ ವರ್ಗದ ಪ್ರಾಣಿಗಳನ್ನು ರಕ್ಷಿಸಲು ಮತ್ತು ವೈರಲ್ ರೂಪಾಂತರಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ರಷ್ಯಾದ ನಿಯಂತ್ರಕ ಹೇಳಿದ್ದಾರೆ.

Corona Help: ದುಡಿದ ಅರ್ಧ ಲಾಭದಲ್ಲಿ ಬಡವರಿಗೆ ದಿನಸಿ, ಔಷಧಿ, ಬಟ್ಟೆ, ಚಪ್ಪಲಿ ವಿತರಿಸುತ್ತಿರುವ ಕೋಲಾರದ ವ್ಯಕ್ತಿ

"ಸುಮಾರು 20 ಸಂಸ್ಥೆಗಳು ತಮ್ಮ ದೇಶಗಳಿಗೆ ಲಸಿಕೆ ನೋಂದಣಿ ಮತ್ತು ಪೂರೈಕೆ ಕುರಿತು ಮಾತುಕತೆ ನಡೆಸಲು ಸಿದ್ಧವಾಗಿವೆ. ವಿದೇಶದಲ್ಲಿ ನೋಂದಾಯಿಸುವ ಫೈಲ್, ನಿರ್ದಿಷ್ಟವಾಗಿ ಯುರೋಪಿಯನ್ ಒಕ್ಕೂಟದಲ್ಲಿ, ಸಿದ್ಧತೆಯಲ್ಲಿದೆ ಮತ್ತು ನೋಂದಣಿ ಪ್ರಕ್ರಿಯೆಗೆ ಕೂಡಲೇ ಬಳಸಲಾಗುವುದು" ಎಂದು ರಷ್ಯಾದ ವಾಚ್‌ಡಾಗ್ ಹೇಳಿದೆ.

ಕಳೆದ ವರ್ಷ ಡೆನ್ಮಾರ್ಕ್ ತನ್ನ ಜಮೀನಿನಲ್ಲಿ ಎಲ್ಲಾ 17 ಮಿಲಿಯನ್ ಮಿಂಕ್ ಅನ್ನು ಕಳೆದ ವರ್ಷ ಹತ್ಯೆ ಮಾಡಿತ್ತು. ಮನುಷ್ಯರಿಂದ ಮಿಂಕ್‌ಗೆ ವೈರಸ್‌ನ ಸ್ಟ್ರೈನ್‌ ಹಾದುಹೋಗಿದೆ ಮತ್ತು ವೈರಸ್‌ನ ರೂಪಾಂತರಿತ ತಳಿಗಳು ಜನರಲ್ಲಿ ಹೆಚ್ಚಾಗಿದೆ ಎಂದು ತೀರ್ಮಾನಿಸಿದ ನಂತರ ಅವುಗಳನ್ನು ಕೊಲ್ಲಲಾಯ್ತು.

ರಷ್ಯಾದ ತುಪ್ಪಳ ಸಾಕಣೆ ಕೇಂದ್ರಗಳು ಗ್ರೀಸ್, ಪೋಲೆಂಡ್ ಮತ್ತು ಆಸ್ಟ್ರಿಯಾದಲ್ಲಿನ ವ್ಯವಹಾರಗಳೊಂದಿಗೆ ಲಸಿಕೆ ಖರೀದಿಸಲು ಯೋಜಿಸಿವೆ ಎಂದು ರೊಸೆಲ್ಖೋಜ್ನಾಡ್ಜರ್ ಹೇಳಿದ್ದಾರೆ. ರಷ್ಯಾದ ತುಪ್ಪಳ ಕೃಷಿ ಉದ್ಯಮವು ಜಾಗತಿಕ ಮಾರುಕಟ್ಟೆಯ ಸುಮಾರು 3% ನಷ್ಟು ಪಾಲನ್ನು ಹೊಂದಿದೆ. ಸೋವಿಯತ್ ಎರಾದಲ್ಲಿ ಶೇ. 30 ರಷ್ಟು ಪಾಲು ಹೊಂದಿದ್ದು, ಅದು ಕಡಿಮೆಯಾಗಿದೆ ಎಂದೂ ಮುಖ್ಯ ವ್ಯಾಪಾರ ಸಂಸ್ಥೆ ಹೇಳಿದೆ.ರಷ್ಯಾದ ಸ್ಪುಟ್ನಿಕ್ V ಮಾನವ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್, ಇಜ್ವೆಸ್ಟಿಯಾ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದು, ಕೋವಿಡ್ - 19 ಮುಂದೆ ಪ್ರಾಣಿಗಳಿಗೂ ಹೆಚ್ಚು ತಗುಲುವ ಸಾಧ್ಯತೆ ಇದೆ ಎಂದಿದ್ದರು.

"ಸಾಂಕ್ರಾಮಿಕದ ಮುಂದಿನ ಹಂತವೆಂದರೆ ಕೃಷಿ ಮತ್ತು ಸಾಕು ಪ್ರಾಣಿಗಳ ಕೊರೊನಾ ವೈರಸ್‌ ಸೋಂಕು" ಎಂದು ಗಿಂಟ್ಸ್‌ಬರ್ಗ್ ಹೇಳಿದರು.

ಬೆಕ್ಕುಗಳು ಮತ್ತು ನಾಯಿಗಳು ಮಾನವರಿಗೆ ಕೊರೊನಾವೈರಸ್ ಅನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ ಮತ್ತು ಕೋವಿಡ್ - 19 ಪಾಸಿಟಿವ್‌ಗೊಳಗಾದರೂ ಅವುಗಳ ಲಕ್ಷಣಗಳು ಹೆಚ್ಚಾಗಿ ಸೌಮ್ಯವಾಗಿರುತ್ತದೆ ಎಂದು ಕೆಲವು ವಿಜ್ಞಾನಿಗಳು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಪ್ರಯೋಗಗಳು ಪ್ರಾರಂಭವಾದಾಗಿನಿಂದ ಕನಿಷ್ಠ ಆರು ತಿಂಗಳವರೆಗೆ ಪ್ರಾಣಿಗಳು ರೋಗನಿರೋಧಕ ಪ್ರತಿಕ್ರಿಯೆಯನ್ನು ತೋರಿಸುತ್ತಲೇ ಇರುತ್ತವೆ ಎಂದು ವಾಚ್‌ಡಾಗ್ ಹೇಳಿದೆ. ಪ್ರಾಣಿಗಳ ಮೇಲೆ ಲಸಿಕೆಯ ಪರಿಣಾಮವನ್ನು ಅಧ್ಯಯನ ಮಾಡುವುದನ್ನು ಮುಂದುವರಿಸುವುದಾಗಿಯೂ ಅದು ಹೇಳಿದೆ.
Youtube Video

ರಷ್ಯಾವು ಈಗಾಗಲೇ ಮಾನವರಿಗೆ ಮೂರು ಕೊರೊನಾ ವೈರಸ್‌ ಲಸಿಕೆಗಳನ್ನು ಹೊಂದಿದೆ. ಅವುಗಳಲ್ಲಿ ಉತ್ತಮವಾದದ್ದು ಸ್ಪುಟ್ನಿಕ್ V. ಅಲ್ಲದೆ, ಮಾಸ್ಕೋ ಎಪಿವಾಕ್ ಕೊರೊನಾ ಮತ್ತು ಕೋವಿವ್ಯಾಕ್‌ ಎಂಬ ಇತರ ಎರಡು ಲಸಿಕೆಗಳಿಗೂ ತುರ್ತು ಅನುಮೋದನೆ ನೀಡಿದೆ.
Published by: Latha CG
First published: May 2, 2021, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories