Child Abduction: ಮುಂಬೈನಲ್ಲಿ ಮಕ್ಕಳ ಕಳ್ಳರ ಬಗ್ಗೆ ವದಂತಿ! ಸುಳ್ಳು ಸಂದೇಶಗಳನ್ನು ನಂಬದಂತೆ ಸಾರ್ವಜನಿಕರಿಗೆ ಪೊಲೀಸರ ಮನವಿ

ಮುಂಬೈನಲ್ಲಿ ಕಳೆದ ವಾರದಿಂದ ಫೇಸ್‌ ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪೋಷಕರು, ಸಾರ್ವಜನಿಕರು, ಮಕ್ಕಳ ಅಪಹರಣದ ಬಗ್ಗೆ ಇನ್ನಿಲ್ಲದ ಮೆಸೇಜ್ ಗಳು, ವಿಡಿಯೋಗಳು, ವಾಯ್ಸ್‌ ಮೆಸೇಜ್‌ ಹೀಗೆ ಹಲವು ಸುಳ್ಳು ಮಾಹಿತಿಗಳಿರುವ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ಈ ವದಂತಿಗಳ ಬಗ್ಗೆ ಮುಂಬೈ ಪೊಲೀಸರು ಅಲ್ಲಿನ ಜನರಿಗೆ ಈ ಸುಳ್ಳು ಸಂದೇಶಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಕ್ಕಳ ಅಪಹರಣದ (Child abduction) ಸಂದೇಶಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ನಂಬಬೇಡಿ ಎಂದು ಮುಂಬೈ ಪೊಲೀಸರು ಸೋಮವಾರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈ ಮಕ್ಕಳ ಅಪಹರಣದ ಬಗ್ಗೆ ಆಗಾಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ (Social Media) ವಿಡಿಯೋ ಸಂದೇಶಗಳು ಹರಿದಾಡುತ್ತಲೇ ಇರುತ್ತವೆ. ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇರಲಿ, ಹೀಗೆ ಯಾರೋ ಬಂದು ನಿಮ್ಮ ಮಕ್ಕಳನ್ನು ಕಿಡ್ನಾಪ್‌ ಮಾಡುತ್ತಾರೆ ಅಥವಾ ಮಕ್ಕಳ ಕಳ್ಳರ ಗುಂಪು ಬಂದಿದೆ ಎಂಬೆಲ್ಲಾ ಸುಳ್ಳು ಮಾಹಿತಿಯನ್ನು ಸಮಾಜಕ್ಕೆ ರವಾನೆ ಮಾಡುತ್ತಿರುತ್ತಾರೆ. ಇದನ್ನು ನೋಡಿದ ಪೋಷಕರು (Parents) ಕೂಡ ಸಹಜವಾಗಿಯೇ ಆತಂಕಕ್ಕೆ ಒಳಗಾಗುತ್ತಾರೆ. ಇದೇ ರೀತಿ ಸುಳ್ಳು ವದಂತಿಗಳನ್ನು (Rumours) ಮುಂಬೈನಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ.

ಸುಳ್ಳು ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಖಾಕಿ ಮನವಿ
ಈ ಬಗ್ಗೆ ಎಚ್ಚರ ವಹಿಸಿದ ಮುಂಬೈ ಪೊಲೀಸರು ಪೋಷಕರ ಆತಂಕ ಕಡಿಮೆ ಮಾಡಲು ಈ ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಕೋರಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಸುಳ್ಳು ಮಾಹಿತಿ
ಮುಂಬೈನಲ್ಲಿ ಕಳೆದ ವಾರದಿಂದ ಫೇಸ್‌ ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪೋಷಕರು, ಸಾರ್ವಜನಿಕರು, ಮಕ್ಕಳ ಅಪಹರಣದ ಬಗ್ಗೆ ಇನ್ನಿಲ್ಲದ ಮೆಸೇಜ್ ಗಳು, ವಿಡಿಯೋಗಳು, ವಾಯ್ಸ್‌ ಮೆಸೇಜ್‌ ಹೀಗೆ ಹಲವು ಸುಳ್ಳು ಮಾಹಿತಿಗಳಿರುವ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ.

ಮುಂಬೈನ ಹಲವಾರು ಪ್ರದೇಶಗಳಲ್ಲಿ ಶಾಲೆ ಮತ್ತು ಮನೆಯ ಆವರಣದಲ್ಲಿ ಆಟ ಆಡುತ್ತಿರುವ ಮಕ್ಕಳನ್ನು ಯಾರೋ ಬಂದು ಕದ್ದೊಯ್ಯುತ್ತಿದ್ದಾರೆ ಎಂದು ಈ ಎಲ್ಲಾ ವದಂತಿಭರಿತ ಸಂದೇಶಗಳು ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟ್ಸಾಪ್ ಮೂಲಕ ಹರಡಿದ ಒಂದು ಸಂದೇಶವನ್ನು ಫ್ರೀ ಪ್ರೆಸ್ ಜರ್ನಲ್ ಪರಿಶೀಲಿಸಿದ್ದು, ಆ ಸಂದೇಶದಲ್ಲಿ "ವಿಕ್ರೋಲಿಯ ನಾಗರಿಕ ಶಾಲೆಯ ಇಬ್ಬರು ಮಕ್ಕಳನ್ನು ಶಾಲೆಯ ಹೊರಗೆ ಕಾಯುತ್ತಿದ್ದ ಪುರುಷರ ಗ್ಯಾಂಗ್ ಅಪಹರಿಸಿದ್ದಾರೆ" ಎಂಬ ಮಾಹಿತಿ ಇತ್ತು.

ಇದನ್ನೂ ಓದಿ: ಗಂಡಸರ ಟಾಯ್ಲೆಟ್​ನಲ್ಲಿ ಕಬ್ಬಡ್ಡಿ ಆಟಗಾರ್ತಿಯರಿಗೆ ಆಹಾರ ವಿತರಣೆ: ವಿಡಿಯೋ ವೈರಲ್, ವ್ಯಾಪಕ ಟೀಕೆ

ಈ ಸಂದೇಶವನ್ನು ಅಪರಿಚಿತ ವ್ಯಕ್ತಿಯೊಬ್ಬರು ವಾಯ್ಸ್‌ ನೋಟ್‌ ಮೂಲಕ ಹಲವರಿಗೆ ಫಾರ್ವಡ್‌ ಮಾಡಿದ್ದಾರೆ. ಈ ರೀತಿಯ ಮೆಸೇಜ್‌ ಗಳು ಮುಂಬೈನ ಪೋಷಕರಲ್ಲಿ ಸಾಕಷ್ಟು ಭೀತಿಯನ್ನು ಉಂಟು ಮಾಡಿದೆ. ಅಂತೆಯೇ, ಕಂಜುರ್ಮಾರ್ಗ್, ಘಾಟ್ಕೋಪರ್, ಅಂಧೇರಿ, ಜೋಗೇಶ್ವರಿ ಮುಂತಾದ ಪ್ರದೇಶಗಳಲ್ಲಿ ಇದೇ ರೀತಿಯ ಸುಳ್ಳು ಮಾಹಿತಿಯನ್ನು ಹರಡುವ ಅನೇಕ ನಕಲಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ವದಂತಿಗಳು ಆಧಾರರಹಿತವಾಗಿವೆ ಎಂದು ಖಾಕಿ ಸ್ಪಷ್ಟನೆ
ಈ ಎಲ್ಲಾ ನಕಲಿ ಸಂದೇಶಗಳನ್ನು ಪರಿಶೀಲಿಸಿದ 7ನೇ ವಲಯದ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಕದಮ್, "ಎಲ್ಲಾ ವದಂತಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಮುಂಬೈ ಪೊಲೀಸರು ಪ್ರತಿಯೊಬ್ಬ ನಾಗರಿಕರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದೇವೆ. ಅಪಹರಣ ಅಥವಾ ಅಪಹರಣದ ಯಾವುದೇ ವರದಿಗಳು ಎಲ್ಲಿಯೂ ಈವರೆಗೆ ವರದಿಯಾಗಿಲ್ಲ, ಆದ್ದರಿಂದ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರು ಜನರಲ್ಲಿ ಭೀತಿಯನ್ನು ಮಾತ್ರ ಸೃಷ್ಟಿಸುತ್ತಿದ್ದಾರೆ, ನಾವು ಈ ನಕಲಿ ಸಂದೇಶಗಳ ಹಿಂದೆ ಇರುವವರ ವಿರುದ್ಧ ಶೀಘ್ರದಲ್ಲೇ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ." ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯ ಪರಿಶೀಲನೆ
ಮುಂಬೈ ಪೋಲೀಸರು ಈಗಾಗ್ಲೇ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸಂದೇಶಗಳಲ್ಲಿ ನಮೂದಿಸಲಾದ ಎಲ್ಲಾ ವಿವರಗಳು ಮತ್ತು ಸ್ಥಳಗಳಿಗೆ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ:  Sumanahalli Flyover: ಸುಮ್ಮನಹಳ್ಳಿ ಫ್ಲೈಓವರ್ ಮತ್ತೊಮ್ಮೆ ಕುಸಿತ; ವಾಹನ ಸವಾರರಿಗೆ ಶುರುವಾಗಿದೆ ಭಾರೀ ಆತಂಕ

"ನಾವು ಅಪರಿಚಿತರು ಮಾಡುತ್ತಿರುವ ಆರೋಪಗಳನ್ನು ಪರಿಶೀಲಿಸಿದ್ದೇವೆ. ಇದೆಲ್ಲವೂ ಆಧಾರರಹಿತ ಮತ್ತು ಸುಳ್ಳು ಮಾಹಿತಿಯಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಈ ಎಲ್ಲಾ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ ಆದರೆ ನಕಲಿ ಸಂದೇಶಗಳಲ್ಲಿ ಉಲ್ಲೇಖಿಸಿರುವ ಒಂದು ಪ್ರಕರಣಗಳೂ ಕೂಡ ಇಲ್ಲಿ ಕಂಡು ಬಂದಿಲ್ಲ ಎಂದು ಖಾಕಿ ಪಡೆ ತಿಳಿಸಿದೆ.
Published by:Ashwini Prabhu
First published: