ಗುಂಪು ಹಲ್ಲೆಯನ್ನು ಆರೆಸ್ಸೆಸ್ ಒಪ್ಪುವುದಿಲ್ಲ: ಮೋಹನ್ ಭಾಗವತ್

ವಿದೇಶೀ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡಿದ್ದ ಆರೆಸ್ಸೆಸ್ ಸರ ಸಂಘಚಾಲಕರು ಗೋರಕ್ಷಣೆಯ ಹೆಸರಲ್ಲಿ ಹಲ್ಲೆ ಮಾಡುವುದನ್ನು ಖಂಡಿಸಿದ್ಧಾರೆ.

Vijayasarthy SN | news18
Updated:September 25, 2019, 3:18 PM IST
ಗುಂಪು ಹಲ್ಲೆಯನ್ನು ಆರೆಸ್ಸೆಸ್ ಒಪ್ಪುವುದಿಲ್ಲ: ಮೋಹನ್ ಭಾಗವತ್
ಮೋಹನ್​ ಭಾಗವತ್​​
  • News18
  • Last Updated: September 25, 2019, 3:18 PM IST
  • Share this:
ನವದೆಹಲಿ(ಸೆ. 25): ದೇಶದ ಕೆಲವೆಡೆ ಈಗಲೂ ಗುಂಪು ಹಲ್ಲೆ ಸೇರಿದಂತೆ ವಿವಿಧ ರೀತಿಯ ಹಿಂಸಾಚಾರ ಘಟನೆಗಳು ದಿನಂಪ್ರತಿ ನಡೆಯುತ್ತಲೇ ಇದೆ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗೋರಕ್ಷಕರಿಂದ ಗುಂಪು ಹಲ್ಲೆಯಾದ ಅನೇಕ ಘಟನೆಗಳು ವರದಿಯಾಗಿವೆ. ಈ ಘಟನೆಗಳ ಹಿಂದೆ ಸಂಘ ಪರಿವಾರದ ಕೈ ಇದೆ ಎಂಬುದು ಹಲವರ ಆರೋಪ. ಆದರೆ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುಂಪು ಹಲ್ಲೆ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ನಿನ್ನೆ ಇಲ್ಲಿ ವಿದೇಶೀ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ ಆರೆಸ್ಸೆಸ್ ಸರ ಸಂಘಚಾಲಕರು, ಯಾವುದೇ ಮಾದರಿಯ ಹಿಂಸಾಚಾರವನ್ನು ಆರೆಸ್ಸೆಸ್ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರೆಂದು ಝೀನ್ಯೂಸ್ ವರದಿ ಮಾಡಿದೆ.

“ಗುಂಪು ಹಲ್ಲೆ ಸೇರಿದಂತೆ ಯಾವುದೇ ರೀತಿಯ ಹಿಂಸಾಚಾರ ಸರಿಯಲ್ಲ. ಆರೆಸ್ಸೆಸ್​ನ ಯಾವುದೇ ಸದಸ್ಯ ಇಂಥ ಘಟನೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಕೂಡಲೇ ಆತನನ್ನು ಹೊರಹಾಕುತ್ತೇವೆ. ಕಾನೂನು ಪ್ರಕಾರ ಆತನ ಮೇಲೆ ಕ್ರಮ ತೆಗೆದುಕೊಳ್ಳಬಹುದು” ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ; ಮಲ ವಿಸರ್ಜನೆ ಮಾಡಿದ್ದಕ್ಕೆ ದಲಿತ ಮಕ್ಕಳನ್ನು ಹೊಡೆದು ಕೊಂದ ಜನ

ಸುರೇಶ್ ಜೋಷಿ, ಮನಮೋಹನ್ ಮೈದ್ಯ, ಡಾ. ಕೃಷನ್ ಗೋಪಾಲ್, ಡಾ. ಬಜ್ರನ್ ಲಾಲ್ ಗುಪ್ತ, ಕುಲಭೂಷಣ್ ಅಹುಜಾ ಮೊದಲಾದ ಆರೆಸ್ಸೆಸ್ ಮುಖಂಡರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಮಾಬ್ ಲಿಂಚಿಂಗ್ ಅಥವಾ ಗುಂಪು ಹಲ್ಲೆಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಹೊರತಾಗಿಯೂ ಅಲ್ಲಲ್ಲಿ ಒಂದಿಲ್ಲೊಂದು ಘಟನೆ ವರದಿಯಾಗುತ್ತಿವೆ. ಬಹುತೇಕ ಗುಂಪು ಹಲ್ಲೆಗಳು ಗೋಮಾಂಸ ಸಾಗಣೆಗೆ ಸಂಬಂದಿಸಿದ್ದೇ ಆಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಾಟ್ಸಾಪ್, ಫೇಸ್​ಬುಕ್ ಮೊದಲಾದ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿಗಳು ಹಬ್ಬಿ ಗುಂಪು ಹಲ್ಲೆಗೆ ಕಾರಣವಾದ ನಿದರ್ಶನಗಳೂ ಇವೆ. ಕೆಲ ತಿಂಗಳ ಹಿಂದೆ ಮಕ್ಕಳ ಕಳ್ಳರ ವದಂತಿ ಹಬ್ಬಿ ಅನೇಕ ಕಡೆ ಅಮಾಯಕ ಜನರ ಮೇಲೆ ಹಲ್ಲೆಗಳಾದ ಘಟನೆಗಳಾಗಿದ್ದುಂಟು. ಇತ್ತೀಚೆ, ಪಶ್ಚಿಮ ಬಂಗಾಳ ಸರ್ಕಾರವು ಗುಂಪು ಹಲ್ಲೆ ವಿರುದ್ಧ ಕಠಿಣ ಕಾನೂನು ರೂಪಿಸಲಾಗಿದೆ. ಬಂಗಾಳದಂತೆ ಇತರ ರಾಜ್ಯಗಳಲ್ಲೂ ಇಂಥ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ