HOME » NEWS » National-international » RS 35 CRORE BRIBERY ALLEGATION MARK SACHIN PILOT SENDS LEGAL NOTICE TO CONGRESS MLA RMD

ರಾಜಸ್ಥಾನ ರಾಜಕೀಯ ಹೈಡ್ರಾಮಾ: ಕಾಂಗ್ರೆಸ್​ ಶಾಸಕನಿಗೇ ಲೀಗಲ್​ ನೋಟಿಸ್​ ನೀಡಿದ ಸಚಿನ್​ ಪೈಲಟ್​!

ಪೈಲಟ್​ ಜೊತೆ ಇತ್ತೀಚೆಗೆ ನಾನು ಮಾತುಕತೆ ನಡೆಸಿದ್ದೆ. ಈ ವೇಳೆ ನಿಮಗೆ ಎಷ್ಟು ಹಣ ಬೇಕು ಹೇಳಿ ನಾನು ಕೊಡುತ್ತೇನೆ. 35 ಕೋಟಿ ರೂಪಾಯಿ ನೀಡಿದರೆ ಸಾಕೇ? ಎಂದು ಪ್ರಶ್ನಿಸಿದ್ದರು ಎಂಬುದಾಗಿ ಗಿರಿರಾಜ್​ ಸಿಂಗ್​ ಆರೋಪಿಸಿದ್ದರು.

news18-kannada
Updated:July 22, 2020, 11:07 AM IST
ರಾಜಸ್ಥಾನ ರಾಜಕೀಯ ಹೈಡ್ರಾಮಾ: ಕಾಂಗ್ರೆಸ್​ ಶಾಸಕನಿಗೇ ಲೀಗಲ್​ ನೋಟಿಸ್​ ನೀಡಿದ ಸಚಿನ್​ ಪೈಲಟ್​!
ಸಚಿನ್​ ಪೈಲಟ್​.
  • Share this:
ಜೈಪುರ (ಜು.22): ರಾಜಸ್ಥಾನ ರಾಜಕೀಯ ಹೈಡ್ರಾಮಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಕಾಂಗ್ರೆಸ್​ ವಿರುದ್ಧವೇ ಬಂಡಾಯ ಎದ್ದಿದ್ದು, ಸರ್ಕಾರ ಪತನವಾಗುವ ಲಕ್ಷಣ ಗೋಚರವಾಗಿದೆ. ಈ ಮಧ್ಯೆ ಸಚಿನ್​ ಪೈಲಟ್​ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ದೂರಿದ್ದರು. ಈಗ ಆ ಶಾಸಕನಿಗೆ ಸಚಿನ್​ ಪೈಲಟ್​ ಲೀಗಲ್​ ನೋಟಿಸ್​ ನೀಡಿದ್ದಾರೆ!

ಸೋಮವಾರ ಸುದ್ದಿಗೋಷ್ಠಿ ಕರೆದಿದ್ದ ಶಾಸಕ ಗಿರಿರಾಜ್​ ಸಿಂಗ್​, ಸಚಿನ್​ ಪೈಲಟ್​ ವಿರುದ್ಧ ಗುರತರ ಆರೋಪ ಮಾಡಿದ್ದರು. "ಪೈಲಟ್​ ಜೊತೆ ಇತ್ತೀಚೆಗೆ ನಾನು ಮಾತುಕತೆ ನಡೆಸಿದ್ದೆ. ಈ ವೇಳೆ ನಿಮಗೆ ಎಷ್ಟು ಹಣ ಬೇಕು ಹೇಳಿ ನಾನು ಕೊಡುತ್ತೇನೆ. 35 ಕೋಟಿ ರೂಪಾಯಿ ನೀಡಿದರೆ ಸಾಕೇ? ಎಂದು ಪ್ರಶ್ನಿಸಿದ್ದರು," ಎಂದಿದ್ದ ಗಿರಿರಾಜ್, ಇದು ಕಳೆದ ಡಿಸೆಂಬರ್​ನಿಂದ ನಡೆದುಕೊಂಡೇ ಬರುತ್ತಿದೆ ಎನ್ನುವ ಗಂಭೀರ ಆರೋಪ ಮಾಡಿದ್ದರು .

ಈ ಹೇಳಿಕೆಗೆ ಸಂಬಂಧಿಸಿದಂತೆ ಗಿರಿರಾಜ್​ ಸಿಂಗ್​ಗೆ ಸಚಿನ್​ ಪೈಲಟ್​ ಲೀಗಲ್​ ನೋಟಿಸ್​ ನೀಡಿದ್ದಾರೆ. ಅಷ್ಟೇ ಅಲ್ಲ, "ಈ ಹೇಳಿಕೆ ನನಗೆ ಅಚ್ಚರಿ ಏನು ನೀಡಿಲ್ಲ. ಕಾಂಗ್ರೆಸ್​ ನಾಯಕರು ಹೀಗೊಂದು ಆರೋಪ ಮಾಡುತ್ತಾರೆ ಎಂಬುದು ನನಗೆ ಮೊದಲೇ ತಿಳಿದಿತ್ತು," ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕರೆದಿದ್ದ ಎರಡು ಶಾಸಕಾಂಗ ಪಕ್ಷದ ಸಭೆಗೆ ಬಂಡೆದ್ದಿರುವ ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರು ಭಾಗವಹಿಸಿರಲಿಲ್ಲ. ಇದೇ ಆಧಾರದ ಮೇಲೆ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಕ್ಷ ರಾಜಸ್ಥಾನದ ಸ್ಪೀಕರ್ ಸಿ.ಪಿ. ಜೋಷಿ ಅವರಿಗೆ ದೂರು‌ ನೀಡಿದ್ದಾರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ನೀಡಿರುವ ದೂರಿನ ಆಧಾರದ ಮೇಲೆ ನಿಮ್ಮನ್ನು ಅನರ್ಹಗೊಳಿಸಬಾರದೇಕೆ ಎಂದು ಸ್ಪೀಕರ್ ಸಿ.ಪಿ. ಜೋಷಿ, ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರಿಗೆ ನೊಟೀಸ್ ನೀಡಿದ್ದರು.
Youtube Video

ಇದನ್ನು​​​ ಪ್ರಶ್ನಿಸಿ ಮಾಜಿ ಡಿಸಿಎಂ ಸಚಿನ್ ಪೈಲಟ್​​ ಜತೆ 18 ಬಂಡಾಯ ಕಾಂಗ್ರೆಸ್​ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕಾಂಗ್ರೆಸ್​​ ರೆಬೆಲ್ಸ್​​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​​ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತ್ತು. ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿರುವ ಹೈಕೋರ್ಟ್​, ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸ್ಪೀಕರ್​​​​​ ಸಿ.ಪಿ ಜೋಷಿಯವರಿಗೆ ಸೂಚನೆ ನೀಡಿದೆ.
Published by: Rajesh Duggumane
First published: July 22, 2020, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories