• Home
  • »
  • News
  • »
  • national-international
  • »
  • POK: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ ಅಂತ ತೋರಿಸಿದ ರಷ್ಯಾ ನಕಾಶೆ! ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ!

POK: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ ಅಂತ ತೋರಿಸಿದ ರಷ್ಯಾ ನಕಾಶೆ! ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ!

ಪಿಒಕೆ ಭಾರತದ ಭಾಗ ಎಂದ ರಷ್ಯಾ!

ಪಿಒಕೆ ಭಾರತದ ಭಾಗ ಎಂದ ರಷ್ಯಾ!

ಭಾರತದ ಮಿತ್ರ ರಾಷ್ಟ್ರ ರಷ್ಯಾ (Russia) ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆಯನ್ನು (POK) ಭಾರತದ್ದೇ ಭಾಗ ಅಂತ ಘಂಟಾಘೋಷವಾಗಿ ಹೇಳಿದೆ. ಇತ್ತೀಚೆಗೆ ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ (Russian news agency Sputnik) ಬಿಡುಗಡೆ ಮಾಡಿದ ನಕ್ಷೆಯಿಂದ ಪಾಕಿಸ್ತಾನಕ್ಕೆ ಮುಖಭಂಗ ಉಂಟಾಗಿದೆ!

ಮುಂದೆ ಓದಿ ...
  • Share this:

ಮಾಸ್ಕೋ, ರಷ್ಯಾ: ಭಾರತದಿಂದ (India) ಬೇರೆಯಾಗಿ ಪಾಕಿಸ್ತಾನವೇನೋ (Pakistan) ಬೇರೆ ರಾಷ್ಟ್ರವಾಯ್ತು. ಆದ್ರೆ ಭಾರತದ ಭಾಗವಾಗಿರುವ ಕಾಶ್ಮೀರ (Kashmir) ಮಾತ್ರ ನನಗೇ ಸೇರಬೇಕು ಅಂತ ಪಾಕಿಸ್ತಾನ ಮೊದಲಿನಿಂದಲೂ ಹರಸಾಹಸ ಪಡುತ್ತಿದೆ. ಕಾಶ್ಮೀರ ಸಮಸ್ಯೆ (Kashmir Problems) ಎನ್ನುವುದು ಭಾರತ ಹಾಗೂ ಪಾಕಿಸ್ತಾನದ ಪಾಲಿಗೆ ಎಂದೂ ಮುಗಿಯದ ಸಮಸ್ಯೆಯಂತೇ ಆಗಿದೆ. ಇದೀಗ ಭಾರತದ ಮಿತ್ರ ರಾಷ್ಟ್ರ ರಷ್ಯಾ (Russia) ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆಯನ್ನು (POK) ಭಾರತದ್ದೇ ಭಾಗ ಅಂತ ಘಂಟಾಘೋಷವಾಗಿ ಹೇಳಿದೆ. ಇತ್ತೀಚೆಗೆ ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ (Russian news agency Sputnik) ಬಿಡುಗಡೆ ಮಾಡಿದ ನಕ್ಷೆಯು (Map) ಜಮ್ಮು ಕಾಶ್ಮೀರ (Jammu and Kashmir), ಲಡಾಖ್ (Ladakh) ಹಾಗೂ ಅರುಣಾಚಲ ಪ್ರದೇಶದ (Arunachal Pradesh) ಜೊತೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಯ್ ಚಿನ್ (Aksai Chin) ಭಾರತದ ಭಾಗವೆಂದು ತೋರಿಸಿದೆ. ಇದರಿಂದ ಮತ್ತೊಮ್ಮೆ ಪಾಕಿಸ್ತಾನಕ್ಕೆ ಮುಜುಗರದ ಪ್ರಸಂಗ ಎದುರಾದಂತಾಗಿದೆ.


ಪಿಒಕೆ ಭಾರತದ ಭಾಗ ಎಂದ ರಷ್ಯಾ!


ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಬಿಡುಗಡೆ ಮಾಡಿದ ನಕ್ಷೆಯು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯ್ ಚಿನ್ ಜೊತೆಗೆ ಇಡೀ ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿ ತೋರಿಸುತ್ತಿದೆ. ಭಾರತದ ಸ್ನೇಹಿತ ರಷ್ಯಾ ಕೂಡ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಅರುಣಾಚಲ ಪ್ರದೇಶಗಳನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸಿದೆ. ರಷ್ಯಾ ಸರ್ಕಾರ ನೀಡಿರುವ ಎಸ್‌ಸಿಒ (SCO) ಸದಸ್ಯ ರಾಷ್ಟ್ರಗಳ ನಕ್ಷೆಯಲ್ಲಿ ಈ ರೀತಿ ತೋರಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯ್ ಚಿನ್ ಮತ್ತು ಸಂಪೂರ್ಣ ಅರುಣಾಚಲ ಪ್ರದೇಶವನ್ನು ನಮ್ಮ ಭಾರತದ ಭಾಗವೆಂದು ತೋರಿಸುತ್ತದೆ. ಪಾಕಿಸ್ತಾನ ಮತ್ತು ಚೀನಾ ಎಸ್‌ಸಿಒ ಸದಸ್ಯ ರಾಷ್ಟ್ರಗಳಾಗಿದ್ದರೂ, ಮಾಸ್ಕೋ ಈ ಕ್ರಮ ಕೈಗೊಂಡಿದೆ.


ಪಾಕಿಸ್ತಾನ, ಚೀನಾಕ್ಕೆ ಮುಖಭಂಗ


ಈ ನಕ್ಷೆಯನ್ನು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವ ರಷ್ಯಾದ ಸರ್ಕಾರವು ಬಿಡುಗಡೆ ಮಾಡಿದೆ. ಪಾಕಿಸ್ತಾನ ಮತ್ತು ಚೀನಾ ಸಹ ಶಾಂಘೈ ಸಹಕಾರ ಸದಸ್ಯರಾಗಿದ್ದಾರೆ ಎಂಬುದನ್ನು ಲೆಕ್ಕಿಸದೆ ರಷ್ಯಾ ಈ ನಕ್ಷೆಯನ್ನು ಬಿಡುಗಡೆ ಮಾಡಿದೆ. ರಷ್ಯಾ ಬಿಡುಗಡೆ ಮಾಡಿರುವ ಈ ನಕ್ಷೆಯು ವಿಶ್ವ ವೇದಿಕೆ ಮತ್ತು ಶಾಂಘೈ ಸಹಕಾರ ಸಂಸ್ಥೆಯ ನಡುವೆ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.


ಇದನ್ನೂ ಓದಿ: Google ಸಂಸ್ಥೆಗೆ ಬಿತ್ತು ಬರೋಬ್ಬರಿ 1337 ಕೋಟಿ ರೂಪಾಯಿ ದಂಡ! ಇಂಟರ್‌ನೆಟ್‌ ದೈತ್ಯ ಕಂಪನಿ ಮಾಡಿದ ತಪ್ಪೇನು?


ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತಷ್ಟು ಬಲ


ಈ ನಕ್ಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಎಸ್‌ಸಿಒ ಒಳಗೆ ಜಮ್ಮು ಮತ್ತು ಕಾಶ್ಮೀರದ ವಿಷಯದ ಬಗ್ಗೆ ಭಾರತದ ಕಡೆಯನ್ನು ಮತ್ತಷ್ಟು ಬಲಪಡಿಸಿದೆ. ಇತ್ತೀಚೆಗೆ ಯುಎಸ್ ರಾಯಭಾರಿ ಪಿಒಕೆಗೆ ಭೇಟಿ ನೀಡಿದ್ದರು. ಅವರು ಈ ಪ್ರದೇಶವನ್ನು 'ಆಜಾದ್ ಕಾಶ್ಮೀರ' ಎಂದು ಕರೆದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದವನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ಪಾತ್ರವನ್ನು ಜರ್ಮನಿಯ ವಿದೇಶಾಂಗ ಸಚಿವರು ಇತ್ತೀಚೆಗೆ ಸೂಚಿಸಿದ್ದರು.


ಇದನ್ನೂ ಓದಿ: World Green City Award 2022: ಹೈದರಾಬಾದ್‌ಗೆ ವರ್ಲ್ಡ್​ ಗ್ರೀನ್ ಸಿಟಿ ಪ್ರಶಸ್ತಿ ಗರಿ; ಪ್ಯಾರಿಸ್, ಮೆಕ್ಸಿಕೋ ನಗರವನ್ನೇ ಹಿಂದಿಕ್ಕಿದ ಮುತ್ತಿನ ನಗರಿ!


ಭಾರತದ ಮಿತ್ರರಾಷ್ಟ್ರವಾಗಿರುವ ರಷ್ಯಾ


ಶಾಂಘೈ ಸಹಕಾರ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ರಷ್ಯಾ ನಕ್ಷೆಯನ್ನು ಸರಿಯಾಗಿ ಚಿತ್ರಿಸುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಭಾರತದ ಸರ್ಕಾರಿ ಮೂಲಗಳು ತಿಳಿಸಿವೆ. ಇನ್ನು ರಷ್ಯಾ ಭಾರತದ ಮಿತ್ರ ರಾಷ್ಟ್ರವಾಗಿದ್ದು, ಇದರಿಂದ ಉಭಯ ರಾಷ್ಟ್ರಗಳ ಸ್ನೇಹ ಮತ್ತಷ್ಟು ಬಲಗೊಂಡಂತಾಗಿದೆ.

Published by:Annappa Achari
First published: