ಆರ್​ಎಸ್​ಎಸ್​ ಉಪನ್ಯಾಸ ಕಾರ್ಯಕ್ರಮಕ್ಕೆ ರಾಹುಲ್​ ಗಾಂಧಿಗೆ ಆಹ್ವಾನ!


Updated:August 27, 2018, 6:00 PM IST
ಆರ್​ಎಸ್​ಎಸ್​ ಉಪನ್ಯಾಸ ಕಾರ್ಯಕ್ರಮಕ್ಕೆ ರಾಹುಲ್​ ಗಾಂಧಿಗೆ ಆಹ್ವಾನ!

Updated: August 27, 2018, 6:00 PM IST
ನ್ಯೂಸ್​ 18 ಕನ್ನಡ

ಮುಂಬೈ (ಆ.27): ಮುಂದಿನ ತಿಂಗಳು ಆರ್​ಎಸ್​ಎಸ್​ ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯನ್ನು ಆಮಂತ್ರಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ.

ದೆಹಲಿಯ ವಿಜ್ಞಾನ್​ ಭವನದಲ್ಲಿ ಸೆ.17ರಿಂದ 19ರಂದು ನಡೆಯಲಿರುವ ಉಪನ್ಯಾಸ ಸರಣಿಗೆ ಬಿಜೆಪಿ ಟೀಕಾಕಾರರಾಗಿರುವ ರಾಹುಲ್​​ರನ್ನು ಆಮಂತ್ರಿಸಲಾಗುವುದು.

ಕಾಂಗ್ರೆಸ್​ ಅಧ್ಯಕ್ಷನನ್ನು ಹೊರತು ಪಡಿಸಿ ಎಡಪಂಥೀಯ ನಾಯಕರಾದ ಸೀತಾರಾಮ್​ ಯಚೂರಿ ಸೇರಿದಂತೆ ಅನೇಕ ನಾಯಕರನ್ನು ಕೂಡ ಆಹ್ವಾನಿಸಲಾಗುವುದು.ಈ ಮೂಲಕ ವಿಭಿನ್ನ ಸಿದ್ಧಾಂತ ಹೊಂದಿರುವ ನಾಯಕರನ್ನು ಒಂದೆಡೆ ಸೇರಿಸುವ ಆಲೋಚನೆಯನ್ನು ಸಂಘ ಹೊಂದಿದೆ ಎನ್ನಲಾಗಿದೆ.

ಭವಿಷ್ಯದ ಭಾರತ; ಆರ್​ಎಸ್​ಎಸ್​ ದೃಷಿಕೋನದಲ್ಲಿ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಮಕಾಲೀನ ಚಿಂತನೆಗಳು ಎಂಬ ವಿಷಯಗಳನ್ನು ಈ ಉಪನ್ಯಾಸದಲ್ಲಿ ಚರ್ಚೆ ಮಾಡಲಾಗುವುದು. ಆರ್​ಎಸ್​ ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​  ಉಪನ್ಯಾಸ ನೀಡಲಿದ್ದಾರೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಅರುಣ್​ ಕುಮಾರ್​ ತಿಳಿಸಿದ್ದಾರೆ.

ರಾಹುಲ್​ ಗಾಂಧಿ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಕುಮಾರ್​, ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದು ಸಂಘಕ್ಕೆ ಸಂಬಂಧಿಸಿದ ವಿಷಯ.  ಆ ಚಿಂತೆ ನಿಮಗೆ ಬೇಡ. ಆದರೆ ವಿಭಿನ್ನ ಸಿದ್ದಾಂತ, ರಾಜಕೀಯ, ಧಾರ್ಮಿಕ  ಚಿಂತನೆ ನಾಯಕರನ್ನು ಆಹ್ವಾನಿಸುವ ಉದ್ದೇಶ ನಮಗೆ ಇದೆ ಎಂದರು.
Loading...

ಜೂನ್​ನಲ್ಲಿ ನಾಗಪುರದಲ್ಲಿ ನಡೆದ ಆರ್​ಎಸ್​ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಭಾಗಿಯಾಗಿದ್ದು, ಕಾಂಗ್ರೆಸ್​ ನಾಯಕರಲ್ಲಿ ಅಸಮಧಾನಕ್ಕೆ ಕಾರಣವಾಗಿತ್ತು.

ಆರ್​ಎಸ್​ಎಸ್​ ಬಿಜೆಪಿ ಸೈದ್ದಾಂತಿಕ ಮಾರ್ಗದರ್ಶಿಯಾಗಿದೆ. ಆರ್​ಎಸ್​ಎಸ್​ ಸಿದ್ದಾಂತಗಳು ಅರಬ್​ ರಾಷ್ಟ್ರಗಳಲ್ಲಿನ ಮುಸ್ಲಿಂರ ಭ್ರಾತೃತ್ವದ ಸಿದ್ದಾಂತಗಳ ಸಾಮ್ಯತೆಯನ್ನು ಹೊಂದಿದೆ ಎಂದು ರಾಹುಲ್​ ಗಾಂಧಿ ಟೀಕಿಸಿದ್ದರು
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...