• Home
  • »
  • News
  • »
  • national-international
  • »
  • GM Mustard: ಕುಲಾಂತರಿ ಸಾಸಿವೆಗೆ ಕೇಂದ್ರ ಅನುಮೋದನೆ, RSS ಸೇರಿ ಹಲವು ಸಂಘಟನೆಗಳಿಂದ ವಿರೋಧ

GM Mustard: ಕುಲಾಂತರಿ ಸಾಸಿವೆಗೆ ಕೇಂದ್ರ ಅನುಮೋದನೆ, RSS ಸೇರಿ ಹಲವು ಸಂಘಟನೆಗಳಿಂದ ವಿರೋಧ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

RSS Opposes GM Mustard: ಸದ್ಯ ವಾಣಿಜ್ಯ ಕೃಷಿಯ ಪ್ರಸ್ತಾಪವನ್ನು ತೆರವುಗೊಳಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್ ಮತ್ತು ಬಿಕೆಎಸ್‌ ಈ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದೆ.

  • Share this:

ಕೃಷಿ ಕ್ಷೇತ್ರದಲ್ಲಿ (Agricultural Field)  ತೀರ್ವ ಚರ್ಚೆಗೆ ಕಾರಣವಾಗಿದ್ದ ಮತ್ತು ಆರ್‌ಎಸ್‌ಎಸ್, (RSS) ದೇಶಿ ಜಾಗರಣ ಮಂಚ್‌ ವಿರೋಧಿಸುತ್ತಿದ್ದ ಕುಲಾಂತರಿ ಸಾಸಿವೆಗೆ ಅನುಮೋದನೆ ಸಿಕ್ಕಿದ್ದು ಮತ್ತಷ್ಟು ವಿರೋಧ ವ್ಯಕ್ತವಾಗಿದೆ. ದೇಶದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕುಲಾಂತರಿ (ಬೆನೆಟಿಕಲಿ ಮಾಡಿಫೈಡ್‌) ಸಾಸಿವೆ ಬೀಜಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮೋದನೆ ನೀಡಿದೆ. ಕೇಂದ್ರ ಪರಿಸರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (GEAC) ತಳೀಯವಾಗಿ ಮಾರ್ಪಡಿಸಿದ (GM) ಸಾಸಿವೆ ಕೃಷಿಗಾಗಿ ನಿಯಂತ್ರಕ ಅನುಮೋದನೆಯನ್ನು ಪಡೆದುಕೊಂಡಿದೆ. ಸದ್ಯ ವಾಣಿಜ್ಯ ಕೃಷಿಯ ಪ್ರಸ್ತಾಪವನ್ನು ತೆರವುಗೊಳಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್ ಮತ್ತು ಬಿಕೆಎಸ್‌ ಈ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದೆ.


ಈ ಸಾಸಿವೆ ಕ್ಯಾನ್ಸರ್‌ ಕಾರಕ ಎಂದು ಆರೋಪಿಸಿದ ಆರ್‌ಎಸ್‌ಎಸ್‌ ಮತ್ತು ಬಿಕೆಎಸ್
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ರೈತ ಸಂಘಟನೆ ಭಾರತೀಯ ಕಿಸಾನ್ ಸಂಘ (BKS) ಈ ಕ್ರಮವನ್ನು ವಿರೋಧಿಸಿದೆ ಮತ್ತು ಈ ಸಾಸಿವೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಆರೋಪ ಮಾಡಿದೆ.‌
ಜಿಇಎಸಿ, ದೆಹಲಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಬೆಳೆಗಳಲ್ಲಿನ ಜೆನೆಟಿಕ್ ಮಾರ್ಪಾಡಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೈಜೋಡಿಸುತ್ತಿವೆ ಎಂದು ಬಿಎಸ್‌ಕೆ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಆರೋಪಿಸಿದೆ.


"ಇದೊಂದು ವೈಜ್ಞಾನಿಕ ವಂಚನೆ"
ಮಾಧ್ಯಮಗಳ ಜೊತೆ ಮಾತನಾಡಿದ BKS ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಶ್ರೀ ಮೋಹಿನಿ ಮೋಹನ್ ಮಿಶ್ರಾ ಅವರು GEAC ತನ್ನ ಅಧ್ಯಯನದಲ್ಲಿ GM ಸಾಸಿವೆಯನ್ನು ಸಸ್ಯನಾಶಕ ಸಹಿಷ್ಣು (HT) ಸಾಸಿವೆ ಎಂದು ಹೇಳಿಕೊಂಡಿದೆ. GM ಸಾಸಿವೆ ಇದೊಂದು "ವೈಜ್ಞಾನಿಕ ವಂಚನೆ" ಎಂದು ಆರೋಪಿಸಿದರು.


ಕುಲಾಂತರಿ ಸಾಸಿವೆಯಿಂದ ಅಪಾಯಗಳೇ ಹೆಚ್ಚು
ಹೆಚ್‌ಟಿ (Herbicide Tolerant -HT) ತಂತ್ರಜ್ಞಾನವು ಹೆಚ್ಚಾಗಿ ಕಾರ್ಸಿನೋಜೆನಿಕ್ ಆಗಿದೆ. ಇದು ಒಂದು ಸೈಲೆಂಟ್‌ ಕಿಲ್ಲರ್‌ ಆಗಿದ್ದು, ಮಣ್ಣು, ಸೂಕ್ಷ್ಮಜೀವಿಗಳು, ಪರಾಗಸ್ಪರ್ಶಕಗಳು, ಬಹುತೇಕ ಎಲ್ಲಾ ಔಷಧೀಯ ಗಿಡಮೂಲಿಕೆಗಳನ್ನು ಕೊಲ್ಲುತ್ತದೆ ಮತ್ತು ಬೆಳೆ ವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಮಾನವರಲ್ಲಿ ಮಾಹಾಮಾರಿ ಕ್ಯಾನ್ಸರ್ ಅನ್ನು ಉಂಟುಮಾಡಬಹುದು. ಹೀಗಾಗಿ ಈ ಕುಲಾಂತರಿ ಸಾಸಿವೆಯಿಂದ ಅಪಾಯಗಳೇ ಹೆಚ್ಚು" ಎಂದು ಮಿಶ್ರಾ ಅವರು ತಿಳಿಸಿದರು.


ಇದನ್ನೂ ಓದಿ: ಹಬ್ಬದ ಖುಷಿಯಲ್ಲಿದ್ದ ನೂರಾರು ಜನರಿಗೆ ಒಟ್ಟಿಗೆ ಹಾರ್ಟ್ ಅಟ್ಯಾಕ್; 149 ಮಂದಿ ಭೀಕರ ಸಾವು


ಜಿಇಎಸಿಗೆ ಅನಗತ್ಯವಾದ, ವಿಫಲವಾದ (ಎಚ್‌ಐವಿ-ಹೆಚ್ಚಿನ ಹೂಡಿಕೆಯ ವಿಧ) ಜಿಎಂ ಆಹಾರ ಬೆಳೆಗಳನ್ನು ಭಾರತದ ಕೃಷಿ ವ್ಯವಸ್ಥೆ ಮತ್ತು ಆಹಾರ ಸರಪಳಿಗೆ ಪ್ರವೇಶಿಸುವುದನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ ಎಂದು ಆರೋಪಿಸಿದರು. ಜಿಇಎಸಿಯ ಕ್ರಮಗಳು ಜಿಎಂ ಬೆಳೆ ಪ್ರಕರಣಗಳಲ್ಲಿ ಅವೈಜ್ಞಾನಿಕ, ಸಾಮಾಜಿಕ-ಆರ್ಥಿಕವಲ್ಲ ಎಂದು ಅವರು ಹೇಳಿದರು.


"ನಾವು ಈ ವಿಷಯವಾಗಿ ಕೇಂದ್ರ ಸರ್ಕಾರಕ್ಕೆ ಕೂಡಲೇ ಮನವಿ ಮಾಡಬೇಕು. ಪರಿಸರ ಸ್ನೇಹಿ ಕೃಷಿ ಪದ್ಧತಿಗಳೊಂದಿಗೆ ನಮ್ಮ ಜನರಿಗೆ ಸಾಕಷ್ಟು ಆರೋಗ್ಯಕರ ಆಹಾರವನ್ನು ಒದಗಿಸಲು ವಿನಂತಿಸಬೇಕು ಎಂದರು.


ದೀಪಕ್‌ ಪೆಂಟಲ್‌ ತಂಡ ಅಭಿವೃದ್ಧಿಪಡಿಸಿದ ಕುಲಾಂತರಿ ಸಾಸಿವೆ


ಕುಲಾಂತರಿ ಸಾಸಿವೆ ಬೀಜವನ್ನು ತಳಿಶಾಸ್ತ್ರಜ್ಞ ಮತ್ತು ದೆಹಲಿಯ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ದೀಪಕ್‌ ಪೆಂಟಲ್‌ ಅವರ ತಂಡ ಅಭಿವೃದ್ಧಿಪಡಿಸಿದ್ದಾರೆ. ಕುಲಾಂತರಿ ಸಾಸಿವೆ ಬೀಜವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದು ಹೆಚ್ಚು ಇಳುವರಿ ನೀಡುತ್ತದೆ ಎನ್ನಲಾಗಿದೆ.


ಇದನ್ನೂ ಓದಿ: ಲಿಜ್ ಟ್ರಸ್ ಫೋನ್ ಹ್ಯಾಕ್ ಮಾಡಿದ್ದ ಪುಟಿನ್; ವರದಿ ಬಹಿರಂಗ


ಸಾಮಾನ್ಯವಾಗಿ GM ಬೆಳೆಗಳಿಗೆ ವಿವಿಧ ಹಸಿರು ಗುಂಪುಗಳು ಮತ್ತು RSS-ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ನಿಂದ ವಿರೋಧವಿದ್ದರಿಂದ GEAC ತೆರವುಗೊಳಿಸಲು ವಿಳಂಬವಾಯಿತು. ಇನ್ನೂ ಮುಂದಿನ ಎರಡು ವರ್ಷಗಳಲ್ಲಿ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬಳಕೆಗಾಗಿ ಇದನ್ನು ಬೆಳೆಯಲು ರೈತರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

Published by:Sandhya M
First published: