ಯಾರಿದು ಅರುಣ್​ ಕುಮಾರ್​? ಹೊಸ ವ್ಯಕ್ತಿಯನ್ನು ಮುನ್ನೆಲೆಗೆ ತಂದ ಆರ್​ಎಸ್​ಎಸ್​!

ಅರುಣ್ ಕುಮಾರ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಮತ್ತು 370 ನೇ ವಿಧಿಯನ್ನು ರದ್ದುಪಡಿಸಲು ಹಿಂದಿರುವ ಪ್ರೇರಣೆ ಇವರೇ. ಕೇಸರಿ ಪಾಳಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಇವರು ಈ ವಿಧೇಯಕ ರದ್ದತಿಯ ಪ್ರಮುಖ ಪ್ರತಿಪಾದಕರಾಗಿದ್ದರು.

ಆರ್​​ಎಸ್​ಎಸ್​ ಅರುಣ್​ ಕುಮಾರ್​​

ಆರ್​​ಎಸ್​ಎಸ್​ ಅರುಣ್​ ಕುಮಾರ್​​

 • Share this:
  ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರನ್ನು ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿಯೊಂದಿಗೆ ಸಂಯೋಜಕರಾಗಿ ಘೋಷಿಸಿದೆ.   ರಾಜಕೀಯ ವಿಷಯಗಳಿಗೆ ನೇರವಾಗಿಯೇ ಕಾಲಿಟ್ಟಿರುವ ಆರ್​ಎಸ್​ಎಸ್​  ಇವರನ್ನು ನೇಮಿಸಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.  2015 ರಿಂದ ಉಸ್ತುವಾರಿ ವಹಿಸಿಕೊಂಡಿದ್ದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಅವರನ್ನು ಇದೇ ವೇಳೆ ಬದಲಾವಣೆ ಮಾಡಿ, ಆ ಸ್ಥಾನಕ್ಕೆ ಅರುಣ್​ ಕುಮಾರ್​ ಅವರನ್ನು ಕೂರಿಸಲಾಯಿತು.

  ಮಧ್ಯಪ್ರದೇಶದ ಚಿತ್ರಕೂಟ್‌ನಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ಸಿನ ಪೂರ್ಣಾವಧಿ ಕಾರ್ಯಕರ್ತರ ಸಭೆಯಲ್ಲಿ ಈ ಬದಲಾವಣೆಯನ್ನು ಪ್ರಕಟಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ದತ್ತಾತ್ರೇಯ ಹೊಸಬಾಳೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅರುಣ್ ಕುಮಾರ್ ಜೊತೆಗೆ ರಾಮದತ್ ಚಕ್ರಾಧರ್​ ಅವರನ್ನು ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಘೋಷಿಸುವ  ಮೂಲಕ ಆರ್​ಎಸ್​ಎಸ್​ ತನ್ನ ಸಾಂಸ್ಥಿಕ ರಚನೆಯಲ್ಲಿ ಒಂದು ಪೀಳಿಗೆಯನ್ನು ಬದಲಾವಣೆ ಮಾಡಿದೆ.

  12ನೇ ವಯಸ್ಸಿಗೆ ಸಂಘಕ್ಕೆ ಸೇರಿದ್ದರು ಅರುಣ್​ ಕುಮಾರ್​

  ಏಪ್ರಿಲ್ 1964 ರಲ್ಲಿ ಪೂರ್ವ ದೆಹಲಿಯ ಜಿಲ್​ಮಿಲ್​​ನಲ್ಲಿ ಜನಿಸಿದ ಅರುಣ್ ಕುಮಾರ್ ಅವರು 1976 ರಲ್ಲಿ ತುರ್ತು ಪರಿಸ್ಥಿತಿಯ ವೇಳೆಗೆ ತಮ್ಮ 12 ನೇ ವಯಸ್ಸಿನಲ್ಲಿ ಸಂಘಕ್ಕೆ ಸೇರಿದರು ಎಂದು ವರದಿಗಳು ತಿಳಿಸಿವೆ. ಅಂದಿನಿಂದ ಅವರು ಆರ್​ಎಸ್​ಎಸ್​ ಶಾಖೆಗೆ ಭೇಟಿ ನೀಡಲು ಪ್ರಾರಂಭಿಸಿದರು ಮತ್ತು 1982 ರಲ್ಲಿ ಪ್ರಚಾರಕ್​ ಆಗಿ ಸ್ಥಾನ ಗಿಟ್ಟಿಸಿಕೊಂಡರು. ಚಿಕ್ಕ ವಯಸ್ಸಿನಿಂದಲೇ ಸಂಘದಲ್ಲಿ ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದ ಇವರು ಇಂದು ಪ್ರಮುಖ ಹುದ್ದೆಗೆ ಏರಿದ್ದಾರೆ.

  ಜಿಲ್ಲಾ ಪ್ರಚಾರಕ ಜವಾಬ್ದಾರಿ

  ನಂತರ ಅವರು ಜಿಲ್ಲಾ ಪ್ರಚಾರಕರಾಗಿ, ಇಲಾಖಾ ಪ್ರಚಾರಕರಾಗಿ ಮತ್ತು ಸಹ ಪ್ರಾಂತೀಯ ಪ್ರಚಾರಕ ಜವಾಬ್ದಾರಿಗಳನ್ನು ವಹಿಸಿಕೊಂಡರು. ಅವರ ಕೇಂದ್ರ ದೆಹಲಿ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ.  ನಂತರ ಅವರು ಅಖಿಲ್ ಭಾರತೀಯರ ಸಹ ಸಂಪರ್ಕ ಪ್ರಮುಖರಾಗಿ ಕೂಡ ತಮ್ಮ ಕಾರ್ಯ ನಿರ್ವಹಿಸಿದ್ದಾರೆ.

  ಅರುಣ್ ಕುಮಾರ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಮತ್ತು 370 ನೇ ವಿಧಿಯನ್ನು ರದ್ದುಪಡಿಸಲು ಹಿಂದಿರುವ ಪ್ರೇರಣೆ ಇವರೇ. ಕೇಸರಿ ಪಾಳಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಇವರು ಈ ವಿಧೇಯಕ ರದ್ದತಿಯ ಪ್ರಮುಖ ಪ್ರತಿಪಾದಕರಾಗಿದ್ದರು.

  ರಾಜಕೀಯವಾಗಿ ನಿರ್ಣಾಯಕತೆಯಲ್ಲಿ ಪ್ರಮುಖರಾಗಿರುವ ಅರುಣ್​ ಕುಮಾರ್​ ಅವರು  ಉತ್ತರ ಪ್ರದೇಶ ಸೇರಿದಂತೆ 2022 ರಲ್ಲಿ ಏಳು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರನ್ನು ರಾಜ್ಯಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

  ಇದನ್ನೂ ಓದಿ: Mekedatu Project| ಮೇಕೆದಾಟು ವಿವಾದ; ಸರ್ವಪಕ್ಷ ಸಭೆಯಲ್ಲಿ ಕರ್ನಾಟಕದ ವಿರುದ್ಧ 3 ನಿರ್ಣಯಗಳನ್ನು ಕೈಗೊಂಡ ಸ್ಟಾಲಿನ್ ಸರ್ಕಾರ

  ರಾಷ್ಟ್ರೀಯ ಸ್ವಯಂಸೇವಕ ಸಂಘದ ಐದು ದಿನಗಳ ಸಭೆ ಚಿತ್ರಕೂಟ್​ನಲ್ಲಿ ಶುಕ್ರವಾರ ಪ್ರಾರಂಭವಾಯಿತು. ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಸಹ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಮತ್ತು ಎಲ್ಲಾ ಐದು ಸಹ-ಕಾರ್ಯವಾಹಕರು (ಜಂಟಿ ಪ್ರಧಾನ ಕಾರ್ಯದರ್ಶಿಗಳು) ಸೇರಿದಂತೆ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಕಡಿಮೆ ಮಾಡಿ ಹಾಗೂ ಅನಗತ್ಯವಾಗಿ ಗುಂಪು ಗೂಡುವುದನ್ನು ನಿಲ್ಲಿಸಿ.
  Published by:HR Ramesh
  First published: