ಪ್ರಸ್ತುತ ಪಶ್ಚಿಮ ಏಷ್ಯಾದಲ್ಲೆಲ್ಲೋ ತಲೆಮರೆಸಿಕೊಂಡಿರುವ ಮಲಪ್ಪುರಂ (Malappuram)ಮೂಲದ 31 ವರ್ಷದ ನಿಶಾದ್ ಕೆ ಗೆ ದೇಶದಲ್ಲಿ ಒಟ್ಟು 1,200 ಕೋಟಿ ರೂಪಾಯಿಗಳ ಮೊತ್ತದಷ್ಟು ಕ್ರಿಪ್ಟೋಕರೆನ್ಸಿ ವಂಚನೆಗೆ ಜೊತೆಯಾಗಿದ್ದು ಕೇವಲ morriscoin.com ಎಂಬ ವೆಬ್‌ಸೈಟ್ . "ಮೋರಿಸ್ ಕಾಯಿನ್" (Morriscoin) ಎಂಬ ಮೋಸದ ಕ್ರಿಪ್ಟೋಕರೆನ್ಸಿಯಿಂದ (Cryptocurrency)ಅನಿವಾಸಿ ಕೇರಳೀಯರು (Keralites) (ಎನ್‌ಆರ್‌ಕೆ) ಸೇರಿದಂತೆ ಸಾವಿರಾರು ಜನರು ಭಾರಿ ಮೊತ್ತದ ಹಣ ಕಳೆದುಕೊಂಡ್ದಾರೆ. ನಿಶಾದ್ ಮತ್ತು ಅವರ ಆಸ್ತಿಗಳನ್ನು ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ತನಿಖೆಯಲ್ಲಿ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ರಿಯಲ್ ಎಸ್ಟೇಟ್ ಮತ್ತು ಇತರ ಯೋಜನೆಗಳಲ್ಲಿ ನಿಧಿಯನ್ನು ಹೂಡಿಕೆ ಮಾಡಿರುವುದು ಕಂಡುಕೊಂಡಿದೆ.
ಹಣ ಹೂಡಿಕೆ
ನಿಶಾದ್ ಬಳಿ ಯಾವುದೇ ಸಂಪರ್ಕ ವಿಳಾಸ ಅಥವಾ ದೂರವಾಣಿ ಸಂಖ್ಯೆ ಇಲ್ಲದಿದ್ದರೂ ಜನ ಅವರನ್ನು ನಂಬಿದರು ಮತ್ತು ಮೋರಿಸ್ ಕಾಯಿನ್ ವೆಬ್‌ಸೈಟ್‌ನಿಂದ ಹೂಡಿಕೆ ಮಾಡಿದ ಮೊತ್ತದ ಮೂರು ಪ್ರತಿಶತವನ್ನು ದೈನಂದಿನ ಆದಾಯವಾಗಿ ಸ್ವೀಕರಿಸಬಹುದು ಎಂಬ ಭರವಸೆಯ ಮೇಲೆ ಹಣ ಹೂಡಿಕೆ ಮಾಡಿದರು.
ನವೆಂಬರ್ 2021ರಲ್ಲಿ, ಪೊಲೀಸರು ನಿಶಾದ್‌ನೊಂದಿಗೆ ಠೇವಣಿ ಸಂಗ್ರಹಣೆಯಲ್ಲಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಕಣ್ಣೂರು, ಕಾಸರಗೋಡು ಮತ್ತು ಮಲಪ್ಪುರಂನ 7 ಜನರನ್ನು ಬಂಧಿಸಿದರು.ಆದರೆ ನಿಶಾದ್ ಮಲಪ್ಪುರಂನ ಪೂಕೂಟ್ಟುಪದಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೋರಿಸ್ ಕಾಯಿನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 28ರಂದು ಬಂಧನಕ್ಕೊಳಗಾಗಿ ಆ ಕೇಸ್‌ನಲ್ಲಿ ಜಾಮೀನು ಪಡೆದು ನಂತರ ಭೂಗತರಾಗಿದ್ದ ಕಾರಣ ಅವರನ್ನು ಪತ್ತೆಹಚ್ಚಲಾಗಲಿಲ್ಲ. ಆ ಸಮಯದಲ್ಲಿ ಅವರ ವಿರುದ್ಧದ ಪ್ರಕರಣವು 'ಮೋರಿಸ್ ಕಾಯಿನ್ ಹೂಡಿಕೆ ಯೋಜನೆ 300 ದಿನಗಳು' ಎಂಬ ಹೂಡಿಕೆ ಯೋಜನೆಯನ್ನು ಒಳಗೊಂಡಿತ್ತು .
ಇದನ್ನೂ ಓದಿ: Fraud: ಮೊಟ್ಟೆ ಯೋಜನೆ, ಅಧಿಕ ಲಾಭದ ಆಸೆ ತೋರಿಸಿ ಸಾವಿರ ಜನರಿಂದ 100 ಕೋಟಿ ಹಣ ಕಟ್ಟಿಸಿಕೊಂಡು ವಂಚನೆ!
ಕ್ರಿಪ್ಟೋಕರೆನ್ಸಿ ವಂಚನೆ
ಆತನ ಬಂಧನದ ಸಮಯದಲ್ಲಿ ವಂಚನೆಯ ಪ್ರಮಾಣವನ್ನು ಯಾರೂ ಊಹಿಸಿರಲಿಲ್ಲ. ಅವನು ಜಾಮೀನು ಪಡೆದು ತಲೆಮರೆಸಿಕೊಂಡಿದ್ದಾನೆ ಎಂದು ಕಣ್ಣೂರು ಎಸಿಪಿ ಪಿ.ಪಿ ಸದಾನಂದನ್ ಹೇಳಿದ್ದಾರೆ. ಬಂಧಿತರು ಬ್ಯಾಂಕ್ ಖಾತೆಗಳಿಂದ ಹಣ ಸಂಗ್ರಹಿಸಿದ್ದಾರೆ. ಕ್ರಿಪ್ಟೋಕರೆನ್ಸಿ ವಂಚನೆಯಲ್ಲಿ ಹಣ ಕಳೆದುಕೊಂಡ ಜನರಿಂದ ಪೊಲೀಸರು ದೂರುಗಳನ್ನು ಸ್ವೀಕರಿಸಿದ ನಂತರ, ಪಿ.ಪಿ ಸದಾನಂದನ್ ಕ್ರಿಪ್ಟೋಕರೆನ್ಸಿ ವಂಚನೆಯ ಹಿಂದೆ ಇದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರು ತಮ್ಮ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಜನರಿಂದ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಸದಾನಂದನ್ ಹೇಳಿದ್ದಾರೆ. ಬಂಧಿತರು ಕೇರಳದ ಉಜ್ಜೀವನ್ ಬ್ಯಾಂಕ್‌ನ ಗ್ರಾಮೀಣ ಶಾಖೆಗಳಲ್ಲಿನ ಖಾತೆಗಳನ್ನು ಬಳಸಿಕೊಂಡು ಜನರಿಂದ ಹಣ ಸಂಗ್ರಹಿಸಿದರು.
ಮೋರಿಸ್ ಕಾಯಿನ್
ನಮ್ಮ ತನಿಖೆಯ ಪ್ರಕಾರ, ನಿಶಾದ್ ಜನರಿಂದ ತಾನು ಸಂಗ್ರಹಿಸಿದ ಹಣವನ್ನು ಬೇರೆಡೆಗೆ ತಿರುಗಿಸಲು ಸಹಾಯ ಮಾಡಿದ ಪ್ರತಿಯೊಬ್ಬ ಬಂಧಿತ ವ್ಯಕ್ತಿಗಳ ಖಾತೆಗಳಿಂದ 90 ರಿಂದ 100 ಕೋಟಿ ರೂ. ವ್ಯವಹಾರ ನಡೆದಿರುವುದು ಖಚಿತವಾಗಿದೆ ಎಂದು ಸದಾನಂದ್ ತಿಳಿಸಿದರು. ಹಗರಣದಲ್ಲಿ 1.05 ಲಕ್ಷ ರೂಪಾಯಿ ಕಳೆದುಕೊಂಡಿರುವ ಕಲಮಸ್ಸೆರಿ ಮೂಲದವರಾದ ಸುಫಿಲ್ ರಿಸ್ವಾನ್, ಯುಎಇಯಲ್ಲಿ ತಾನು ಕೆಲಸ ಮಾಡುತ್ತಿದ್ದ ಸ್ನೇಹಿತರಿಂದ ಮೋರಿಸ್ ಕಾಯಿನ್ ಬಗ್ಗೆ ತಿಳಿದುಕೊಂಡೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಬಡ್ಡಿ ಆಮಿಷ
ಜನರಿಗೆ ಬಡ್ಡಿ ಆಮಿಷ ಒಡ್ಡುವ ಸಲುವಾಗಿ ಸತತವಾಗಿ ಒಂದು ತಿಂಗಳ ಕಾಲ, ಅವರು ಹೂಡಿಕೆ ಮಾಡಿದ ಮೊತ್ತದ 3% ಅನ್ನು ಆದಾಯವಾಗಿ ನೀಡಲಾಯಿತು. "ಆರಂಭದಲ್ಲಿ 10,000 ರೂಪಾಯಿಗಳಂತಹ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ ಜನರು ತ್ವರಿತ ಪಾವತಿಗೆ ಆಕರ್ಷಿತರಾಗಿ 1 ಲಕ್ಷದಿಂದ 5 ಲಕ್ಷದವರೆಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದರು" ಎಂದು ಸುಫಿಲ್ ಹೇಳಿದರು. ಜೊತೆಗೆ ಯುಎಇಯಲ್ಲಿರುವ ತನ್ನ ಹಲವು ಸ್ನೇಹಿತರು ವಂಚನೆಯಿಂದ ಹಣ ಕಳೆದುಕೊಂಡಿದ್ದರೂ ಮೌನ ವಹಿಸಿದ್ದಾರೆ ಎಂದು ಹೇಳಿಕೊಂಡರು .
ಇದನ್ನೂ ಓದಿ: SBI Fraud: ಬ್ಯಾಂಕಿಗೇ 4.03 ಕೋಟಿ ಮೋಸ- ಎಸ್‌ಬಿಐ ಮಾಜಿ ಮ್ಯಾನೇಜರ್‌ಗೆ 7 ವರ್ಷ ಜೈಲು ಶಿಕ್ಷೆ
ಕ್ರಿಪ್ಟೋಕರೆನ್ಸಿ ಸಲಹೆಗಾರ ಸಿಂಜಿತ್ ಕೆ. ನನ್ಮಿಂಡಾ ಪ್ರಕಾರ, ಕ್ರಿಪ್ಟೋಕರೆನ್ಸಿಗಳು ಅನೇಕರಿಗೆ ಸ್ಪಷ್ಟವಾಗಿ ಕಣ್ಣಿಗೆ ಕಾಣದ ಪ್ರದೇಶದಂತೆ , ಬೂದಿ ಮುಚ್ಚಿದ ಕೆಂಡದಂತೆ. ಕಳೆದ 10 ವರ್ಷಗಳಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಮೌಲ್ಯವು ಗಮನಾರ್ಹವಾಗಿ ಮೇಲೇರಿದೆ. 2010ರಲ್ಲಿ 500 ರೂಪಾಯಿ ಇದ್ದ ಬಿಟ್ ಕಾಯಿನ್ ಮೌಲ್ಯ ಈಗ 30 ಲಕ್ಷಕ್ಕೆ ಏರಿದೆ. ಕ್ರಿಪ್ಟೋಕರೆನ್ಸಿ ಹೆಸರಿನಲ್ಲಿ ಜನರನ್ನು ವಂಚಿಸುವುದು ಸುಲಭ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ