ತಮಿಳುನಾಡು ರಾಜಕೀಯಕ್ಕೆ ಸ್ಟಾರ್ ನಟ ವಿಜಯ್?; ಈ ಬಗ್ಗೆ ದಳಪತಿ ಹೇಳುವುದೇನು?

ಅಂದಹಾಗೆ ವಿಜಯ್ ರಾಜಕೀಯದತ್ತ ಮನಸ್ಸು ಮಾಡೋಕೆ ಕಾರಣ, ಅವರ ಮೇಲೆ ನಡೆದ ಐಟಿ ದಾಳಿ. ದಾಳಿಯಿಂದ ನೊಂದಿರುವ ವಿಜಯ್, ಅಭಿಮಾನಿಗಳು ಹಾಗೂ ಹಿತೈಷಿಗಳ ಸಲಹೆಯಂತೆ ರಾಜಕೀಯವಾಗಿ ಸಬಲರಾಗೋಕೆ, ತಮ್ಮದೇ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಟಾಕ್ ಎದ್ದಿದೆ.

ದಳಪತಿ ವಿಜಯ್ (ಸಂಗ್ರಹ ಚಿತ್ರ)

ದಳಪತಿ ವಿಜಯ್ (ಸಂಗ್ರಹ ಚಿತ್ರ)

  • Share this:
ತಲೈವಿ ಜಯಲಲಿತಾ ನಿಧನದ ನಂತರ ತಮಿಳುನಾಡಿನ ರಾಜಕೀಯ ಖಾಲಿ ಮೈದಾನದಂತಾಗಿದೆ. ಅಲ್ಲಿ ಯಾರು ಈಗ ಸ್ಟ್ರಾಂಗ್ ಪರ್ಸನಾಲಿಟಿಗಳೇ ಇಲ್ಲ. ಜಯಲಲಿತಾ ಜಾಗವನ್ನು ಆಕ್ರಮಿಸಿಕೊಳ್ಳಲು ಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲಹಾಸನ್ ಶತ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಎದುರು ನೋಡುತ್ತಿದ್ದಾರೆ‌‌‌. ಹೀಗಿರುವಾಗಲೇ ತಮಿಳುನಾಡು ರಾಜಕೀಯಕ್ಕೆ ರಂಗು ತುಂಬೋಕೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿಯಾಗಲಿದ್ದಾರೆ ಎಂಬ ಮಾತುಗಳು ಹುಟ್ಟಿಕೊಂಡಿವೆ.

ಕೆಲ ಮಾಧ್ಯಮಗಳ ವರದಿ ಪ್ರಕಾರ ದಳಪತಿ ವಿಜಯ್ ರಾಜಕೀಯಕ್ಕೆ ಬರೋದಕ್ಕೆ ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ತಿದ್ದಾರೆ‌‌‌‌‌. ಅದರ ಮುನ್ನುಡಿಯಾಗಿ ಈಗಾಗಲೇ ಚುನಾವಣಾ ಆಯೋಗದಲ್ಲಿ ತಮ್ಮ ಪಕ್ಷದ ಹೆಸರನ್ನು ನೋಂದಾಯಿಸಿದ್ದಾರೆ‌‌‌ ಎನ್ನಲಾಗುತ್ತಿದೆ‌.

ಇದನ್ನು ಓದಿ: US Election 2020 Results: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಬಿಡೆನ್​ಗೆ ಸಾಕು ಇನ್ನೊಂದು ರಾಜ್ಯ; ಟ್ರಂಪ್​ಗೆ ಬೇಕು ಮೂರು

ಅಂದಹಾಗೆ ವಿಜಯ್ ರಾಜಕೀಯದತ್ತ ಮನಸ್ಸು ಮಾಡೋಕೆ ಕಾರಣ, ಅವರ ಮೇಲೆ ನಡೆದ ಐಟಿ ದಾಳಿ. ದಾಳಿಯಿಂದ ನೊಂದಿರುವ ವಿಜಯ್, ಅಭಿಮಾನಿಗಳು ಹಾಗೂ ಹಿತೈಷಿಗಳ ಸಲಹೆಯಂತೆ ರಾಜಕೀಯವಾಗಿ ಸಬಲರಾಗೋಕೆ, ತಮ್ಮದೇ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಟಾಕ್ ಎದ್ದಿದೆ.

ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಅವರು ಚುನಾವಣಾ ಆಯೋಗದಲ್ಲಿ  "ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ" ಎಂಬ ಪಕ್ಷವನ್ನು ರಿಜಿಸ್ಟರ್ ‌ಮಾಡಿಸಿದ್ದಾರೆ. ಈ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ವಿಜಯ್ ಅವರು ನಮ್ಮ ತಂದೆಯವರು ನೋಂದಾಯಿಸಿರುವ ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ನನ್ನ ಅಭಿಮಾನಿಗಳಲ್ಲಿ ಪಕ್ಷ ಸೇರಬಾರದು ಎಂದು ಮನವಿ ಮಾಡುತ್ತೇನೆ. ರಾಜಕೀಯ ಉದ್ದೇಶಕ್ಕೆ ನನ್ನ ಭಾವಚಿತ್ರವನ್ನಾಗಲಿ ಅಥವಾ ನನ್ನ ಹೆಸರನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
Published by:HR Ramesh
First published: