Nuclear Bomb Alert: ರಷ್ಯಾ ಉಕ್ರೇನ್ ಯುದ್ಧದಲ್ಲಿ ಪರಮಾಣು ಬಾಂಬ್ ಭೀತಿ; ಹೈ ಅಲರ್ಟ್​ನಲ್ಲಿರಲು ಸೂಚಿಸಿದ ಪುಟಿನ್

ರಷ್ಯಾ ಜಗತ್ತಿನ ಅತಿದೊಡ್ಡ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಬೃಹತ್ ಸಂಗ್ರಹವನ್ನು ಹೊಂದಿದೆ.

ವ್ಲಾಡಿಮಿರ್ ಪುಟಿನ್

ವ್ಲಾಡಿಮಿರ್ ಪುಟಿನ್

  • Share this:
ಉಕ್ರೇನ್ ಮತ್ತು ರಷ್ಯಾದ ಯುದ್ಧ (Russia vs Ukraine War) ಸದ್ಯ ತಣ್ಣಗಾಗುವಂತೆ ಕಾಣುತ್ತಿಲ್ಲ. ದಿನಕ್ಕೊಂದು ಹೊಸ ಆದೇಶ ಹೊರಡಿಸುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಯುದ್ಧವನ್ನು ಮುಂದುವರೆಸುವ ಮತ್ತೊಂದು ಸೂಚನೆಯನ್ನು ತಮ್ಮ ಆಕ್ರಮಣಕಾರಿ ಸೈನ್ಯ ಪಡೆಗೆ (Russian Army) ನೀಡಿದ್ದಾರೆ. ಹೌದು, ಉಕ್ರೇನ್ ಮೇಲೆ ನಡೆಯುತ್ತಿರುವ ಯುದ್ಧ ಮುಂದುವರೆದಿರುವಂತೆಯೇ ರಷ್ಯಾದ ಪರಮಾಣು ಪಡೆಗಳಿಗೆ ‘ಹೈ ಅಲರ್ಟ್’ ಆಗಿರುವಂತೆ  ರಷ್ಯಾ ಅಧ್ಯಕ್ಷ ಪುಟಿನ್ ಆದೇಶ ನೀಡಿದ್ದಾರೆ ಎಂದು ಹೇಳಲಾಗಿದೆ. ಉಕ್ರೇನ್ ಮೇಲಿನ ಯುದ್ಧ ಮುಂದುವರೆದಿರುವಂತೆಯೇ ರಷ್ಯಾದ ಪರಮಾಣು ಪಡೆಗಳಿಗೆ ‘ಹೈ ಅಲರ್ಟ್’ (Nuclear Bomb Alert) ಆಗಿರುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ ನೀಡಿದ್ದಾರೆ.

ವ್ಲಾಡಿಮಿರ್ ಪುಟಿನ್ ಅವರು ತಮ್ಮ ರಕ್ಷಣಾ ಮುಖ್ಯಸ್ಥರಿಗೆ ದೇಶದ ಪರಮಾಣು "ನಿರೋಧಕ ಪಡೆಗಳನ್ನು" ಹೆಚ್ಚಿನ ಎಚ್ಚರಿಕೆಯಿಂದ ಇರುವಂತೆ ಆದೇಶಿಸಿದ್ದು, ಇದು ಯುದ್ಧದ ಮತ್ತಷ್ಟು ಭೀಕರತೆಗೆ ಸಾಕ್ಷಿಯಾಗಲಿದೆ. ಅಲ್ಲದೆ ಅಂತಾರಾಷ್ಟ್ರೀಯ ಉದ್ವಿಗ್ನತೆ ಹೆಚ್ಚುವಂತೆ ಮಾಡಿದೆ.  ಪುಟಿನ್ ಪಾಶ್ಚಿಮಾತ್ಯ ರಾಷ್ಟ್ರಗಳು ತನ್ನ ದೇಶದ ವಿರುದ್ಧ “ಸ್ನೇಹಿಯಲ್ಲದ” ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ನ್ಯಾಟೋ ನಾಯಕರ ರಷ್ಯಾ ವಿರೋಧಿ ಹೇಳಿಕೆಗಳು ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ವಿಧಿಸಲಾಗಿರುವ ಆರ್ಥಿಕ ನಿರ್ಬಂಧಗಳು ಪುಟಿನ್ ಅವರನ್ನು ವಿಚಲಿತರನ್ನಾಗಿ ಮಾಡಿವೆ ಎಂಬ ಮಾತುಗಳೂ ಈಗ ಕೇಳಿಬಂದಿವೆ.

ಜಗತ್ತಿನ ಅತಿ ದೊಡ್ಡ ಪರಮಾಣು ಸಂಗ್ರಹಕ ದೇಶ ರಷ್ಯಾ

ಈಗಾಗ್ಲೆ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಕುರಿತು ಅಂತಾರಾಷ್ಟ್ರೀಯ ಉದ್ವಿಗ್ನತೆ ಹೆಚ್ಚುತ್ತಿದ್ದು, ಪುಟಿನ್ ಆದೇಶವು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಷ್ಯಾ ಜಗತ್ತಿನ ಅತಿದೊಡ್ಡ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಬೃಹತ್ ಸಂಗ್ರಹವನ್ನು ಹೊಂದಿದೆ. ಇದು ದೇಶದ ಪ್ರತಿಬಂಧಕ ಪಡೆಗಳ ಬೆನ್ನೆಲುಬಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Russia ಆಯ್ತು, ಈಗ ದಾಳಿಗೆ ಸಜ್ಜಾದ ಚೀನಾ! ಏನು ಮಾಡೋದಕ್ಕೆ ಹೊರಟಿದೆ ಡ್ರ್ಯಾಗನ್ ರಾಷ್ಟ್ರ?

"ರಷ್ಯಾದ ಸೈನ್ಯದ ಪ್ರತಿಬಂಧಕ ಪಡೆಗಳನ್ನು ವಿಶೇಷ ಯುದ್ಧ ಸೇವೆಗೆ ಒಳಪಡಿಸಲು ನಾನು ರಕ್ಷಣಾ ಮಂತ್ರಿ ಮತ್ತು ರಷ್ಯಾದ ಸಶಸ್ತ್ರ ಪಡೆಗಳ ಸಾಮಾನ್ಯ ಸಿಬ್ಬಂದಿಯ ಮುಖ್ಯಸ್ಥರಿಗೆ ಆದೇಶಿಸುತ್ತೇನೆ" ಎಂದು ಪುಟಿನ್ ಹೇಳಿದರು. ಪಾಶ್ಚಿಮಾತ್ಯ ದೇಶಗಳು ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶಕ್ಕೆ ಸ್ನೇಹಪರವಾಗಿಲ್ಲ ಎಂದು ನೀವು ನೋಡುತ್ತಿದ್ದೀರಿ, ಅವು ಕಾನೂನುಬಾಹಿರ ನಿರ್ಬಂಧಗಳನ್ನು ಹೇರುತ್ತಿವೆ ಎಂದು ಪುಟಿನ್ ದೂರದರ್ಶನದ ಭಾಷಣವೊಂದರಲ್ಲಿ ಈ ಬಗ್ಗೆ ಹೇಳಿದರು.

ಜಗ್ಗುತ್ತಿಲ್ಲ ಉಕ್ರೇನಿಯನ್ ಪಡೆಗಳು

ಪ್ರಮುಖ NATO ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಸಹ ನಮ್ಮ ದೇಶದ ವಿರುದ್ಧ ಆಕ್ರಮಣಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವ ಶೋಯಿಗು ಉತ್ತರಿಸಿದರು. ರಷ್ಯಾದ ಪಡೆಗಳು ಉತ್ತರ, ಪೂರ್ವ ಮತ್ತು ದಕ್ಷಿಣದಿಂದ ಉಕ್ರೇನ್‌ಗೆ ಒತ್ತಡ ಹಾಕಲಾಗಿದೆ. ಆದರೆ ಉಕ್ರೇನಿಯನ್ ಪಡೆಗಳಿಂದ ತೀವ್ರ ಪ್ರತಿರೋಧವನ್ನು ರಷ್ಯಾ ಎದುರಿಸುತ್ತಿದ್ದು, ಉಕ್ರೇನ್‌ನ ಪ್ರತಿರೋಧ ಮಾಸ್ಕೋವನ್ನು ಅಚ್ಚರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Russia-Ukraine War: ಯುದ್ಧ ಸಂಕಷ್ಟದಲ್ಲಿ ಆಶ್ರಯ ನೀಡಿದ್ದ ಕುಟುಂಬವನ್ನು ಬಿಟ್ಟು ಭಾರತಕ್ಕೆ ಬರಲಾರೆ ಎಂದ ದಿಟ್ಟ ಹುಡುಗಿ! ಯಾರವಳು?

ರಷ್ಯಾ ದೇಶವು ಎಲ್ಲಾ ದಿಕ್ಕಿನಿಂದಲೂ ಉಕ್ರೇನ್ ಅನ್ನು ಆವರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಉಕ್ರೇನಿಯನ್ ಪಡೆಗಳು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿವೆ ಎನ್ನಲಾಗಿದೆ. ಇದರಿಂದಾಗಿ ರಷ್ಯಾದ ಸೇನೆಯು ಹತಾಶಗೊಂಡಿದೆ ಮತ್ತು ಹಲವಾರು ಸೈನಿಕರು ಶರಣಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮಾತುಕತೆ ಆಗಲಿದೆಯೇ ಫಲಪ್ರದ?

ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ವಿಶ್ವಸಮುದಾಯದ ಎಚ್ಚರಿಕೆಯನ್ನು ತಿರಸ್ಕರಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಯುದ್ಧ ಘೋಷಿಸಿದ್ದು, ಉಕ್ರೇನ್‌ನ ಪ್ರಮುಖ 11 ನಗರಗಳನ್ನು ಗುರಿಯಾಗಿಸಿಕೊಂಡು ಸೇನಾ ದಾಳಿ ನಡೆಸುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ನ್ಯಾಟೋ ಕಾರಣವಾಗಿದ್ದು, ಯುದ್ಧ ಇನ್ನೂ ಮುಂದುವರೆಯುತ್ತಿದೆ. ಬೆಲಾರಸ್‌ನಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಒಪ್ಪಿಕೊಂಡಿದ್ದು, ಅನಿರ್ದಿಷ್ಟ ಸ್ಥಳದಲ್ಲಿ ಎರಡೂ ದೇಶಗಳು ಭೇಟಿಯಾಗಲಿವೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಸಂದೇಶದಲ್ಲಿ ಹೇಳಿದ್ದರು.

ಇದನ್ನೂ ಓದಿ: Photos: ಉಕ್ರೇನ್ ದಾಳಿಯ ಭೀಕರ ಫೋಟೋಗಳು! ನಿಮ್ಮ ಎದೆ ನಡುಗಿಸುತ್ತೆ ಹುಷಾರ್…

"ನಾವು ಶರಣಾಗುವುದಿಲ್ಲ, ನಮ್ಮ ಭೂಪ್ರದೇಶದ ಒಂದು ಇಂಚನ್ನೂ ನಾವು ಬಿಟ್ಟುಕೊಡುವುದಿಲ್ಲ" ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ಯುದ್ಧ ಆರಂಭವಾದ ನಂತರ ಉಭಯ ಪಕ್ಷಗಳ ನಡುವಿನ ಮೊದಲ ಸಾರ್ವಜನಿಕ ಸಂಪರ್ಕಕ್ಕೆ ಮುಂಚಿತವಾಗಿ ಹೇಳಿದ್ದಾರೆ.
Published by:guruganesh bhat
First published: