ಡಾಲರ್ ಎದುರು 71 ರೂ.ಗೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

news18
Updated:August 31, 2018, 11:25 AM IST
ಡಾಲರ್ ಎದುರು 71 ರೂ.ಗೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ
  • Advertorial
  • Last Updated: August 31, 2018, 11:25 AM IST
  • Share this:
ನ್ಯೂಸ್ 18 ಕನ್ನಡ

ಮುಂಬೈ (ಆ.31): ದಿನದಿಂದ ದಿನಕ್ಕೆ ಅಮೆರಿಕನ್ ಡಾಲರ್ ಎದುರು ರೂಪಾಯಿ ಅಪಮೌಲ್ಯಗೊಳ್ಳುತ್ತಿದ್ದು, ಶುಕ್ರವಾರ ಡಾಲರ್​ ಎದುರು 26 ಪೈಸೆ ಕುಸಿತ ಕಾಣುವ ಮೂಲಕ ಡಾಲರ್ ಎದುರು 71 ರೂಪಾಯಿ ಸಾರ್ವಕಾಲಿತ ಕುಸಿತ ಕಂಡಿದೆ.

ಗುರುವಾರದ ಷೇರುಪೇಟೆ ವಹಿವಾಟಿನಲ್ಲಿ 15 ಪೈಸೆ ಕುಸಿತ ಕಾಣುವುದರೊಂದಿಗೆ ದಿನದ ಅಂತ್ಯಕ್ಕೆ 70.74 ರೂಪಾಯಿಗೆ ಇಳಿದಿತ್ತು. ಶುಕ್ರವಾರ ಮಾರುಕಟ್ಟೆ ಆರಂಭದಲ್ಲಿ 70.95ಕ್ಕೆ ಕುಸಿತ ಕಂಡಿತು, ನಂತರ ಮತ್ತೆ 71 ರೂಪಾಯಿಗೆ ಕುಸಿಯಿತು. ಡಾಲರ್ ಎದುರು ರೂಪಾಯಿ ಕುಸಿತದಿಂದಾಗಿ ಕಚ್ಚಾ ತೈಲ ದರ ಹೆಚ್ಚಳವಾಗಲಿದೆ.

ತೈಲ ಆಮದುದಾರರಿಂದ ತಿಂಗಳಾಂತ್ಯದಲ್ಲಿ ಅಮೆರಿಕನ್ ಕರೆನ್ಸಿಗೆ ಹೆಚ್ಚಿದ ಬೇಡಿಕೆ, ಪ್ರತಿಸ್ಪರ್ಧಿ ಕರೆನ್ಸಿ ಎದುರು ಡಾಲರ್ ಬಲಿಷ್ಠಗೊಂಡಿದ್ದು ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿದೆ.  ದೇಶಿ ವಿನಿಮಯ ಡೀಲರ್​ಗಳು, ಆಮದುದಾರರ ಖರೀದಿ, ಕಚ್ಚಾ ತೈಲ ಬೆಲೆ ಮತ್ತು ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ದೇಶೀಯ ಹಣದ ಮಾರುಕಟ್ಟೆಯಲ್ಲಿ ಏರಿಳಿತವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಂದು ಪ್ರತಿ ಬ್ಯಾರಲ್​ಗೆ 78 ಅಮೆರಿಕನ್ ಡಾಲರ್ ಆಗಿದೆ. ಏತನ್ಮಧ್ಯೆ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 79 ಅಂಕಗಳಷ್ಟು ಇಳಿಕೆ ಕಂಡು 38,611.46 ಅಂಕಗಳೊಂದಿಗೆ ದಿನದ ವಹಿವಾಟು ಆರಂಭಿಸಿತು.

 

 
First published:August 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ