ಸಮಾನ ಅಧಿಕಾರಕ್ಕಾಗಿ ಹಗ್ಗಾಜಗ್ಗಾಟ: ಶಿವಸೇನೆ ಜತೆ ಮಾತುಕತೆಗೆ ಮುಂದಾಗುವಂತೆ ಗಡ್ಕರಿಗೆ ಆರ್​ಎಸ್​ಎಸ್​ ಸೂಚನೆ

ಬಿಜೆಪಿ - ಶಿವಸೇನಾ ಪರ ಜನಾದೇಶ ಬಂದಿದೆ. ಆದರೆ, ಮೈತ್ರಿ ಧರ್ಮ ಪಾಲಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಸರ್ಕಾರ ರಚನೆಗೂ ಬಿಜೆಪಿ ವಿಳಂಬ ಧೋರಣೆ ಅನುಸರಿಸುತ್ತಿದೆ. ನೀವು ನಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಮೋಹನ್​​ ಭಾಗವತ್​​ಗೆ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ.

news18-kannada
Updated:November 6, 2019, 9:06 AM IST
ಸಮಾನ ಅಧಿಕಾರಕ್ಕಾಗಿ ಹಗ್ಗಾಜಗ್ಗಾಟ: ಶಿವಸೇನೆ ಜತೆ ಮಾತುಕತೆಗೆ ಮುಂದಾಗುವಂತೆ ಗಡ್ಕರಿಗೆ ಆರ್​ಎಸ್​ಎಸ್​ ಸೂಚನೆ
ಚುನಾವಣಾ ಅಖಾಡದಲ್ಲಿ ನಿತಿನ್​​ ಗಡ್ಕರಿ
  • Share this:
ನವದೆಹಲಿ(ನ.06): ಮಹಾರಾಷ್ಟ್ರದಲ್ಲಿ 50:50 ಸೂತ್ರಕ್ಕೆ ಒಪ್ಪಿದರೆ ಮಾತ್ರ ಸರ್ಕಾರ ರಚನೆಗೆ ಬೆಂಬಲ ನೀಡುತ್ತೇವೆ ಎಂದು ಶಿವಸೇನೆ ಪಟ್ಟು ಹಿಡಿದಿದೆ. ಸಿಎಂ ದೇವೇಂದ್ರ ಫಡ್ನವೀಸ್​ ಸೇರಿದಂತೆ ಮಹಾರಾಷ್ಟ್ರ ಬಿಜೆಪಿ ನಾಯಕರು ಎಷ್ಟೇ ಪ್ರಯತ್ನಿಸಿದರೂ ಶಿವಸೇನೆ ಒಪ್ಪಂದಕ್ಕೆ ಒಪ್ಪಿದರೇ ಮಾತ್ರ ಸರ್ಕಾರ ರಚನೆ ಎನ್ನುತ್ತಿದೆ. ಇದರಿಂದ ಸರ್ಕಾರ ರಚಿಸುವುದು ಬಿಜೆಪಿಗೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಅತ್ತ ಸಮಾನ ಅಧಿಕಾರ ಹಂಚಿಕೆಗೆ ಬಿಜೆಪಿ ಒಪ್ಪದ ಕಾರಣ ಆರ್​ಎಸ್​ಎಸ್​​ ಮಧ್ಯ ಪ್ರವೇಶಿಸಬೇಕೆಂದು ಶಿವಸೇನೆ ಮೋಹನ್ ಭಾಗವತ್​​ಗೆ ಪತ್ರ ಬರೆದಿದೆ. ಈ ಬೆನ್ನಲ್ಲೇ ಇತ್ತ ಸಿಎಂ ದೇವೇಂದ್ರ ಫಡ್ನವೀಸ್​​ ಜತೆಗಿನ ಮಾತುಕತೆ ವೇಳೆ ಶಿವಸೇನೆ-ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸುವ ಜವಾಬ್ದಾರಿ ಆರ್​ಎಸ್​ಎಸ್​ ಕಟ್ಟಾಳು ಮತ್ತು ಕೇಂದ್ರ ಸಚಿವ ನಿತಿನ್​​ ಗಡ್ಕರಿಗೆ ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮೋಹನ್​ ಭಾಗವತ್​​ ಸೂಚನೆ ಮೇರೆಗೆ ಇದೀಗ ನಿತಿನ್​​ ಗಡ್ಕರಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ರಚನೆ ಜವಾಬ್ದಾರಿ ಹೊತ್ತಿದ್ಧಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರಿದ  ಸಂಬಂಧ ದೇವೇಂದ್ರ ಫಡ್ನವೀಸ್ ಆರ್​​ಎಸ್​ಎಸ್​​ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ನಿನ್ನೆ ರಾತ್ರಿ ಸುಮಾರು 9.25ರ ವೇಳೆಗೆ ನಾಗಪುರದ ಆರ್​​ಎಸ್​ಎಸ್ ಪ್ರಮುಖ ಕಚೇರಿಗೆ ಆಗಮಿಸಿದ ದೇವೇಂದ್ರ ಫಡ್ನವೀಸ್ ಸುಮಾರು ಒಂದೂವರೆ ಗಂಟೆ ಕಾಲ ಮೋಹನ್​ ಭಾಗವತ್​​ ಜತೆ ಚರ್ಚೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ಕೇಂದ್ರ ಸಚಿವ ನಿತಿನ್​​ ಗಡ್ಕರಿಗೆ ಶಿವಸೇನೆ-ಬಿಜೆಪಿ ನುಡವಿನ ಭಿನ್ನಾಭಿಪ್ರಾಯ ಬಗೆಹರಿಸುವ ಜವಾಬ್ದಾರಿ ನೀಡಿದ್ಧಾರೆ. ಅಲ್ಲದೇ ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆ ತೀರ್ಪು ಬರುವ ಮುನ್ನವೇ ಸರ್ಕಾರ ರಚನೆ ಮಾಡಬೇಕು ಎಂದು ಸೂಚಿಸಿದ್ದಾರೆನ್ನಲಾಗಿದೆ.

ಈ ಮುನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಸಂಪರ್ಕದಲ್ಲಿರುವ ಶಿವಸೇನಾ ಮುಖಂಡ ಕಿಶೋರ್ ತಿವಾರಿ ಆರ್​ಎಸ್​​ಎಸ್​​ ಮುಖ್ಯಸ್ಥ ಮೋಹನ್​​ ಭಾಗವತ್​​ಗೆ ಪತ್ರ ಬರೆದಿದ್ದರು. ಬಿಜೆಪಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕೂಡಲೇ ಆರ್​ಎಸ್​​ಎಸ್​​ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಶಿವಸೇನೆಗೆ ಕಾಂಗ್ರೆಸ್​​ ಬೆಂಬಲ ನೀಡುವ ಮಾತೇ ಇಲ್ಲ: ಸೋನಿಯಾ ಗಾಂಧಿ

ಬಿಜೆಪಿ - ಶಿವಸೇನಾ ಪರ ಜನಾದೇಶ ಬಂದಿದೆ. ಆದರೆ, ಮೈತ್ರಿ ಧರ್ಮ ಪಾಲಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಸರ್ಕಾರ ರಚನೆಗೂ ಬಿಜೆಪಿ ವಿಳಂಬ ಧೋರಣೆ ಅನುಸರಿಸುತ್ತಿದೆ. ನೀವು ನಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಮೋಹನ್​​ ಭಾಗವತ್​​ಗೆ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ.

ಸದ್ಯ ಮಹಾರಾಷ್ಟ್ರದಲ್ಲಿ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಬಿಜೆಪಿ ನಿರೀಕ್ಷೆ ಸುಳ್ಳಾಗಿದೆ. ಇತ್ತ 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವುದಾಗಿ ಶಿವಸೇನೆ ಹೊಸ ದಾಳ ಉರುಳಿಸಿದೆ. ಈ ಸೂತ್ರದ ಪ್ರಕಾರ 5 ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಇಬ್ಬರು ಉಖ್ಯಮಂತ್ರಿಗಳನ್ನು ಮಾಡಬೇಕಾಗುತ್ತದೆ. ಅಂತೆಯೇ ಎರಡೂವರೆ ವರ್ಷ ಶಿವಸೇನೆ ಅಭ್ಯರ್ಥಿ ಸಿಎಂ ಆದರೆ, ಇನ್ನುಳಿದ ಅವಧಿಗೆ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಆಗಬಹುದಾಗಿದೆ.

ಆರಂಭದಿಂದಲೂ ಸಿಎಂ ಹುದ್ದೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಶಿವಸೇನೆಯೀಗ, ಇಂತಹ ಬೇಡಿಕೆಯಿಟ್ಟಿದೆ. ಶಿವಸೇನಯಿಂದ ಆದಿತ್ಯ ಠಾಕ್ರೆ ಸಿಎಂ ಸ್ಥಾನಕ್ಕೆ ಯತ್ನಿಸುತ್ತಿದ್ದರೆ, ಅತ್ತ ಬಿಜೆಪಿಯಿಂದಹಾಲಿ ಸಿಎಂ ದೇವೇಂದ್ರ ಫಡ್ನವಿಸ್ ಮತ್ತೆ ತಮ್ಮ ಸ್ಥಾನದಲ್ಲೇ ಮುಂದುವರೆಯಲು ಸಜ್ಜಾಗಿದ್ದಾರೆ. ಆದರೀಗ ಶಿವಸೇನೆ ಆಗ್ರಹದಿಂದ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟವಾಗಿದೆ.ಇದನ್ನೂ ಓದಿ: ನಿಮಗೆ ಬೇಕಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಮನಾಥ್​​ ಕೋವಿಂದ್​ ನಿಮ್ಮ ಜೇಬಿನಲ್ಲಿದ್ದಾರೆಯೇ?: ಬಿಜೆಪಿಗೆ ಶಿವಸೇನೆ ಪ್ರಶ್ನೆ

ಒಂದೆಡೆ ದೇವೇಂದ್ರ ಫಡ್ನವೀಸ್​​ ನಾವು 50:50 ಸೂತ್ರಕ್ಕೆ ಚುನಾವಣಾಪೂರ್ವ ಮೈತ್ರಿ ವೇಳೆ ಒಪ್ಪಿಕೊಂಡಿರಲಿಲ್ಲ ಎಂದು ಹೇಳುತ್ತಿದೆ. ಇನ್ನೊಂದೆಡೆ ಚುನಾವಣಾಪೂರ್ವ ಮೈತ್ರಿಗೆ ಮುನ್ನವೇ ಬಿಜೆಪಿ ಹೈಕಮಾಂಡ್​ ಅಮಿತ್​​ ಶಾ ಮತ್ತು ಫಡ್ನವೀಸ್ ಒಪ್ಪಂದಕ್ಕೆ ಒಪ್ಪಿದ್ದರು. ಈಗ ಯೂಟರ್ನ್​​ ಹೊಡೆಯುತ್ತಿದ್ದಾರೆ. ಮುಂದಿನ ಮಹಾರಾಷ್ಟ್ರ ಸಿಎಂ ನಮ್ಮ ಪಕ್ಷದವರೇ ಎಂದು ಶಿವಸೇನೆ ಸಂಸದ ಸಂಜಯ್ ರಾವತ್​​ ಘೋಷಿಸಿದ್ದಾರೆ.​​
-----------
First published: November 6, 2019, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading