Vladimir Putin ಆರೋಗ್ಯದ ಬಗ್ಗೆ ಹಲವು ಅನುಮಾನ: ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರಾ ರಷ್ಯಾ ಅಧ್ಯಕ್ಷ?

ಪುಟಿನ್ ಹಾವಾಭಾವ, ಮುಖ ಚಹರೆ, ನಡವಳಿಕೆ ಎಲ್ಲವನ್ನು ಗಮನಿಸಿದ ಕೆಲವು ಆರೋಗ್ಯ ತಜ್ಞರು ಕ್ಯಾನ್ಸರ್ ಮತ್ತು ಪಾರ್ಕಿನ್ಸನ್‌, ಸ್ಟಿರಾಯ್ಡ್ ಬಳಕೆ ಮತ್ತು ಸೈಕೋಸಿಸ್ ಅಥವಾ ವ್ಯಕ್ತಿತ್ವ ಅಸ್ವಸ್ಥತೆಯವರೆಗಿನ ಹಲವಾರು ಕಾರಣಗಳನ್ನು ಸೂಚಿಸಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್​

ರಷ್ಯಾ ಅಧ್ಯಕ್ಷ ಪುಟಿನ್​

  • Share this:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬುವುದರ ಬಗ್ಗೆ ವದಂತಿಗಳು ಜೋರಾಗಿ ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿಯಂತೆ ಅಸ್ವಸ್ಥರಾದಂತೆ ಕಾಣುವ ಪುಟಿನ್ ಅವರ ಕೆಲವು ವಿಡಿಯೋಗಳು ಲಭ್ಯವಾಗಿವೆ. ಪುಟಿನ್ ಅವರ ದೇಹವು ನಡುಗುವಂತೆ ಕಾಣವು ಕೆಲವು ವಿಡಿಯೋಗಳು ಅವರ ಆರೋಗ್ಯದ (Health) ಬಗ್ಗೆ ಸಂಶಯಗಳನ್ನು ಹೆಚ್ಚಿಸಿವೆ. ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆ ಬಗ್ಗೆ ಫೆಬ್ರವರಿಯಲ್ಲಿ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗೆ ಪುಟಿನ್ ಸಭೆ ನಡೆಸಿದರು. ಈ ವೇಳೆ ಅಲೆಕ್ಸಾಂಡರ್ ಲುಕಾಶೆಂಕೊ ಅವರನ್ನು ಸ್ವಾಗತಿಸುವ ವೇಳೆ ಪುಟಿನ್ ಅವರ ಕೈಗಳು ನಡುಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ, ಪುಟಿನ್ ಅವರು ಬೆಲಾರಸ್ ಅಧ್ಯಕ್ಷರನ್ನು ಅಪ್ಪಿಕೊಳ್ಳುವ ಮೊದಲು ಎದೆಯ ಮೇಲೆ ಕೈಯನ್ನು ಹಿಡಿದುಕೊಂಡಿದ್ದು ಸಹ ವದಂತಿಗಳಿಗೆ ಪುಷ್ಠಿ ನೀಡಿದೆ. 

ಇನ್ನೂ ಅತ್ಯಂತ ಅಸಹಜ ಸ್ಥಿತಿ

ಮೈ ನಡುಕು, ಎದೆ ಮೇಲೆ ಕೈ ಹಿಡಿದುಕೊಂಡಿರುವ ಪುಟಿನ್ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರಬಹುದೆಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಮೊದಲ ಬಾರಿಗೆ ವಿಡಿಯೋ ತುಣುಕನ್ನು ಪ್ರಕಟಿಸಿದ ವಿಸೆಗ್ರಾಡ್ 24, ಡೈಲಿ ಎಕ್ಸ್‌ಪ್ರೆಸ್ ಪ್ರಕಾರ, "ಪ್ರಾಯಶಃ ಪುಟಿನ್ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂಬುವುದಕ್ಕೆ ಇದು ಸ್ಪಷ್ಟ ವಿಡಿಯೋ" ಎಂದು ಹೇಳಿದೆ. ಇತ್ತೀಚಿನ ವಿಡಿಯೋಗೆ ಪ್ರತಿಕ್ರಿಯಿಸಿದ ಎಮಿಲಿ ಡೀನ್ಸ್, ಮೆಸಾಚುಸೆಟ್ಸ್‌ನ ವೈದ್ಯಕೀಯ ವೈದ್ಯ ಮತ್ತು ಮನೋವೈದ್ಯರು, ಇದು "ಇನ್ನೂ ಅತ್ಯಂತ ಅಸಹಜ ಸ್ಥಿತಿ" ಎಂದು ವಿವರಿಸಿದ್ದಾರೆ.

ರಷ್ಯಾ ಅಧ್ಯಕ್ಷನ ಆರೋಗ್ಯ ಕುರಿತು ಚರ್ಚೆ

ಪುಟಿನ್‌ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಪ್ರಶ್ನೆ ಚರ್ಚೆಯಾಗುತ್ತಿದ್ದು, ಪಾರ್ಕಿನ್ಸನ್ ರೋಗದ ಲಕ್ಷಣಗಳು ನಡುಕ, ಠೀವಿ ಮತ್ತು ಚಲನೆಯ ನಿಧಾನತೆಯನ್ನು ಒಳಗೊಂಡಿರುತ್ತದೆ. ಇದರಂತೆ ಪುಟಿನ್ ಸಹ ಕೈ ಕಾಲು ನಡುಗುವಿಕೆ, ನಿಧಾನ ನಡಿಗೆಯಂತಹ ಅಸಹಜ ಸ್ಥಿತಿಯನ್ನು ತೋರಿದ್ದಾರೆ, ರಷ್ಯಾ ಉಕ್ರೇನ್ ಮೇಲೆ ಯುದ್ಧ ಪ್ರಾರಂಭಿಸಿದ ನಂತರ ಪುಟಿನ್ ಅವರ ಆರೋಗ್ಯದ ಕುಸಿತದ ಕುರಿತು ಚರ್ಚೆಯು ಹೊರಹೊಮ್ಮಿದೆ, ಕೆಲವು ವರದಿಗಳು ಅಧ್ಯಕ್ಷರಿಗೆ ಕ್ಯಾನ್ಸರ್ ಎಂದು ಹೇಳಿವೆ.

ಇದನ್ನು ಓದಿ: Prashant Kishor ಕಾಂಗ್ರೆಸ್‌ಗೆ ಸೇರುವುದಿಲ್ಲ ಎಂದು ಮೊದಲ ದಿನವೇ ಭವಿಷ್ಯ ನುಡಿದಿದ್ದ ರಾಹುಲ್‌ ಗಾಂಧಿ..!

ಮುಖದಲ್ಲಿ ಕಾಣುತ್ತಿದೆ ಹಲವು ಚಹರೆ

ಪುಟಿನ್ ಆರೋಗ್ಯ ಪರಿಸ್ಥಿತಿ ಕೈಕೊಟ್ಟಿದೆ ಎಂದು ಹೇಳಿರುವ ಇನ್ನೊಂದು ವಿಡಿಯೋದಲ್ಲಿ ಪುಟಿನ್ ಟೇಬಲ್ ಅನ್ನು ಒತ್ತಿ ಒಂದು ರೀತಿ ಬೆಂಬಲವಾಗಿ ಹಿಡಿದುಕೊಂಡ ಹಾಗೆ ಕಾಣುತ್ತದೆ. ಮತ್ತು ಅವರ ಪಾದವನ್ನು ನೆಲಕ್ಕೆ ಕುಟ್ಟುತ್ತಿರುವುದನ್ನು ಕಾಣಬಹುದು. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ಶೋಯಿಗು ಅವರೊಂದಿಗೆ ಕುಳಿತಿರುವ ಪುಟಿನ್ ಮುಖದ ಚಹರೆ ರೋಗ ಲಕ್ಷಣಗಳನ್ನು ಎತ್ತಿ ತೋರಿಸಿದೆ. ಆ ವಿಡಿಯೋದಲ್ಲಿ ಅವರು ಹೆಚ್ಚು ಸುಸ್ತಾದಂತೆ ಮತ್ತು ನಿರಾಸಕ್ತಿಯಿಂದ ಕುಳಿತಿರುವಂತೆ ಕಾಣುತ್ತದೆ ಎಂದು ದಿ ಸನ್ ವಿಡಿಯೋವನ್ನು ಪೋಸ್ಟ್ ಮಾಡಿ ಹೇಳಿದೆ.

ಪುಷ್ಠಿ ನೀಡಿದ ವಿಡಿಯೋ

ಪುಟಿನ್ ಅವರು ಈಸ್ಟರ್ ಹಬ್ಬದ ಆಚರಣೆ ವೇಳೆ ಅಸ್ಥಿರ ಮತ್ತು ವಿಚಲಿತರಾಗಿ ಕಾಣಿಸಿಕೊಂಡ ವಿಡಿಯೋ ವೈರಲ್ ಆದ ನಂತರ ಇವರು ಪಾರ್ಕಿನ್ಸನ್ ಅಥವಾ ಇನ್ನೊಂದು ಗಂಭೀರ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಈ ವಿಡಿಯೋ ಮತ್ತಷ್ಟು ಉತ್ತೇಜನ ನೀಡಿದೆ. ಪುಟಿನ್ ಹಾವಾಭಾವ, ಮುಖ ಚಹರೆ, ನಡವಳಿಕೆ ಎಲ್ಲವನ್ನು ಗಮನಿಸಿದ ಕೆಲವು ಆರೋಗ್ಯ ತಜ್ಞರು ಕ್ಯಾನ್ಸರ್ ಮತ್ತು ಪಾರ್ಕಿನ್ಸನ್‌, ಸ್ಟಿರಾಯ್ಡ್ ಬಳಕೆ ಮತ್ತು ಸೈಕೋಸಿಸ್ ಅಥವಾ ವ್ಯಕ್ತಿತ್ವ ಅಸ್ವಸ್ಥತೆಯವರೆಗಿನ ಹಲವಾರು ಕಾರಣಗಳನ್ನು ಸೂಚಿಸಿದ್ದಾರೆ.

ಇದನ್ನು ಓದಿ: Assamನಲ್ಲಿ 7 ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ ನೀಡಿದ ಪ್ರಧಾನಿ, ರತನ್​ ಟಾಟಾ

ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದ ನಂತರ ರಷ್ಯಾದ ಅಧ್ಯಕ್ಷರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕೆಲವು ಅಸಹಜ ಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಆದರೂ, ವೈದ್ಯಕೀಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಅವರಿಗೆ ನಡುಕವಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಸಾವಿರಾರು ಜನರು ಮರಣ ಹೊಂದಿದ್ದಾರೆ ಮತ್ತು ಲಕ್ಷಾಂತರ ಉಕ್ರೇನಿಯನ್ನರು ಸ್ಥಳಾಂತರಗೊಂಡಿದ್ದಾರೆ. ಕಳೆದ ವಾರ ರಷ್ಯಾ ಮಾರಿಯುಪೋಲ್‌ನಲ್ಲಿ ವಿಜಯವನ್ನು ಘೋಷಿಸಿದೆ. ಮತ್ತು ಡಾನ್ಬಾಸ್ ಪ್ರದೇಶದ ಮೇಲೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಯುದ್ದವನ್ನು ಮುಂದುವರೆಸಿದ್ದಾರೆ.
Published by:Seema R
First published: