• Home
 • »
 • News
 • »
 • national-international
 • »
 • Mohan Bhagwat: ಮಾಂಸಾಹಾರಿಗಳಿಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

Mohan Bhagwat: ಮಾಂಸಾಹಾರಿಗಳಿಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ಮೋಹನ್ ಭಾಗ್ವತ್

ಮೋಹನ್ ಭಾಗ್ವತ್

ಯಾವ ವಿಷಯದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಮಾತಾಡಿದ್ದಾರೆ ಅಂತ ಒಮ್ಮೆ ನೋಡಿ.

 • Share this:

  ಗಾಂಧಿ ಜಯಂತಿಯಂದು  ತಮಿಳುನಾಡು ರಾಜ್ಯಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸ್ಥಳೀಯ ಘಟಕದವರಿಗೆ ರೂಟ್ ಮಾರ್ಚ್ (Route March) ನಡೆಸಲು ತಮಿಳುನಾಡು ರಾಜ್ಯ ಸರ್ಕಾರ ನಿರಾಕರಿಸಿದ್ದಕ್ಕೆ, ಸಂಘ ಮತ್ತು ತಮಿಳುನಾಡು ಸರ್ಕಾರ ಎರಡು ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಈಗ ಮತ್ತೊಂದು ವಿಷಯಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಸುದ್ದಿಯಲ್ಲಿದ್ದಾರೆ ಅಂತ ಹೇಳಬಹುದು. ಯಾವ ವಿಷಯದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ (Mohan Bhagwat)  ಅವರು ಮಾತಾಡಿದ್ದಾರೆ ಅಂತ ಒಮ್ಮೆ ನೋಡಿ.


  ಮೋಹನ್ ಭಾಗವತ್ ಅವರು “ಮಾಂಸಾಹಾರ ಸೇವಿಸುವವರು ಮಾಂಸಾಹಾರ ಸೇವಿಸುವಾಗ ಸ್ವಲ್ಪ ಶಿಸ್ತನ್ನು ಅನುಸರಿಸಲು ಪ್ರಯತ್ನಿಸಬೇಕು, ಇದರಿಂದ ಅವರ ಮನಸ್ಸು ಕೇಂದ್ರೀಕೃತವಾಗಿರುತ್ತದೆ” ಎಂದು ಅವರು ಗುರುವಾರದಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಭಾಗವತ್ ಅವರು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.


  ಮೋಹನ್ ಭಾಗವತ್ ಅವರು ಹೇಳಿದ್ದೇನು ನೋಡಿ
  ಸಾಮಾನ್ಯವಾಗಿ ಮಾಂಸಾಹಾರಿ ಭಕ್ಷ್ಯಗಳನ್ನು ಹೊಂದಿರುವ 'ತಾಮಸಿಕ ಆಹಾರ' ವನ್ನು ಜನರು ಸೇವಿಸುವುದನ್ನು ತಪ್ಪಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು."ನೀವು ತಪ್ಪು ಆಹಾರವನ್ನು ಸೇವಿಸಿದರೆ, ನೀವು ತಪ್ಪು ಮಾರ್ಗದಲ್ಲಿ ಹೋಗುತ್ತೀರಿ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಆಹಾರವನ್ನು ಸೇವಿಸಬೇಡಿ" ಎಂದು ಭಾಗವತ್ ಹೇಳಿದರು.


  ಪಾಶ್ಚಿಮಾತ್ಯರ ಮಾಂಸಾಹಾರಿಗಳೊಂದಿಗೆ ಹೋಲಿಕೆ ಮಾಡಿದ ಮೋಹನ್ ಭಾಗವತ್ ಅವರು, ಭಾರತದಲ್ಲಿ ಮಾಂಸ ಮತ್ತು ಮೀನುಗಳನ್ನು ಸೇವಿಸುವವರು ವಾರದಲ್ಲಿ ಕೆಲವು ದಿನಗಳಲ್ಲಿ ತಮ್ಮ ದೈನಂದಿನ ಸಾತ್ವಿಕ ಆಹಾರ ಪದ್ಧತಿಯಿಂದ ದೂರ ಸರಿಯುತ್ತಾರೆ ಎಂದು ಹೇಳಿದರು. "ಮಾಂಸವನ್ನು ಸೇವಿಸುವಲ್ಲಿ ಸ್ವಲ್ಪ ಮಟ್ಟಿಗಿನ ಶಿಸ್ತನ್ನು ಅನುಸರಿಸಲು ಪ್ರಯತ್ನಿಸಿ, ಇದರಿಂದ ನಿಮ್ಮ ಮನಸ್ಸು ಒಂದು ವಿಷಯದ ಮೇಲೆ ಕೇಂದ್ರೀಕೃತವಾಗಿರುತ್ತದೆ" ಎಂದು ಸಂಘದ ಮುಖ್ಯಸ್ಥರು ಸುದ್ದಿ ಸಂಸ್ಥೆಗೆ ತಿಳಿಸಿದರು.


  ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಮದ್ವೆ ಫಿಕ್ಸ್, ಟಿ20 ವಿಶ್ವಕಪ್‌ನಿಂದ ಬುಮ್ರಾ ಔಟ್​! ಇದು ಇಂದಿನ ಟಾಪ್ ನ್ಯೂಸ್


  ಈ ಸಂದರ್ಭದಲ್ಲಿ ಕೆಲವಡೆ ಮಾಂಸಾಹಾರ ಮಾಡುತ್ತಾರೆ
  ಇಡೀ ದೇಶವು ನವರಾತ್ರಿಯನ್ನು ಆಚರಿಸುತ್ತಿರುವ ಸಮಯದಲ್ಲಿ ಭಾಗವತ್ ಅವರ ಈ ಹೇಳಿಕೆಯು ಬಂದಿದೆ. ಈ ಸಂದರ್ಭದಲ್ಲಿ ಬಹುತೇಕ ಜನರು ಉಪವಾಸ ಮಾಡುವುದಲ್ಲದೆ, ಮಾಂಸಾಹಾರ ಆಹಾರದಿಂದ ಸಂಪೂರ್ಣವಾಗಿ ದೂರವಿರುತ್ತಾರೆ ಅಂತ ಹೇಳಬಹುದು.ಆದಾಗ್ಯೂ, ದುರ್ಗಾ ಪೂಜಾ ಹಬ್ಬವನ್ನು ಅದ್ದೂರಿಯಾಗಿ ಮಾಡುವಲ್ಲಿ ಜಾಗತಿಕವಾಗಿ ಹೆಸರುವಾಸಿಯಾದ ಪಶ್ಚಿಮ ಬಂಗಾಳದಂತಹ ಭಾರತದ ಕೆಲವು ರಾಜ್ಯಗಳಲ್ಲಿ, ಈ ಸಮಯದಲ್ಲಿ ಅಲ್ಲಿನ ಜನರು ಮಾಂಸಾಹಾರವನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಸೇವಿಸುವುದನ್ನು ನಾವು ನೋಡಿರುತ್ತೇವೆ. ಅದಕ್ಕೆ ಮೋಹನ್ ಭಾಗವತ್ ಅವರು ಜನರಿಗೆ ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವಲ್ಲಿ ಸ್ವಲ್ಪ ಶಿಸ್ತನ್ನು ಅಳವಡಿಸಿಕೊಳ್ಳಿ ಅಂತ ಹೇಳಿದ್ದಾರೆ.


  ರೂಟ್ ಮಾರ್ಚ್ ನಡೆಸಲು ಆರ್ಎಸ್ಎಸ್ ಗೆ ಅನುಮತಿ ನಿರಾಕರಿಸಿದ ತಮಿಳುನಾಡು ಸರ್ಕಾರ
  ಏತನ್ಮಧ್ಯೆ ತಮಿಳುನಾಡು ಸರ್ಕಾರವು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ರಾಜ್ಯದಲ್ಲಿ ತನ್ನ ರೂಟ್ ಮಾರ್ಚ್ ನಡೆಸಲು ಆರ್‌ಎಸ್‌ಎಸ್ ಗೆ ಅನುಮತಿ ನಿರಾಕರಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ ಮತ್ತು ಪೊಲೀಸ್ ಮಹಾನಿರ್ದೇಶಕ ಸಿ.ಶೈಲೇಂದ್ರ ಬಾಬು ಸೇರಿದಂತೆ ದಕ್ಷಿಣ ರಾಜ್ಯದ ಹಿರಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ಸಂಘವು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.


  ಇದನ್ನೂ ಓದಿ: ನವರಾತ್ರಿಗೆ ಭಾರತೀಯ ರೈಲ್ವೆಯಿಂದ ವಿಶೇಷ ಕೊಡುಗೆ


  ಆರ್‌ಎಸ್‌ಎಸ್ ನ ಸ್ಥಳೀಯ ಘಟಕಗಳಿಗೆ ರೂಟ್ ಮಾರ್ಚ್ ನಡೆಸಲು ಮತ್ತು ನಂತರ ಭಾನುವಾರ ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡುವಂತೆ ನಿರ್ದೇಶಿಸಿದ ಹೈಕೋರ್ಟ್ ಸೆಪ್ಟೆಂಬರ್ 22 ರ ಆದೇಶವನ್ನು ರಾಜ್ಯ ಅಧಿಕಾರಿಗಳು ಜಾರಿಗೆ ತಂದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ನ್ಯಾಯಾಲಯವು ನಾಳೆ ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

  First published: