Terrorist: ನಾಗ್ಪುರದ RSS ಕಚೇರಿ ಸುತ್ತ ಭೂಸಮೀಕ್ಷೆ ನಡೆಸಿರುವ ಉಗ್ರರು, ಸ್ಥಳದಲ್ಲಿ ಬಿಗಿ ಭದ್ರತೆ, ಡ್ರೋಣ್​ ಹಾರಾಟ ನಿಷೇಧ

2006 ರಲ್ಲಿ, AK-47 ಮತ್ತು ಹ್ಯಾಂಡ್ ಗ್ರೆನೇಡ್‌ಗಳನ್ನು ಹೊಂದಿದ್ದ ಮೂವರು ಜೈಶ್​​ -ಎ-ಮೊಹಮ್ಮದ್​​ ಸಂಘಟನೆಯ ಭಯೋತ್ಪಾದಕರು ಆರ್‌ಎಸ್‌ಎಸ್ ಪ್ರಧಾನ ಕಛೇರಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಗ್ಪುರ(ಜ.08): ಶುಕ್ರವಾರ ನಾಗ್ಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಪ್ರಧಾನ ಕಛೇರಿ(Headquarters)ಯಲ್ಲಿ ಹೈ ಅಲರ್ಟ್(High Alert ) ಘೋಷಿಸಲಾಗಿದೆ ಮತ್ತು ನಗರ ಪೊಲೀಸರು(Police) ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಿದ್ದಾರೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಭಯೋತ್ಪಾದಕರು (Terrorists) ಸೂಕ್ಷ್ಮ ಸ್ಥಳಗಳಲ್ಲಿ ಭೂ ಪರಿಶೀಲನೆ ನಡೆಸಿರುವ ಹಿನ್ನೆಲೆ, ನಾಗ್ಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಛೇರಿ ಮತ್ತು ಸುತ್ತಮುತ್ತ ಭದ್ರತೆ(Security)ಯನ್ನು ಹೆಚ್ಚಿಸಲಾಗಿದೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.

ಸತ್ಯ ಬಾಯ್ಬಿಟ್ಟ ಬಂಧಿತ ಉಗ್ರ

ಇತ್ತೀಚೆಗೆ ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ ಭಯೋತ್ಪಾದಕನನ್ನು ಬಂಧಿಸಲಾಗಿತ್ತು. ಈತ ವಿಚಾರಣೆಯ ಸಮಯದಲ್ಲಿ ಒಂದು ಸತ್ಯ ಬಾಯ್ಬಿಟ್ಟಿದ್ದ. ನಮ್ಮ ಗುಂಪಿನ ಕೆಲವು ಸದಸ್ಯರು ನಾಗ್ಪುರದ RSS ಕಚೇರಿ ಸಮೀಪ ಭೂಸಮೀಕ್ಷೆ ನಡೆಸಿದ್ದಾಗಿ ಹೇಳಿದ್ದ. ಈ ವಿಚಾರ ತಿಳಿದ ಬೆನ್ನಲ್ಲೇ ಆರ್​ಎಸ್​ಎಸ್​ ಕಚೇರಿ ಸುತ್ತ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳದಲ್ಲಿ ಹೈ ಅಲರ್ಟ್

ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್, ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ಬಂಧಿಸಿರುವುದನ್ನು ದೃಢಪಡಿಸಿದರು. ಜೊತೆಗೆ ಭದ್ರತಾ ವ್ಯವಸ್ಥೆಗಳ ಪರಿಶೀಲನೆಗಾಗಿ ಶುಕ್ರವಾರ ಹಿರಿಯ ಪೊಲೀಸ್ ಸಿಬ್ಬಂದಿಗಳೊಂದಿಗೆ ಆರ್​​ಎಸ್​ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು.

ಇದನ್ನೂ ಓದಿ:COVID ಸೋಂಕಿತರಿಗೆ ಗುಡ್​ನ್ಯೂಸ್, ದೇಶದಲ್ಲಿ 200 ಜನರಲ್ಲಿ ಒಬ್ಬರಿಗೆ ಮಾತ್ರ ಆಕ್ಸಿಜನ್​ ನೆರವು ಬೇಕಿದೆ..!

ಆರ್‌ಎಸ್‌ಎಸ್ ಪ್ರಧಾನ ಕಛೇರಿ ಮತ್ತು ರೇಶಿಂಬಾಗ್‌ನಲ್ಲಿರುವ ಹೆಡ್ಗೆವಾರ್ ಭವನದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ. ಎರಡೂ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಹಗಲು-ರಾತ್ರಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ ಎಂದರು. ಆರ್‌ಎಸ್‌ಎಸ್ ಪ್ರಧಾನ ಕಛೇರಿ ಸುತ್ತಲಿನ ಎಲ್ಲಾ ವಾಹನಗಳು ಮತ್ತು ವ್ಯಕ್ತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಎಂದು ಹೇಳಿದರು. ಆದರೆ ವಿಷಯವು "ಸೂಕ್ಷ್ಮ" ಎಂದು ಉಲ್ಲೇಖಿಸಿ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.

ಉಗ್ರರು ಮಾಡಿಕೊಂಡಿದ್ದ ಪ್ಲ್ಯಾನ್ ಏನು?

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಲಾದ ಉಗ್ರನ ವಿಚಾರಣೆ ವೇಳೆ, ಭಯೋತ್ಪಾದನಾ ಪ್ಲ್ಯಾನ್​​ ಕುರಿತು ಮಾಹಿತಿ ಹೊರಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜೈಶ್ ಕಾರ್ಯಕರ್ತರು ಜುಲೈ 2021 ರಲ್ಲಿ ನಾಗ್ಪುರಕ್ಕೆ ಭೇಟಿ ನೀಡಿದ್ದರು ಮತ್ತು ಎರಡು ದಿನಗಳ ಕಾಲ ನಾಗ್ಪುರದಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಡಿಸೆಂಬರ್‌ನಲ್ಲಿ ಕೆಲವು ದಿನಗಳ ಕಾಲ ಭಯೋತ್ಪಾದಕರು ನಗರದಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ಲಭಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ನಾಗ್ಪುರ ಕ್ರೈಂ ಬ್ರಾಂಚ್ ಉಗ್ರರ ಪತ್ತೆಗೆ ತಂಡವನ್ನು ರಚಿಸಿದೆ. ಕಾಶ್ಮೀರದಲ್ಲಿ ಬಂಧಿಸಲಾದ ಭಯೋತ್ಪಾದಕ, ತಾನು ಕೂಡ ಪ್ರದೇಶವನ್ನು ಸಮೀಕ್ಷೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದು ಜುಲೈ 2021 ರಲ್ಲಿ.

ಜನವರಿ 26ರಂದು ದಾಳಿ ನಡೆಯುವ ಆತಂಕ

ಜನವರಿ 26 ಗಣರಾಜ್ಯೋತ್ಸವ ದಿನದಂದು ದಾಳಿಗಳು ನಡೆಯಬಹುದೆಂಬ ಆತಂಕವಿದೆ. 2006 ರಲ್ಲಿ, AK-47 ಮತ್ತು ಹ್ಯಾಂಡ್ ಗ್ರೆನೇಡ್‌ಗಳನ್ನು ಹೊಂದಿದ್ದ ಮೂವರು ಜೈಶ್​​ -ಎ-ಮೊಹಮ್ಮದ್​​ ಸಂಘಟನೆಯ ಭಯೋತ್ಪಾದಕರು ಆರ್‌ಎಸ್‌ಎಸ್ ಪ್ರಧಾನ ಕಛೇರಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದರು. ಆರ್‌ಎಸ್‌ಎಸ್, ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಮೂಲವಾಗಿದೆ.

ಇದನ್ನೂ ಓದಿ: Omicron: ನಿಮ್ಮ ಚರ್ಮ, ತುಟಿ, ಉಗುರುಗಳ ಮೇಲೆ ಈ ರೀತಿಯಾಗಿದ್ರೆ ಅದು ಓಮೈಕ್ರಾನ್​ ಎಂದರ್ಥ

ಡ್ರೋಣ್ ಹಾರಾಟ ನಿಷೇಧ

ಹೀಗಾಗಿ, ನಗರ ಪೊಲೀಸರು ಆ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಮಹಲ್‌ನಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿ ಮತ್ತು ಡಾ ಹೆಡ್ಗೆವಾರ್ ಸ್ಮೃತಿ ಭವನದ ಸುತ್ತಲೂ ಫೋಟೋಗ್ರಫಿ ಮತ್ತು ಡ್ರೋನ್‌ಗಳ ಬಳಕೆಯನ್ನು ನಿಷೇಧಿಸಿದ್ದಾರೆ.

ಗಣರಾಜ್ಯೋತ್ಸವ ಮತ್ತು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜನನಿಬಿಡ ಸ್ಥಳಗಳು, ಮಾರುಕಟ್ಟೆಗಳು, ಹಾಗೆಯೇ ಉನ್ನತ ಮಟ್ಟದ ರಾಜಕಾರಣಿಗಳು ಮತ್ತು ಭದ್ರತಾ ಪಡೆಗಳ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಭದ್ರತೆ ವಹಿಸಲಾಗಿದೆ.
Published by:Latha CG
First published: