ಕಾರ್ಡ್​​​​ಬೋರ್ಡ್​​ ಮಂಚದ ಮೇಲೆ ಸೆಕ್ಸ್​​​ ಮಾಡೋಕೆ ಆಗಲ್ಲ: ಟೊಕಿಯೋ ಒಲಿಂಪಿಕ್ಸ್​​​​ ವ್ಯವಸ್ಥೆ ಬಗ್ಗೆ ತಕರಾರು

ಈ ಬೆಡ್​ಗಳು ಆ್ಯಂಟಿ ಸೆಕ್ಸ್​ , ಜೊತೆಗೆ ಇಂಥಹ ಬೆಡ್​ಗಳಿಂದ ಆಟಗಾರರ ಸಾಮರಸ್ಯವೂ ಕಡಿಮೆ ಆಗುತ್ತೆ. ನೆಮ್ಮದಿಯಾಗಿ ಮಲಗಲು ಸಾಧ್ಯವಾಗಲ್ಲ ಎಂದು ಪೌಲ್​ ದೂರಿದ್ದಾರೆ.

ಕಾರ್ಡ್​​ಬೋರ್ಡ್​ ಬೆಡ್​​ಗಳು

ಕಾರ್ಡ್​​ಬೋರ್ಡ್​ ಬೆಡ್​​ಗಳು

  • Share this:
ಟೊಕಿಯೋ ಒಲಿಂಪಿಕ್ಸ್​ಗೆ ದಿನಗಳಣೆ ಶುರುವಾಗಿದೆ. ಜು.23ರಿಂದ ಆ.8ರವರೆಗೂ ನಡೆಯುವ ವಿಶ್ವ ಕ್ರೀಡಾ ಹಬ್ಬಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ಟೊಕಿಯೋದಲ್ಲಿ ಈ ಬಾರಿಯ ಒಲಿಂಪಿಕ್ಸ್​​ ನಡೆಯುತ್ತಿದ್ದ ಜಪಾನ್​​​​​​​ ಆತಿಥ್ಯ ವಹಿಸಿದೆ. ಹೀಗಾಗಲೇ ವಿವಿಧ ದೇಶಗಳ ಸಾವಿರಾರ ಕ್ರೀಡಾಪಟುಗಳು, ಕೋಚ್​​ಗಳು, ಸಿಬ್ಬಂದಿ ಒಲಿಂಪಿಕ್ಸ್​​​​​​ ನಡೆಯುವ ಪ್ರದೇಶವನ್ನು ತಲುಪಿಸಿದ್ದಾರೆ. ತಾಲೀಮು ನಿರತರಾಗಿರುವ ಕ್ರೀಡಾಪಟುಗಳಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಜಪಾನ್​​ ವಸ್ತುಗಳ ಬಗ್ಗೆ ವಿದೇಶದ ಕ್ರೀಡಾಪಟುಗಳು ತಕರಾರು ತೆಗೆದಿದ್ದಾರೆ. ಕ್ರೀಡಾಳುಗಳಿಗೆ ಕಾರ್ಡ್​​ಬೋರ್ಡ್​ನಿಂದ ಮಾಡಿದ ಮಂಚವನ್ನು ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕಾದ ಓಟಗಾರ ಪೌಲ್​ ಕೆಲಿಮೋ ತನಗೆ ನೀಡಿರುವ ಕಾರ್ಡ್​​ಬೋರ್ಡ್​​​ ಮಂಚದ ಫೋಟೋಗಳನ್ನು ಟ್ವಿಟ್ಟರ್​ನಲ್ಲಿ ಶೇರ್​​ ಮಾಡಿದ್ದಾರೆ. ಇಂಥ ಬೆಡ್​ಗಳ ಮೇಲೆ ಸೆಕ್ಸ್​ ಮಾಡುವುದು ನಿಜಕ್ಕೂ ಅಪಾಯಕಾರಿ. ಇನ್ಮುಂದೆ ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇನೆ. ಓಟದ ಜೊತೆಗೆ ನೆಲದ ಮೇಲೂ ಮಲಗುವುದು ನನ್ನ ಅಭ್ಯಾಸ ಭಾಗವಾಗಲಿದೆ ಎಂದು ತಮಾಷೆ ಮಾಡಿದ್ದಾರೆ. ಈ ಬೆಡ್​ಗಳು ಆ್ಯಂಟಿ ಸೆಕ್ಸ್​ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಂಥಹ ಬೆಡ್​ಗಳಿಂದ ಆಟಗಾರರ ಸಾಮರಸ್ಯವೂ ಕಡಿಮೆ ಆಗುತ್ತೆ. ನೆಮ್ಮದಿಯಾಗಿ ಮಲಗಲು ಸಾಧ್ಯವಾಗಲ್ಲ ಎಂದು ಪೌಲ್​ ದೂರಿದ್ದಾರೆ.

ಒಲಿಂಪಿಕ್​​ ಆಟಗಾರರಿಗೆ ಜಪಾನ್​ ನೀಡಿರುವ ಕಾರ್ಡ್​​ಬೋರ್ಡ್​ ಬೆಡ್​ಗಳು ಆ್ಯಂಟಿ ಸೆಕ್ಸ್​​ ಎಂದು ಪೌಲ್​​​ ಟ್ವೀಟ್​ ಮಾಡಿರುವುದು ವಿಶ್ವದ ಗಮನ ಸೆಳೆದಿದೆ. ಸದಾ ಭೂಕಂಪನ ಸಂಭವಿಸುವುದರಿಂದ ಜಪಾನ್​​ ಅಪಾಯರಹಿತ ವಸ್ತುಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿದೆ. ಕಾರ್ಡ್​ಬೋರ್ಡ್​ನಲ್ಲಿ ಮನೆಗಳನ್ನೇ ಕಟ್ಟಿಕಟ್ಟು ಬದುಕುತ್ತಿದ್ದಾರೆ. ಇಂಥಹದರಲ್ಲಿ ಬೆಡ್​ ಏನು ಮಹಾ ಎಂದು ಜಪಾನ್​​ ನಿಲುವನ್ನು ಹಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Tokyo Olympic: ಟೊಕಿಯೋ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಮೊದಲ ಕೊರೊನಾ ಕೇಸ್.. ಹೆಚ್ಚಾದ ಸೋಂಕಿನ ಭೀತಿ!

ಈ ಬಾರಿ ಒಲಿಂಪಿಕ್ಸ್​ ನಡೆಯುತ್ತಿರುವುದು ಜಪಾನ್​ನಲ್ಲಿ ಆದರಿಂದ ಇಂಥವುಗಳಿಗೆ ತಯಾರಿರಬೇಕು. ಜಪಾನ್​​ ಕಾರ್ಡ್​ಬೋರ್ಡ್​​ ಮಂಚವನ್ನು ನೀಡದಿದ್ದರೆ ಅದು ಜಪಾನೇ ಅಲ್ಲ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಕೆಲವು ದಿನಗಳಿಗೆ ಮಾತ್ರ ನಡೆಯುವ ಒಲಿಂಪಿಕ್ಸ್​ ಪರಿಸರ ಪ್ರೇಮಿಯಾಗಿರಬೇಕು. ಮರದ ಮಂಚಕ್ಕಿಂತ ಕಾರ್ಡ್​​ಬೋರ್ಡ್​ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಪಾನಿಗರನ್ನು ಪರಿಸರ ಪ್ರೇಮಿಗಳು ಹೊಗಳುತ್ತಿದ್ದಾರೆ. ಕೊರೊನಾ ಕಾರಣದಿಂದ ಒಲಿಂಪಿಕ್ಸ್​​ನ್ನು ಒಂದು ವರ್ಷ ಮುಂದೂಡಲಾಗಿದ್ದು, ಅಗತ್ಯ ಕ್ರಮಗಳೊಂದಿಗೆ ಈ ವರ್ಷ ನಡೆಸಲು ಟೊಕಿಯೋ ಮುಂದಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: