ಅಮೆರಿಕಾ ಡಾಲರ್​ ಎದುರು ರೂಪಾಯಿ ಬೆಲೆ ದಾಖಲೆ ಕುಸಿತ..!


Updated:August 30, 2018, 1:17 PM IST
ಅಮೆರಿಕಾ ಡಾಲರ್​ ಎದುರು ರೂಪಾಯಿ ಬೆಲೆ ದಾಖಲೆ ಕುಸಿತ..!

Updated: August 30, 2018, 1:17 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.30): ಅಮೆರಿಕದ ಡಾಲರ್ ಎದುರು ಮತ್ತೆ ರೂಪಾಯಿ ಬೆಲೆ ಕುಸಿತ ಕಂಡಿದೆ. ಅಂತರಾಷ್ಟ್ರೀಯ ಕರೆನ್ಸಿ ಮಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದರವು 23 ಪೈಸೆ ಕುಸಿತವಾಗಿದ್ದು, ಬೆಲೆ 70.82 ಕ್ಕೆ ಬಂದು ನಿಂತಿದೆ.

ತಿಂಗಳ ಕೊನೆಯಲ್ಲಿ ಕಚ್ಚಾ ತೈಲ ಭಾರೀ ಪ್ರಮಾಣದಲ್ಲಿ ಆಮದುವಾಗಿದೆ. ಹೀಗಾಗಿ, ಡಾಲರ್​​ಗೆ ಹೆಚ್ಚು ಬೇಡಿಕೆ ಬಂದಿದ್ದು, ರೂಪಾಯಿ ಬೆಲೆ ತೀವ್ರ ಕುಸಿತವಾಗಿದೆ. ಈ ಮೂಲಕ ಕರೆನ್ಸಿ ಮಾರುಕಟ್ಟೆಯಲ್ಲಿ  ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವಾಗಿದೆ ಎನ್ನಲಾಗಿದೆ.

ನಿನ್ನೆಯೂ ರೂಪಾಯಿ ಮೌಲ್ಯ ಡಾಲರ್​ ಎದುರು 70.59 ಕ್ಕೆ ತಲುಪಿತ್ತು. ವಿದೇಶಿ ನಿಧಿ ಹಿಂಪಡೆಯುವ ಪ್ರಕ್ರಿಯೆ ಹೆಚ್ಚಾಗಿದ್ದ ಕಾರಣ ಅಮೆರಿಕದ ಡಾಲರ್ ಬಲ ಕಂಡು ರೂಪಾಯಿ 49 ಪೈಸೆಯಷ್ಟು ಕುಸಿತ ಕಂಡಿತು.ಆಗಸ್ಟ್ 13ರಂದು 110 ಪೈಸೆ ಕುಸಿತ ಕಂಡ ಬಳಿಕ ಅತಿಹೆಚ್ಚಿನ ಕುಸಿತ ಇದಾಗಿದೆ.

ದಿನದ ವಹಿವಾಟಿನ ವೇಳೆ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು ಸಾರ್ವಕಾಲಿಕ ಕುಸಿತ 70.65 ಕಂಡದ್ದು ಮತ್ತೊಂದು ದಾಖಲೆಯಾಯಿತು. ಪ್ರಸಕ್ತ ವರ್ಷದಲ್ಲಿ ರೂಪಾಯಿ ಮೌಲ್ಯ ಶೇಕಡ 10 ಕುಸಿತ ಕಂಡಿದೆ.

ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆ ಡಾಲರ್​ ಒಂದಕ್ಕೆ 70.32 ರೂ. ಗೆ ಏರಿಕೆಯಾಗಿತ್ತು. ಈ ನಡುವೆ ಪೆಟ್ರೋಲ್, ಡೀಸೆಲ್​ ಹಾಗೂ ಎಲ್​ಪಿಜಿ ಬೆಲೆಯಲ್ಲಿ ಏರಿಕೆ ಮಾಡಲಾಯ್ತು.

ಭಾರತ ಕಚ್ಚಾ ತೈಲ ಆಮದಿಗೆ 2017- 18ನೇ ಸಾಲಿನಲ್ಲಿ 87 ಬಿಲಿಯನ್​ ಅಂದರೆ 5.65 ಲಕ್ಷ ಕೋಟಿ ರೂ. ವ್ಯಯಿಸಲಾಗಿತ್ತು. ಕಳೆದ ಸಲ 220ಮೆಟ್ರಿಕ್ ಟನ್​ ಕಚ್ಚಾ ತೈಲ ಆಮದು ಮಾಡಿಕೊಂಡರೆ, 2018- 19 ರಲ್ಲಿ ಸುಮಾರು 227 ಮೆಟ್ರಿಕ್​ ಟನ್​ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿದ್ದು, 108 ಬಿಲಿಯನ್​ ಡಾಲರ್​ ಬೆಲೆ ನೀಡಿ ಖರೀದಿಸಲಾಗಿತ್ತು.
Loading...

ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ 7.02 ಲಕ್ಷ ಕೋಟಿ ರೂಪಾಯಿ ಆಗಿತ್ತು. ಡಾಲರ್​ಗೆ ಸರಾಸರಿ 65 ರೂ. ಬೆಲೆಯಲ್ಲಿ ಈ ಲೆಕ್ಕ ಹಾಕಲಾಗಿತ್ತು. ಈಗ ರೂ. ಬೆಲೆ ಡಾಲರ್​ಗೆ 70.82 ರೂ. ಆಗಿದ್ದು, ಐದು ರೂಪಾಯಿ ಹೆಚ್ಚುವರಿ ತೆತ್ತು ಕಚ್ಚಾ ತೈಲ ಖರೀದಿ ಮಾಡಬೇಕಾಗಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ