ಡಾಲರ್ ಎದುರು ಏರಿಕೆ ಕಂಡ ರೂಪಾಯಿ ಮೌಲ್ಯ; ಶುಕ್ರವಾರದ ವಹಿವಾಟಿನಲ್ಲಿ 5 ಪೈಸೆ ಚೇತರಿಕೆ
ವಿದೇಶಿ ನಿಧಿಯ ಹೊರಹರಿವು ಮತ್ತು ಹೆಚ್ಚುತ್ತಿರುವ COVID-19 ಪ್ರಕರಣಗಳು ದೇಶೀಯ ಷೇರುಗಳಲ್ಲಿ ಸಕಾರಾತ್ಮಕ ಆರಂಭದ ಮೇಲೆ ಪರಿಣಾಮ ಬೀರುತ್ತಿದೆ ಅಲ್ಲದೆ, ಅಮೆರಿಕನ್ ಕರೆನ್ಸಿ ಮೌಲ್ಯ ಹೆಚ್ಚಲು ಕಾರಣವಾಗಿದೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಮುಂಬೈ (ಜುಲೈ 17); ಅಮೆರಿಕನ್ ಡಾಲರ್ ಎದುರು ಸತತವಾಗಿ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರದ ವಹಿವಾಟಿನಲ್ಲಿ 5 ಪೈಸೆಯಷ್ಟು ಏರಿಕೆ ಕಂಡಿದೆ. ಇಂದಿನ ವಹಿವಾಟಿನಲ್ಲಿ ದೇಶೀಯ ಷೇರುಗಳು ಸಕಾರಾತ್ಮಕವಾಗಿ ಕಂಡುಬಂದಿದ್ದರಿಂದ ರೂಪಾಯಿ ಮೌಲ್ಯ ಡಾಲರ್ ಎದುರು 5 ಪೈಸೆ ಚೇತರಿಸಿ 75.13ಕ್ಕೆ ತಲಿಪಿದೆ. ಈ ಹಿಂದೆ ರೂಪಾಯಿ ಮೌಲ್ಯ 75.18 ರಷ್ಟಿತ್ತು.
ಇಂಟರ್ಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ದೇಶೀಯ ಘಟಕವು ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ 7 ಪೈಸೆ ಇಳಿದು 75.25 ಕ್ಕೆ ತಲುಪಿತ್ತು. ಆದರೆ, ಶೀಘ್ರದಲ್ಲೇ ಚೇತರಿಕೆ ಕಂಡ ವಹಿವಾಟು ಅಂತಿಮವಾಗಿ ಯುಎಸ್ ಡಾಲರ್ ಎದುರು 75.13ಕ್ಕೆ ಸ್ಥಿರವಾಯಿತು. ಅದರ ಹಿಂದಿನ ವಹಿವಾಟಿಗಿಂತ 5 ಪೈಸೆಯಷ್ಟು ಚೇತರಿಕೆ ಕಂಡಿತು.
ವಿದೇಶಿ ನಿಧಿಯ ಹೊರಹರಿವು ಮತ್ತು ಹೆಚ್ಚುತ್ತಿರುವ COVID-19 ಪ್ರಕರಣಗಳು ದೇಶೀಯ ಷೇರುಗಳಲ್ಲಿ ಸಕಾರಾತ್ಮಕ ಆರಂಭದ ಮೇಲೆ ಪರಿಣಾಮ ಬೀರುತ್ತಿದೆ ಅಲ್ಲದೆ, ಅಮೆರಿಕನ್ ಕರೆನ್ಸಿ ಮೌಲ್ಯ ಹೆಚ್ಚಲು ಕಾರಣವಾಗಿದೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಭಾರತದಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಇದೀಗ 10 ಲಕ್ಷದ ಗಡಿ ದಾಟಿದೆ. ವಿಶ್ವದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ